ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕೈಯನ್ನೇ ಕಳೆದುಕೊಂಡ ಬಾಲೆಯ ಚಿಕಿತ್ಸೆಗೆ ನೆರವಾಗುವಿರಾ ?

Posted: ಸೆಪ್ಟೆಂಬರ್ 11, 2014 in Uncategorized

ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಅಂಗವಾಗಿರುವ ಉಡುಪಿ ನಗರಸಭಾ ಕಾರ್ಯಾಲಯದ ಬಳಿ ಇರುವ ಹೆಂಗಸರ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೆಣ್ಮಗುವೊಂದು ತನ್ನ ಬಲಗೈಯನ್ನೇ ಕಳೆದುಕೊಳ್ಳಬೇಕಾಗಿ ಬಂದ ಕರುಣಾಜನಕ ವಿದ್ಯಾಮಾನವೊಂದು ನಡೆದಿದೆ.

ಉಡುಪಿ ತಾಲೂಕು ಎಳ್ಳಂಪಳ್ಳಿ ಗ್ರಾಮದ ನೀಲಾವರ ನಿವಾಸಿ ಶ್ರೀಮತಿ ಮುಕಾಂಬಿಕ ಎಂಬಾಕೆಯ ಹೆಣ್ಮಗಳೇ ಕೈ ಕಳೆದುಕೊಂಡ ನತದೃಷ್ಠೆ. ಈಕೆಗೀಗ ಕೇವಲ ಎರಡೂವರೆ ತಿಂಗಳು. ಮೂಕಾಂಬಿಕಾ ಅವರ ಎರಡನೇ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ವೈದ್ಯರು ತೋರಿಸಿದ ಬೇಜವಾಬ್ದಾರಿಯಿಂದಾಗಿ ಈ ಹೆಣ್ಮಗು ತನ್ನ ಸಹಜ ಶಕ್ತಿಯನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದಾಗಿ ಕಡು ಬಡ ಕುಟುಂಬದ ಜಂಘಾ ಬಲವೇ ಕುಸಿದುಹೋಗುವಂತಾಗಿದೆ.

ಎರಡೂವರೆ ವರ್ಷ ಪ್ರಾಯದ ಗಂಡು ಮಗುವಿನ ತಾಯಿಯಾಗಿರುವ ಮುಕಾಂಬಿಕ, ಎರಡನೇ ಹೆರಿಗೆಗಾಗಿ ಜೂನ್ 17ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಸೂಚಿಸಿದ ನಿರೀಕ್ಷಿತ ಹೆರಿಗೆ ದಿನಾಂಕ ಜೂನ್ 16 ಆಗಿತ್ತು. ಒಂದು ದಿನ ತಡವಾಗಿ, ಅಂದರೆ ಜೂನ್ 17ರಂದು ನೋವು ಆರಂಭವಾದ ಕಾರಣ ಜೂನ್ 17ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹಿಸಿಕೊಳ್ಳಲಾರದಷ್ಟು ವಿಪರೀತ ನೋವನ್ನು ಅನುಭವಿಸುತ್ತಿದ್ದ ಮುಕಾಂಬಿಕ, ಶಸ್ತ್ರಚಿಕಿತ್ಸೆ ನಡೆಸಿ ಮಗವನ್ನು ಹೊರ ತೆಗೆಯುವಂತೆ ಪದೇ ಪದೇ ವೈದ್ಯರಲ್ಲಿ ಭಿನ್ನವಿಸಿಕೊಂಡಿದ್ದಾರೆ. ಅಂತಿಮವಾಗಿ ನೋವು ತಾಳಿಕೊಳ್ಳಲಾರದೆಯೇ ಅರೆ ಪ್ರಜ್ಞಾವಸ್ಥೆಗೆ ಹೋಗಿಬಿಟ್ಟಿದ್ದಾರೆ.

