ವಿಶ್ವನಾಥ ಶೆಟ್ಟಿಗೆ ಗುರಾಯಿಸಿ, ಮುಗಿಸಬೇಕೆಂದು ಹೇಳಿದ್ದೇ ಪಿಟ್ಟಿ ಅಂತ್ಯಕ್ಕೆ ಕಾರಣವಾಯಿತು !

Posted: ಸೆಪ್ಟೆಂಬರ್ 14, 2014 in Uncategorized

ಉಡುಪಿ: ರೌಡಿ ಶೀಟರ್ ಪಿಟ್ಟಿ ನಾಗೇಶ್ ಹಾಗೂ ವಿನೋದ್ ಶೆಟ್ಟಿಗಾರ್ ಸಹಚರ ವಿಶ್ವನಾಥ ಶೆಟ್ಟಿ ಉಡುಪಿ ಸೆಷನ್ಸ್ ಕೋರ್ಟಿನಲ್ಲಿ ಸೆಪ್ಟೆಂಬರ್ 8ರಂದು ಮುಖಾಮುಖಿಯಾದಾಗ ಪಿಟ್ಟಿ, ವಿಶ್ವನಾಥ ಶೆಟ್ಟಿಯನ್ನು ನೋಡುತ್ತಾ ಗುರಾಯಿಸಿದ್ದು ಮತ್ತು ಬಳಿಕ ತನ್ನ ನಂಬಿಕಸ್ಥ ಬಂಟನೆಂದು ಜೊತೆಗಿರಿಸಿಕೊಂಡಿದ್ದ ಮುನ್ನ ಯಾನೆ ಐವನ್ ರಿಚರ್ಡ್ ನಲ್ಲಿ ವಿಶ್ವನಾಥ ಶೆಟ್ಟಿಯನ್ನು ಮುಗಿಸಬೇಕು ಎಂದು ಹೇಳಿಕೊಂಡ ದಿನವೇ ವಿಶ್ವನಾಥ ಶೆಟ್ಟಿ ಹಾಗೂ ಸಹಚರರು ಪಿಟ್ಟಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ ಎಂದು ಎಸ್ಪಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಕುಕ್ಕಿಕಟ್ಟೆ ಇಂದಿರಾನಗರ ನಿವಾಸಿ ಬಸವ ದೇವಾಡಿಗ ಎಂಬವರ ಪುತ್ರ ರೌಡಿ ಪಿಟ್ಟಿ ನಾಗೇಶ್ ಯಾನೆ ನಾಗೇಶ ದೇವಾಡಿಗ (41) ಕೊಲೆ ಪ್ರಕರಣ ಮತ್ತು ಹಂತಕರ ಬಂಧನ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲು ಸೆ.13ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ಎಸ್ಪಿ ಮಾತನಾಡುತ್ತಿದ್ದರು.

ಸಾವು ಮನೆಗೆ ಬಂದೇ ಕರೆದೊಯ್ದಿತ್ತು !

