ಸರಕಾರದಿಂದ ಕೆಸಿಎಸ್ ಆರ್ ನಿಯಮಾವಳಿ ಉಲ್ಲಂಘನೆ : ಡಾ.ಪಿ.ವಿ.ಭಂಡಾರಿ

Posted: ಅಕ್ಟೋಬರ್ 17, 2014 in Uncategorized

http://www.udupibits.in news

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಪ್ರಾಮಾಣಿಕ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಜೆ. ಅವರನ್ನು ಅಸಂವಿಧಾನಿಕವಾಗಿ ಮಾಡಿರುವ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ, ಅಮಾನತುಗೊಳಿಸಿ ವರ್ಷ ಕಳೆದರೂ ನಿಯಮಾವಳಿ ಪ್ರಕಾರ ಕರ್ತವ್ಯಕ್ಕೆ ಮರು ನಿಯುಕ್ತಿಯನ್ನೂ ಮಾಡದೆ, ಸರಿಯಾಗಿ ಜೀವನಾಂಶವನ್ನೂ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಸರಕಾರದ ಕ್ರಮವನ್ನು ಖಂಡಿಸಿ ಅಕ್ಟೋಬರ್ 19ರಂದು ಬೆಳಗ್ಗೆ ಗಂಟೆ 10.30ಕ್ಕೆ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದ ಗಾಂಧಿ ಪ್ರತಿಮೆ ಮುಂಭಾಗದಿಂದ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಬೃಹತ್ ಪ್ರತಿಭಟನಾ ಜಾಥಾ, ಅಜ್ಜರಕಾಡು ಭುಜಂಗ ಪಾರ್ಕ್ ಬಳಿಯ ಸೈನಿಕರ ಯುದ್ಧ ಸ್ಮಾರಕದ ಪರಿಸರದಲ್ಲಿ ಪ್ರತಿಭಟನಾ ಸಭೆ ಮತ್ತು ಅ.20ರಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಯಲಿದೆ. ಸರಕಾರ ಅನುಮತಿ ನೀಡಿದರೆ ಸತ್ಯಾಗ್ರಹವನ್ನು ಸತ್ಯಾಗ್ರಹ ಉಚಿತ ವೈದ್ಯಕೀಯ ಶಿಬಿರವನ್ನಾಗಿಸಿ ಮುಂದುವರಿಸಲಾಗುವುದು ಎಂದು ಫಾ.ವಿಲಿಯಂ ಮಾರ್ಟಿಸ್ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಹೋರಾಟದ ಬಗ್ಗೆ ಮಾಹಿತಿ ನೀಡಿದರು.

ಬೃಹತ್ ಪ್ರತಿಭಟನಾ ಜಾಥಾವು ಕವಿ ಮುದ್ದಣ ಮಾರ್ಗ, ಕೋರ್ಟ್ ರಸ್ತೆ, ಹಳೆ ತಾಲೂಕು ಕಚೇರಿ, ಜೋಡುಕಟ್ಟೆಯಾಗಿ ಅಜ್ಜರಕಾಡುವಿಗೆ ತಲುಪಲಿದೆ. ನಡುವೆ ಹಳೆ ತಾಲೂಕು ಕಚೇರಿ ಬಳಿಯ ತಾಲೂಕು ಪಂಚಾಯತ್ ಕಚೇರಿ ಕಟ್ಟಡದಲ್ಲಿರುವ ಶಾಸಕ ಪ್ರಮೋದ್ ಮಧ್ವರಾಜ್ ಅವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗುವುದು. ಜಿಲ್ಲಾಸ್ಪತ್ರೆ ಮುಂಭಾಗದಲ್ಲೂ ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾ ಸರ್ಜನ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಲಿಯಂ ಮಾರ್ಟಿಸ್ ಹೇಳಿದರು.

ಹೋರಾಟಕ್ಕೆ ಈಗಾಗಲೇ ಅನೇಕ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ರಾಜಕಿಯೇತರ ಚಳುವಳಿಯಾಗಿರುವ ಈ ಹೋರಾಟವನ್ನು ಡಾ.ಶರತ್ ಕುಮಾರ್ ರಾವ್ ಕರ್ತವ್ಯನಿಷ್ಟೆಯನ್ನು ಮೆಚ್ಚಿರುವ ಜಿಲ್ಲೆಯ ಜನಪ್ರತಿನಿಧಿಗಳನ್ನು ಸ್ವಾಗತಿಸಲಾಗುವುದು. ಡಾ.ಶರತ್ ಕುಮಾರ್ ರಾವ್ ಅವರ ಮಾನವಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿರುವ ಬಗ್ಗೆ ಆರೋಗ್ಯ ಸಚಿವ ಯು.ಟಿ.ಖಾದರ್ (ಮೊಬೈಲ್ : 9448383919) ಹಾಗೂ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ (ಮೊಬೈಲ್ : 9448990310) ಅವರಿಗೆ ಎಸ್.ಎಂ.ಎಸ್.ಅಭಿಯಾನ ಆರಂಭಿಸಿದ್ದು, ಸಾರ್ವಜನಿಕರು ಸಹ ತಮ್ಮ ಈ ಅಭಿಯಾನದಲ್ಲಿ ಭಾಗಿಯಾಗಬೇಕೆಂದು ಫಾ.ವಿಲಿಯಂ ಮಾರ್ಟಿಸ್ ವಿನಂತಿಸಿದರು.

