ನಕಲಿ ವೈದ್ಯರ ಹಾವಳಿ: ಆರೋಗ್ಯ ಇಲಾಖಾಧಿಕಾರಿಗಳಿಂದ ದಾಳಿಯ ಪ್ರಹಸನ ನಡೆಸಲು ಸಿದ್ಧತೆ !

Posted: ಸೆಪ್ಟೆಂಬರ್ 16, 2014 in Uncategorized

ಉಡುಪಿ: ‘ಜಿಲ್ಲೆಯಲ್ಲಿ ನಕಲಿ ವೈದ್ಯರುಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಯಲು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸೂಚನೆಯಂತೆ ಆರೋಗ್ಯ ಇಲಾಖಾ ಅಧಿಕಾರಿಗಳು ದಾಳಿಗೆ ಸಜ್ಜಾಗಿದ್ದಾರೆ’ ಎಂದು, ದಾಳಿ ನಡೆಸುವ ಮೊದಲೇ ಆರೋಗ್ಯ ಇಲಾಖಾಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿರುವುದು ಅಧಿಕಾರಿಗಳ ನಿಜಬಣ್ಣವನ್ನು ಬಯಲು ಮಾಡಿದೆ. ಆರೋಗ್ಯಾಧಿಕಾರಿಗಳ ಈ ಅನುಚಿತ ಕ್ರಮ ನಕಲಿ ವೈದ್ಯರುಗಳನ್ನು ರಕ್ಷಿಸುವ ಒಂದು ಸಂಚಿನ ಭಾಗ ಎಂಬ ಸಂಶಯ ವ್ಯಕ್ತವಾಗಿದೆ.

ಸೆಪ್ಟೆಂಬರ್ 15ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಕಲಿ ವೈದ್ಯರುಗಳ ಹಾವಳಿ ಮತ್ತು ಈ ಬಗ್ಗೆ ಮಾನವಹಕ್ಕು ಆಯೋಗದಿಂದ ಬಂದ ನಿರ್ದೇಶನದ ಬಗ್ಗೆ ಚರ್ಚೆ ನಡೆಸಲಾಯಿತು ಮತ್ತು ವೈದ್ಯರು ತಂಡಗಳ ಮೂಲಕ ಮುಂದಿನ 15 ದಿನಗಳೊಳಗೆ ಜಿಲ್ಲೆಯಾದ್ಯಂತ ತಪಾಸಣೆ ನಡೆಸಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು.

ಜಿಲ್ಲೆಯಲ್ಲಿ ಖಾಸಗಿ ವೈದ್ಯಕೀಯ ಕ್ಲಿನಿಕ್ ನಡೆಸುತ್ತಿರುವ ಎಲ್ಲ ವೈದ್ಯರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಖಾಸಗಿ ವೈದ್ಯಕೀಯ ಅಧಿನಿಯಮ ಕಾಯಿದೆಯಡಿ ಕ್ರಮ ಅನಿವಾರ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಆಯಾ ವಿಭಾಗದಲ್ಲಿ ಅರ್ಹತೆ ಪಡೆದ ವೈದ್ಯರು ನೋಂದಣಿ ಮಾಡಿಸಿಕೊಂಡ ವೈದ್ಯ ಪದ್ಧತಿಯಲ್ಲೇ ಚಿಕಿತ್ಸೆ ನೀಡಬೇಕು. ಕಾನೂನು ಮೀರಿ ನಡೆದರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ವೈದ್ಯಾಧಿಕಾರಿಗಳು ಸಭೆಯಲ್ಲಿ ನೀಡಿದರು.

ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ, ಕುಂದಾಪುರ ವ್ಯಾಪ್ತಿಯ ಡಾ. ಚಿದಾನಂದ ಸಂಜು, ಕಾರ್ಕಳ ತಾಲೂಕು ವೈದ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಹಾಗೂ ಆಯುಷ್ ಡಾಕ್ಟರ್ ಅಲಕನಂದಾ ರಾವ್ ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯಾಧಿಕಾರಿಗಳ ಬಳಿ ನಕಲಿ ವೈದ್ಯರುಗಳ ಬಗ್ಗೆ ಸವಿವರವಾದ ಮಾಹಿತಿ ಇದೆ ಎನ್ನಲಾಗಿದೆ. ಹೀಗಿದ್ದೂ, ಇದುವರೆಗೂ ಇಂಥವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಿಸಿದ್ದು ಯಾಕೆ ಎಂಬ ಪ್ರಶ್ನೆಯೊಂದಿಗೆ, ಇದೀಗ ಮುಂಚಿತವಾಗಿಯೇ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ ದಾಳಿ ನಡೆಸುವ ಸಂದರ್ಭದಲ್ಲಿ ನಕಲಿ ವೈದ್ಯರುಗಳು ತಪ್ಪಿಸಿಕೊಳ್ಳಲು ಸಹಕಾರ ಮಾಡಿಕೊಡುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s