ಉಡುಪಿ ಡಿ.ಸಿ.ಗಳ ವರ್ಗಾವಣೆಗೆ ಕಾರಣವಾಗುತ್ತಿದೆಯೇ ‘ವಾರಾಹಿ ನೀರಾವರಿ ಕಾಮಗಾರಿ’ ?

Posted: ನವೆಂಬರ್ 3, 2014 in Uncategorized

# http://www.udupibits.in * ಶ್ರೀರಾಮ ದಿವಾಣ.
ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಗಳಾಗಿ ಬಂದ ಇಬ್ಬರು ಜಿಲ್ಲಾಧಿಕಾರಿಗಳನ್ನು ಅಲ್ಪಾವಧಿಯಲ್ಲಿಯೇ ಅಕಾರಣವಾಗಿ ವರ್ಗಾಯಿಸಿದ್ದು ಸಾರ್ವಜನಿಕ ವಲಯದಲ್ಲಿ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.

ಒಂದಷ್ಟು ಸುಧೀರ್ಘ ಕಾಲವೇ ಜಿಲ್ಲಾಧಿಕಾರಿಗಳಾಗಿದ್ದ ಡಾ.ಎಂ.ಟಿ.ರೇಜು ಅವರನ್ನು ವರ್ಗಾಯಿಸಿದ ಬಳಿಕ ಅವರ ಸ್ಥಾನಕ್ಕೆ ಬಂದ ಡಾ.ಮುದ್ದು ಮೋಹನ್ ಅವರನ್ನು ಕೇವಲ ಆರು ತಇಂಗಳ ಅಲ್ಪಾವಧಿಯಲ್ಲಿಯೇ ವರ್ಗಾಯಿಸಲಾಯಿತಾದರೆ, ನಂತರ ಬಂದ ಎಸ.ಎಸ್.ಪಟ್ಟಣಶೆಟ್ಟಿ ಅವರನ್ನು ಕೇವಲ ಎರಡು ತಿಂಗಳ ಅತೀ ಅಲ್ಪಾವಧಿಯಲ್ಲಿಯೇ ವರ್ಗಾಯಿಸಲಾಯಿತು.

ಮುದ್ದು ಮೋಹನ್ ಅವರು ಜಿಲ್ಲಾಧಿಕಾರಿಗಳಾಗಿ ಉಡುಪಿಗೆ ಆಗಮಿಸಿದಾಗ ಅವರಿಗಿನ್ನು ಕೇವಲ ಒಂಭತ್ತೇ ತಿಂಗಳು ಸೇವಾವಧಿ ಇರುವುದು. ಅದನ್ನವರು ಉಡುಪಿ ಜಿಲ್ಲೆಯಲ್ಲಿಯೇ ಪೂರೈಸಲಿದ್ದಾರೆ. ಉಡುಪಿ ಜಿಲ್ಲೆಯಿಂದಲೇ ಬೀಳ್ಕೊಡುಗೆ ಮಾಡಿಸಿಕೊಂಡು ಅವರು ನಿವೃತ್ತಿಯಾಗಲು ಅವರು ಬಯಸಿದ್ದಾರೆ. ಅದಕ್ಕೆ ಸರಕಾರವೂ ಒಪ್ಪಿಗೆ ಕೊಟ್ಟಿದೆ ಎಂಬ ಮಾತುಗಳು ಕೇಳಿಬಂತು.