ಮರ ಕಡಿಯುವ ಕೆಲಸ ಮಾಡುತ್ತಿದ್ದ ನೇಜಾರು ರೈಸ್ ಮಿಲ್ ಬಳಿಯ ನಿವಾಸಿ ಐವನ್ ರಿಚರ್ಡ್ ಯಾನೆ ಮುನ್ನ (26)ನನ್ನು ಪಿಟ್ಟಿ ತನ್ನ ನಂಬಿಗಸ್ಥ ಬಂಟನೆಂದು ಭಾವಿಸಿಕೊಂಡಿದ್ದ. ಈತನಲ್ಲಿ ವಿಶ್ವಾಸವಿರಿಸಿ ಜೊತೆಗೆ ಓಡಾಡುತ್ತಿದ್ದ. ಸೆ.11ರಂದು ಕೆಲಸದ ಮೇಲೆ ಮುನ್ನ ಬೆಳ್ಮಣ್ ಗೆ ಹೋಗುವುದಿತ್ತು ಮತ್ತು ಇದನ್ನು ತಿಳಿದುಕೊಂಡಿದ್ದ ಪಿಟ್ಟಿ ಸ್ವತಹಾ ತಾನಾಗಿಯೇ ಮುನ್ನನಲ್ಲಿ ಜೊತೆಗೆ ತಾನು ಸಹ ಬೆಳ್ಮಣ್ ಗೆ ಬರುವುದಾಗಿ ತಿಳಿಸಿದ್ದಾನೆ. ಅದರಂತೆ ಸೆ.11ರಂದು ಬೆಳಗ್ಗೆ ಸ್ವತಹಾ ಮುನ್ನನೇ ಪಿಟ್ಟಿಯ ಮನೆಗೆ ಬಂದು ತನ್ನ ಜೊತೆಗೆ ಬೆಳ್ಮಣ್ ಗೆ ಕರೆದೊಯ್ದಿದ್ದಾನೆ. ಪಿಟ್ಟಿಯ ಮನೆಗೆ ಬಂದು ಕಾರಿನಲ್ಲಿ ಬೆಳ್ಮಣ್ ಗೆ ಕರೆದೊಯ್ಯುವ ಮುನ್ನ ಮುನ್ನ ತನ್ನ ಕಾರಿಗೆ ಪೆಟ್ರೋಲ್ ಹಾಕಲು ಹಣವಿಲ್ಲದೆ ವಿಸ್ವನಾಥ ಶೆಟ್ಟಿಯಲ್ಲಿ ಹಣ ಕೇಳಿದ್ದು, ವಿಶ್ವನಾಥ ಶೆಟ್ಟಿ ಪೆಟ್ರೋಲ್ ಹಾಕಲೆಂದು ಮುನ್ನಗೆ 1,500 ರು. ನೀಡಿದ್ದಾನೆ. ಹೀಗೆ ತನ್ನೊಂದಿಗೆ ಪಿಟ್ಟಿಯನ್ನು ಕರೆದೊಯ್ದ ಮುನ್ನನೇ ವಿಶ್ವನಾಥ ಶೆಟ್ಟಿ ಹಾಗೂ ಇತರರಿಗೆ ಮಾಹಿತಿ ನೀಡಿ, ಬೆಳ್ಮಣ್ ನಿಂದ ಉಡುಪಿ ಕಡೆಗೆ ಮರಳುವಾಗ ಕಾದು ಕುಳಿತು ಕೊಲೆ ಮಾಡುವಂತೆ ಮಾಡಿದ್ದಾನೆ.

ಬೆಳ್ಮಣ್ ನಿಂದ ಜೊತೆಯಾಗಿಯೇ ಹೊರಟ ಪಿಟ್ಟಿ ಹಾಗೂ ಮುನ್ನ, ಕಟಪಾಡಿಯಲ್ಲಿ ಪೆಟ್ರೋಲ್ ಬಂಕ್ ಹಿಂಬದಿಯಲ್ಲಿರುವ ಬಾರ್ ನಲ್ಲಿ ಮದ್ಯ ಸೇವಿಸಿದ್ದಾರೆ. ಮಧ್ಯೆ, ದಾಳಿಂಬೆ ತಂದು ಕೊಡುವಂತೆ ಹೇಳಿ ಪಿಟ್ಟಿ ಮುನ್ನನ್ನು ಹೊರಗೆ ಕಳುಹಿಸಿದ್ದಾನೆ. ಹೀಗೆ ಬಾರ್ನಿಂದ ಹೊರಗಡೆ ಬಂದ ಮುನ್ನ, ಇನ್ನು ಕೆಲವೇ ನಿಮಿಷಗಳಲ್ಲಿ ತಾವು ಕಟಪಾಡಿಯಿಂದ ಹೊರಡುವುದಾಗಿಯೂ, ಉದ್ಯಾವರ ಹಲಿಮಾ ಸಾಬ್ಜು ಹಾಲ್ ಸಮೀಪ ರಸ್ತೆ ಬದಿಯಲ್ಲಿ ಕಾದು ನಿಲ್ಲುವಂತೆಯೂ, ಕಾರಿನ ಹಿಂಬದಿಯಲ್ಲಿ ಇಂಗ್ಲೀಷ್ ನಲ್ಲಿ ‘R’ ಎಂದು ಬರೆದಿರುವ ಸ್ಟಿಕ್ಕರ್ ಅಂಟಿಸಿರಬೇಕು. ನಾವಿರುವ ಕಾರನ್ನು ಅಲ್ಲಿಗೆ ತಂದು ನಿಲ್ಲಿಸುವುದಾಗಿಯೂ, ಆಗ ಅಟ್ಯಾಕ್ ಮಾಡಿ ಎಂಬುದಾಗಿಯೂ ವಿಶ್ವನಾಥ ಶೆಟ್ಟಿಗೆ ತಿಳಿಸಿದ್ದಾನೆ. ಇದ್ಯಾವುದರ ಅರಿವೂ ಇಲ್ಲದೆ ಪಿಟ್ಟಿ ಮುನ್ನ ಜೊತೆಗೆ ಕಾರಿನಲ್ಲಿ ಪ್ರಯಾಣಿಸಿದ್ದಾನೆ, ಹಂತಕರ ತಲವಾರು ಏಟಿಗೆ ಬಲಿಯಾಗಿದ್ದಾನೆ.

