ಅಡಿಕೆ ಕೊಳೆರೋಗ ಪರಿಹಾರಧನ ವಿತರಣೆಯಲ್ಲಿ ಲಕ್ಷಾಂತರ ರು. ವಂಚನೆ-ತಾರತಮ್ಯ: ಭಾಕಿಸಂ ಆರೋಪ

Posted: ಸೆಪ್ಟೆಂಬರ್ 23, 2014 in Uncategorized

ಉಡುಪಿ: ಕಳೆದ ವರ್ಷದ ಮಳೆಗಾಲದಲ್ಲಿ ಅಡಿಕೆ ಮರಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡ ಕೊಳೆರೋಗ (ಮಹಾಳಿ ರೋಗ)ಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಅಡಿಕೆ ಕೃಷಿಕರಿಗೆ ಪರಿಹಾರ ಧನ ವಿತರಿಸಿದ ಪ್ರಕ್ರಿಯೆಯಲ್ಲಿ ತಾರತಮ್ಯ ಮತ್ತು ಲಕ್ಷಾಂತರ ರೂಪಾಯಿಗಳ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಉಡುಪಿ ಜಿಲ್ಲೆಯಲ್ಲಿ ನಡೆದಂತೆಯೇ ದ.ಕ., ಉ.ಕ., ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ನಡೆದಿರುವ ಸಾಧ್ಯತೆ ಇದ್ದು, ಈ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಫ್ತಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಸಂಘದ ಕಚೇರಿಯಲ್ಲಿ ಸೆಪ್ಟೆಂಬರ್ 22ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ, ವಂಚನೆಯ ಬಗ್ಗೆ ಸಂಘವು ಸಂಗ್ರಹಿಸಿದ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಪತ್ರಕರ್ತರ ಮುಂದಿಟ್ಟು ಅವರು ಮಾತನಾಡುತ್ತಿದ್ದರು.

ಕುಂದಾಪುರದ 240 ಮಂದಿ ಅಡಿಕೆ ಬೆಳೆಗಾರರಿಗೆ ಇದುವರೆಗೂ ಪರಿಹಾರ ವಿತರಿಸಿಲ್ಲ. ಈ ಬಗ್ಗೆ ತಹಶಿಲ್ದಾರರಿಗೆ ಮನವಿ ಮಾಡಿದರೂ ಅವರು ಸ್ಪಂದಿಸಿಲ್ಲ ಎಂದು ಆರೋಪಿಸಿದ ಸತ್ಯನಾರಾಯಣ ಉಡುಪ, ಕುಂದಾಪುರ ತಹಶಿಲ್ದಾರರಿಗೆ ಮಾಹಿತಿ ಹಕ್ಕು ಕಾಯಿದೆಯಂತೆ ಅಜರ್ಿ ಸಲ್ಲಿಸಿ ದಾಖಲಾತಿಗಳನ್ನು ಕೇಳಿದಾಗ, ಅವರ ಸೂಚನೆಯಂತೆ 802 ಪುಟಗಳಿಗೆ 1,604 ರು.ಗಳನ್ನು ಪಾವತಿಸಿದರೂ, ಅಪೂರ್ಣ ಮಾಹಿತಿ ನೀಡಿದ್ದಾರೆ. ಇದರ ವಿರುದ್ಧ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲು ಸಂಘ ನಿರ್ಧರಿಸಿದೆ ಎಂದು ತಿಳಿಸಿದರು.

