ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಮತ್ತೊಂದು ಹಗರಣ: ಕಣಚೂರು ಸಂಸ್ಥೆಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ !

Posted: ಸೆಪ್ಟೆಂಬರ್ 18, 2014 in Uncategorized

# ರಾಜ್ಯದಲ್ಲಿ ಮೂರು ಖಾಸಗಿ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಅದರಲ್ಲಿ ಮಂಗಳೂರಿನ ಕಣಚೂರು ಶಿಕ್ಷಣ ಸಂಸ್ಥೆಯು ಒಂದು !

ಒಂದು ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮತಿ ನೀಡಬೇಕೆಂದರೆ ಆ ಸಂಸ್ಥೆಗೆ ಹಲವು ಅರ್ಹತೆ ಇರಬೇಕಾಗುತ್ತದೆ. ಅದರಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಹೊಂದಿರುವುದು ಒಂದು. ದ ಕ ಜಿಲ್ಲೆಯ ಎಲ್ಲಾ ನಾಗರಿಕರಿಗೆ ತಿಳಿದಿರುವಂತೆ ಕಣಚೂರು ಶಿಕ್ಷಣ ಸಂಸ್ಥೆ ಯಾವುದೆ ಆಸ್ಪತ್ರೆಗಳನ್ನು ಹೊಂದಿಲ್ಲ. ಹಾಗಿರುವಾಗ ಈ ಸಂಸ್ಥೆಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರ ಅನುಮತಿ ನೀಡಿದ್ದು ಹೇಗೆ ?

ಇದೊಂದು ಕುತೂಹಲಕಾರಿ ವಿದ್ಯಮಾನ. ನಮ್ಮ ರಾಜ್ಯ ಮತ್ತು ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರದ ಮದ್ಯೆ ಇರುವ ಅಪವಿತ್ರ ಮೈತ್ರಿ, ಭ್ರಷ್ಟಾಚಾರ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಇರುವ ಅಪಾರ ಲಾಭಕ್ಕಾಗಿ ಬಂಡವಾಳಶಾಹಿ ಕಳ್ಳರು ಮತ್ತು ಲಫಂಗ ಜನಪ್ರತಿನಿಧಿಗಳು ಅನುಸರಿಸುವ ವಿಧಾನವನ್ನು ಬಯಲಿಗೆಳೆಯುತ್ತದೆ.

ಯಾವುದೇ ಶಿಕ್ಷಣ ಸಂಸ್ಥೆಗೆ ಮೆಡಿಕಲ್ ಕಾಲೇಜು ನಡೆಸಲು ಅನುಮತಿ ನೀಡುವ ಪೂರ್ವದಲ್ಲಿ ಇಂಡಿಯನ್ ಮೆಡಿಕಲ್ ಕೌನ್ಸಿಲ್ (ಐ.ಎಮ್.ಸಿ)ನ ತಂಡ ಅಲ್ಲಿನ ಆಸ್ಪತ್ರೆ ಮತ್ತು ಮೂಲಭೂತ ಸೌಲಭ್ಯಗಳ ಕುರಿತು ಸರಕಾರಕ್ಕೆ ವರದಿ ನೀಡುವ ಸಲುವಾಗಿ ಪರಿಶೀಲನೆಗಾಗಿ ಕ್ಯಾಂಪಸ್ ಗೆ ಬರುತ್ತಾರೆ. ಹಾಗೆಯೇ ಕಣಚೂರು ಅಕಾಡೆಮಿಗೂ ಮೂರುಮಂದಿಯ ನಿಯೋಗ ಭೇಟಿ ನೀಡಿದೆ. ಹೀಗೆ ಭೇಟಿ ನೀಡುವ ತಂಡ ಮತ್ತು ಸಂಸ್ಥೆಯ ಮಾಲೀಕನ ಮಧ್ಯೆ ಮೊದಲೇ ಒಪ್ಪಂದ ನಡೆದಿದೆ.

ಅದರಂತೆ ಪರಿಶೀಲನೆಗೆ ಬರುವ ದಿವಸ ಕಣಚೂರು ಅಕಾಡೆಮಿಯ ಪದವಿ ಕಾಲೇಜು ಕಟ್ಟಡಕ್ಕೇ ಕಣಚೂರು ಹಾಸ್ಪಿಟಲ್ ಎಂದು ಬೋರ್ಡ್ ನೇತಾಡಿಸಿದ್ದಾರೆ. ಮಾಲೀಕನ ಗೋಡಂಬಿ ಕಾರ್ಖಾನೆಯ ಮಹಿಳೆಯರನ್ನು ತಾತ್ಕಾಲಿಕವಾಗಿ ಎರಡು ದಿವಸದ ಮಟ್ಟಿಗೆ ಒಳರೋಗಿಗಳನ್ನಾಗಿ ದಾಖಲಿಸಿದ್ದಾರೆ. ಇನ್ನು ಹತ್ತಿರದ ಮೆಡಿಕಲ್ ಕಾಲೇಜುಗಳ ವೈದ್ಯರನ್ನು, ವೈದ್ಯಕೀಯ ವಿದ್ಯಾರ್ಥಿಗಳು ಎರಡು ದಿನಗಳ ಮಟ್ಟಿಗೆ ಡಾಕ್ಟರ್, ಮಂಗಳೂರಿನ ನರ್ಸಿಂಗ್ ಕಾಲೇಜೊಂದರ ವಿಧ್ಯಾರ್ಥಿಗಳು ಬಾಡಿಗೆ ದಾದಿಯರು. ಇಂತಹ ತಾತ್ಕಾಲಿಕ, ಬಾಡಿಗೆಯ ವ್ಯವಸ್ಥೆಯನ್ನು ಪರಿಶೀಲನಾ ತಂಡಕ್ಕೆ ತೋರಿಸಲಾಯಿತು.