ಪಿಟ್ಟಿಗೆ ಮುನ್ನನ ಮೇಲೆ ನಂಬಿಕೆ ಇತ್ತಾದರೂ, ಮುನ್ನನಿಗೆ ಪಿಟ್ಟಿ ಮೇಲೆ ನಂಬಿಕೆ ಇರಲಿಲ್ಲ. ಬಹಿರಂಗಕ್ಕೆ ಪಿಟ್ಟಿಯ ಜೊತೆಗೆ ಚೆನ್ನಾಗಿಯೇ ಇದ್ದ ಮುನ್ನ, ರಹಸ್ಯವಾಗಿ ವಿನೋದ್ ಶೆಟ್ಟಿ ಸಹಚರರಾದ ವಿಶ್ವನಾಥ ಶೆಟ್ಟಿ ಹಾಗೂ ಇತರರ ಜೊತೆ ಸಂಪರ್ಕದಲ್ಲಿದ್ದ. ಮಾತ್ರವಲ್ಲ, ಪಿಟ್ಟಿಯ ಚಲನವಲನದ ಬಗ್ಗೆ ಮಾಹಿತಿ ರವಾನಿಸುತ್ತಲೇ
ಇದ್ದನೆನ್ನಲ್ಲಾಗಿದೆ.

ಬೆಳ್ಮಣ್ ನಿಂದ ಉಡುಪಿಗೆ ಮರಳುವ ಮಾರ್ಗ ಮಧ್ಯೆ ಪಿಟ್ಟಿ, ತನ್ನಿಬ್ಬರು ಮಿತ್ರರಾದ ರವಿ ಜತ್ತನ್ನ ಹಾಗೂ ರಮೇಶ್ ಪೂಜಾರಿಯವರನ್ನು ಕಂಡು ಮಾತಾಡಿ ಬರೋಣ ಎಂದು ಮುನ್ನನಲ್ಲಿ ಹೇಳಿಕೊಂಡಿದ್ದಾನೆ. ಆದರೆ ಅಲ್ಲಿಗೆ ಕರೆದೊಯ್ದು ತನ್ನನ್ನೇ ಮುಗಿಸಲು ಪಿಟ್ಟಿ ಸಂಚು ಹೂಡಿರಬಹುದೇ ಎಂಬ ಸಂದೇಹದಲ್ಲಿ ಮುನ್ನ ಅಲ್ಲಿಗೆ ಹೋಗದೆ ಉಡುಪಿ ಕಡೆಗೆ ಕರೆದುಕೊಂಡು ಬಂದಿದ್ದಾನೆ. ಅತ್ತ ಹಂತಕ ಪಡೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಎಂದಿನಂತೆ ಗ್ರೌಂಡಿನಲ್ಲಿ ವಾಲಿಬಾಲ್ ಆಡಿದ್ದಾರೆ. ಮಧ್ಯಾಹ್ನದ ಬಳಿಕ ಬಾರ್ ನಲ್ಲಿ ಕುಳಿತು ಮದ್ಯ ಸೇವಿಸಿದ್ದಾರೆ. ಸಂಜೆ ಕರೆ ಬರುತ್ತಲೇ ಪಿಟ್ಟಿಯನ್ನು ಬಲಿ ತೆಗೆಯಲು ಹೊರಟಿದ್ದಾರೆ.