ಇದುವರೆಗೆ ಲಭಿಸಿದ ಮಾಹಿತಿಗಳನ್ನು ಪರಿಶೀಲಿಸಿದಾಗ ಕುಂದಾಪುರ ತಾಲೂಕಿನಲ್ಲಿ 85 ಲಕ್ಷ ರು. ಮತ್ತು ಉಡುಪಿ ತಾಲೂಕಿನಲ್ಲಿ 12 ಲಕ್ಷ ರು.ಗೂ ಅಧಿಕ ಹಣ ರೈತರ ಹೆಸರಿನಲ್ಲಿ ವಂಚಿಸಿರುವುದು ಕಂಡುಬಂದಿದೆ. ಉಡುಪಿ ತಾಲೂಕಿನಲ್ಲಿ ಪರಿಹಾರ ಪಡೆದವರಲ್ಲಿ ಸುಮಾರು 38 ಜನರಿಗೆ ಅಡಿಕೆ ತೋಟಗಳೇ ಇಲ್ಲ ಅಥವಾ ಅವರು ಪರಿಹಾರ ಪಡೆದ ಪ್ರಮಾಣದಲ್ಲಿ ಅಡಿಕೆ ತೋಟಗಳಿರುವುದಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿದ ಸತ್ಯನಾರಾಯಣ ಜಫ್ತಿ, ಕುಂದಾಪುರ ತಾಲೂಕಿನಲ್ಲಿ 236 ಕುಟುಂಬದವರಿಗೆ 2ರಿಂದ 6ರಷ್ಟು ಬೇರೆ ಬೇರೆ ಹೆಸರುಗಳಲ್ಲಿ ಚೆಕ್ಗಳನ್ನು ನೀಡಲಾಗಿದೆ. ಆದರೆ ಇಬ್ಬರು ರೈತರಿಗೆ ಮಾತ್ರ ಒಂದೇ ಕುಟುಂಬದವರು ಎಂಬ ಕಾರಣಕ್ಕೆ ಚೆಕ್ಗಳನ್ನು ರದ್ದುಗೊಳಿಸಲಾಗಿದೆ. ಇಲ್ಲಿ ಪರಿಹಾರ ಪಡೆದವರಲ್ಲಿ 318 ಜನರಿಗೆ ಅಡಿಕೆ ತೋಟಗಳೇ ಇರುವುದಿಲ್ಲ ಅಥವಾ ಅವರು ಪರಿಹಾರಕ್ಕೆ ತಿಳಿಸಿದ ಪ್ರಮಾಣದಲ್ಲಿ ಅಡಿಕೆ ತೋಟಗಳು ಇರುವುದಿಲ್ಲ. ಕೇವಲ ಒಬ್ಬರು ರೈತರ ಹೆಸರಿನಲ್ಲಿಯೇ 2 ಲಕ್ಷದ 6 ಸಾವಿರ ರು.ಗಳ ಪರಿಹಾರ ಮಂಜೂರಾಗಿದ್ದು, ಇದಕ್ಕೆ ತಹಶಿಲ್ದಾರರು ಸಹಿ ಹಾಕಿದ್ದಾರೆ. ಆದರೆ ಚೆಕ್ ಸಂಖ್ಯೆಯನ್ನು ನಮೂದಿಸಿಲ್ಲ. ರೈತರ ಹೆಸರಿನಲ್ಲಿ ಪರಿಹಾರಕ್ಕೆ ನಮೂದಾಗಿರುವ ಸರ್ವೆ ನಂಬ್ರಗಳ ಭೂಮಿ ಅವರ ಹೆಸರುಗಳಲ್ಲಿಯೇ ಇಲ್ಲ. ಒಂದೇ ಸರ್ವೆ ನಂಬ್ರ ನೀಡಿ 2-3 ಜನರಿಗೆ ಪರಿಹಾರ ನೀಡಿರುವುದು ದಾಖಲೆಗಳನ್ನು ಪರಿಶೀಲಿಸಿದಾಗ ಸ್ಪಷ್ಟವಾಗಿದೆ ಎಂದು ವಿವರ ನೀಡಿದರು.

