ಬೇಜವಾಬ್ದಾರಿ ಹೇಳಿಕೆಗಳನ್ನು ನೀಡದಂತೆ ತೋಟಗಾರಿಕಾ ಉಪನಿರ್ದೇಶಕರಿಗೆ ಭಾಕಿಸಂ. ಸಲಹೆ

Posted: ಸೆಪ್ಟೆಂಬರ್ 27, 2014 in Uncategorized

ಉಡುಪಿ: ಅಡಿಕೆ ಕೊಳೆ ರೋಗ ಪರಿಹಾರ ವಿತರಣೆಯಲ್ಲಿ ಉಡುಪಿ ಹಾಗೂ ಕುಂದಾಪುರ ತಾಲೂಕಿನಲ್ಲಿ 97 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಅವ್ಯೆವಹಾರ ನಡೆದಿದೆ ಎಂಬ ಬಗ್ಗೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ನೆಡೆಸಿದ ಪತ್ರಿಕಾ ಘೋಷ್ಠಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕರು, ಪತ್ರಿಕೆಗಳಲ್ಲಿ ಸ್ಪಷ್ಠೀಕರಣ ನೀಡಿದ್ದು, ಪತ್ರಿಕೆಯಲ್ಲಿ ವರದಿಯಾದಂತೆ ಯಾವುದೇ ಲೋಪ ದೋಷಗಳು ನೆಡೆದಿಲ್ಲ ಎಂಬ ಅವರ ಹೇಳಿಕೆಗೆ ಭಾರತೀಯ ಕಿಸಾನ್ ಸಂಘವು, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡದಂತೆ ತೋಟಗಾರಿಕಾ ಉಪನಿರ್ದೇದೇಶಕರಿಗೆ ಸಲಹೆ ನೀಡಿದೆ.

ತಹಶೀಲ್ದಾರರು ನೀಡಿದ ದಾಖಲೆಗಳಲ್ಲಿ ಅವ್ಯೆವಹಾರ ನೆಡೆದಿರುವುದು ಸಾಕ್ಷಿ ಸಹಿತ ದೃಡಪಟ್ಟಿರುವಾಗ, ಈ ರೀತಿ ಅಧಿಕಾರಿಗಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು, ಅವರ ಹೇಳಿಕೆಯಿಂದ ಅವ್ಯೆವಹಾರದ ಪ್ರಮಾಣ ಹೆಚ್ಚಾಗಿರುವುದಕ್ಕೆ ದಾಖಲೆ ಸಿಕ್ಕಿದಂತಾಗಿದೆ ಎಂದು ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ. ಅದಕ್ಕೆ ಕಾರಣಗಳೇನೆಂದರೆ, ತೋಟಗಾರಿಕಾ ಉಪನಿದರ್ೇಶಕರ ಹೇಳಿಕೆಯಲ್ಲಿ ಕಂದಾಯ ಅಧಿಕಾರಿಗಳು ರೈತರಿಂದ ಅರ್ಜಿ ಸ್ವೀಕರಿಸಿ, ಪರಿಶೀಲಿಸಿ, ತಾಲೂಕು ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸಿದ್ದು, ತೋಟಗಾರಿಕಾ ಇಲಾಖೆಯವರು ಗ್ರಾಮವಾರು ಮಾದರಿ ಸಮೀಕ್ಷೆ ನೆಡೆಸಿ, ರೋಗದ ತೀವೃತೆಯನ್ನು
ಅಂದಾಜಿಸಿಕೊಂಡ ಪ್ರಕಾರ, ಮಾರ್ಗಸೂಚಿಯ ಪ್ರಕಾರ, ದೊರೆಯಬಹುದಾದ ಸಹಾಯ ಧನವನ್ನು ನಮೂದಿಸಿ, ತಾಲೂಕಿನ ತಹಶೀಲ್ದಾರರಿಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸುತ್ತಾರೆ, ಅದರಂತೆ ತಹಶೀಲ್ದಾರರ ಕಚೇರಿ ಮೂಲಕ ಸಹಾಯ ಧನವು ರೈತರುಗಳಿಗೆ ಚೆಕ್ ಮೂಲಕ ಪಾವತಿಯಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಜೊತೆಗೆ ಉಡುಪಿಯಲ್ಲಿ 800, ಕುಂದಾಪುರದಲ್ಲಿ 4900, ಕಾರ್ಕಳದಲ್ಲಿ 3180 ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿ, ಶಿಫಾರಸು ಮಾಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ ಹಾಗೂ ಗರಿಷ್ಠಮಿತಿ ರೂ. 12,000 ಒಂದು ಹೆಕ್ಟೇರ್ ಗೆ ಮತ್ತು ಕನಿಷ್ಠ ಪರಿಹಾರ ರೂ. 1500 ಎಂದು ತಿಳಿಸಿರುತ್ತಾರೆ ಎಂದು ಭಾಕಿಸಂ ತಿಳಿಸಿದೆ.