ಮುನ್ನ ಇದ್ದ ಕಾರಿನ ಬಳಿಗೆ ಬಂದವನೇ ವಿಶ್ವನಾಥ ಶೆಟ್ಟಿ, ಡೋರ್ ತೆಗೆಯುವಂತೆ ಪಿಟ್ಟಿಗೆ ತಿಳಿಸಿದ್ದಾನೆ. ಬಾಗಿಲು ತೆಗೆದು ಏನು ಎಂದು ಕೇಳುವಷ್ಟರಲ್ಲಿಯೇ ವಿಸ್ವನಾಥ ಶೆಟ್ಟಿಯ ಕೈಯ್ಯಲ್ಲಿದ್ದ ಚೂರಿ ಪಿಟ್ಟಿಗೆ ಹೊಟ್ಟೆ ಸೇರಿದೆ. ನಾನು ನಿನಗೇನು ಮಾಡಿದ್ದೇನೆ ಎಂದು ಪಿಟ್ಟಿ ಕೇಳುತ್ತಿದ್ದಂತೆಯೇ, ನೀನು ಮಾಡಿದ್ದ ಸಾಕು, ಇನ್ನು ಮೇಲಕ್ಕೆ ಹೋಗು ಎಂದು ವಿಶ್ವನಾಥ ಶೆಟ್ಟಿ ಉತ್ತರ ಕೊಟ್ಟಿದ್ದಾನೆ. ಪಿಟ್ಟಿಯ ಹೊಟ್ಟೆಗೆ ಹಾಕಿದ ಚೂರಿ ಎಳೆದಾಗ ಹೊರಗೆ ಬಾರದಾಗ, ಗುರುಪ್ರಸಾದ್ ಶೆಟ್ಟಿ ತನ್ನಲ್ಲಿದ್ದ ತಲವಾರನ್ನು ವಿಶ್ವನಾಥ ಶೆಟ್ಟಿಯ ಕೈಗಿತ್ತಿದ್ದಾನೆ. ಅದೇ ತಲವಾರಿನಿಂದ ಶೆಟ್ಟಿ ಪಿಟ್ಟಿಯನ್ನು ಕೊಚ್ಚಿ ಹಾಕಿದ್ದಾನೆ. ಕೊಲೆ ನಡೆಸಿದ ಬಳಿಕ ಆರೋಪಿಗಳು ತಮ್ಮ ಮೊಬೈಲ್ ಗಳಲ್ಲಿದ್ದ ಸಿಮ್ಗಳನ್ನು ನದಿಗೆ ಎಸೆದಿದ್ದಾರೆ. ಸ್ನಾನ ಮಾಡಿ ಬಟ್ಟ ಬದಲಾಯಿಸಿದ್ದಾರೆನ್ನಲಾಗಿದೆ.

ಸೆ.12ರಂದು ಮಧ್ಯಾಹ್ನ ಗಂಟೆ 12.15ಕ್ಕೆ ಇನ್ಸ್ಪೆಕ್ಟರ್ ಜೈಶಂಕರ್ ನೇತೃತ್ವದ ಡಿಸಿಐಬಿ ಪೊಲೀಸರು ಹಾಗೂ ಕಾಪು ಸರ್ಕಲ್ ಇನ್ಸ್ಪೆಕ್ಟರ್ ಸುನಿಲ್ ವೈ.ನಾಯ್ಕ್ ನೇತೃತ್ವದ ತಂಡ ಜಂಟಿಯಾಗಿ ಕಾಯರ್ಾಚರಣೆ ನಡೆಸಿ, ಉದ್ಯಾವರದ ಬೋಳ್ಜೆ ಗಾಳಿಕುದ್ರು ರೈಲ್ವೆ ಬ್ರಿಡ್ಜ್ ಬಳಿಯ ತೋಟದಲ್ಲಿ ಅಡಗಿ ಕುಳಿತಿದ್ದ ಹಂತಕ ತಂಡದ ನೇಜಾರಿನ ಮುನ್ನ ಯಾನೆ ಐವನ್ ರಿಚರ್ಡ್ ಮಸ್ಕರೇನಿಯಸ್ (33), ಅಲೆವೂರಿನ ಗುರುಪ್ರಸಾದ್ ಶೆಟ್ಟಿ (26), ಬೈಲೂರಿನ ಸಂತೋಷ್ ಪೂಜಾರಿ (32), ಕೊರಂಗ್ರಪಾಡಿಯ ವಿಶ್ವನಾಥ ಶೆಟ್ಟಿ (32) ಹಾಗೂ ಕುಕ್ಕಿಕಟ್ಟೆಯ ಜಾಕೀರ್ ಹುಸೈನ್ (25) ರನ್ನು ಬಂಧಿಸಿದ್ದಾರೆ ಎಂದು ಎಸ್ಪಿ ರಾಜೇಂದ್ರ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಕೊಲೆಗೆ ಬಳಸಿದ ತಲವಾರು ವಶ

