ಅಕ್ಟೋಬರ್ 4: ಡಾ.ಶರತ್ ಕುಮಾರ್ ಗಾಗುತ್ತಿರುವ ಅನ್ಯಾಯದ ವಿರುದ್ಧ ಡಾ.ಪಿ.ವಿ.ಭಂಡಾರಿ ಪ್ರತಿಭಟನೆ

Posted: ಅಕ್ಟೋಬರ್ 2, 2014 in Uncategorized

ಉಡುಪಿ: ನಕಲಿ ಜೆರಾಕ್ಸ್ ಅಗ್ರಿಮೆಂಟ್ ಮುಂದಿಟ್ಟುಕೊಂಡು ನೀಡಲಾದ ದೂರಿನ ಆಧಾರದಲ್ಲಿ ಸರಿಯಾಗಿ ತನಿಖೆ ನಡೆಸದೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾಗಿದ್ದ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತುಪಡಿಸಿ ವರ್ಷವಾದರೂ ಇಲಾಖಾ ವಿಚಾರಣೆಯನ್ನೂ ನಡೆಸದೆ, ಅಮಾನತನ್ನೂ ಹಿಂತೆಗೆದುಕೊಳ್ಳದೆ ಡಾ.ಶರತ್ ಅವರ ಮಾನವಹಕ್ಕಿನ ಮೇಲೆ ದೌರ್ಜನ್ಯ ನಡೆಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಅಕ್ಟೋಬರ್ 4ರಂದು ಬೆಳಗ್ಗೆ ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ಮತ್ತು ಬಳಿಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಪಾದಯಾತ್ರೆ ನಡೆಸಲು ಖ್ಯಾತ ಮನೋವೈದ್ಯಾರಾದ ಡಾ.ಪಿ.ವಿ.ಭಂಡಾರಿ ಅವರು ನಿರ್ಧರಿಸಿದ್ದಾರೆ.

ಬೆಳಗ್ಗೆ 10 ಗಂಟೆಗೆ ಬಾಯಿಗೆ ಬಿಳಿ ಬಟ್ಟೆ ಕಟ್ಟಿ, ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಜಿಲ್ಲಾಸ್ಪತ್ರೆ ಮುಂದೆ ಸಾಂಕೇತಿಕ ಮೌನ ಪ್ರತಿಭಟನೆ ನಡೆಸಲಿರುವ ಡಾ.ಭಂಡಾರಿಯವರು, ಬಳಿಕ ಹಳೆ ತಾಲೂಕು ಕಚೇರಿ, ಕವಿ ಮುದ್ದಣ ಮಾರ್ಗ, ಸಿಟಿ ಬಸ್ ನಿಲ್ದಾಣ, ಕಡಿಯಾಳಿ, ಕುಂಜಿಬೆಟ್ಟು, ಮಣಿಪಾಲ ಸಿಂಡಿಕೇಟ್ ಸರ್ಕಲ್ ಮಾರ್ಗವಾಗಿ ಎಂಡ್ ಪಾಯಿಂಟ್ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಸರಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

ಡಾ.ಶರತ್ ತಪ್ಪು ಮಾಡಿದ್ದರೆ, ಅವರನ್ನು ನೇಣಿಗೆ ಬೇಕಾದರೂ ಏರಿಸಿ. ಆದರೆ ನೈಸರ್ಗಿಕ ನ್ಯಾಯವನ್ನು ನಿರಾಕರಿಸುವುದು, ಅವರ ಮನೆಯವರನ್ನು ಹಿಂಸೆ ಅನುಭವಿಸುವಂತೆ ಮಾಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಡಾ.ಶರತ್ ಅವರ ಬಾಯಿಯನ್ನು ಮುಚ್ಚಿಸಿದ್ದಕ್ಕೆ ಸಂಕೇತವಾಗಿ ತಾನು ಬಾಯಿಗೆ ಬಟ್ಟೆ ಕಟ್ಟಿ ಪ್ರತಿಭಟಿಸುತ್ತಿದ್ದೇನೆ. ಡಾ.ಶರತ್ ಅವರಿಗಾದ ಅನ್ಯಾಯದ ಬಗ್ಗೆ ಈಗಾಗಲೇ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ಸಚಿವ ವಿನಯ ಕುಮಾರ್ ಸೊರಕೆ ಅವರಲ್ಲಿ ಹಲವಾರು ಬಾರಿ ಮನವಿ ಮಾಡಿದ್ದೇನಾದರೂ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ
ನಡೆಸುತ್ತಿದ್ದು, ಪ್ರತಿಭಟನೆಯ ಮುಂದಿನ ಹೆಜ್ಜೆಯ ಬಗ್ಗೆ ಅಕ್ಟೋಬರ್ 4ರಂದು ಪ್ರಕಟಿಸುವುದಾಗಿ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

ಡಾ.ಭಂಡಾರಿಯವರ ಪ್ರತಿಭಟನೆಗೆ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s