ಒಂದು ಹೆಕ್ಟೇರ್ ಅಂದರೆ ಎರಡೂವರೆ ಎಕ್ರೆ ಆಗಿದ್ದು, ಅಧಿಕಾರಿಗಳು ಎಕ್ರೆ ಮತ್ತು ಹೆಕ್ಟೇರ್ ನಡುವಿನ ವ್ಯತ್ಯಾಸ ಗಮನಿಸದೆ ಮನಬಂದಂತೆ ಪರಿಹಾರ ಧನ ವಿತರಿಸಲಾಗಿದೆ. ಒಂದು ಹೆಕ್ಟೇರ್ ತೋಟದಲ್ಲಿ ಕೊಳೆ ರೋಗದಿಂದ ನಷ್ಟ ಹೊಂದಿದ ರೈತರಿಗೆ 12 ಸಾವಿರ ರು. ಕೊಡಬೇಕಾದಲ್ಲಿ ಅರ್ಧಕ್ಕಿಂತ ಕಡಿಮೆ ಮೊತ್ತದ ಪರಿಹಾರ ನೀಡಿದ್ದೂ ಕಂಡುಬಂದಿದೆ. ಕೆಲವೆಡೆಗಳಲ್ಲಿ ಒಬ್ಬರೇ ಸಹಿ ಹಾಕಿ ಚೆಕ್ ಗಳನ್ನು ಪಡೆದ ಬಗ್ಗೆ ಮತ್ತು ಇನ್ನು ಹಲವೆಡೆ ಚೆಕ್ ಸ್ವೀಕರಿಸಿದ ಬಗ್ಗೆ ಯಾವುದೇ ದಾಖಲಾತಿಗಳೂ ಇಲ್ಲವಾಗಿದೆ. ಕೆಲವೊಂದು ಗ್ರಾಮಗಳಿಂದ ನೂರಾರು ಅರ್ಜಿಗಳು ಬಂದಿದ್ದು ಮತ್ತು ಪರಿಹಾರ ವಿತರಿಸಿರುವುದನ್ನು ಗಮನಿಸಿದಾಗ, ಇದರ ಹಿಂದೆ ಯಾವನೋ ಒಬ್ಬ ಅಧಿಕಾರಿ ಹಾಗೂ ಸಥಳೀಯ ಜನಪ್ರತಿನಿಧಿಗಳ ಪ್ರಯತ್ನ ಇರುವಂತೆ ಅನಿಸುತ್ತದೆ ಎಂದು ಸತ್ಯನಾರಾಯಣ ಜಫ್ತಿ ಗಂಭೀರ ಅನುಮಾನ ವ್ಯಕ್ತಪಡಿಸಿದರು.

ಭಾರತೀಯ ಕಿಸಾನ್ ಸಂಗದ ಅಧ್ಯಕ್ಷ ಬಿ.ವಿ.ಪೂಜಾರಿ, ಇತರ ಪದಾಧಿಕಾರಿಗಳಾದ ಸದಾನಂದ ಶೆಟ್ಟಿ ಇನ್ನಂಜೆ, ಶಂಕರನಾರಾಯಣ ಕಾರಂತ, ರಾಮಚಂದ್ರ ಅಲ್ಸೆ ಬೆಳ್ವೆ, ಸೂರಪ್ಪ ಭಂಡಾರಿ ಕೊಡ್ಗಿ, ಎಚ್.ರಾಜು ಹೆಬ್ರಿ, ಚಂದ್ರಶೇಕರ ಉಡುಪ ಕೆಂಚನೂರು, ಹರೀಶ್ ಕುಮಾರ್ ಕಲ್ಯಾ, ಸೀತಾರಾಮ ಗಾಣಿಗ ಹಾಲಾಡಿ, ಆಸ್ತೀಕ ಶಾಸ್ತ್ರೀ ಗುಂಡ್ಮಿ, ಚಂದ್ರಶೇಖರ ರಾವ್ ಕಲ್ಯಾ, ಸುಂದರ ಶೆಟ್ಟಿ ಮುನಿಯಾಲು ಮೊದಲಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s