ಬ್ರಹ್ಮಾವರ ಸಿಪಿಐ ಅರುಣ್ ಕುಮಾರ್, ಪಿಸಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ’ಸ್ಪಂದನ’ದಿಂದ ಐಜಿಪಿಗೆ ಮನವಿ

Posted: October 31, 2014 in Uncategorized

ಮಂಗಳೂರು ; ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮರಳು ಸಾಗಾಟಕ್ಕಾಗಿ ಲಂಚಕ್ಕಾಗಿ ಕೈಯೊಡ್ಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ‘ಸ್ಪಂದನ’ ಟಿವಿ ಚಾನೆಲ್ ಇತ್ತೀಚೆಗೆ ರಹಸ್ಯ ಕಾರ್ಯಚರಣೆಯನ್ನು ಮಾಡಿತ್ತು. ಕಾರ್ಯಚರಣೆಯ ಮುಂದುವರಿದ ಭಾಗವಾಗಿ ಚಾನೆಲ್ ನ ವಿಶೇಷ ವರದಿಗಾರ ಬ್ರಹ್ಮಾವರ ಠಾಣೆಗೆ ಹೋಗಿದ್ದಾಗ ರಹಸ್ಯ ಕಾರ್ಯಚರಣೆ ಮಾಡುತ್ತಿರುವುದು ಪೊಲೀಸರ ಅರಿವಿಗೆ ಬಂದು ವರದಿಗಾರರ ಮೇಲೆ ಹಲ್ಲೆ ಮಾಡಲಾಗಿತ್ತು ಮತ್ತು ರಹಸ್ಯ ಕಾರ್ಯಚರಣೆಯ ಕ್ಯಾಮರವನ್ನು ಕಿತ್ತುಕೊಳ್ಳಲಾಗಿತ್ತು. ರಹಸ್ಯ ಕಾರ್ಯಚರಣೆಯಲ್ಲಿ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಅರುಣ್ ನಾಯಕ್ ಹಾಗೂ ಕಾನ್ಸ್ಟೇಬಲ್ ಲಂಚಕ್ಕಾಗಿ ಬಾಯ್ಬಿಟ್ಟಿದ್ದು ಮತ್ತು ವರದಿಗಾರರಿಗೆ ಹಲ್ಲೆ ಮಾಡಿರುವುದು ಈಗಾಗಲೆ ‘ಸ್ಪಂದನ’ ವಾಹಿನಿಯಲ್ಲಿ ಪ್ರಸಾರವಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಸರ್ಕಲ್ ಇನ್ಸ್ ಪೆಕ್ಟರ್ ಅರುಣ್ ನಾಯಕ್ ಹಾಗೂ ಕಾನ್ಸ್ಟೇಬಲ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ‘ಸ್ಪಂದನ’ ಚಾನೆಲ್ ವತಿಯಿಂದ ಮಂಗಳೂರಿನಲ್ಲಿ ಐಜಿಪಿ ಅಮೃತ್ ಪಾಲ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯೊಂದಿಗೆ ಸ್ಪಂದನ ಚಾನೆಲ್ ನಡೆಸಿದ ರಹಸ್ಯ ಕಾರ್ಯಚರಣೆಯ ಸಿಡಿಯನ್ನು ಐಜಿಪಿಯವರಿಗೆ ಹಸ್ತಾಂತರಿಸಲಾಗಿದೆ ಎಂದು ಮನವಿ ನೀಡಿದ ನಿಯೋಗದಲ್ಲಿದ್ದ ಸ್ಪಂದನ ವಾಹಿನಿ ಬ್ಯೂರೋ ಮುಖ್ಯಸ್ಥ ಮೈಮ್ ರಾಮ್ದಾಸ್ ಹಾಗೂ ಸುದ್ದಿ ಸಂಪಾದಕ ವಿನೋದ್ ಪುದು ತಿಳಿಸಿದ್ದಾರೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s