ಈ ಬಗ್ಗೆ ಸೆ.26ರಂದು ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘವು ಕಾರ್ಯಕಾರಿ ಸಮಿತಿ ಸಭೆ ನೆಡೆಸಿ, ಈ ಕೆಳಗಿನ ಪ್ರಶ್ನೆಗಳನ್ನು ತೋಟಗಾರಿಕಾ ಉಪನಿರ್ದೇಶಕರ ಉತ್ತರಕ್ಕೆ ಕೇಳಲು ತೀರ್ಮಾನಿಸಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

# ಭಾಕಿಸಂ ಪ್ರಶ್ನೆಗಳು :

* ನಿಮ್ಮ ಇಲಾಖೆಯಿಂದ 800 ರೈತರ ಅರ್ಜಿಗಳನ್ನು ಮಾತ್ರ ಉಡುಪಿ ತಾಲೂಕಿನಲ್ಲಿ ಶಿಫಾರಸು ಮಾಡಿರುವಾಗ ತಹಶೀಲ್ದಾರರು 982 ಅರ್ಜಿಗಳಿಗೆ ಪರಿಹಾರ ವಿತರಿಸಿರುವುದು ಹೇಗೆ ? ಅಂದರೆ 182 ಹೆಚ್ಚುವರಿ ಅರ್ಜಿಗಳಿಗೆ ನಿಮ್ಮ ಶಿಫಾರಸಿಲ್ಲದೇ ತಹಶೀಲ್ದಾರರೇ ಪರಿಹಾರ ನೀಡಿರುವುದರಿಂದ ಅವ್ಯೆವಹಾರದ ಪ್ರಮಾಣ ಇನ್ನೂ 10 ಲಕ್ಷ ರೂಪಾಯಿಯಷ್ಟು ಹೆಚ್ಚಾಗಿ ಒಂದು ಕೋಟಿ ದಾಟಿರುವುದು ನಿಮ್ಮ ಹೇಳಿಕೆಯಿಂದ ತಿಳಿದು ಬಂದಂತಾಗಿದೆ.

# ಕುಂದಾಪುರ ತಾಲೂಕಿನಲ್ಲಿ ನಿಮ್ಮ ಇಲಾಖೆಯಿಂದ 4,900 ಅರ್ಜಿಗಳಿಗೆ ಶಿಫಾರಸು ಮಾಡಿ, ಪರಿಹಾರ ಪಾವತಿಸುವಂತೆ ನೀಡಿದ್ದರೂ, ತಹಶೀಲ್ದಾರರ ಕಛೇರಿಯ ಮಾಹಿತಿಯಂತೆ 3,555 ರೈತರಿಗೆ ಪರಿಹಾರ ನೀಡಿದ್ದು, ಇನ್ನೂ 171 ಅರ್ಜಿಗಳು ಪರಿಹಾರ ಪಾವತಿಗೆ
ಬಾಕಿಯಿರುತ್ತದೆ. ಹಾಗಾದರೆ ರೈತರು ಪರಿಹಾರಕ್ಕಾಗಿ ಸಲ್ಲಿಸಿ, ನಿಮ್ಮ ಇಲಾಖೆಯಿಂದ ಶಿಫಾರಸು ಮಾಡಿ ಕಳುಹಿಸಲಾದ 1,174 ಅರ್ಜಿಗಳು ಏನಾದವು ? ಅವರಿಗೆ ತಹಶೀಲ್ದಾರರು ಪರಿಹಾರ ನೀಡದಿರಲು ಕಾರಣವೇನು ? ಇದರಿಂದ ಇನ್ನಷ್ಟು ಜನರಿಗೆ ಪರಿಹಾರ ನೀಡದೆ ವಂಚಿಸಿರುವ ವಿಚಾರ ನಿಮ್ಮಿಂದ ಈ ಮೂಲಕ ತಿಳಿದು ಬಂದಿದೆ.

