ಸಚಿವ ಖಾದರ್ ಅವರಿಗೊಂದು ಬಹಿರಂಗ ಪತ್ರ..

Posted: ಸೆಪ್ಟೆಂಬರ್ 22, 2014 in Uncategorized

# ಘನ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಸನ್ಮಾನ್ಯ ಯು.ಟಿ.ಖಾದರ್ ಅವರೇ.., ತಾವು ಮೂಡಿಗೆರೆಯ ಸಮಾರಂಭವೊಂದರಲ್ಲಿ ಭಾಗವಹಿಸಿ
ಮಾತನಾಡುತ್ತಾ, ‘ಆರೋಗ್ಯ ಸಚಿವನಾಗಿದ್ದು ಗ್ರಹಚಾರ’ ಎಂದು ಅಲವತ್ತುಕೊಂಡಿದ್ದೀರಿ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ಮೊದಲ ಬಾರಿಗೆ ಕ್ಯಾಬಿನೆಟ್ ಸಚಿವರಾದ ನೀವು, ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಕಡತವನ್ನು ಪರಿಶೀಲನೆ ಮಾಡದೆ, ಸತ್ಯವನ್ನು ತಿಳಿದುಕೊಳ್ಳುವ ಕನಿಷ್ಟ ಪ್ರಯತ್ನವನ್ನೂ ಮಾಡದೆ, ಪೋರ್ಜರಿ ದಾಖಲಾತಿಗಳ ಆಧಾರದಲ್ಲಿ ದಕ್ಷ ವೈದ್ಯಾಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತು ಮಾಡಿದಿರಿ.

ದುಷ್ಟ ಸ್ಥಾಪಿತ ಹಿತಾಸಕ್ತಿಯುಳ್ಳ ಪ್ರಭಾವೀ ವ್ಯಕ್ತಿಗಳನ್ನು
ಮಗ್ಗುಲಲ್ಲಿರಿಸಿಕೊಂಡಿರಿ. ನೂರಾರು ಕೋಟಿ ರೂಪಾಯಿ ಮೊತ್ತದ ರಾಸಾಯನಿಕ ಹಗರಣ ನಡೆಸಿದ ಮಹಾ ಭ್ರಷ್ಟ ಸರಕಾರಿ ಅಧಿಕಾರಿಗಳನ್ನು ರಕ್ಷಿಸಿದಿರಿ.

ಇದೆಲ್ಲವನ್ನೂ ಆರಂಭದಿಂದಲೂ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವ ನಾನು (ನನಗೆ ಈ ಹಿಂದೆ ನಿಮ್ಮ ಬಗ್ಗೆ ಗೌರವವಿತ್ತು) ಹಾಗೂ ನನ್ನಂಥ ಇನ್ನೂ ಕೆಲವರು ನಿಮ್ಮ ಮೇಲೆ ಬಹಳ ಬೇಸರಗೊಂಡಿರುವುದು ನಿಮಗೆ ಈಗಾಗಲೇ ಗೊತ್ತಿರುವ ವಿಷಯವೇ ಆಗಿದೆ.

ಪ್ರಾಮಾಣಿಕ ವೈದ್ಯಾಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ಅವರಂಥವರು ನಿರಂತರವಾಗಿ ಕಿರುಕುಳ ಎದುರಿಸುತ್ತಾ, ಅವಮಾನ ಅನುಭವಿಸುತ್ತಾ ಸತ್ಯ ಮತ್ತು ನ್ಯಾಯಕ್ಕಾಗಿ ಇನ್ನೂ ಸಹ ನೀತಿ ಮಾರ್ಗದಲ್ಲಿಯೇ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಇವರ ನೋವು
ನಿಮ್ಮಂತವರಿಗೆ ಗ್ರಹಚಾರವಾಗಿ ಪೀಡಿಸುತ್ತಿದೆಯೇ ಹೊರತು ಬೇರೆ ಯಾವ ಗ್ರಹಚಾರವೂ ನಿಮಗಿಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ.

ನಿಮಗಂಟಿದ ಗ್ರಹಚಾರ ನಿಮ್ಮಿಂದ ಬಿಡುಗಡೆಯಾಗಬೇಕೆಂದರೆ, ಇನ್ನಾದರೂ ಡಾ.ಶರತ್ ಕುಮಾರ್ ಅವರಿಗಾದ ಅನ್ಯಾಯವನ್ನು ಯಾರ ಒತ್ತಡಕ್ಕೂ ಒಳಗಾಗದೆ ಸರಿಪಡಿಸಿ. ಆಗ ನಿಮ್ಮ ಗ್ರಹಚಾರ ನಿಮ್ಮನ್ನು ಬಿಟ್ಟು ಬಹುದೂರ ಹೊರಟುಹೋಗಲಿದೆ. – ಶ್ರೀರಾಮ ದಿವಾಣ, ಉಡುಪಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s