ಮೂಡುಬೆಳ್ಳೆ: ಹಿರಿಯಡ್ಕ ವೃತ್ತಮಟ್ಟದ ಪ್ರಾಥಮಿ ಕ ಶಾಲಾ ಕ್ರೀಡಾಕೂಟ

Posted: ಅಕ್ಟೋಬರ್ 3, 2014 in Uncategorized
ಟ್ಯಾಗ್ ಗಳು:, , , , , , , , , ,

ಮೂಡುಬೆಳ್ಳೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಉಡುಪಿ ವಲಯ ಮತ್ತು ಸಂತ ಲಾರೆನ್ಸ್ ಆಂಗ್ಲ ಮಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಹಿರಿಯಡ್ಕ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಮೂಡುಬೆಳ್ಳೆಯ ಸಂತ ಲಾರೆನ್ಸ್ ಪ.ಪೂ. ಕಾಲೇಜು ಕ್ರೀಡಾಂಗಣದಲ್ಲಿ ಜರಗಿತು.

ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯೆಂದರೆ ಚೈತನ್ಯ. ವಿದ್ಯಾರ್ಥಿಗಳು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಕ್ರಿಯಾಶೀಲರಾಗಿ ಇರಲು ಸಾಧ್ಯವಾಗುತ್ತದೆ ಎಂದರು.

ಮೂಡುಬೆಳ್ಳೆ ಸಂತ ಲಾರೆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ. ಜೋಸ್ವಿ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿ, ಕ್ರೀಡೆಗಳು ನಮಗೆ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೊಭಾವವನ್ನು ಕಲಿಸಿಕೊಡುತ್ತವೆ. ಜೀವನದಲ್ಲೂ ಸೋಲು-ಗೆಲುವನ್ನು ಸಮಾನವಾಗಿ ಪರಿಗಣಿಸಿದರೆ ಯಶಸ್ಸು ಸುಲಭ ಸಾಧ್ಯ ಎಂದರು.

ಬೆಳ್ಳೆ ಗ್ರಾ.ಪಂ. ಅದ್ಯಕ್ಷ ರಾಜೇಂದ್ರ ಶೆಟ್ಟಿ ಹಾಗೂ ಜಿ.ಪಂ. ಸದಸ್ಯೆ ಐಡಾ ಗಿಬ್ಬ ಡಿ’ಸೋಜಾ ಕ್ರೀಡಾ ಜ್ಯೋತಿ ಬೆಳಗಿಸಿದರು. ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ವಂ. ಕ್ಲೆಮೆಂಟ್ ಮಸ್ಕರೇನಸ್ ಪಥಸಂಚಲನದ ಗೌರವ ಸ್ವಿಕರಿಸಿದರು. ಶಿರ್ವದ ಸಂತ ಮೇರಿ ಕಾಲೇಜಿನ ಪ್ರಾಚಾರ್ಯ ಪ್ರೊ. ರಾಜನ್ ವಿ.ಎನ್. ಧ್ವಜಾರೋಹಣಗೈದರು. ಕ್ರೀಡಾಂಗಣ ದುರಸ್ತಿಗೊಳಿಸಿದ ಸ್ಥಳೀಯ ಗುತ್ತಿಗೆದಾರ ವಿನ್ಸೆಂಟ್ ಫೆರ್ನಾಂಡಿಸ್ ಅವರನ್ನು ಸಮಾರಂಭದಲ್ಲಿ ಸಮ್ಮಾನಿಸಲಾಯಿತು.

ಪ್ರಾಚಾರ್ಯ ವಂ. ಪಿ. ರಾಜ್, ಆಡಳಿತ ಮಂಡಳಿ ಸದಸ್ಯ ಎ.ಕೆ. ಆಳ್ವಾ, ದೈ.ಶಿ. ಪರಿವೀಕ್ಷಣೆ ಅಧಿಕಾರಿ ಬಸವರಾಜಪ್ಪ, ಸಂತ ಲಾರೆನ್ಸ್ ಪ.ಪೂ. ಕಾಲೇಜು ಪ್ರಾಚಾರ್ಯ ವಂ. ಪಾವ್ಲ್ ಸಿಕ್ವೇರಾ, ದೈ.ಶಿ. ಸಂಘದ ಸತೀಶ್ ಸಾಲ್ಯಾನ್, ಸಿ.ಆರ್.ಪಿ. ಕುರ್ಷಿದಾ ಮತ್ತು ರಕ್ಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು. 21 ಶಾಲೆಗಳಿಂದ 264 ಕ್ರೀಡಾಪಟುಗಳು 10 ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s