ಆದರೆ, ಕೇವಲ ಆರೇ ತಿಂಗಳಲ್ಲಿ ಮುದ್ದು ಮೋಹನ್ ಅವರನ್ನು ವಗರ್ಾಯಿಸಲಾಯಿತು. ಕಳೆದ 35 ವರ್ಷಗಳಿಂದಲೂ ನಡೆಯುತ್ತಿರುವ ವಾರಾಹಿ ನೀರಾವರಿ ಕಾಮಗಾರಿಗೆ ನೀರು ಹರಿಯುವ ಬದಲಾಗಿ ನೀರಿನಂತೆ ಹರಿದದ್ದು ಸಾವಿರಾರು ಕೊಟಿ ರೂಪಾಯಿಗಳಾಗಿತ್ತು. ಭ್ರಷ್ಟ ಗುತ್ತಿಗೆದಾರರು ಹಾಗೂ ಭ್ರಷ್ಟ ಗುತ್ತಿಗೆದಾರರ ಜೊತೆಗೆ ಶಾಮೀಲಾಗಿರುವ ಅಧಿಕಾರಿ ವರ್ಗವೇ ಇದಕ್ಕೆ ಕಾರಣ ಎಂಬ ಗಂಭೀರ ಆರೋಪಗಳೂ ಈ ನಡುವೆ ಕೇಳಿ ಬಂತು.

ವಾರಾಹಿ ನೀರಾವರಿ ಕಾಮಗಾರಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಇಲಾಖೆ ತನಿಖೆ ಆರಂಭಿಸಿತು. ಉಪ ಲೋಕಾಯುಕ್ತರು ವಾರಾಹಿ ಕಾಮಗಾರಿ ಪ್ರದೇಶಕ್ಕೂ ಭೇಟಿ ನೀಡಿ ಸ್ಥಳ ಪರಿಶೋಧನೆಯನ್ನೂ ನಡೆಸಿದರು. ಈ ಕಾಮಗಾರಿಗೆ ಸಂಬಂಧಿಸಿದಂತೆ ಕೆಲವೊಂದು ಅಗತ್ಯ ಫೈಲ್ ಗಳನ್ನು ಕೂಡಲೇ ತಂದೊಪ್ಪಿಸುವಂತೆ ಉಪ ಲೋಕಾಯುಕ್ತರು ಜಿಲ್ಲಾಧಿಕಾರಿ ಮುದ್ದು ಮೋಹನ್ ಅವರಿಗೆ ಆದೇಶಿಸಿದರು ಮತ್ತು ಮುದ್ದು ಮೋಹನ್ ಅವರು ವಾರಾಹಿಗೆ ಸಂಬಂಧಿಸಿದ ಒಂದಷ್ಟು ಕಡತಗಳನ್ನು ಬೆಂಗಳುರಿಗೆ ಕೊಂಡೊಯ್ಯಲು ಸಿದ್ದರಾದಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಗಟ್ಟಿಯಾಗಿ ತಳವೂರಿರುವ ಭ್ರಷ್ಟ ಗುತ್ತಿಗೆದಾರರ ಏಜೆಂಟರಂತೆ ನಡೆದುಕೊಳ್ಳುವ ಅಧಿಕಾರಿಗಳು ವಿಷಯವನ್ನು ತಡಮಾಡದೆ ಸ್ಥಾಪಿತ ಹಿತಾಸಕ್ತಿಗಳ ಕಿವಿಗೆ ಮುಟ್ಟಿಸಿದರು ಎನ್ನಲಾಗುತ್ತಿದೆ.

ಡಿಸಿ ಮುದ್ದು ಮೋಹನ್ ಅವರು ಉಪ ಲೋಕಾಯುಕ್ತರಿಗೆ ಒಮದೆರಡು ಕಡತಗಳನ್ನು ಒಪ್ಪಿಸಿ ಉಡುಪಿಗೆ ಮರಳಿದ ಕೇವಲ ಒಂದೆರಡು ದಿನಗಳಲ್ಲಿಯೇ ಅವರ ವರ್ಗಾವಣೆ ಆದೇಶ ಹೊರಬಿದ್ದುದು ಸಂಶಯಕ್ಕೆ ಪುಷ್ಟಿ ಒದಗಿಸುವಂತೆ ಮಾಡಿತು.