ಪಿಟ್ಟಿ ನಾಗೇಶ್ ಕೊಲೆಗೆ ಹಂತಕರು ಉಪಯೋಗಿಸಿದ 2 ತಲವಾರು, ಒಂದು ದೊಡ್ಡ ಗಾತ್ರದ ಚೂರಿ, ಕೆ.ಎ.20. ಎಂ. 7493 ನಂಬ್ರದ ಮಾರುತಿ 800 ಕಾರು, ಕೆ.ಎ.20. ಬಿ. 6757 ನಂಬ್ರದ ಪೋಡ್ರ್ ಫಿಸ್ತಾ ಕಾರು ಮತ್ತು 5 ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಪೊಲೀಸರು ಆರೋಪಿಗಳ ಕೈನಿಂದ ವಶಪಡಿಸಿಪಡಿಸಿಕೊಂಡಿದ್ದಾರೆ.

22 ಕ್ರಿಮಿನಲ್ ಕೇಸ್ಗಳ ಮಾಲೀಕ, ಪಿಟ್ಟಿ !

ಕೊಲೆಯಾದ ಕುಖ್ಯಾತ ರೌಡಿ ಶೀಟರ್ ಪಿಟ್ಟಿ ನಾಗೇಶ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 22 ಕ್ರಿಮಿನಲ್ ಮೊಕದ್ದಮೆಗಳು ದಾಖಲಿಸಲ್ಪಟ್ಟಿವೆ. ಇವುಗಲಲ್ಲಿ ನಾಲ್ಕು ಕೊಲೆ ಮೊಕದ್ದಮೆಗಳು. ಆರೋಪಿಗಳ ಪೈಕಿ ಗುರುಪ್ರಸಾದ್ ಶೆಟದ್ಟಿ ವಿರುದ್ಧ 7, ವಿಶ್ವನಾಥ ಶೆಟ್ಟಿ ವಿರುದ್ಧ 3, ಜಾಕೀರ್ ಹುಸೈನ್ ವಿರುದ್ಧ 2, ಸಂತೋಷ್ ಪೂಜಾರಿ ವಿರುದ್ಧ 2 ಮತ್ತು ಐವನ್ ರಿಚರ್ಡ್ ಯಾನೆ ಮುನ್ನನ ವಿರುದ್ಧ 2 ಕೇಸುಗಳು ದಾಖಲಾಗಿವೆ.

ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ

ಡಿಸಿಐಬಿ ಇನ್ಸ್ ಪೆಕ್ಟರ್ ಜೈ ಶಂಕರ್, ಎ.ಎಸ್.ಐಗಳಾದ ನಾರಾಯಣ, ರೊಸಾರಿಯೋ ಡಿಸೋಜಾ, ಹೆಚ್.ಸಿಗಳಾದ ಪ್ರಕಾಶ್, ಚಂದ್ರ ಶೆಟ್ಟಿ, ಪಿ.ಸಿಗಳಾದ ದಿನೇಶ್ ಶೆಟ್ಟಿ, ಅಶೋಕ್ ಕುಮಾರ್, ರಾಜೇಶ್ ಕೊಕ್ಕರ್ಣೆ, ಸತೀಶ್, ಅಶೋಕ್ ಕುಮಾರ್, ಇಲಾಖಾ ವಾಹನ ಚಾಲಕ ಚಂದ್ರಶೇಖರ್, ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಸುನಿಲ್ ವೈ.ನಾಯ್ಕ್ ಹಾಗೂ ಸಿಬ್ಬಂದಿಗಳು, ಪಡುಬಿದ್ರೆ ಪಿ.ಎಸ್.ಐ.ಅಜ್ಮತ್ ಆಲಿ ಹಾಗೂ ಶಿರ್ವ ಪಿ.ಎಸ್.ಐ. ಅಶೋಕ್.ಪಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s