ಕಾಪು ಸಮುದ್ರದಲ್ಲಿ ಕಾಣೆಯಾದ ಇಬ್ಬರಲ್ಲಿ ಒಬ್ಬ ರ ಶವ ಮಲ್ಪೆಯಲ್ಲಿ ಪತ್ತೆ

Posted: October 27, 2014 in Uncategorized
Tags: , , , , , , ,

ಉಡುಪಿ: ಕಾಪು ಕಡಲ ಕಿನಾರೆಯಲ್ಲಿ ಅಕ್ಟೋಬರ್ 25ರಂದು ಸಂಜೆ ನೀರಿನಲೆಗಳ ಜೊತೆ ಆಟವಾಡುತ್ತಿದ್ದಾಗ ಅಲೆಗಳ ರಭಸಕ್ಕೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಣ್ಮರೆಯಾದ ಒಬ್ಬರ ಪೈಕಿ ಒಬ್ಬರ ಶವ ಇಂದು ಬೆಳಗ್ಗೆ ಮಲ್ಪೆ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.

ಕಾರ್ಕಳ ತಾಲೂಕಿನ ಉಮ್ಮರಬೆಟ್ಟು ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಪ್ರಕಾಶ್ ರಾವ್ ಅವರು ತಮ್ಮ ಪತ್ನಿ, ಮಕ್ಕಳು ಹಾಗೂ ಸಂಬಂಧಿಕರ ಜೊತೆಗೆ ಕಾಪು ಕಡಲ ಕಿನಾರೆಗೆ ಬಮದಿದ್ದರು. ಇಲ್ಲಿ ಜಗದೀಶ್, ಹರ್ಷ್, ಸುನಿಲ್, ಪ್ರಜ್ವಲ್‌ ರಾವ್‌ ಹಾಗೂ ಹರಿಶ್ಚಂದ್ರ ಎಆಂಬವರು ನೀರಿನಲೆಗಳ ಜೊತೆ ಆಟಡವಾಡುತ್ತಿದ್ದರು.

ಈ ಸಂದರ್ಭದಲ್ಲಿ ಇವರು ಐವರೂ ನೀರಿನಲೆಗಳ ಸೆಳೆತಕ್ಕೆ ಸಮುದ್ರದಲ್ಲಿ ಕೊಚ್ಚಿಕೊಮಡು ಹೋಗಿದ್ದಾರೆ. ಇವರ ಪೈಕಿ ಹರಿಶ್ಚಂದ್ರ ಹಾಗೂ ಪ್ರಜ್ವಲ್ ರಾವ್ ಎಂಬವರನ್ನು ಸಾರ್ವಜನಿಕರು ರಕ್ಷಿಸಿ ಮೇಲಕ್ಕೆ ತಂದಿದ್ದರು. ಜಗದೀಶ್ ರವರ ಶವ ಅದೇ ದಿನ ಸಂಜೆ ಸಿಕ್ಕಿತ್ತು. ಹರ್ಷ ಹಾಗೂ ಸುನಿಲ್ ಅವರ ಶವಗಳು ಪತ್ತೆಯಾಗಿರಲಿಲ್ಲ.

ಕಾಪು ಸಮುದ್ರದಲ್ಲಿ ಕಾಣೆಯಾದ ಹರ್ಷ ಹಾಗೂ ಸುನಿಲ್ ಇವರಿಬ್ಬರಲ್ಲಿ ಒಬ್ಬರ ಶವ ಇಂದು ಬೆಳಗ್ಗೆ ಮಲ್ಪೆ ಕಡಲ ಕಿನಾರೆಯಲ್ಲಿ ಪತ್ತೆಯಾಗಿದ್ದು, ಶವ ನಿರ್ಧಿಷ್ಟವಾಗಿ ಯಾರದೆಂದು ಇನ್ನಷ್ಟೇ ಗುರುತಿಸಬೇಕಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s