ಬಚ್ಚಲು ಮನೆಯ ಪೈಪಿನಿಂದಲೂ ಅಕ್ರಮ ಹಣ ವಶ !

Posted: October 26, 2014 in Uncategorized

ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ಲಂಚ ಪಡೆಯುತ್ತಿದ್ದ ಹಿರಿಯ ರೈಲ್ವೆ ಅಧಿಕಾರಿ ರವಿ ಮೋಹನ್ ಶರ್ಮಾ ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಸಿಬಿಐ ಅಧಿಕಾರಿಗಳ ತಂಡ, ಇದೀಗ ಶರ್ಮಾ ನಿವಾಸದಿಂದ ಹತ್ತು ಲಕ್ಷ ರು. ನಗದು, ಹಲವು ಲ್ಯಾಪ್‌ಟಾಪ್‌ಗಳು ಮತ್ತು ದುಬಾರಿ ಬೆಲೆಯ ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಮಡಿದ್ದಾರೆ.

ಅಕ್ರಮ ಹಣವನ್ನು ಶರ್ಮಾ ತಮ್ಮ ಬಚ್ಚಲು ಮನೆಯ ಡ್ರೈನೇಜ್ ಪೈಪ್‌ನಲ್ಲಿ
ಅಡಗಿಸಿಟ್ಟಿದ್ದರು. ಹಾಗಾಗಿ ಅಧಿಕಾರಿಗಳು ಪೈಪ್ ಒಡೆದು ಹಣವನ್ನು ಹೊರತೆಗೆಯಬೇಕಾಗಿ ಬಂತು ಎನ್ನಲಾಗಿದೆ.

ಶರ್ಮಾ ಅವರ ಮನೆಯಿಂದ 6 ಲ್ಯಾಪ್‌ಟಾಪ್‌ಗಳು, ಐಪೋನ್‌ಗಳು ಮತ್ತು ಹಲವು
ಸ್ಮಾರ್ಟ್‌ಫೋನ್‌ಗಳನ್ನೂ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಖಾಸಗಿ ಪ್ರವಾಸ ಕಂಪನಿಗಳಿಗಾಗಿ ವಿಶೇಷ ರೈಲಿನಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಹವಾಲಾ ಮಾರ್ಗದ ಮೂಲಕ ಐದು ಲಕ್ಷ ರು. ಲಂಚ ಪಡೆಯುತ್ತಿದ್ದಾಗ ರೈಲ್ವೆ ಇಲಾಖೆಯ ಅಧಿಕಾರಿ ರವಿ ಮೋಹನ್ ಶರ್ಮಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s