ನಗ್ನಚಿತ್ರದ ಹೆಸರಲ್ಲಿ ಬ್ಲ್ಯಾಕ್ ಮೇಲ್: ಪೊಲೀಸ್ ಸುಧೀರ್ ಸಹಿತ ಇಬ್ಬರ ಮೇಲೆ ಕೇಸು

Posted: ಸೆಪ್ಟೆಂಬರ್ 3, 2014 in Uncategorized

ಉಡುಪಿ: ವಿವಾಹಿತ ಮಹಿಳೆಯೊಬ್ಬಳ ನಗ್ನ ಚಿತ್ರಗಳನ್ನು ಇಂಟರ್ ನೆಟ್ ನಲ್ಲಿ ಪ್ರಕಟಿಸುವುದಾಗಿ ಹೇಳಿ ಬೆದರಿಸಿ 25 ಲಕ್ಷ ರು. ಪಡೆದುಕೊಂಡ ಪೊಲೀಸ್ ಸಿಬ್ಬಂದಿಯ ಸಹಿತ ಇಬ್ಬರ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಕಾನ್ ಸ್ಟೇಬಲ್ ಸುಧೀರ್ ಹಾಗೂ ಶಮೀಲ್ ಎಂಬವರೇ ಫ್ರಕರಣದ ಆರೋಪಿಗಳು. ಆರೋಪಿಗಳು ಇದೀಗ ತಲೆಮರೆಸಿಕೊಂಡಿದ್ದಾರೆ. ಪಿಸಿ ಸುಧೀರ್ ಈ ಹಿಂದೆ ಗಾಂಜಾ ಸಂಬಂಧಿ ಪ್ರಕರಣವೊಂದರಲ್ಲಿ ಆರೋಪಿಯಾಗಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್ ಉನ್ನತ ಅಧಿಕಾರಿಗಳು ಈತನನ್ನು ಅಮಾನತು ಮಾಡಿದ್ದರು.

ಆರೋಪಿ ಪೊಲೀಸ್ ಸುಧೀರ್, ಎಪ್ರಿಲ್ 10ರಂದು ಉದ್ಯಾವರ ಗ್ರಾಮದ ಮಠದಬೆಟ್ಟು ಪಾಟ್ನತೋಟದ ಸನ ಮಂಜಿಲ್ ನಿವಾಸಿ ಮುನೀರ್ ಅಹ್ಮದ್ (62) ಎಂಬವರಿಗೆ ಕರೆ ಮಾಡಿ ಅಗತ್ಯವಾಗಿ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿದ್ದಾನೆ. ಮುನೀರ್ ಅವರು ತನ್ನ ತಂಗಿಯ ಮಗ ಶಮೀಲ್ ಜೊತೆಗೆ ಸುಧೀರ್ನನ್ನು ಭೇಟಿಯಾದಾಗ, ಸುಧೀರ್, ‘ನಿಮ್ಮ ಮಗಳ ನಗ್ನ ಫೋಟೋಗಳು ದೆಹಲಿ ಮತ್ತು ಬೆಂಗಳೂರು ಪೊಲೀಸರ ಕೈಯ್ಯಲ್ಲಿದೆ. ಅವುಗಳನ್ನು ಇಂಟರ್ ನೆಟ್ ಮತ್ತು ಇತರ
ಮಾಧ್ಯಮಗಳಲ್ಲಿ ಹಾಕಲಾಗುವುದು, 30 ಲಕ್ಷ ರು. ಕೊಟ್ಟರೆ ಹಾಕುವುದನ್ನು ನಿಲ್ಲಿಸುತ್ತೇನೆ’ ಎಂದು ತಿಳಿಸಿದ ಎನ್ನಲಾಗಿದೆ.

ಇದರಿಂದ ಕಂಗಾಲಾದ ಮುನೀರ್ ಅಹ್ಮದ್, ಇಷ್ಟು ಹಣ ಕೊಡಲು ಹಣವಿಲ್ಲ ಎಂದು ತಿಳಿಸಿದಾಗ 25 ಲಕ್ಷ ರು. ಕೊಡುವಂತೆ ತಿಳಿಸಿದ್ದಾನೆ. ಕೊನೆಗೆ ಮುನೀರ್, ಶಮೀಲ್ ಜೊತೆಗೆ ಮಾತನಾಡಿ ಸುಧೀರ್ ಹಾಗೂ ಶಮೀಲ್ ಅವರಿಗೆ ಎರಡು ಕಂತುಗಳಲ್ಲಿ 25 ಲಕ್ಷ ರು.ಗಳನ್ನು ನೀಡಿದ್ದಾರೆನ್ನಲಾಗಿದೆ.

ಎಪ್ರಿಲ್ 11ರಂದು 2 ಲಕ್ಷ ರು. ಮತ್ತು ಎಪ್ರಿಲ್ 19ರಂದು ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ 23 ಲಕ್ಷ ರು.ಗಳನ್ನು ಆರೋಪಿಗಳಿಗೆ ನೀಡಲಾಯಿತೆಂದು ಮುನೀರ್ ತಿಳಿಸಿದ್ದಾರೆ. ಇದೊಂದು ಬ್ಲ್ಯಾಕ್ ಮೇಲ್ ಎಂದು ಗೊತ್ತಾದಾಗ ಮುನೀರ್ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗುವುದು ಮತ್ತು ಮಾಧ್ಯಮದವರಿಗೂ ಹೇಳುವುದಾಗಿ ತಿಳಿಸಿದಾಗ, ಆರೋಪಿತರು 25 ಲಕ್ಷ ರು.ಗಳನ್ನು ಮರಳಿದ್ದರೆನ್ನಲಾಗಿದೆ.

ಈ ಬಗ್ಗೆ ಇದೀಗ ಮುನೀರ್ ನೀಡಿದ ದೂರಿನ ಆಧಾರದಲ್ಲಿ ಉಡುಪಿ ನಗರ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಸುಧೀರ್ ಗೆ ಹಣ ಕೊಡುವ ಉದ್ಧೇಶದಿಂದಲೇ ಮುನೀರ್ ಅವರು ಉಡುಪಿ ನಗರ ಪೊಲೀಸ್ ಠಾಣೆಯ ಸಮೀಪದ ಸೊಸೈಟಿ ಒಂದರಿಂದ ಸಾಲ ಮಾಡಿದ್ದರೆನ್ನಲಾಗಿದೆ. ಪಡೆದುಕೊಂಡ ಹಣವನ್ನು ಬಳಿಕ ಸುಧೀರ್ ಹಾಗೂ ಶಮೀಲ್ ಜೊತೆಯಾಗಿ ಮರುಪಾವತಿಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಿದ್ದರು ಎರೆನ್ನಲಾಗಿದೆ. ಇವರ ನಡುವೆ ಪ್ರಕರಣ ರಾಜಿಯಾಗಿತ್ತಾದರೂ, ವಿಷಯ ಬಹಿರಂಗಕ್ಕೆ ಬಂದ ಹಿನ್ನೆಲೆಯಲ್ಲಿ ಇದೀಗ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ ಎನ್ನಲಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s