ಇಷ್ಟಾದರೂ ಸಹ, ಹೆಂಗಸರ ಆಸ್ಪತ್ರೆಯ ವೈದ್ಯರು ಮುಕಾಂಬಿಕಯ ಹೆರಿಗೆ ಮಾಡಿಸಲೇ ಇಲ್ಲ. ನೋವು ಕಾಣಿಸಿಕೊಂಡ ಎರಡು ದಿನಗಳ ಬಳಿಕ, ಅಂದರೆ ಜೂನ್ 19ರಂದು ಸಂಜೆ ಸಂಜೆ ಹೆರಿಗೆಯಾಗಿದೆ. ಹೆರಿಗೆಯಾಗುವ ಸಮಯದಲ್ಲಿ ಮಗುವನ್ನು ಹೊರಗೆ ತೆಗೆಯಲು ವೈದ್ಯರು ಬಹಳ ಕಷ್ಟಪಟ್ಟಿದ್ದಾರೆ. ಕೊನೆಗೆ ಬಲವಂತವಾಗಿಯೇ ಹೊರಗೆಳೆದು ಹಾಕಿದ್ದಾರೆ. ಈ ಸಂದರ್ಭದಲ್ಲಿನ ವೈದ್ಯರ ಅಸಡ್ಡೆಯಿಮದಾಗಿ ಮಗುವಿನ ಕುತ್ತಿಗೆ ಮತ್ತು ಬಲಭುಜ ಭಾಗದ ನರಗಳಿಗೆ ಗಂಭೀರವಾದ ಏಟು ಬಿದ್ದ ಪರಿಣಾಮವಾಗಿ ಮಗುವಿನ ಬಲಕೈ ಸಂಪೂರ್ಣವಾಗಿ ತನ್ನ ಶಕ್ತಿ ಕಳೆದುಕೊಂಡು ನಿಸ್ತೇಜವಾಗಿದೆ.

ಹೆರಿಗೆಯಾದ ಬಳಿಕ ವೈದ್ಯರು ಮಗುವಿನ ಕೈಗೆ ಬ್ಯಾಂಡೇಜ್ ಮಾಡಿ ನಾಲ್ಕೈದು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇರಿಸಿದ್ದಾರೆ. ಈ ನಡುವೆ ಒಂದು ಬಾರಿ ಮಾತ್ರ ಮಗುವನ್ನು ತಾಯಿಗೆ ತೋರಿಸಿದ್ದಾರೆ ಮತ್ತು ಬ್ಯಾಂಡೇಜ್ ಯಾಕೆಂದು ಕೇಳಿದಾಗ, ಹೆರಿಗೆ ಮಾಡಿಸುವಾಗ ಕೈಗೆ ಗಾಯವಾಗಿದೆ, ವಾರದೊಳಗೆ ವಾಸಿಯಾಗಲಿದೆ ಎಂದು ಸಮಜಾಯಿಷಿಕೆ ನೀಡಿದ್ದಾರೆ. ಜೂನ್ 30ಕ್ಕೆ ನಿಸ್ತೇಜ ಕೈಯನ್ನು ಸರಿಪಡಿಸಲಾಗದ ಸ್ಥಿತಿಯಲ್ಲಿಯೇ ತಾಯಿ ಹಾಗೂ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ.