ಮುದ್ದು ಮೋಹನ್ ಬಳಿಕ ಜಿಲ್ಲಾಧಿಕಾರಿಯಾಗಿ ಬಮದ ಎಸ್.ಎಸ್.ಪಟ್ಟಣಶೆಟ್ಟಿ ಅಧಿಕಾರ ಸ್ವೀಕರಿಸಿದ ಕೇವಲ ಎರಡೇ ತಿಂಗಳಿಗೆ ವರ್ಗಾವಣೆಗೊಂಡಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟೂ ಅಸಮಾಧಾನಕ್ಕೆ ಅನುಮಾನಕ್ಕೆ ಕಾರಣವಾಯಿತು.

ಮಾಹಿತಿ ಮೂಲಗಳ ಪ್ರಕಾರ, ಪಟ್ಟಣಶೆಟ್ಟಿ ತಾತ್ಕಾಲಿಕ ನೆಲೆಯಲ್ಲಿಯೇ ಅಲ್ಪಾವಧಿಯ ಸೇವೆಗಾಗಿಯೇ ಉಡುಪಿಗೆ ಆಗಮಿಸಿದ್ದಾರೆ ಮತ್ತು ಪೂರ್ವ ನಿಯೋಜಿತ ಒಪ್ಪಂದದಂತೆ ಉಡುಪಿಯಿಂದ ವರ್ಗವಾಗಿದ್ದಾರೆ. ವಾರಾಹಿ ನೀರಾವರಿ ಕಾಮಗಾರಿಗೆ ಸಂಬಂಧಪಟ್ಟಂತೆ ನಿರ್ಧಿಷ್ಟ ಮೂರು ಕಡತಗಳಿಗೆ ಹಿಮದಿನ ಜಿಲ್ಲಾಧಿಕಾರಿಗಳಾಗಿದ್ದ ಮುದ್ದು ಮೋಹನ್ ಸಹಿ ಮಾಡಲು ಒಪ್ಪದ ಕಾರಣ, ಆ ನಿರ್ಧಿಷ್ಟ ಕಡತಗಳಿಗೆ ಸಹಿ ಮಾಡುವ ಉದ್ಧೇಶಕ್ಕಾಗಿಯೇ ಎಸ್.ಎಸ್.ಪಟ್ಟಣಶೆಟ್ಟಿ ಅವರನ್ನು ಉಡುಪಿಗೆ ಕರೆಸಲಾಗಿದೆ.

ಇದೀಗ, ಕೆಲಸವಾದ ಕಾರಣ ಪೂರ್ವ ನಿರ್ಧರಿತ ಯೋಜನೆಯಂತೆ ಉಡುಪಿಯಿಂದ ವರ್ಗಾಯಿಸಲಾಗಿದೆ ಎನ್ನಲಾಗುತ್ತಿದೆ. ಉಡುಪಿ ಜಿಲ್ಲಾಧಿಕಾರಿಗಳಾಗಿ ಇಂದು (03.11.2014) ತಮ್ಮ ಕೊನೆಯ ದಿನದ ಕರ್ತವ್ಯ ನಿರ್ವಹಣೆ ಮಾಡಿದ ಪಟ್ಟಣಶೆಟ್ಟಿಯವರು, ನವೆಂಬರ್ 5ರಂದು ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಲಿರುವ ಆರ್. ವಿಶಾಲ್ ಅವರಿಗೆ ಅಧಿಕಾರ ವರ್ಗಾಯಿಸಿ ನಿರ್ಗಮಿಸಲಿದ್ದಾರೆ.