* ರೈತರಿಗೆ ಗರಿಷ್ಠ ಪರಿಹಾರ ರೂ. 12,000 ಒಂದು ಹೆಕ್ಟೇರ್ ಗೆ ಮಾತ್ರವಾಗಿ ನಿಗದಿ ಪಡಿಸಿ, ಶಿಫಾರಸು ಮಾಡಿರುವಾಗ ಕುಂದಾಪುರ ಹಾಗೂ ಉಡುಪಿಯಲ್ಲಿ ಒಟ್ಟು 34 ಜನರಿಗೆ ಅದಕ್ಕಿಂತ ಹೆಚ್ಚಿನ ಮೊತ್ತದ ಒಂದೇ ಚಕ್ನ್ನು ಪರಿಹಾರವಾಗಿ ನೀಡಲು ಸಾದ್ಯವಾದುದ್ದಾದರೂ ಹೇಗೆ ?

* ಕನಿಷ್ಠ ಪರಿಹಾರ ರೂ. 1,500 ಎಂದು ತಿಳಿಸಿರುವ ತಾವು, ತಮ್ಮ ಅಧಿಕಾರಿಗಳು 25 ಕ್ಕೂ ಹೆಚ್ಚು ರೈತರಿಗೆ ಅದಕ್ಕಿಂತ ಕಡಿಮೆ ಪರಿಹಾರವನ್ನು ಶಿಫಾರಸು ಮಾಡಿದ ಕಾರಣ, ಕಡಿಮೆ ಮೊತ್ತದ ಚೆಕ್ನ್ನು ತಹಶೀಲ್ದಾರರು ವಿತರಿಸಿರುವುದು ದಾಖಲೆಗಳಲ್ಲಿ ಕಂಡು
ಬರುತ್ತಿರುವುದಕ್ಕ್ಕೆ ಯಾವ ಸ್ಪಷ್ಟೀಕರಣ ನೀಡುತ್ತೀರಿ ?

* ಅಡಿಕೆ ತೋಟಗಳೆ ಇಲ್ಲದವರಿಗೆ ನಿಮ್ಮ ಇಲಾಖಾಧಿಕಾರಿಗಳು ಪರಿಹಾರಕ್ಕೆ ಶಿಫಾರಸು ಮಾಡಿರುವುದು ಹೇಗೆಂಬುದನ್ನು ತಿಳಿಸುವಿರಾ ?

* ಉಡುಪಿ ಜಿಲ್ಲೆಯಲ್ಲಿ 8,880 ಅರ್ಜಿಗಳಿಗೆ ಪರಿಹಾರಕ್ಕಾಗಿ ಶಿಫಾರಸು ಮಾಡಿರುವ ತಮ್ಮ ಇಲಾಖಾಧಿಕಾರಿಗಳು ಈ ಪೈಕಿ ಎಷ್ಟು ರೈತರ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆಂಬ ಬಗ್ಗೆ ತಿಳಿಸುವಿರಾ ?

* ದಾಖಲೆಗಳ ಆಧಾರದಲ್ಲಿ ಅವ್ಯೆವಹಾರದ ಆರೋಪ ಮಾಡಿರುವ ಭಾರತೀಯ ಕಿಸಾನ್ ಸಂಘದ ಹೇಳಿಕೆಯನ್ನು ನಿರಾಕರಿಸಿರುವ ತಾವು, ತಮ್ಮ ಹೇಳಿಕೆಗೆ ದಾಖಲೆಗಳನ್ನು ಒದಗಿಸುವಿರಾ ?

