ಉಡುಪಿ: ಸ್ವಯಂ ಶ್ರಮದಿಂದ ಬೆಳೆದು ನಿಂತಿರುವ ಸ್ವಾಭಿಮಾನಿ ಬಂಟ ಸಮಾಜಕ್ಕೆ ಕೆಲವು ಕುತ್ಸಿತ ಮನೋಭೂಮಿಕೆಯ ವ್ಯಕ್ತಿಗಳು ಬಂಟರಿಗೆ ಬಾರ್ಕೂರಿನಲ್ಲಿ ಕುಲಗುರು, ಗುರುಪೀಠ, ಮಹಾಸಂಸ್ಥಾನ ಕಟ್ಟುತ್ತೇವೆ ಎನ್ನುತ್ತಾ ಸ್ವಯಂಘೋಷಿತ ಸ್ವಾಮೀಜಿಯೊಬ್ಬನ ಪ್ರಚೋದನೆಯೊಂದಿಗೆ ಸಮಾಜದ ದಾನಿಗಳಿಂದ ಭಾರೀ ಧನ ಸಂಗ್ರಹ ಮಾಡುತ್ತಾ ಅಲ್ಲಲ್ಲಿ ಸಮಾಜ ಬಾಂಧವರ ದಿಕ್ಕು ತಪ್ಪಿಸುತ್ತಿರುವುದು ಖಂಡನೀಯ. ಸ್ವಾಭಿಮಾನಿ ಬಂಟ ಸಮುದಾಯಕ್ಕೆ ಯಾವುದೇ ರೀತಿಯ ಕುಲಗುರು, ಗುರುಪೀಠ ಇತ್ಯಾದಿಗಳೆಲ್ಲವೂ ಅಪ್ರಸ್ತುತ. ಇವುಗಳ ಅಗತ್ಯವೂ ಇಲ್ಲ. ಇಂಥ ಪ್ರಯತ್ನಗಳಿಗೆ ನಮ್ಮ ಸ್ಪಷ್ಟ ವಿರೋಧವಿದೆ ಎಂದು ವಸಂತ್ ಕುಮಾರ್ ಶೆಟ್ಟಿ ಬೆಳ್ವೆ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಚಂದ್ರಶೇಖರ ಶೆಟ್ಟಿ ಬ್ರಹ್ಮಾವರ, ಕಟಪಾಡಿ ಬೀಡು ಸುಭಾಶ್ಚಂದ್ರ ಶೆಟ್ಟಿ ಮೊದಲಾದವರು ಘೋಷಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಗಸ್ಟ್ 28ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಬಂಟ ಸಮಾಜದ ಗಣ್ಯರು ಮಾತನಾಡುತ್ತಾ, ಸಂತೋಷ್ ಗುರೂಜಿ ಹಾಗೂ ಇತರ ಕೆಲವರು ನಡೆಸುತ್ತಿರುವ ಬಾರ್ಕೂರು ಬಂಟಪೀಠ ಮಹಾಸಂಸ್ಥಾನ ಸ್ಥಾಪನೆಯಗೆ ಖಂಡತುಂಡ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಆಗಸ್ಟ್ 30ರಂದು ಮಧ್ಯಾಹ್ನ 3 ಗಂಟೆಗೆ ಬ್ರಹ್ಮಾವರದ ಧರ್ಮಾವರಂ ಆಡಿಟೋರಿಯಂನಲ್ಲಿ ‘ಸ್ವಾಭಿಮಾನಿ ಬಂಟರ ಆತ್ಮಜಾಗೃತಿಗಾಗಿ ಸಮಾಗಮ’ ವೆಂಬ ಹೆಸರಿನಲ್ಲಿ ಬೃಹತ್ ಜನಜಾಗೃತಿ ಸಮಾವೇಶ ನಡೆಸುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಸ್ವಯಂಘೋಷಿತ ಸ್ವಾಮೀಜಿ ಹಾಗೂ ಸಥಾಪಿತ ಹಿತಾಸಕ್ತಿಯುಳ್ಳ ವ್ಯಕ್ತಿಗಳು ಬಂಟಪೀಠ ಸ್ಥಾಪನೆಯ ಕೆಲಸಕ್ಕೆ ಕೈಹಾಕಿದ್ದಾರೆ. ಇದು ಬಂಟ ಸಮಾಜವನ್ನು ಹಾಳುಗೆಡಹುವ ವ್ಯವಸ್ಥೆಯೇ ಹೊರತು ಬೇರೇನೂ ಅಲ್ಲ. ಬಂಟ ಮಹಾಸಂಸ್ಥಾನವನ್ನು ಬಂಟ ಸಮಾಜ ಈವರೆಗೂ ಒಪ್ಪಿಕೊಂಡಿಲ್ಲ, ಒಪ್ಪಿಕೊಳ್ಳುವುದೂ ಇಲ್ಲ ಎಂದು ಚಂದ್ರಶೇಖರ ಶೆಟ್ಟಿ ತಿಳಿಸಿದರು.

ಬಂಟ ಸಮಾಜಕ್ಕೆ ಸೇರಿದ ಒಡಿಯೂರು, ಕೇಮಾರು ಹಾಗೂ ವಜ್ರದೇಹಿ ಸ್ವಾಮೀಜಿಗಳಿದ್ದಾರೆ. ಇವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೇ ರೀತಿ ಸಮಾಜಸೇವೆ ಸಲ್ಲಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಧೀಕ್ಷೆ, ಕಾವಿ, ಪಾದಪೂಜೆ ಎಂದೆಲ್ಲಾ ಹೇಳಿಕೊಂಡು ಐಷರಾಮಿ ಭೋಗ ಜೀವನ ನಡೆಸುವುದಕ್ಕೆ ಮತ್ತು ಬಂಟಪೀಠ ಸ್ಥಾಪನೆಗೆ ನಮ್ಮ ವಿರೋಧವಿದೆ ಎಂದು ಪ್ರಮುಖರು ಹೇಳಿದರು.

ಆ.30ರ ಸಮಾಗಮಕ್ಕೆ ದೇಶ ವಿದೇಶಗಳಿಂದ ಅನೇಕ ಮಂದಿ ಬಂಟ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಾವಿರಾರು ಮಂದಿ ಸ್ವಾಭಿಮಾನಿ ಬಂಟರು ಆಗಮಿಸಲಿದ್ದಾರೆ. ಈ ಮೂಲಕ ಸಮಾಜದ ಮಾನ ಉಳಿಸಲು ಯತ್ನಿಸಲಾಗುವುದು ಎಂದು ಸಮಾಗಮದ ಸಂಘಟಕರು ಮಾಹಿತಿ ನೀಡಿದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s