ಮಣಿಪಾಲಕ್ಕೆ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸ: ತಮಿಳರ ಮೇಲೆ ತೀವ್ರ ನಿಗಾ

Posted: ನವೆಂಬರ್ 3, 2014 in Uncategorized

ಉಡುಪಿ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಶ್ರೀಲಂಕಾ ದೇಶದ ಅಧ್ಯಕ್ಷ ಮಹಿಂದ ರಾಜಪಕ್ಸ ಅವರು ಶೀಘ್ರವೇ ಮಣಿಪಾಲಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೇಂದ್ರ ಸರಕಾರದ ಮೂಲಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಜಿಲ್ಲಾಡಳಿತ ಮಣಿಪಾಲ ಸುತ್ತಮುತ್ತ ಕಟ್ಟೆಚ್ಚರ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಶ್ರೀಲಂಕಾದಲ್ಲಿ ಸಕ್ರಿಯವಾಗಿದ್ದ ತಮಿಳು ಹುಲಿಗಳ ಉಗ್ರ ಸಂಘಟನೆಯಾದ ಎಲ್.ಟಿ.ಟಿ.ಇ.ಯನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾದ ಮತ್ತು ಈ ಪ್ರಕ್ರಿಯೆಯಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ತಮಿಳು ಸೈನಿಕರನ್ನು ಮುಗಿಸಿದ ಕಾರಣಕ್ಕೆ ಜಗತ್ತಿನಾದ್ಯಂತವಿರುವ ತಮಿಳರ ತೀವ್ರ ಆಕ್ರೋಶಕ್ಕೂ ಮಹಿಂದ ರಾಜಪಕ್ಸ ಗುರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ, ಮಣಿಪಾಲ ಪರಿಸರ ಪ್ರದೇಶದಲ್ಲಿ ಪೊಲೀಸರು ತಮಿಳರ ಮೇಲೆ ತೀವ್ರ ನಿಗಾ ಮತ್ತು ತಮಿಳರ ತಪಾಸಣೆ ಆರಂಭಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s