ಕೆಎಂಸಿ ಉದ್ಯೋಗಿ ಮಹಿಳೆಯ ನಿಗೂಢ ಸಾವು: ಕೊಲೆ ಶಂಕೆ !

Posted: ಸೆಪ್ಟೆಂಬರ್ 20, 2014 in Uncategorized
ಟ್ಯಾಗ್ ಗಳು:, , , , , , , , ,

http://www.udupibits.in (ಅಂತರ್ಜಾಲದ ಕನ್ನಡ ಸುದ್ಧಿವಾಹಿನಿ)

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ, ಬಿಜೆಪಿ ಮುಖಂಡ, ಮಣಿಪಾಲದ ಕೆಎಂಸಿ ಆಸ್ಪತ್ರೆಯ ಉದ್ಯೋಗಿ ಸಂತೋಷ್ ಶೆಣೈರವರ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಶೆಣೈ (42) ಎಂಬಾಕೆಯ ಸಾವಿಗೆ ಆತ್ಮಹತ್ಯೆ ಕಾರಣವಲ್ಲ, ಇದೊಂದು ಕೊಲೆ ಎಂಬ ಬಲವಾದ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದು, ಹಣ ಮತ್ತು ರಾಜಕೀಯ ಪ್ರಭಾವದಿಂದ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂಬ ಗಂಭೀರವಾದ ಆರೋಪ ಕೇಳಿ ಬಂದಿದೆ.

ಅಲೆವೂರು ಗ್ರಾಮದ ನೈಲಿಪಾದೆ ನಿವಾಸಿಯಾದ ಸಂತೋಷ್ ಶೆಣೈ (46) ಹಾಗೂ ಪತ್ನಿ ವಿಜಯಲಕ್ಷ್ಮಿ ಶೆಣೈ ನಡುವೆ ಯಾವುದೋ ಒಂದು ಗಂಭೀರ ಕಾರಣಕ್ಕೆ ಸೆಪ್ಟೆಂಬರ್ 15ರಂದು ರಾತ್ರಿ ಜಗಳ ಆರಂಭವಾಗಿದೆ. ಮಾತಿನ ಚಕಮಕಿ ತಾರಕಕ್ಕೇರಿದಾಗ ಸಂತೋಷ್ ಶೆಣೈ ಪತ್ನಿ ಮೇಲೆ ಕೈ ಮಾಡಿದ್ದಾರೆ. ಪರಿಣಾಮವಾಗಿ ಸ್ಥಳದಲ್ಲೇ ಕುಸಿದುಬಿದ್ದು ವಿಜಯಲಕ್ಷ್ಮಿ ಶೆಣೈ ಮೃತಪಟ್ಟಿದ್ದಾರೆ. ಬಳಿಕ ಪ್ರಕರಣವನ್ನು ಮುಚ್ಚಿಹಾಕುವ ಉದ್ಧೇಶದಿಂದ ಆತ್ಮಹತ್ಯೆ ಎಂಬ ಕಟ್ಟುಕಥೆ ಕಟ್ಟಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಸೆ.16ರಂದು ನಸುಕಿನ 3 ಗಂಟೆ ಸಮಯಕ್ಕೆ ಸಂತೋಷ್ ಶೆಣೈಗೆ ಮನೆಯ ಬಾಗಿಲು ತೆರೆಯುವ ಶಬ್ದ ಕೇಳಿಬಂತು. ಎದ್ದು ನೋಡುವಾಗ ಪತ್ನಿ ವಿಜಯಲಕ್ಷ್ಮಿ ಶೆಣೈ ಮನೆಯಲ್ಲಿರಲಿಲ್ಲ. ಹುಡುಕಾಡಿದರು ಕಣ್ಣಿಗೆ ಬೀಳಲಿಲ್ಲ ಎಂದು ಮನೆಯವರು ಹೇಳಿಕೊಂಡಿದ್ದಾರೆ. ಆದರೆ ಬಾಗಿಲು ತೆರೆಯುವ ಶಬ್ದ ಕೇಳಿ ಸಂತೋಷ್ ಎದ್ದಿದ್ದಾರೆ ಎಂದರೆ, ಅಷ್ಟು ಬೇಗ ಸಂತೋಷ್ ಮಕ್ಕಳಿಬ್ಬರ ಕಣ್ಣಿಗೆ ಕಾಣದಷ್ಟು ದೂರವನ್ನು ಕ್ಷಣಾರ್ಧದಲ್ಲಿ ಸಾಗಿಹೋಗಲು ವಿಜಯಲಕ್ಷ್ಮಿಯವರಿಗೆ ಸಾಧ್ಯವಿತ್ತೇ ಎಂಬ ಪ್ರಶ್ನೆಯೊಂದಿಗೆ ಮನೆಯವರ ಈ ವಾದ ಹುರುಳಿಲ್ಲದ್ದು ಎಂಬ ಮಾತುಗಳು ಕೇಳಿಬರುತ್ತಿವೆ.

