ಅಧಿಕಾರಕ್ಕೇರಿದ ಐದೇ ತಿಂಗಳಲ್ಲಿ ಡಿವಿಎಸ್ ಸಹಿತ ಮೂವರು ಕೇಂದ್ರ ಮಂತ್ರಿಗಳ ಆಸ್ತಿ ಹೆಚ್ಚಾಯ್ತು, ನೋಡಿ !

Posted: ಅಕ್ಟೋಬರ್ 24, 2014 in Uncategorized

ನವದೆಹಲಿ: ಅಧಿಕಾರಕ್ಕೆ ಬಂದ ಕೇವಲ ಐದೇ ತಿಂಗಳಲ್ಲಿ ಡಿ.ವಿ.ಸದಾನಂದ ಗೌಡ ಸಹಿತ ಕೇಂದ್ರದ ಮೂವರು ಮಂತ್ರಿಗಳ ಆಸ್ತಿ ಮೌಲ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

ಈ ಬಗ್ಗೆ, ರಾಷ್ಟ್ರೀಯ ಚುನಾವಣಾ ಕಣ್ಗಾವಲು (the National Election Watch-TNEW) ಮತ್ತು ಪ್ರಜಾಸತ್ತಾತ್ಮಕ ಸುಧಾರಣಾ ಸಂಸ್ಥೆ (Association of Democratic Reforms-ADR)ಯು ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ.

ಕನಿಷ್ಟ ಮೂವರು ಕೇಂದ್ರ ಸಚಿವರ ಆಸ್ತಿ ಗಳಿಕೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಕೇಂದ್ರ ಮಂತ್ರಿಮಂಡಲದ ಸಚಿವರು ಇತ್ತೀಚೆಗೆ ಪ್ರಧಾನಮಂತ್ರಿಗಳಿಗೆ ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದರು. ಇದೀಗ ಅದರ ವಿವರಗಳು ಬಹಿರಂಗವಾಗಿದ್ದು, ಕೇವಲ ಐದೇ ತಿಂಗಳಲ್ಲಿ ಕೇಂದ್ರ ಸಚಿವರ ಆಸ್ತಿ ಮೌಲ್ಯದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ಪ್ರಮುಖವಾಗಿ ಕೇಂದ್ರದ ರೈಲ್ವೇ ಸಚಿವ ಡಿವಿ ಸದಾನಂದ ಗೌಡ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉಧ್ಯಮ ಸಚಿವ ಪಿ.ರಾಧಾಕೃಷ್ಣನ್ ಹಾಗೂ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರ ಆಸ್ತಿ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಕೇಂದ್ರ ರೈಲ್ವೇ ಸಚಿವ ಸದಾನಂದ ಗೌಡ ಅವರು 2014ರ ಲೋಕಸಭಾ ಚುನಾವಣೆ ವೇಳೆ ತಾವು 9.88 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು. TNEW-ADR ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಮಾಹಿತಿ ಅನ್ವಯ ಕೇಂದ್ರ ಸಚಿವರಾಗಿ ಸದಾನಂದ ಗೌಡ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರ ಆಸ್ತಿ ಮೌಲ್ಯದಲ್ಲಿ ಸುಮಾರು 10.46 ಕೋಟಿ ಮೌಲ್ಯದ ಏರಿಕೆ ಕಂಡು ಬಂದಿದೆ. ಪ್ರಸ್ತುತ ಅವರ ಆಸ್ತಿ ಮೌಲ್ಯ 20.35 ಕೋಟಿಗಳಾಗಿದ್ದು, ಲೋಕಸಭಾ ಚುನಾವಣೆ ವೇಳೆ ತಮ್ಮ ಬಳಿ 9.88 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಸದಾನಂದ ಗೌಡ ಅವರು ಘೋಷಿಸಿಕೊಂಡಿದ್ದರು.

ಇನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉಧ್ಯಮ ಇಲಾಖೆಯ ಸಚಿವರಾದ ರಾಧಾಕೃಷ್ಣನ್.ಪಿ ಅವರು 2ನೇ ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯದಲ್ಲಿ ಸುಮಾರು 2.98 ಕೋಟಿಗಳಷ್ಟು ಏರಿಕೆ ಕಂಡುಬಂದಿದೆ.

ಅದೇ ರೀತಿ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಆಸ್ತಿ ಮೌಲ್ಯದಲ್ಲಿಯೂ ಕೂಡ 1.01 ಕೋಟಿಯಷ್ಟು ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಕೇಂದ್ರ ಸಚಿವರ ಪೈಕಿ ಅತ್ಯಂತ ಶ್ರೀಮಂತ ಸಚಿವರು ಎಂಬ ಖ್ಯಾತಿ ಜೇಟ್ಲಿ ಅವರಿಗಿದ್ದು, ಪ್ರಸ್ತುತ ಜೇಟ್ಲಿ ಅವರ ಬಳಿ ಸುಮಾರು 114.3 ಕೋಟಿ ಮೌಲ್ಯದ ಆಸ್ತಿ ಇದೆ.

ಜೇಟ್ಲಿ ಅವರಂತೆ ಶ್ರೀಮಂತ ಸಚಿವೆ ಎಂಬ ಖ್ಯಾತಿ ಗಳಿಸಿದ್ದ ಪಂಜಾಬ್ ಮೂಲದ ಕೇಂದ್ರ ಸಚಿವೆ ಹರ್ಸೀಮ್ರತ್ ಕೌರ್ ಬಾದಲ್ ಅವರು ಕೂಡ ಸುಮಾರು 108.31 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಶ್ರೀಮಂತ ಕೇಂದ್ರ ಸಚಿವರ ಪಟ್ಟಿಯಲ್ಲಿ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಅವರಿಗೆ ಮೂರನೇ ಸ್ಥಾನ ಲಭಿಸಿದ್ದು, ಅವರು 94.66 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ.

TNEW-ADRನ ಜಂಟಿ ಹೇಳಿಕೆಯಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಸಚಿವರು ಸಮರ್ಪಿಸಿರುವ ಆಸ್ತಿ ಘೋಷಣೆ ಅನ್ವಯ ಕೇಂದ್ರದ ಶೇ.41ರಿಂದ 91 ರಷ್ಟು ಸಚಿವರುಗಳು ಕೋಟ್ಯಾಧಿಪತಿಗಳಾಗಿದ್ದು, ಇನ್ನೂ ಕೆಲ ಕೇಂದ್ರ ಸಚಿವರು ತಮ್ಮ ಆಸ್ತಿ ಘೋಷಣೆ ಮಾಡಿಲ್ಲ. TNEW-ADRನ ವಿಶ್ಲೇಷಣೆಯ ಅನ್ವಯ ಕೇಂದ್ರ ಸಚಿವರ ಆಸ್ತಿ ಮೌಲ್ಯದಲ್ಲಿನ ಈ ದಿಢೀರ್ ಬದಲಾವಣೆಗೆ ಸಚಿವರ ಆಸ್ತಿ ಘೋಷಣೆಯಲ್ಲಿನ ನಿರ್ಧಿಷ್ಟ ಮಾದರಿಯ ಕೊರತೆಯೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಡಲಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s