ಸತ್ಯಾಗ್ರಹದ ಬೇಡಿಕೆಗಳು: ಇಂದು ಬೆಳಗ್ಗೆ 10ಕ್ಕೆ ಉಡುಪಿ ಡಿಸಿ ಕಚೇರಿ ಮುಂದೆ ಸತ್ಯಾಗ್ರಹ ಆರಂಭ

Posted: ಸೆಪ್ಟೆಂಬರ್ 6, 2014 in Uncategorized

ಸತ್ಯಾಗ್ರಹದ ಬೇಡಿಕೆಗಳು..

* ಕರ್ನಾಟಕ ರಾಜ್ಯದ 19 ಜಿಲ್ಲೆಗಳಲ್ಲಿ 2012-13 ಮತ್ತು 2013-14ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ನಡೆದ ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿಯಲ್ಲಿನ ಬಹುಕೋಟಿ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು.

ಕರ್ನಾಟಕ ಸರಕಾರದ ಹಾಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಮಾಜಿ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್, ನಿರ್ದೇಶಕ ಡಾ.ಧನ್ಯ ಕುಮಾರ್, ಆಯುಕ್ತ ವಿ.ಬಿ.ಪಾಟೀಲ್, ವೈದ್ಯಕೀಯ ಸಹ ನಿದೇಶಕ ಡಾ.ಕೆ.ಬಿ. ಈಶ್ವರಪ್ಪ ಹಾಗೂ ರಾಜ್ಯ ಮಟ್ಟದ ಇತರ ಅಧಿಕಾರಿಗಳು, 19 ಜಿಲ್ಲೆಗಳ ಆರೋಗ್ಯಾಧಿಕಾರಿಗಳು (ಡಿಎಚ್ಓ), ಜಿಲ್ಲಾ ಸರ್ಜನ್ ರವರು ಹಾಗೂ ಜಿಲ್ಲಾಸ್ಪತ್ರೆಗಳ ಇತರ ಅಧಿಕಾರಿಗಳು, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಪ್ರಭಾವೀ ಗುತ್ತಿಗೆದಾರರ ಸಹಿತ ಇನ್ನೂ ಅನೇಕರನ್ನು ವಿಚಾರಣೆಗೆ ಒಳಪಡಿಸಬೇಕಾದ ಹಿನ್ನೆಲೆಯಲ್ಲಿ ಬಹುಕೋಟಿ ರಾಸಾಯನಿಕ ಹಗರಣದ ಸಿಬಿಐ ತನಿಖೆ ಅತೀ ಅಗತ್ಯ ಮತ್ತು ಅನಿವಾರ್ಯವಾಗಿದೆ.

* ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರು ತಾರೀಕು 23.03.2013ರಂದು ಮಾಹಿತಿ ನೀಡಿದ್ದರು. ಮಾಹಿತಿ ನೀಡಿದ ಬಳಿಕ ಡಾ.ಶರತ್ ಕುಮಾರ್ ರಾವ್ ಅವರನ್ನು ಆರೋಗ್ಯ ಇಲಾಖೆಯ ಕೆಲವು ಮಂದಿ ನಿರ್ಧಿಷ್ಟ ಅಧಿಕಾರಿಗಳು ಹಾಗೂ ಪ್ರಭಾವೀ ಸ್ಥಾಪಿತ ಹತಾಸಕ್ತಿಯುಳ್ಳ ಖಾಸಗಿ ವ್ಯಕ್ತಿಗಳು ಜೊತೆ ಸೇರಿಕೊಂಡು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ ನಖಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯಿಂದ ಸುಳ್ಳು ದೂರು ಕೊಡಿಸಿ, ಈ ಸುಳ್ಳು ದೂರಿನ ಆಧಾರದಲ್ಲಿಯೇ ಸರಿಯಾಗಿ ತನಿಖೆಯನ್ನೂ ನಡೆಸದೆ ತಾರೀಕು 07.09.2013ರಂದು ಅಮಾನತು ಪಡಿಸಿದ್ದಾರೆ. ಅಮಾನತುಪಡಿಸಿ 07.09.2014ಕ್ಕೆ ಒಂದು
ವರ್ಷವಾಗುತ್ತಿದೆಯಾದರೂ, ಇನ್ನೂ ಸಹ ಕರ್ತವ್ಯಕ್ಕೆ ಮರು ನೇಮಕಾತಿ ಮಾಡದೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಾ ಸಹಜ ನ್ಯಾಯವನ್ನು ನಿರಾಕರಿಸುತ್ತಿದೆ. ಆದುದರಿಂದ, ತಕ್ಷಣವೇ ಡಾ.ಶರತ್ ಅವರನ್ನು ಕರ್ತವ್ಯಕ್ಕೆ ಮರು ನೇಮಕಾತಿ ಮಾಡಬೇಕು ಮತ್ತು ಡಾ.ಶರತ್ ವಿರುದ್ಧ ಷಡ್ಯಂತ್ರ ಹೂಡಿದ, ಸಹಜ ನ್ಯಾಯವನ್ನು ನಿರಾಕರಿಸಿದ (ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ) ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಪಡಿಸಿ, ಆರೋಗ್ಯ ಇಲಾಖೆ ಹೊರತುಪಡಿಸಿದ ಉನ್ನತ ಮಟ್ಟದ ಅಧಿಕಾರಿಗಳಿಂದ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

