http://www.udupibits.in news

ಉಡುಪಿ: ಮೂಢನಂಬಿಕೆ, ಅಂಧ ವಿಶ್ವಾಸ, ಅನಾಚಾರಗಳಿಂದಾಗಿ ಇಸ್ಲಾಂ ಧರ್ಮದ ನೈಜ ರೂಪ ವಿರೂಪಗೊಂಡಿದೆ. ಏಕದೇವಾರಾಧನೆಯ ಮೇಲೆ ಅಚಲವಾದ ವಿಶ್ವಾಸವನ್ನಿರಿಸಿಕೊಂಡಿರುವ ಇಸ್ಲಾಂ ಧರ್ಮದಲ್ಲಿ, ಪೌರೋಹಿತ್ಯದ ಹಸ್ತಕ್ಷೇಪವಾಗಿದ್ದು, ಇದರಿಂದಾಗಿ ಶೋಷಣೆ ನಡೆಯುತ್ತಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡದೆ, ಆಕೆಯನ್ನು ನಾಲ್ಕು ಗೋಡೆಗಳ ನಡುವೆ ಬಂಧಿಸಿಡಲಾಗಿದೆ. ಮುಸ್ಲೀಮ್ ಯುವಕರು ಕ್ಷಣಾರ್ಧದಲ್ಲಿ ಹಣ ಸಂಪಾದಿಸುವ ಮಾರ್ಗವಾಗಿ ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇವ ಭಯ ಕಡಿಮೆಯಾಗುತ್ತಿದೆ. ಅನೇಕ ರೀತಿಯ ದುರಾಚರದಿಂದಾಗಿ ಇತರರಲ್ಲಿ ಇಸ್ಲಾಂ ಧರ್ಮದ ಬಗ್ಗೆಯೇ ತಪ್ಪು ಕಲ್ಪನೆ ಮೂಡಲು ಕಾರಣವಾಗಿದೆ. ಇವುಗಳೆಲ್ಲದರಿಂದಲೂ ಜನರನ್ನು ವಿಮೋಚನೆಗೊಳಿಸುವ ನಿಟ್ಟಿನಲ್ಲಿ ಸಲಫಿ ಮೂವ್ ಮೆಂಟ್ ಸಕ್ರಿಯವಾಗಿದೆ ಎಂದು ಮೂವ್ ಮೆಂಟ್ ನ ಕೇಂದ್ರೀಯ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು (16.10.2104) ಮಧ್ಯಾಹ್ನ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.

ದಕ್ಷಿಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ದಕ್ಷಣ ಕರ್ನಾಟಕ ಸಲಫಿ ಮೂವ್ ಮೆಂಟ್ (ಎಸ್.ಕೆ.ಎಸ್.ಎಂ.) ಸಕ್ರಿಯವಾಗಿದೆ. 25 ಮಸೀದಿಗಳು ಮೂವ್ ಮೆಂಟ್ ನಡಿಯಲ್ಲಿದ್ದು, ಶಾಲಾ-ಕಾಲೇಜುಗಳನ್ನೂ ನಡೆಸುತ್ತಿದೆ. ಇದೊಂದು ರಾಜಕೀಯ ರಹಿತ ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಯಾಗಿದೆ ಎಂದು ಶಾಫಿ ಹೇಳಿದರು.

ಅ.19: ಪಲಿಮಾರು ಬಳಿ ಸಲಫಿ ಸಮಾವೇಶ

ಅಕ್ಟೋಬರ್ 19ರಂದು ಸಂಜೆ 3 ಗಂಟೆಯಿಂದ ರಾತ್ರಿ ಗಂಟೆ 9ರ ವರೆಗೆ ಪಡುಬಿದ್ರೆ-ನಿಟ್ಟೆ ರಸ್ತೆಯ ಪಲಿಮಾರು ಸಮೀಪದ ಕರ್ನಿರೆಯಲ್ಲಿ ಬೃಹತ್ ಸಲಫಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ದ.ಕ.ಮತ್ತು ಉಡುಪಿ ಜಿಲ್ಲೆಯ 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಖ್ಯಾತ ಮೌಲವಿಗಳಾದ ನಾಸೀರುದ್ದೀನ್ ರಹ್ಮಾನಿ, ಜೌಹರ್ ಐನಿಕ್ಕೋಡ್ ಹಾಗೂ ಅಲಿ ಉಮರ್ ಅವರು ಪ್ರವಚನ ನೀಡಿದ್ದಾರೆ ಎಂದು ಇಸ್ಮಾಯಿಲ್ ಶಾಫಿ ಮಾಹಿತಿ ನೀಡಿದರು.

ಸಲಫಿ ಮೂವ್ ಮೆಂಟ್ ನ ಮೂಲ್ಕಿ-ಹೆಜಮಾಡಿ ಘಟಕದ ಅಧ್ಯಕ್ಷ ಉಮರ್ ಫಾರೂಕ್ ಹಾಗೂ ಕಾರ್ಯದರ್ಶಿ ಶರೀಫ್ ಕಾರ್ನಾಡು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s