ದಾಖಲಾತಿ ಮರಳಿಸದ ಕಾಲೇಜುಗಳ ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿ ಸಂಘ ಮುನ್ನೆಚ್ಚರಿಕೆ

Posted: September 10, 2014 in Uncategorized

ಉಡುಪಿ: ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪಡೆದುಕೊಳ್ಳುವ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಸಹಿತ ಎಲ್ಲಾ ಮೂಲ ದಾಖಲಾತಿಗಳನ್ನೂ ಪ್ರವೇಶಾತಿಗೆ ಅನುಮೋದನೆ ದೊರೆತ ಕೂಡಲೇ ವಿದ್ಯಾರ್ಥಿಗಳಿಗೆ ಮರಳಿಸುವಂತೆ ವಿವಿ ಸಂಯೋಜಿತ ಎಲ್ಲಾ ಕಾಲೇಜುಗಳಿಗೂ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ. ಕುಲಸಚಿವರ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸದ ಕಾಲೇಜುಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಧೀರಜ್ ಕೆ.ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸೆ.9ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಸಮಯದಲ್ಲಿ ಹಿಂದಿನ ವ್ಯಾಸಂಗದ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರವೇ ಮುಂತಾದ ಮೂಲ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಅನುಮೋದನೆ ಬಳಿಕ ಈ ದಾಖಲಾತಿಗಳನ್ನು ಕಾಲೇಜುಗಳು ವಿದ್ಯಾರ್ಥಿಗಳಿಗೆ ಮರಳಿಸಬೇಕೆಂದು ಯುಜಿಸಿ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದ್ದರೂ, ಕಾಲೇಜುಗಳು ವಿದ್ಯಾರ್ಥಿಗಳಿಗೆ ದಾಖಲಾತಿಗಳನ್ನು ಮರಳಿಸದೆ ಕಿರುಕುಳ ನೀಡುತ್ತಿರುವ ಅನೇಕ ಪ್ರಕರಣಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘವು ರಾಜ್ಯದಲ್ಲಿರುವ ಎಲ್ಲಾ ವಿವಿಗಳಿಗೂ ಪತ್ರ ಬರೆದು ಸಮಸ್ಯೆಯ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿಕೊಮಡಿತ್ತು ಎಂದು ಧೀರಜ್ ಶೆಟ್ಟಿ ಹೇಳಿದರು.

ಸಂಘದ ಮನವಿಗೆ ಮಂಗಳೂರು ವಿವಿ ಮಾತ್ರ ಸ್ಪಂದಿಸಿದೆ. ಉಳಿದ ವಿವಿಗಳು ಕೂಡಲೇ ಸ್ಪಂದಿಬೇಕು ಎಂದು ಆಗ್ರಹಿಸಿದ ಧೀರಜ್ ಶೆಟ್ಟಿ, ಮೂಲ ದಾಖಲಾತಿಗಳನ್ನು
ವಿದ್ಯಾರ್ಥಿಗಳಿಗೆ ಹಿಂತಿರುಗಿಸದೆ ಕಿರುಕುಳ ನೀಡುವ ವಿವಿಗಳ ಮತ್ತು ಕಾಲೇಜುಗಳಲ್ಲಿನ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ನಿಟ್ಟಿನಲ್ಲಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.

ಕಾಲೇಜು ವಿದ್ಯಾರ್ಥಿಗಳಾದ ರತ್ನಾ ಕೊಠಾರಿ ಹಾಗೂ ಸುಪ್ರಿತಾ ಪೂಜಾರಿ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಧೀರಜ್ ಮುನ್ನೆಚ್ಚರಿಕೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷೆ ಮೋಹೆರ್ ಶೆಟ್ಟಿ,ಕಾರ್ಯಾಧ್ಯಕ್ಷ ಧನುಷ್ ಶೆಟ್ಟಿ ಬ್ರಹ್ಮಾವರ ಹಾಗೂ ಸ್ನಾತಕೋತ್ತರ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಭರತ್ ರಾಜ್ ಎಸ್.ನೇಜಾರ್ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s