* ರಾಸಾಯನಿಕ ಹಗರಣದ ಬಗ್ಗೆ ಡಾ.ಶರತ್ ಕುಮಾರ್ ರಾವ್ ಅವರು ತಾರೀಕು 23.03..2013ರಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ಮದನ್ ಗೋಪಾಲ್ ಅವರ madan17@gmail.com ಎಂಬ ಈ ಮೇಲ್ ಐಡಿಗೆ ದೂರು ನೀಡಿದ್ದರು. ಈ ದೂರಿನ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರು ಇಲಾಖಾ ನಿರ್ದೇಶಕ ಡಾ.ಧನ್ಯ ಕುಮಾರ್ ಅವರಿಗೆ ಆದೇಶಿಸದಿದ್ದರೂ ಸಹ, ಧನ್ಯ ಕುಮಾರ್ ಅವರು ಪ್ರ. ಕಾರ್ಯದರ್ಶಿ ಮದನ್ ಗೋಪಾಲ್ ಅವರ ಈ ಮೇಲ್ ಐಡಿಯಿಂದ ಅಡ್ಡ ದಾರಿಯ ಮೂಲಕ ದೂರಿನ ಪ್ರತಿಯನ್ನು ಕಳವು (?) ಮಾಡಿದ್ದಾರೆ ಮತ್ತು ಈ ದೂರಿನ ಬಗ್ಗೆ ತನಿಖೆ ನಡೆಸುವಂತೆ ವೈದ್ಯಕೀಯ ಸಹ ನಿರ್ದೇಶಕ ಡಾ.ಕೆ.ಬಿ. ಈಶ್ವರಪ್ಪರಿಗೆ ಸೂಚಿಸಿದ್ದಾರೆ. ಡಾ.ಕೆ.ಬಿ.ಈಶ್ವರಪ್ಪ ಅವರು
ಪಕ್ಷಪಾತದಿಂದ ಕೂಡಿದ ತನಿಖೆ ನಡೆಸಿ ಭ್ರಷ್ಟರನ್ನು ರಕ್ಷಿಸಿದ್ದಾರೆ. ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಅವರನ್ನು ಅಮಾನತುಪಡಿಸಲು ಕಾರಣಕರ್ತರಾಗಿದ್ದಾರೆ. ಆದುದರಿಂದ, ಮದನ್ ಗೋಪಾಲ್ ಅವರ ಈ ಮೇಲ್ ಐಡಿಯಿಂದ ಡಾ.ಶರತ್ ಅವರ ದೂರಿನ ಪ್ರತಿಯನ್ನು ಕಳವು ಮಾಡಿದ (ಹೀಗೆ ಮಾಡುವುದು ಐಟಿ ಕಾಯಿದೆ ಪ್ರಕಾರ ಅಪರಾಧವಾಗಿದೆ) ಡಾ.ಧನ್ಯ ಕುಮಾರ್ ಹಾಗೂ ಬಹುಕೋಟಿ ಹಗರಣವನ್ನು ಮುಚ್ಚಿ ಹಾಕುವ ಮೂಲಕ ಭ್ರಷ್ಟರನ್ನು ರಕ್ಷಿಸಿ, ದಕ್ಷ ವೈದ್ಯಾಧಿಕಾರಿ ಡಾ.ಶರತ್ ಅವರನ್ನು ಶಿಕ್ಷಿಸುವ ಏಕೈಕ ಉದ್ಧೇಶದಿಂದಲೇ ನಕಲಿ ತನಿಖೆ ನಡೆಸಿದ ಡಾ.ಕೆ.ಬಿ.ಈಶ್ವರಪ್ಪ ಇವರನ್ನು ಕೂಡಲೇ ಅಮಾನತುಪಡಿಸಬೇಕು ಮತ್ತು ಇವರುಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು.

