ಡಾ.ಶರತ್ ಕುಮಾರ್ ರಾವ್ ಅಮಾನತು ಹಿಂತೆಗೆದುಕೊಳ್ಳಿ : ಶ್ರೀರಾಮ ದಿವಾಣ.

Posted: September 29, 2014 in Uncategorized

# ಕರ್ನಾಟಕದ 19 ಜಿಲ್ಲೆಗಳಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಅವರಿಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ದಕ್ಷ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರು ಈ ಮೇಲ್ (madan17@gmail.com) ಮೂಲಕ ತಾರೀಕು 23.03.2013ರಂದು ಮಾಹಿತಿ ನೀಡಿದ್ದಾರೆ.

ಹೀಗೆ ಮಾಹಿತಿ ನೀಡಿದ ಬಳಿಕ ಡಾ.ಶರತ್ ಕುಮಾರ್ ರಾವ್ ಅವರನ್ನು ಆರೋಗ್ಯ ಇಲಾಖೆಯ ಕೆಲವು ಮಂದಿ ಅಧಿಕಾರಿಗಳು ಹಾಗೂ ಪ್ರಭಾವೀ ಸ್ಥಾಪಿತ ಹತಾಸಕ್ತಿಯುಳ್ಳ ಖಾಸಗಿ ವ್ಯಕ್ತಿಗಳು ಜೊತೆ ಸೇರಿಕೊಂಡು ಅತ್ಯಂತ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ ನಖಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯಿಂದ ಸುಳ್ಳು ದೂರು ಕೊಡಿಸಿ, ಈ ಸುಳ್ಳು ದೂರಿನ ಆಧಾರದಲ್ಲಿಯೇ ಸರಿಯಾಗಿ ತನಿಖೆಯನ್ನೂ ನಡೆಸದೆ ತಾರೀಕು 07.09.2013ರಂದು ಅಮಾನತು ಪಡಿಸಿದ್ದಾರೆ.

ಅಮಾನತುಪಡಿಸಿ ತಾರೀಕು 07.09.2014ಕ್ಕೆ ಒಂದು ವರ್ಷವಾಗಿದೆ. ಆದರೆ ಇನ್ನೂ ಸಹ ಕರ್ತವ್ಯಕ್ಕೆ ಮರು ನೇಮಕಾತಿ ಮಾಡದೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡುತ್ತಾ ಸಹಜ ನ್ಯಾಯವನ್ನು ನಿರಾಕರಿಸಲಾಗುತ್ತಿದೆ.

ಆದುದರಿಂದ, ತಕ್ಷಣವೇ ಡಾ.ಶರತ್ ಅವರನ್ನು ಕರ್ತವ್ಯಕ್ಕೆ ಮರು ನೇಮಕಾತಿ ಮಾಡಬೇಕು ಮತ್ತು ಡಾ.ಶರತ್ ವಿರುದ್ಧ ಷಡ್ಯಂತ್ರ ಹೂಡಿದ, ಸಹಜ ನ್ಯಾಯವನ್ನು ನಿರಾಕರಿಸಿದ (ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ) ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಪಡಿಸಿ, ಆರೋಗ್ಯ ಇಲಾಖೆ ಹೊರತು ಪಡಿಸಿದ ಉನ್ನತ ಮಟ್ಟದ ಅಧಿಕಾರಿಗಳಿಂದ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. – ಶ್ರೀರಾಮ ದಿವಾಣ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s