ವಿಷಯವನ್ನು ಈಗಾಗಲೇ ಒಂದು ಬಾರಿ ಮಾಜಿ ಕೇಂದ್ರ ಮಂತ್ರಿ ಆಸ್ಕರ್ ಫೆರ್ನಾಂಡಿಸ್ ಗಮನಕ್ಕೆ ತರಲಾಗಿದೆ. ಇದೀಗ ಮತ್ತೊಮ್ಮೆ ಅವರ ಗಮನಕ್ಕೆ ತರಲಾಗುವುದು ಎಂದು ಫಾ.ವಿಲಿಯಂ ತಿಳಿಸಿದರು.

ಸರಕಾರದಿಂದ ಕೆಸಿಎಸ್ ಆರ್ ನಿಯಮಾವಳಿ ಉಲ್ಲಂಘನೆ : ಡಾ.ಪಿ.ವಿ.ಭಂಡಾರಿ

ಅಮಾನತುಗೊಳಿಸಿದ 3 ತಿಂಗಳೊಳಗೆ ಇಲಾಖಾ ವಿಚಾರಣೆಯನ್ನು ಆರಂಭಿಸಬೇಕು, 6 ತಿಂಗಳೊಳಗೆ ಅಮಾನತು ಆದೇಶ ಹಿಂತೆಗೆದುಕೊಂಡು ಮರು ನಿಯುಕ್ತಿಗೊಳಿಸಬೇಕು, ಈ ಎಲ್ಲಾ ಅವಧಿಯಲ್ಲಿ ಅಮಾನತಿನಲ್ಲಿರುವ ಸರಕಾರಿ ನೌಕರನಿಗೆ ಜೀವನಾಂಶವನ್ನು ನೀಡಬೇಕು ಎಂಬಿತ್ಯಾದಿಯಾಗಿ ನಿಯಮಗಳಿದ್ದರೂ, ಇಲ್ಲಿ ಡಾ.ಶರತ್ ಕುಮಾರ್ ಅವರಿಗೆ ಸಂಬಂಧಿಸಿದಂತೆ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದ ಖ್ಯಾತ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ವಿವರಿಸಿದರು.

ಡಾ.ಶರತ್ ತನ್ನ ಅಮಾನತು ಆದೇಶದ ವಿರುದ್ಧ ಕೆಎಟಿಗೆ ಮೊರೆ ಹೋಗಿದ್ದಾರೆ. ಕೆಎಟಿಗೆ ಹೋದ ಕಾರಣಕ್ಕೆ ಇದೀಗ ಅಮಾನತು ಹಿಂಪಡೆದುಕೊಳ್ಳಲಾಗುವುದಿಲ್ಲ ಎಂದು ಸಚಿವ ಖಾದರ್ ಹೇಳಿಕೊಳ್ಳುತ್ತಿದ್ದಾರೆ. ಆದರೆ ಕೆಎಟಿಗೆ ಹೋಗಿರುವುದಕ್ಕೂ, ಅಮಾನತು ಆದೇಶ ಹಿಂಪಡೆದುಕೊಳ್ಳುವುದಕ್ಕೂ ಸಂಬಂಧವಿಲ್ಲ. ಕೆಎಟಿಗೆ ಹೋದರೂ, ಅಮಾನತು ಆದೇಶ ಹಿಂಪಡೆದುಕೊಂಡ ಅನೇಕ ಉದಾಹರಣೆಗಳಿವೆ ಎಂದು ಡಾ.ಭಂಡಾರಿ ಸ್ಪಷ್ಟಪಡಿಸಿದರು.

ಡಾ.ಶರತ್ ಅವರನ್ನು ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಮಾನತು ಮಾಡಿದ್ದಾರೆ ಎಂದು ಸಾಮಾಜಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ ಆರೋಪಿಸಿದರು. ಭಾಸ್ಕರ ರೈ ಬ್ರಹ್ಮಾವರ, ಸತ್ಯಾನಂದ ನಾಯಕ್, ಬೈಕಾಡಿ ಸುಪ್ರಸಾದ್ ಶೆಟ್ಟಿ ಮುಂತಾದವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s