ಮರಳು ಮಾಫಿಯಾ-ಪೊಲೀಸ್ ಸಂಬಂಧ: ‘ಸ್ಪಂದನ’ದ ಪ್ರಭಾಕರ್ ಮೇಲೆ ಹಲ್ಲೆ- ಪೊಲೀಸರ ವಿರುದ್ಧ ಕಠಿಣ ಕ್ರಮವಾಗಲಿ

Posted: ಅಕ್ಟೋಬರ್ 29, 2014 in Uncategorized

# http://www.udupibits.in ಸಂಪಾದಕೀಯ..
@ ಉಡುಪಿಯ ಸ್ಪಂದನ ಟಿವಿ ವಾಹಿನಿಯ ವರದಿಗಾರರಾದ ಪ್ರಭಾಕರ್ ಅವರ ಮೇಲೆ ಅಕ್ಟೋಬರ್ 28ರಂದು ಪೂರ್ವಾಹ್ನ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯ ಪೊಲೀಸ್ ಕಾನ್ ಸ್ಟೇಬಲ್ ರವಿಚಂದ್ರ ಎಂಬವರು ಹಲ್ಲೆ ನಡೆಸಿದ ಪ್ರಕರಣ ನಡೆದಿದ್ದು, ಇದು ಅತ್ಯಂತ ಖಂಡನೀಯ ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಪ್ರಭಾಕರ್ ಅವರು ಅಕ್ರಮ ಮರಳು ಮಾಫಿಯಾದ ಜೊತೆಗೆ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಅರುಣ್ ಕುಮಾರ್ ಅವರು ಹೋದಿರುವ ಅಕ್ರಮ ಸಂಪರ್ಕ ಮತ್ತು ಕಾನೂನು ಬಾಹಿರ ಸಂಬಂಧದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿರುವುದನ್ನು ತಿಳಿದುಕೊಂಡ ಪೊಲೀಸರು, ವಿಷಯ ಬೆಳಕಿಗೆ ಬಂದರೆ ಮುಂದಕ್ಕೆ ಸಮಸ್ಯೆಗಳಾಗಬಹುದುದು ಎನ್ನುವುದನ್ನು ಅರಿತು ವಿಚಲಿತಗೊಂಡು ಹಲ್ಲೆ ಕೃತ್ಯ ನಡೆಸಿದ್ದಾರೆ. ಈ ಬೆಳವಣಿಗೆ, ಪೊಲೀಸರೇ ಇದೀಗ ಅಪಾಯಕಾರಿ ಕ್ರಿಮಿನಲ್
ಗಳಾಗುತ್ತಿದ್ದಾರೆ ಎನ್ನುವುದಕ್ಕೆ ಉಜ್ವಲ ಸಾಕ್ಷಿಯಾಗಿದೆ.

ಈ ವಿದ್ಯಾಮಾನವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪಿ.ರಾಜೇಂದ್ರ ಪ್ರಸಾದ್ ಅವರು ಕಡೆಗಣಿಸದೆ, ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಕೂಡಲೇ ಪೊಲೀಸ್ ಸಿಬ್ಬಂದಿ ರವಿಚಂದ್ರ ಅವರ ಮೇಲೆ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು. ತಕ್ಷಣವೇ ಕರ್ತವ್ಯದಿಂದ ಅಮಾನತುಪಡಿಸಿ, ಇಲಾಖಾ ತನಿಖೆಗೆ ಆದೇಶಿಸಬೇಕು.

ಇದರ ಜೊತೆಗೆ, ಅಕ್ರಮ ಮರಳು ಮಾಫಿಯಾದೊಂದಿಗೆ ಕಾನೂನು ಬಾಹಿರ ಸಂಬಂಧ ಹೊಂದಿರುವ ಸಿಪಿಐ ಅರುಣ್ ಕುಮಾರ್ ಅವರನ್ನು ಕೂಡಾ ಕರ್ತವ್ಯದಿಂದ ಅಮಾನತುಪಡಿಸಬೇಕು ಮತ್ತು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು.

ಇವಿಷ್ಟು ಕರ್ತವ್ಯವನ್ನು ಎಸ್ಪಿ ರಾಜೇಂದ್ರ ಪ್ರಸಾದ್ ಮಾಡದೇ ಹೋದರೆ, ಅಕ್ರಮ ಚಟುವಟಿಕೆಯಲ್ಲಿ ನಿರತರಾಗಿರುವ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ
ಸಿಬ್ಬಂದಿಗಳನ್ನು ಹದ್ದಬಸ್ತಿನಲ್ಲಿಡಲು ಯಾರಿಂದಲೂ ಸಾಧ್ಯವಿಲ್ಲದ ಅಪಾಯದ ಮಟ್ಟ ತಲುಪುವುದು ಖಚಿತ.

ಉನ್ನತ ಪೊಲೀಸ್ ಅಧಿಕಾರಿಗಳು, ಗೃಹ ಇಲಾಖೆಯ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಪೊಲೀಸ್ ಇಲಾಖಾಧಿಕಾರಿಗಳ ಮೇಲೆ ಒಂದು ಹದ್ದಿನ ಕಣ್ಣಿಡುವ ಕೆಲಸ ಇಂದಿನ ತುರ್ತು.

– ಶ್ರೀರಾಮ ದಿವಾಣ,
ಸಂಪಾದಕ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s