* ಬಹುಕೋಟಿ ರಾಸಾಯನಿಕ ಹಗರಣದ ತನಿಖೆ ನಡೆಸಿದ ಆರೋಗ್ಯ ಇಲಾಖಾ ಜಾಗೃತ ಕೋಶದ ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರನ್ನು ಯಾರ ಒತ್ತಡಕ್ಕೆ ಒಳಗಾಗಿ, ಯಾಕಾಗಿ ವರ್ಗಾವಣೆ ಮಾಡಲಾಯಿತು ? ಡಾ.ನರಸಿಮಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿ ಮೇಲೆ ಇಲಾಖೆ ತೆಗೆದುಕೊಂಡ ಕ್ರಮವೇನು ? ಎಂಬುದನ್ನು ಆರೋಗ್ಯ ಇಲಾಖೆ ಹೊರತುಪಡಿಸಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಹಾಗೂ ಡಾ.ನರಸಿಂಹಮೂರ್ತಿಯವರು ನಡೆಸಿದ ತನಿಖಾ ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು.

* ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಸಂಬಂಧಿಸಿದಂತೆ ಮಾತ್ರ, ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಕರ್ನಾಟಕ ಜನಪರ ವೇದಿಕೆಯು ನೀಡಿದ ಪತ್ರಿಕಾ ಹೇಳಿಕೆಯ ಆಧಾರದಲ್ಲಿ ಸುಮೊಟೊ ಆಗಿ ಕರ್ನಾಟಕ ಲೋಕಾಯುಕ್ತ ಇಲಾಖೆ ತನಿಖೆ ಕೈಗೆತ್ತಿಕೊಂಡಿದ್ದು, ಈ ಪ್ರಕರಣದಲ್ಲಿ ಸಾಕ್ಷ್ಯ ನುಡಿದ ಮಹಿಳಾ ಸಾಕ್ಷಿದಾರರಿಗೆ ಅಧಿಕಾರಿಗಳು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮದ್ವರಾಜ್ ನಿರಂತರವಾಗಿ ಕಿರುಕುಳ ಕೊಡುತ್ತಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ಉಡುಪಿ ಜಿಲ್ಲಾಧಿಕಾರಿಯವರಿಗೆ ಮೂರು ಬಾರಿ ಪ್ರತ್ಯೇಕವಾಗಿ ಲಿಖಿತ ದೂರು ಸಲ್ಲಿಸಿದರೂ ಜಿಲ್ಲಾಧಿಕಾರಿಗಳಾದ ಡಾ.ಎಂ.ಟಿ.ರೇಜು ಹಾಗೂ ಡಾ.ಮುದ್ದುಮೋಹನ್ ಅವರು ತನಿಖೆಯನ್ನೇ ನಡೆಸದೆ ಗಂಭೀರ ಕರ್ತವ್ಯ
ಲೋಪವೆಸಗಿದ್ದಾರೆ. ಇದೊಂದು ಗಂಭೀರ ಮಹಿಳಾ ದೌರ್ಜನ್ಯದ ಪ್ರಕರಣ, ಮಾತ್ರವಲ್ಲ ಮಹಿಳಾ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯ ಪ್ರಕರಣವೂ ಆಗಿರುತ್ತದೆ. ಆದುದರಿಂದ ತಡಮಾಡದೆ ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸಬೇಕು.

– ಶ್ರೀರಾಮ ದಿವಾಣ, ಅದ್ಯಕ್ಷ, ಕರ್ನಾಟಕ ಜನಪರ ವೇದಿಕೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s