ಪೋರ್ಜರಿ ಕೇಸ್ : ಕೋರ್ಟಿಗೆ ‘ಬಿ’ ವರದಿ ಸಲ್ಲಿಸಿ ಆರೋಪಿಗಳ ರಕ್ಷಣೆ – ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಮುಂದಿಟ್ಟು ಡಾ.ಶರತ್ ಗೆ ಅನ್ಯಾಯ ಮಾಡಿದ ಪೊಲೀಸ್ !

Posted: October 25, 2014 in Uncategorized

# http://www.udupibits.in news * ಶ್ರೀರಾಮ ದಿವಾಣ.
ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಪ್ರಾಮಾಣಿಕ ಮತ್ತು ದಕ್ಷ ವೈದ್ಯಾಧಿಕಾರಿಯಾಗಿದ್ದು, ಪೋರ್ಜರಿ ದಾಖಲೆಯ ಮೇಲೆ ಅಸಂವಿಧಾನಿಕವಾಗಿ
ಅಮಾನತುಗೊಂಡಿದ್ದ ಡಾ.ಶರತ್ ಕುಮಾರ್ ರಾವ್ ಜೆ. ಅವರು ಉಡುಪಿಯ ಒಂದನೇ ಎ.ಸಿ.ಜೆ. (ಕಿರಿಯ ವಿಭಾಗ) ಮತ್ತು ಜೆ.ಎಂ.ಎಫ್.ಕೋರ್ಟ್ ಮೂಲಕ ದಾಖಲಿಸಿದ ಖಾಸಗಿ ಪಿರ್ಯಾದಿಯ ಮೇಲೆ ತನಿಖೆ ನಡೆಸಿದ ಉಡುಪಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ರಾಜಗೋಪಾಲ್ ಅವರು ಸುಧೀರ್ಘ 11 ತಿಂಗಳ ಕಾಲ ತನಿಖೆ ನಡೆಸಿ ಇದೀಗ ನ್ಯಾಯಾಲಯಕ್ಕೆ ‘ಬಿ’ ಅಂತಿಮ ವರದಿ ಸಲ್ಲಿಸುವ ಮೂಲಕ ಪೋರ್ಜರಿ ಆರೋಪಿಗಳನ್ನು ರಕ್ಷಿಸಿ
ಕೈತೊಳೆದುಕೊಂಡಿದ್ದಾರೆ.

ಈ ಪ್ರಕರಣದಲ್ಲಿ ತನಿಖಾಧಿಕಾರಿ ರಾಜಗೋಪಾಲ್ ಅವರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸದೆ, ‘ಬಿ’ ಅಂತಿಮ ವರದಿ ಸಲ್ಲಿಸಲು ನೀಡಿದ ಕಾರಣ: ‘ಸಾಕ್ಷ್ಯಾಧಾರಗಳ ಕೊರತೆ’ಯಾಗಿದೆ. ಅಂದರೆ, ಸಬ್ ಇನ್ಸ್ ಪೆಕ್ಟರ್ ರಾಜಗೋಪಾಲ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಥವಾಗಿ ತನಿಖೆ ನಡೆಸಲು ವಿಫಲರಾಗಿದ್ದಾರೆ ಎನ್ನುವುದನ್ನು ಸ್ವತಹಾ ಒಪ್ಪಿಕೊಂಡಂತಾಗಿದೆ.