ಬಡ ಕುಟುಂಬಕ್ಕೆ ಸೇರಿದ ಮುಕಾಂಬಿಕೆ ಬೇರೆ ದಾರಿ ಕಾಣದೆ ಮತ್ತೆ ಜಿಲ್ಲಾಸ್ಪತ್ರೆಗೆ, ಹೆಂಗಸರ ಆಸ್ಪತ್ರೆಗೆ ಮಕ್ಕಳ ಆಸ್ಪತ್ರೆಗೆ ಕರೆದೊಯ್ದು ತೋರಿಸಿದ್ದಾರೆ. ವೈದ್ಯರ ಸೂಚನೆಯಂತೆ ಕೊನೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆದೊಯ್ದು ತಜ್ಞ ವೈದ್ಯರಿಗೆ ತೋರಿಸಿದ್ದಾರೆ. ಹೆರಿಗೆ ಮಾಡಿಸುವಾಗ ಆದ ಘಟನೆಯಿಂದಾಗಿ ಮಗುವಿನ ಕೈಗೆ ಪೆಟ್ಟಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದು, ಆದಷ್ಟು ಬೇಗ ಶಸ್ತ್ರ ಚಿಕಿತ್ಸೆ ಮತ್ತು ಮುಂದಿನ ಎರಡು ವರ್ಷಗಳ ಕಾಲ ನಿರಂತರವಾಗಿ ಚಿಕಿತ್ಸೆ ಓದಗಿಸಿದಲ್ಲಿ 40 ಶೇಕಡಾದಷ್ಟು ಕೈಗೆ ಶಕ್ತಿ ತುಂಬಬಹುದು ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.

ಎರಡೂವರೆ ತಿಂಗಳ ಹೆಣ್ಮಗಳ ಭವಿಷ್ಯದಲ್ಲಿ ಮತ್ತೆ ಕಿಂಚಿತ್ತಾದರೂ ನಗು ಚಿಮ್ಮಿಸಬೇಕಾದರೆ ಕಡು ಬಡ ಕುಟುಂಬಕ್ಕೆ ಸೇರಿದ ಶ್ರೀಮತಿ ಮುಕಾಂಬಿಕ ಕನಿಷ್ಠ ಎರಡು ಲಕ್ಷ ರುಪಾಯಿಗಳನ್ನಾದರೂ ವ್ಯವಯಿಸಲೇಬೇಕಾಗಿದೆ. ಇಷ್ಟು ಹಣವನ್ನು ಹೊಂದಿಸಿಕೊಳ್ಳುವ ಯಾವುದೇ ಶಕ್ತಿ ಸಾಮಥ್ರ್ಯಗಳು ಕೂಡಾ ಮೂಕಾಂಬಿಕೆಯಲ್ಲಿಲ್ಲ. ಆದುದರಿಂದ ಮುಕಾಂಬಿಕ ಈಗ ಮಾನವೀಯ ಅಂತಃಕರಣವಿರುವ ಜನರನ್ನು ಆಶ್ರಯಿಸುವುದು ಅನಿವಾರ್ಯವಾಗಿದೆ.

ಹೃದಯ ಸಂಪನ್ನ ದಾನಿಗಳು ಶ್ರೀಮತಿ ಮುಕಾಂಬಿಕಾಳ ಕಾರ್ಪೋರೇಷನ್ ಬ್ಯಾಂಕ್ ನ ಕುಂಜಾಲ್ ಬ್ರಾಂಚ್ ನಲ್ಲಿರುವ ಉಳಿತಾಯ ಖಾತೆ ಸಂಖ್ಯೆ 297600101001254 (ಪಿ.ಕೋಡ್: 001325)ಗೆ ಗರಿಷ್ಟ ಮೊತ್ತದ ಆರ್ಥಿಕ ಸಹಾಯ ಮಾಡಿದಲ್ಲಿ ಎರಡೂವರೆ ತಿಂಗಳ ಹೆಣ್ಮಗಳು ಅನ್ಮಿತಾಳ ಬಲಕೈ ಆಕೆಯ ದಿನಚರಿಗೆ ಕನಿಷ್ಟ ಪ್ರಮಾಣದಲ್ಲಾದರೂ ಉಪಯೋಗವಾಗಲಿದೆ. ಆಕೆ ಹಾಗೂ ಆಕೆಯ ಬಡ ಕುಟುಂಬ ಪ್ರತಿದಿನ ದಾನಿಗಳನ್ನು ಸ್ಮರಣೆ ಮಾಡಲು ಕಾರಣವಾಗುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s