ಬೋಟ್ ಇಂಜಿನ್ ಕಳವು ಜಾಲದ ಮೂವರ ಬಂಧನ

Posted: August 27, 2014 in Uncategorized

ಉಡುಪಿ: ಕೇರಳ ಮತ್ತು ಕರ್ನಾಟಕದ ವಿವಿಧೆಡೆಗಳಿಂದ ಬೋಟ್ ಗಳಲ್ಲಿನ ಇಂಜಿನ್ ಗಳನ್ನು ಕಳವು ಮಾಡಿ ಲಾರಿ ಮೂಲಕ ಗುಜರಾತ್ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದ ಜಾಲದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಕಾಪು ಮತ್ತು ಪಡುಬಿದ್ರಿ ಪೊಲೀಸರು
ಯಶಸ್ವಿಯಾಗಿದ್ದಾರೆ.

ಉಲ್ಲಾಳ ನಿವಾಸಿ ಹುಸೇನ್ (43), ಉಲ್ಲಾಳ ಕೋಡಿ ನಿವಾಸಿ ಇಸ್ಮಾಯಿಲ್ (46) ಹಾಗೂ ಗುಜರಾತ್ ರಾಜ್ಯದ ಖಾಸೀಂ ಮೊಹಿದಿನ್ (45) ಬಂಧಿತರು. ಆರೋಪಿಗಳು ಕಳವು ಒಟ್ಟು 16 ಇಂಜಿನ್ ಗಳನ್ನು ಕಳವು ಮಾಡಿದ್ದು, ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿದ ಲಾರಿ, ಮಾರುತಿ ಕಾರು ಮತ್ತು ರಿಕ್ಷಾವನ್ನು
ಸ್ವಾಧೀನಪಡಿಸಿಕೊಳ್ಳಲಾಗಿದೆ.

5 ಇಂಜಿನ್ ಗಳನ್ನು ಕರ್ನಾಟಕದಿಂದಲೂ, 11 ಇಂಜಿನ್ ಗಳನ್ನು ಗುಜರಾತ್ ನಿಂದಲೂ ವಶಪಡಿಸಿಕೊಳ್ಳಲಾಗಿದೆ. 5 ಇಂಜಿನ್ ಗಳ ಮೌಲ್ಯ 5 ಲಕ್ಷ ರು.ಗಳಾಗಿವೆ. 11 ಇಂಜಿನ್ ಗಳ ಮೌಲ್ಯ 13.20 ಲಕ್ಷ ರು.ಗಳಾಗಿವೆ. ಲಾರಿ, ಕಾರು ಮತ್ತು ರಿಕ್ಷಾ ಮೌಲ್ಯ ಒಂದು ಲಕ್ಷ ರು. ಎಂದು ಅಂದಾಜಿಸಲಾಗಿದೆ. ಆರೋಪಿಗಳು ಮಲ್ಪೆ, ಉಲ್ಲಾಳ, ಬೆಂಗ್ರೆ, ಮುಕ್ಕ, ಬೇಳೂರು, ಮಂಜೇಶ್ವರ, ಪಣಂಬೂರು, ಗಂಗೊಳ್ಳಿ ಮೊದಲಾದೆಡೆಗಳಿಂದ ಬೋಟ್ ಇಂಜಿನ್ ಗಳನ್ನು ಕಳವು ಮಾಡಿದ್ದರು.

ಗುಜರಾತ್ ರಾಜ್ಯದ ಸುರೇಶ್ ಪರ್ಮಾರ್ ಎಂಬಾತ ಲಾರಿಯಲ್ಲಿ ಇಂಜಿನ್ ಗಳನ್ನು ಗುಜರಾತ್ ಸಾಗಿಸುತ್ತಿದ್ದ ಎನ್ನಲಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s