ತನಿಖಾಧಿಕಾರಿ ರಾಜಗೋಪಾಲ್ ಅವರು ಸೆಪ್ಟೆಂಬರ್ 3ರಂದು ನ್ಯಾಯಾಲಯಕ್ಕೆ ‘ಬಿ’ ಅಂತಿಮ ವರದಿ ಸಲ್ಲಿಸಿದ್ದಾರೆ. 15 ಪುಟಗಳ ‘ಬಿ’ ಅಮತಿಮ ವರದಿಯಲ್ಲಿ ಪಿರ್ಯಾದಿ ಡಾ.ಶರತ್ ಕುಮಾರ್ ರಾವ್, ಆರೋಪಿಗಳಾದ ಸೋಂಕಿತ ವ್ಯಕ್ತಿಗಳ ಒಕ್ಕೂಟ ‘ಜೀವನ ಸಂಘರ್ಷ’ದ ಶ್ರೀಮತಿ ವೀಣಾ ಶೆಟ್ಟಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಉಡುಪಿ ಜಿಲ್ಲಾ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಉಡುಪಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ವಿ.ರಾಮಚಂದ್ರ ಬಾಯಿರಿ, ಆರೋಪಿಗಳ ಪರ ಸಾಕ್ಷಿದಾರರಾದ ಸೋಕಿತ ವ್ಯಕ್ತಿಗಳ ಒಕ್ಕೂಟ ‘ಜೀವನ ಸಂಘರ್ಷ’ದ ಅಧ್ಯಕ್ಷೆ ಶ್ರೀಮತಿ ಹೇಮಾ ಶಿರಿಯಾರ, ವೀಣಾ ಶೆಟ್ಟಿಯ ಅಣ್ಣ ಎಂ.ಬಾಲಗಂಗಾಧರ ಶೆಟ್ಟಿ ಹಾಗೂ ವೀಣಾ ಶೆಟ್ಟಿ ಪರ ವಕೀಲರಾದ ಶಶಿಕಾಂತ್ ಶೆಟ್ಟಿ ಇವರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.

ಬಹಳ ಮುಖ್ಯವಾದ ಒಂದು ಅಂಶವೆಂದರೆ, ಡಾ.ಶರತ್ ಕುಮಾರ್ ರಾವ್ ನೀಡಿದ ದೂರಿನ ತನಿಖೆಗೆ ಶ್ರೀಮತಿ ವೀಣಾ ಶೆಟ್ಟಿಯವರು ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧದ ತನಿಖೆಯ ಸಮಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಿದ ಅಗ್ರಿಮೆಂಟ್ ಒಂದರ ಮೂಲ ಪ್ರತಿಯ ಅಗತ್ಯವಿದ್ದು, ಇದನ್ನು ವೀಣಾ ಶೆಟ್ಟಿ ವಶದಿಂದ ಸ್ವಾಧೀನಪಡಿಸಿಕೊಳ್ಳುವಲ್ಲಿ ತನಿಖಾಧಿಕಾರಿ ರಾಜಗೋಪಾಲ್ ಸಂಪೂರ್ಣ ವಿಫಲರಾಗಿರುವುದು.

ಡಾ.ಶರತ್ ಕುಮಾರ್ ರಾವ್ ಅವರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ಪಿರ್ಯಾದಿಯಂತೆ, 2013ರ ಅಕ್ಟೋಬರ್ 3ರಂದು ಪ್ರಕರಣದ ಆರೋಪಿಗಳ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಕಲಂ 120 (ಬಿ), 327, 330, 468, 500 501ರಂತೆ ಮೊಕದ್ದಮೆ ದಾಖಲಿಸಿದ್ದರು. ಸುಧೀರ್ಘ 11 ತಿಂಗಳ ಕಾಲ ತನಿಖೆ ನಡೆಸಿದ ತನಿಖಾಧಿಕಾರಿ ರಾಜಗೋಪಾಲ್ ಅವರು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಲು ವಿಫಲರಾಗಿ ಕೊನೆಗೆ 2014ರ ಸೆಪ್ಟೆಂಬರ್ ಒಂದರಂದು ನ್ಯಾಯಾಲಯಕ್ಕೆ ‘ಬಿ’ ಅಂತಿಮ ವರದಿ ಸಲ್ಲಿಸಿದ್ದಾರೆ.

@ ಶೀಘ್ರವೇ ನಿರೀಕ್ಷಿಸಿ : ‘ಬಿ’ ಅಂತಿಮ ವರದಿಯ ಮೇಲೆ http://www.udupibits.in ನಿಂದ ವಿಶ್ಲೇಷಣೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s