ಅ.26: ಉಡುಪಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

Posted: ಅಕ್ಟೋಬರ್ 24, 2014 in Uncategorized
ಟ್ಯಾಗ್ ಗಳು:, , , , ,

http://www.udupibits.in news
ಉಡುಪಿ: ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವನ್ನು ಈಗಾಗಲೇ ಅಸ್ತಿತ್ವಕ್ಕೆ ತರಲಾಗಿದ್ದು, ಸಂಘದ ಮೊದಲ ಮಹಾಸಭೆ ಮತ್ತು ಉದ್ಘಾಟನಾ ಸಮಾರಂಭವು ಅಕ್ಟೋಬರ್ 26ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ನಿವೃತ್ತ ಎಸ್ಪಿ ವಿಶ್ವನಾಥ ಶೆಟ್ಟಿ ಅವರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಕರೆದ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಸಂಘವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪಿ.ರಾಜೇಂದ್ರ ಪ್ರಸಾದ್, ನಗರಸಭೆ ಪೌರಾಯುಕ್ತರಾದ ಶ್ರೀಕಾಂತ ರಾವ್, ದ.ಕ.ಜಿಲ್ಲಾ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರೂ, ನಿವೃತ್ತ ಡಿವೈಎಸ್ಪಿಗಳೂ ಆದ ಬಿ.ಜೆ.ಭಂಡಾರಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜುಲೈ 26ರಂದು ಸಭೆ ನಡೆಸಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಿವೃತ್ತ ಎಸ್ಪಿ ಬಿ.ಸುಧಾಕರ ಹೆಗ್ಡೆ ಗೌರವ ಅಧ್ಯಕ್ಷರಾಗಿ, ಇನ್ನೊಬ್ಬರು ನಿವೃತ್ತ ಎಸ್ಪಿ ವಿಶ್ವನಾಥ ಶೆಟ್ಟಿ ಅಧ್ಯಕ್ಷರಾಗಿ, ನಿವೃತ್ತ ಪಿ.ಎಸ್.ಐ. ಬಿ.ಕೆ.ಬಿಜೂರ್, ನಿವೃತ್ತ ಎ.ಎಸ್.ಐಗಳಾದ ವಿಶ್ವನಾಥ ಶೆಟ್ಟಿ ಹಾಗೂ ಸದಾಶಿವ ಆಚಾರ್ ಉಪಾಧ್ಯಕ್ಷರಾಗಿ, ನಿವೃತ್ತ ಪಿ.ಎಸ್.ಐ. ಎಂ.ವೆಂಕಪ್ಪ ನಾಯಕ್ ಪ್ರಧಾನ ಕಾರ್ಯದರ್ಶಿಯಾಗಿ, ನಿವೃತ್ತ ಎ.ಎಸ್.ಐ. ಕೇಳು ಪಿ.ಎ. ಜೊತೆ ಕಾರ್ಯದರ್ಶಿಯಾಗಿ, ನಿವೃತ್ತ ಎ.ಎಚ್.ಸಿ. ಸಂಜೀವ ಭಂಡಾರಿ ಕೋಶಾಧಿಕಾರಿಯಾಗಿ, ನಿವೃತ್ತ ಪಿ.ಎಸ್.ಐ. ಡಿ.ಪುರುಷೋತ್ತಮ ಜೊತೆ ಕಾರ್ಯದರ್ಶಿಯಾಗಿ, ನಿವೃತ್ತ ಡಿಎಸ್ಪಿ ಸೂರಪ್ಪ ಶೆಟ್ಟಿ ಗೌರವ ಸಲಹೆಗಾರರಾಗಿ ಹಾಗೂ 6 ಮಂದಿ ಸಂಘಟನಾ ಕಾರ್ಯದರ್ಶಿಗಳಾಗಿಯೂ, 14 ಮಂದಿ ಸಮಿತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಒಂದೇ ಸೂರಿನಡಿ ಸೇರಿಸಿ ಅವರಲ್ಲಿ ಚೈತನ್ಯ ಮೂಡಿಸುವುದು, ಅಗತ್ಯ ಕಾನೂನು ಸಲಹೆ ಒದಗಿಸುವುದು, ಇವರ ಮಕ್ಕಳಿಗೆ ವಿದ್ಯಾಭ್ಯಾಸ, ವೃತ್ತಿ ಜೀವನ, ಅವಕಾಶಗಳು, ಬ್ಯಾಂಕಿನಿಮದ ಆರ್ಥಿಕ ಸಹಾಯ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವುದೇ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಸಂಘದ ಮೂಲಕ ಹಮ್ಮಿಕೊಳ್ಳಲಾಗುವುದು ಎಂದು ವಿವರ ನೀಡಿದ ವಿಶ್ವನಾಥ ಶೆಟ್ಟಿ, ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 104 ಮಂದಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಗುರುತಿಸಲಾಗಿದೆ. ಸದಸ್ಯರಾಗದವರು ಅ.226ರಂದು ಸದಸ್ಯರಾಗಬಹುದು ಎಂದು ಹೇಳಿದರು.

ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ವೆಂಕಪ್ಪ ನಾಯಕ್, ಪಿ.ಎ.ಕೇಳು, ಸಂಜೀವ ಭಂಡಾರಿ, ಡಿ.ಪುರುಷೋತ್ತಮ, ಶ್ರೀನಿವಾಸ್ ಹಾಗೂ ರಾಮಕೃಷ್ಣ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s