ಮೂಲತಹ ಕಾರ್ಕಳ ತಾಲೂಕಿನವರಾದ ವಿಜಯಲಕ್ಷ್ಮಿ, ಅಲೆವೂರಿನ ಸಂತೋಷ್ ಶೆಣೈ ಅವರನ್ನು ಪ್ರೇಮಿಸಿ ವಿವಾಹವಾಗಿದ್ದರು. ಇಬ್ಬರೂ ಜೊತೆಯಾಗಿ ಕೆಎಂಸಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು ಮತ್ತು ಇವರು ತಮ್ಮ ದಾಂಪತ್ಯ ಜೀವನದಲ್ಲಿ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದರು. ಮನೆಯಲ್ಲಿ ಆಗಾಗ ಯಾವುದೋ ವಿಷಯಕ್ಕೆ ಇವರೊಳಗೆ ಜಗಳಗಳು ನಡೆಯುತ್ತಿತ್ತು ಮತ್ತು ಮಾನಸಿಕ ನೋವಿನಿಂದಾಗಿ ವಿಜಯಲಕ್ಷ್ಮಿ ಕೃಶಕಾಯರಾಗಿದ್ದರು ಎಂದು ಹೇಳಲಾಗುತ್ತಿದೆ.

ಸೆ.16ರಂದು ಸಂಜೆ ಗಂಟೆ 5.30ಕ್ಕೆ ವಿಜಯಲಕ್ಷ್ಮಿಯವರ ಶವ ಕೆಮ್ತೂರು ಅಣೆಕಟ್ಟಿನ ಬಳಿ ಸಾರ್ವಜನಿಕರಿಗೆ ಕಂಡು ಬಂತು ಎನ್ನಲಾಗಿದೆ. ಪ್ರಕರಣದ ಶಂಕಿತ ಆರೋಪಿ ಸಂತೋಷ್ ಶೆಣೈಯನ್ನು ಉಡುಪಿ ನಗರ ಠಾಣೆಯ ಪೊಲೀಸರು ತೀವ್ರವಾದ ವಿಚಾರಣೆಗೆ ಒಳಪಡಿಸಿದಲ್ಲಿ ಸಂಪೂರ್ಣ ಸತ್ಯ ಹೊರಗೆ ಬೀಳಬಹುದಾಗಿದ್ದು, ಪೊಲೀಸ್ ಅಧಿಕಾರಿಗಳು ಯಾವುದೇ ಪ್ರಭಾವ ಮತ್ತು ಒತ್ತಡಕ್ಕೂ ಒಳಗಾಗದೆ ತನಿಖೆ ನಡೆಸಿ ವಿಜಯಲಕ್ಷ್ಮಿ ಶೆಣೈ ಅವರ ನಿಜವಾದ ಸಾವಿಗೆ ಕಾರಣನಾದವನನ್ನು ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s