ಪತ್ರಿಕಾ ಹೇಳಿಕೆ ನೀಡುವ ಮೋದಲು ಈ ಪ್ರಶ್ನೆಗಳಿಗೆ ಉತ್ತರಿಸುವಂತೆ ಭಾರತೀಯ ಕಿಸಾನ್ ಸಂಘದ ಕಾರ್ಯಕಾರಿ ಸಮಿತಿ, ಉಡುಪಿ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕರಿಗೆ ಮನವಿ ಮಾಡಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರುಗಳಿಗೆ ಪತ್ರವನ್ನು ರವಾನಿಸಿರುವ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ, ನಮ್ಮನ್ನು ಯಾರೇ ಕರೆದರೂ ದಾಖಲೆಗಳೊಂದಿಗೆ ಮಾಹಿತಿ ನೀಡಲು ಬದ್ದರು ಎಂಬುದನ್ನೂ ಸಹ ತಿಳಿಸಿದೆ.

ಈಗಾಗಲೇ ಸಂಘದ ಪದಾಧಿಕಾರಿಗಳನ್ನು ಕುಂದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹಾಗೂ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆಯವರು ದೂರವಾಣಿ ಮೂಲಕ ಸಂಪರ್ಕಿಸಿ ವಿವರಣೆ ಪಡೆದಿದ್ದು, ಸೂಕ್ತ ತನಿಖೆ ನೆಡೆಸಿ, ಪರಿಹಾರ ಸಿಗದಿರುವ ರೈತರಿಗೆ ಶೀಘ್ರದಲ್ಲಿ ಪರಿಹಾರ ಕೊಡಿಸುವ ಬರವಸೆಯನ್ನು ನೀಡಿರುತ್ತಾರೆ.

ಇದರೊಂದಿಗೆ ಕಳೆದೆರಡು ದಿನಗಳಿಂದ 16 ರೈತರು ಸಂಘದ ಪದಾಧಿಕಾರಿಗಳನ್ನು
ಸಂಪರ್ಕಿಸಿದ್ದು, ಪರಿಹಾರ ಚೆಕ್ ನೀಡುವ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರು ರೂಪಾಯಿ 100 ರಿಂದ 1000 ದವರೆಗೂ ಬಕ್ಷೀಸನ್ನು (ಲಂಚ, ಗೌರವ ಧನ)ಕೇಳಿ ಪಡೆದಿರುವುದಾಗಿ ತಿಳಿಸಿರುತ್ತಾರೆ. ಆ ಬಗ್ಗೆ ರೈತರಿಂದ ಲಿಖಿತ ಪತ್ರವನ್ನು ಸಂಘ ಪಡೆಯಲು
ತೀರ್ಮಾನಿಸಿದ್ದು, ರೈತರಿಂದ ಪರಿಹಾರ ಚೆಕ್ ನೀಡುವ ಬಗ್ಗೆ ಪಡೆದ ಬಕ್ಷೀಸನ್ನು ಅಧಿಕಾರಿಗಳು ರೈತರ ಮನೆಗೆ ಹೋಗಿಯಾದರೂ ಹಿಂತಿರುಗಿಸಿ, ಅವರಲ್ಲಿ ಕ್ಷಮಾಪಣೆ ಕೇಳಬೇಕು. ಇಲ್ಲವಾದರೆ, ಅಂತಹ ಅಧಿಕಾರಿಗಳ ವಿರುದ್ದ ಹಿರಿಯ ಅಧಿಕಾರಿಗಳಿಗೆ ಹಾಗೂ
ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡಲು ಸಂಘ ತೀರ್ಮಾನಿಸಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಜಪ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ಬಿ. ವಿ. ಪೂಜಾರಿ ಪೆರ್ಡೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ತುರ್ತು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ ಇನ್ನಂಜೆ, ಶಂಕರನಾರಾಯಣ ಕಾರಂತ ಜಪ್ತಿ, ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ನಿಟ್ಟೆ, ಕುಂದಾಪುರದ ಪದಾಧಿಕಾರಿಗಳಾದ ರಾಮಚೆಂದ್ರ ಅಲ್ಸೆ ಬೆಳ್ವೆ, ಉಡುಪಿ ತಾಲೂಕಿನ ಪಾಂಡುರಂಗ ಹೆಗ್ಡೆ ಕುತ್ಯಾರು, ಆಸ್ತೀಕ ಶಾಸ್ತ್ರಿ ಗುಂಡ್ಮಿ, ಕಾರ್ಕಳದ ಸುಂದರ ಶೆಟ್ಟಿ ಮುನಿಯಾಲು, ಚಂದ್ರಶೇಖರ ರಾವ್ ಕಲ್ಯಾ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s