ಕುಂಜಾರುಗಿರಿ ಬೆಟ್ಟದಲ್ಲಿ ವಿದ್ಯಾರ್ಥಿನಿಯರ ಸ್ಪೆಷಲ್ ಕ್ಲಾಸ್ !

Posted: September 10, 2014 in Uncategorized

ಉಡುಪಿ: ಮೊಂತಿ ಹಬ್ಬದಂದು ಶಾಲೆಗೆ ರಜೆ ಇದ್ದರೂ ಸ್ಪೆಷಲ್ ಕ್ಲಾಸ್ ಇದೆ ಎಂದು ಮನೆಯಲ್ಲಿ ಸುಳ್ಳು ಹೇಳಿದ ನಾಲ್ವರು ವಿದ್ಯಾರ್ಥಿನಿಯರು ತಮ್ಮ ಸಹಪಾಠಿ
ವಿದ್ಯಾರ್ಥಿಗಳೊಂದಿಗೆ ಕುಂಜಾರುಗಿರಿ ಬೆಟ್ಟದಲ್ಲಿ ಮಜಾ ಉಡಾಯಿಸಲು ಬಂದು ಬಜರಂಗದಳದವರ ಕೈಗೆ ಸಿಕ್ಕಿಬಿದ್ದ ವಿದ್ಯಾಮಾನ ಸೆ.8ರಂದು ನಡೆದಿದೆ.

ಉಡುಪಿ ನಗರದ ಕ್ರೈಸ್ತ ಶಿಕ್ಷಕಣ ಸಂಸ್ಥೆಯೊಂದರ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ಮನೆಯವರಲ್ಲಿ ಶಾಲೆಯಲ್ಲಿ ಶಿಕ್ಷಕರು ಸ್ಪೆಷಲ್ ಕ್ಲಾಸ್ ನಡೆಸುತ್ತಿದ್ದಾರೆ, ಹೋಗಲೇಬೇಕು ಎಂದು ಸುಳ್ಳು ಹೇಳಿ ಮನೆಯಿಂದ ಹೊರಟಿದ್ದರು. ಉಡುಪಿಯಲ್ಲಿ ಇವರಿಗಾಗಿ ಕಾದುನಿಂತಿದ್ದ ಇತರ ನಾಲ್ವರು ವಿದ್ಯಾರ್ಥಿಗಳು ನೇರವಾಗಿ ಕುಂಜಾರುಗಿರಿ ಬೆಟ್ಟಕ್ಕೆ ಕರೆದೊಯ್ದಿದ್ದಾರೆ.

ನಾಲ್ವರು ವಿದ್ಯಾರ್ಥಿಗಳ ಪೈಕೆ ಓರ್ವ ವಿದ್ಯಾರ್ಥಿ ಮುಸ್ಲೀಮ್ ಆಗಿರುವುದನ್ನು ಗಮನಿಸಿದ ಸಾರ್ವಜನಿಕರು, ಕೂಡಲೇ ಎಚ್ಚೆತ್ತುಕೊಂಡು ಬಜರಂಗ ದಳದ ಕಾರ್ಯಕರ್ತರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಬಜರಮಗ ದಳದ ಕಾರ್ಯಕರ್ತರು ಮಕ್ಕಳನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲೇ ಎಲ್ಲಾ ಎಂಟು ಮಂದಿಗೂ ಸ್ಪೆಷಲ್ ಕ್ಲಾಸ್ ಮಾಡಿ ಬಿಟ್ಟುಬಿಟ್ಟಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s