ಭ್ರಷ್ಟ ಗುತ್ತಿಗೆದಾರರ ಬೇಕು ಬೇಡಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಇದ್ದಲ್ಲಿ, ಕಾನೂನು ಪ್ರಕಾರ ಮತ್ತು ಸ್ವತಂತ್ರ ಕರ್ತವ್ಯ ನಿರ್ವಹಣೆ ಪ್ರದರ್ಶಿಸಿದ್ದೇ ಆದಲ್ಲಿ ಆರ್.ವಿಶಾಲ್ ಅವರು ಸಹ ಉಡುಪಿ ಜಿಲ್ಲಾಧಿಕಾರಿಯಾಗಿ ಹೆಚ್ಚು ಕಾಲ ಉಳಿಯುವುದು ಕಷ್ಟ ಸಾಧ್ಯ ಎಂದು ಈಗಾಗಲೇ ನಾಗರಿಕರು ಅಲ್ಲಲ್ಲಿ ಮಾತನಾಡತೊಡಗಿದ್ದಾರೆ.

ಜಿಲ್ಲಾಧಿಕಾರಿಗಳನ್ನು ಆರು ತಿಂಗಳಿಗೊಮ್ಮೆ, ಎರಡು ತಇಂಗಳಿಗೊಮ್ಮೆ ವರ್ಗಾಯಿಸುತ್ತಿರುವ ರಾಜ್ಯ ಸರಕಾರ, ಕಳೆದ ಮೂರು ವರ್ಷಕ್ಕೂ ಅಧಿಕ ಕಾಲದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ತಳವೂರಿರುವ ಕುಮಾರ್ ಅವರನ್ನು ಯಾಕಾಗಿ ವರ್ಗಾವಣೆ ನೀತಿಯಂತೆ ವರ್ಗಾವಣೆ ಮಾಡದೆ ಇಲ್ಲಿಯೇ ಉಳಿಸಿಕೊಂಡಿದೆ ಎಂಬ ಪ್ರಶ್ನೆಯೂ ವ್ಯಕ್ತವಾಗಿದೆ.

ಚುನಾವಣೆಯ ಮೊದಲು, ಪಾರದರ್ಶಕ ಆಡಳಿತ ನೀಡುವುದಾಗಿ ಮತದಾರರಿಗೆ ಭರವಸೆ ನೀಡಿದ ಕಾಂಗ್ರೆಸ್ ಪಕ್ಷ, ಚುನಾವನೆಯಲ್ಲಿ ಬಹುಮತ ಸಾಧಿಸಿ ಅಧಿಕಾರಕ್ಕೆ ಬಂದಿದೆ. ಇದೀಗ ಆರು ತಿಂಗಳಿಗೊಬ್ಬರು, ಎರಡು ತಿಂಗಳಿಗೊಬ್ಬರು ಜಿಲ್ಲಾಧಿಕಾರಿಗಳನ್ನು ಬದಲಾಯಿಸುತ್ತಿದೆ. ಯಾವುದೇ ನೀತಿ ನಿಯಮಗಳಿಲ್ಲದೆ, ವರ್ಗಾವಣೆ ನೀತಿಯನ್ನು ಸಾರಾ ಸಗಟು ಉಲ್ಲಂಘಿಸಿ, ತಮಗೆ ಬೇಕಾದಾಗ, ಬೇಕಾದಂತೆ ಹೀಗೆ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವುದು, ವರ್ಗಾವಣೆಯ ಕಾರಣವನ್ನು ಸರಕರದ ಪಾರದರ್ಶಕ ನೀತಿಯಂತೆ ಬಹಿರಂಗಪಡಿಸದೆ ನಿಗೂಢವಾಗಿಸುವುದು ಇತ್ಯಾದಿಗಳೆಲ್ಲವೂ ರಾಜ್ಯ ಸರಕಾರದ ಮೇಲೆ ನಾಗರಿಕ ಸಮೂಹಕ್ಕೆ ಅಸಹನೆ ಮೂಡುವಂತೆ ಮಾಡಲು ಕಾರಣವಾಗಿದೆ.
[tgas: ias, karnataka ias, dr.muddu mohan ias, s.s.pattanashetty ias, r.vishal ias, udupi, udupi niews, udupi district news, varahi, udupibits]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s