ನ.23: ಉಡುಪಿ ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

Posted: ಅಕ್ಟೋಬರ್ 15, 2014 in Uncategorized

http://www.udupibits.in news
ಉಡುಪಿ: ಲೋಕಕಲ್ಯಾಣಾರ್ಥವಾಗಿ ನವೆಂಬರ್ 23ರಂದು ಬೆಳಗ್ಗೆ ಗಂಟೆ 8ರಿಂದ ಮಧ್ಯಾಹ್ನ ಗಂಟೆ 12.30ರ ವರೆಗೆ ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಕೃಪಾಶ್ರಯದಲ್ಲಿ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆಯು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಷ್ಠ ಮಠಾಧೀಶರು ಉಪಸ್ಥಿತರಿರುವರು ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ) ಅಧ್ಯಕ್ಷರಾದ ನರಸಿಂಹ ಉಪಾಧ್ಯ
ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು (15.10.2014) ಪೂರ್ವಾಹ್ನ ನಡೆಸಿದ
ಮಾಧ್ಯಮಗೋಷ್ಟಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಮಹಾಸಭಾದ ವಿಂಶತಿ ವರ್ಷಾಚರಣೆಯ ಪ್ರಯುಕ್ತ, ಬೆಂಗಳೂರಿನ ಖ್ಯಾತ ಹೃದಯ ತಜ್ಞ ಡಾ.ವಿ.ಅಶೊಕ್ ಕುಮಾರ್ ಅವರ ಸಹಯೋಗದಲ್ಲಿ ನಡೆಯಲಿರುವ ಕೋಟಿ ತುಳಸಿ ಅರ್ಚನೆಯ ಬಳಿಕ, ಮಧ್ಯಾಹ್ನ ಗಂಟೆ 1.30ಕ್ಕೆ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್, ನಿವೃತ್ತ ಐಜಿಪಿ ಬಿ.ಗೋಪಾಲ ಹೊಸೂರು ಹಾಗೂ ಓವರ್ ಸೀಸ್ ಬ್ಯಾಂಕ್ ನ ನಿಕಟಪೂರ್ವ ಅಧ್ಯಕ್ಷರಾದ ನರೇಂದ್ರ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಉಪಾಧ್ಯ ಹೇಳಿದರು.

ಕೋಟಿ ತುಳಸಿ ಅರ್ಚನೆಯ ಪೂರ್ವಭಾವಿಯಾಗಿ ನ.22ರಂದು ಸಂಜೆ 4 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ರಥಬೀದಿ ವರೆಗೆ ವಿಶೇಷ ಟ್ಯಾಬ್ಲೊಗಳ ಮೂಲಕ ಕೋಟಿ ತುಳಸಿಗಳ ಭವ್ಯ ಶೋಭಾಯಾತ್ರೆ ಜರುಗಲಿದೆ. ಬಳಿಕ ಸಂಜೆ 5 ಗಂಟೆಗೆ ಸಭಾ ಕಾರ್ಯಕಗ್ರಮ ನಡೆಯಲಿದೆ. ನಂತರ ಅಮೇರಿಕಾದಲ್ಲಿ ಹುಟ್ಟಿ, ಬೆಳೆದು, ಸಂಗೀತ ಅಧ್ಯಯನ ಮಾಡುವ ಸಲುವಾಗಿ ಚೆನ್ನೈ ಯಲ್ಲಿ ನೆಲೆಸಿರುವ ಸಂಗೀತ ವಿದ್ವಾಂಸ ಚಿರಂಜೀವಿ ವಿಶಾಲ್ ಸಂಪೂರಂ ಹಾಗೂ ತಂಡದವರಿಂದ ಸಂಗೀತ ಗಾನಸುಧೆ ನಡೆಯಲಿದೆ ಎಂದು ನರಸಿಂಹ ಉಪಾಧ್ಯ ವಿವರ ನೀಡಿದರು.

ತಾಲೂಕು ಬ್ರಾಹ್ಮಣ ಸಮಾಸಭಾದ ಕಾರ್ಯದರ್ಶಿ ಕೆ.ವೆಂಕಟರಾಜ ಭಟ್, ಕೋಶಾಧಿಕಾರಿ ವಾಸುದೇವ ರಾವ್ ಅಡೂರು, ಸಂಚಾಲಕರಾದ ಭಾಸ್ಕರ ರಾವ್ ಕಿದಿಯೂರು, ನಾಗರಾಜ ಉಪಾಧ್ಯ, ಸಂಗಟನಾ ಕಾರ್ಯದರ್ಶಿಗಳಾದ ಶ್ರೀಕಾಂತ್ ಉಪಾಧ್ಯ, ರಾಮದಾಸ ಉಡುಪ ಹಾಗೂ ರಮೇಶ್ ರಾವ್ ಉಪಸ್ಥಿತರಿದ್ದರು.
[tgas: udupi, udupi news, karnataka news, udupi temple’s, temple’s, udupi krishna temple, karnataka lokayukta, y.bhaskara rao, gopal hosur ips, http://www.udupibits.in, http://www.udupibits.com, udupibits]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s