ಡಿವೈಎಸ್ಪಿ ಡಾ.ಪ್ರಭುದೇವ ಮಾನೆ ಸಹಿತ 7 ಮಂದಿ ಭ್ರ ಷ್ಟರು ಲೋಕಾಯಕ್ತ ಬಲೆಗೆ

Posted: October 1, 2014 in Uncategorized

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಆರೋಪದ ಮೇಲೆ ಏಳು ಮಂದಿ ಸರಕಾರಿ ಅಧಿಕಾರಿ, ಸಿಬ್ಬಂದಿಗಳ ನಿವಾಸದ ಮೇಲೆ ಸೆಪ್ಟೆಂಬರ್ 30ರಂದು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ, 7 ಕೋಟಿ ರು.ಗಳಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆ ಹಚ್ಚಲಾಗಿದೆ.

”ಬೆಂಗಳೂರು, ಮಂಡ್ಯ ಮತ್ತು ಉಡುಪಿಯ ವಿವಿಧ ಭಾಗಗಳಲ್ಲಿ ಸೆ.30ರಂದು ಏಕಕಾಲದಲ್ಲಿ ದಾಳಿ ನಡೆಸಲಾಯಿತು. ಎಲ್ಲಾ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ ಅಧಿನಿಯಮ 1988ರಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಭ್ರಷ್ಟರ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳ ಶೋಧ ಕಾರ್ಯ ಇನ್ನಷ್ಟೆ ಆಗಬೇಕಿದೆ”ಎಂದು ಲೋಕಾಯುಕ್ತ ಎಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಎಂಜಿನಿಯರ್ ಬಳಿ ಕೋಟಿಗಟ್ಟಲೆ ಆಸ್ತಿ

ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ‌್ಯಪಾಲಕ ಎಂಜಿನಿಯರ್ ಎಸ್.ಆರ್.ಶ್ರೀನಿವಾಸನ್ ಇವರ ಬೆಂಗಳೂರಿನ ಮನೆ ಮೇಲೆ ದಾಳಿ ನಡೆಸಿದಾಗ ಕೋಟಿಗಟ್ಟಲೆ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ. ಶ್ರೀನಿವಾಸನ್ ಅವರ ಬಳಿ 2.52 ಕೋಟಿ ರು. ಆಸ್ತಿಯಲ್ಲಿ ಸುಮಾರು 1.83 ಕೋಟಿ ರು.ಗಳನ್ನು ಅಕ್ರಮವಾಗಿ ಸಂಪಾದಿಸಲಾಗಿದೆ ಎಂಬ ಮಾಹಿತಿಯನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಎಚ್‌ಎಸ್‌ಆರ್ ಬಡಾವಣೆಯಲ್ಲಿ 1.60 ಕೋಟಿ ರು. ಮೌಲ್ಯದ ಮನೆ, ಪೋಲೊ ಕಾರು, ಐ-10 ಕಾರು, ಮಾಟಿಝ್ ಕಾರು, ಎರಡು ಸ್ಕೂಟರ್, 19.48 ಲಕ್ಷ ರು. ಬೆಲೆಯ ಚಿನ್ನಾಭರಣ, ಏಳು ಕೆ.ಜಿ. ತೂಕದ ಬೆಳ್ಳಿ ಅಭರಣ ಪತ್ತೆಯಾಗಿದೆ.

ನಗರ ಮತ್ತು ಗ್ರಾಮ ಯೋಜನೆಯ ಜಂಟಿ ನಿರ್ದೇಶಕ ಎಚ್.ಎಂ.ಮಲ್ಲಿಕಾರ್ಜುನಸ್ವಾಮಿ 1.69 ಕೋಟಿ ರೂ. ಆಸ್ತಿ ಹೊಂದಿದ್ದು, ಆ ಪೈಕಿ 1.09 ಕೋಟಿ ರೂ. ಮೌಲದ್ಯ ಆಸ್ತಿ
ಅಕ್ರಮದ್ದಾಗಿದೆ. ತಲಾ ಎರಡು ಕಾರು, ಸ್ಕೂಟರ್, 18 ಲಕ್ಷ ರೂ. ಮೊತ್ತದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಬೆಂಗಳೂರು ಜಲಮಂಡಳಿ ಅಧಿಕಾರಿ ಟಿ.ತಿಮ್ಮೇಗೌಡ ಅವರು 1.02 ಕೋಟಿ ರೂ. ಆಸ್ತಿ ಹೊಂದಿದ್ದು, ಇದರಲ್ಲಿ 63.54 ಲಕ್ಷ ರೂ. ಅಕ್ರಮದ್ದಾಗಿದೆ.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಪಿ.ಗಂಗಾಧರಾಚಾರ‌್ಯ ಹೊಂದಿರುವ 1.82 ಕೋಟಿ ರೂ. ಪೈಕಿ 1.21 ಕೋಟಿ ರೂ. ಅಕ್ರಮದ್ದಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಿ.ಪಿ.ಮಹೇಂದ್ರ ಅವರ 1.21 ಕೋಟಿ ರೂ. ಆಸ್ತಿ ಪೈಕಿ 96.80 ಲಕ್ಷ ರೂ. ಅಕ್ರಮ ಗಳಿಕೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ದೃಢಪಡಿಸಿದ್ದಾರೆ.

ಲೋಕಾ ಬಲೆಗೆ ಬಿದ್ದ ಅಧಿಕಾರಿಗಳು

* ಎಸ್.ಆರ್.ಶ್ರೀನಿವಾಸನ್, ಕಾರ‌್ಯಪಾಲಕ ಎಂಜಿನಿಯರ್, ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು

* ಎಚ್.ಎಂ.ಮಲ್ಲಿಕಾರ್ಜುನ ಸ್ವಾಮಿ, ಜಂಟಿ ನಿರ್ದೇಶಕ, ನಗರ ಮತ್ತು ಗ್ರಾಮ ಯೋಜನೆ, ಬೆಂಗಳೂರು

* ಟಿ.ತಿಮ್ಮೇಗೌಡ, ಮುಖ್ಯ ಎಂಜಿನಿಯರ್ (ದಕ್ಷಿಣ), ಬೆಂಗಳೂರು ಜಲಮಂಡಳಿ

* ಕೆ.ಪಿ.ಗಂಗಾಧರಾಚಾರ‌್ಯ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಂಗಳೂರು

* ಡಿ.ಪಿ.ಮಹೇಂದ್ರ, ಉಪ ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ

* ಶಾಂತರಾಜು, ಉಪ ನಿರ್ದೇಶಕ, ರೇಷ್ಮೆ ಇಲಾಖೆ, ಮಂಡ್ಯ

* ಡಾ.ಪ್ರಭುದೇವ್ ಮಾನೆ, ಪೊಲೀಸ್ ಉಪ ಅಧೀಕ್ಷಕ, ಉಡುಪಿ ಉಪ ವಿಭಾಗ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s