ಎಲ್ಲವೂ ಪೂರ್ವನಿರ್ಧರಿತ ಆಗಿದ್ದರಿಂದ ಪರಿಶೀಲನೆ ನಾಟಕೀಯವಾಗಿ ಮುಗಿಯಿತು. ಈಗ ಸರ್ಕಾರ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರ ಅನುಮತಿ ನೀಡಿದೆ. ಇದು ನಮ್ಮ ವ್ಯವಸ್ಥೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ತಲುಪಿದ ಪಾತಾಳ. ಇಂತಹ ವ್ಯವಸ್ಥೆಯ ವಿರುದ್ದ ಇಲ್ಲಿ ಧ್ವನಿ ಎತ್ತುವವರು ಯಾರೂ ಇಲ್ಲ. ಇಲ್ಲಿನ ಹೆಚ್ಚಿನ ಖಾಸಗಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಿರೋದು ಹೀಗೆಯೆ. ಇಲ್ಲಿ ಜನಸಾಮಾನ್ಯರು ಆರೋಗ್ಯ ಮತ್ತು ಶಿಕ್ಷಣ ಪಡೆಯೋದು ಹೇಗೆ ?

ಲಾಸ್ಟ್ ಪಂಚ್,, ಅಂದಹಾಗೆ ಕಣಚೂರು ಶಿಕ್ಷಣ ಸಂಸ್ಥೆಯ ಮಾಲಿಕರು ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕರು. ವಿಧಾನಸಭೆ, ಲೋಕಸಭೆ ಟಿಕೆಟ್ ಆಕಾಂಕ್ಷಿ ಆಗಿದ್ದರು. ಈ ಕಾಲೇಜು ಇರುವುದು ಆರೋಗ್ಯ ಸಚಿವ ಯು.ಟಿ. ಖಾದರ್ ಕ್ಷೇತ್ರದಲ್ಲಿ, ಆಸ್ಪತ್ರೆ ಸಹಿತ ಮೂಲಭೂತ ವ್ಯವಸ್ಥೆಯ ಪರಿಶೀಲನೆಗೆ ಬಂದ ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಯೋಗದ ಮೂರು ಮಂದಿ ಸದಸ್ಯರಲ್ಲಿ ಒಬ್ಬರು ಸಚಿವ ಯು.ಟಿ.ಖಾದರ್ ಸಹೋದರ ಡಾಕ್ಟರ್ ಯು.ಟಿ.ಇಫ್ತಿಕಾರ್. ಹೇಗಿದೆ ರಾಜ್ಯದಲ್ಲಿ ಆರೋಗ್ಯಯ ಸೇವೆಯ.…… ಮಾರಾಟ!!

ಸಂಪಾದಕನ ಟಿಪ್ಪಣಿ : ಈ ಮೇಲಿನ ಬರಹ ಪ್ರಸ್ತುತ ವ್ಯಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದೆ. ವಿಷಯ ಗಂಭೀರವಾದುದು ಆಗಿರುವುದರಿಂದ ಅದನ್ನು ಇಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಹಾಗೆಯೇ ಪ್ರಕಟಿಸಲಾಗುತ್ತಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರದ ಆರೋಗ್ಯ ಮಂತ್ರಿ ಡಾ.ಹರ್ಷವರ್ಧನ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವ ತುರ್ತು ಅಗತ್ಯವಿದೆ. – ಶ್ರೀರಾಮ ದಿವಾಣ.

[tags: karnataka medical council, medical, medical news, karnataka news, karnataka health news, govt of karnataka, u.t.khader, u.t.khader health minister govt of karnataka, http://www.karnatakamedicalcouncil.com, dr.h.veerabhadrappa president karnataka medical council, dr.kanchi pralhad v. vice president karnataka medical council, dr.b.p.s.murthy registrar karnataka medical council, health and family welfare department covt of karnataka, congress, karnataka congress, kpcc, dr.g.parameshwar kpcc president karnataka, chief minister govt of karnataka, health, health news, http://www.udupibits.com, http://www.udupibits.in, udupibits, shreeram diwana, siddharamahia chief minister of karnataka, dr.harshavardhan health minister govt of india, narendra modi pm]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s