ನಂದಿತಾ ಸಾವಿನಲ್ಲಿ ಗೊಂದಲ: ಕೂಲಂಕಷ ತನಿಖೆಗೆ ಆಗ್ರಹಿಸಿ CFI ಪ್ರತಿಭಟನೆ

Posted: ನವೆಂಬರ್ 4, 2014 in Uncategorized
ಟ್ಯಾಗ್ ಗಳು:, , , , , , , , , ,

http://www.udupibits.in news
ಉಡುಪಿ: ತೀರ್ಥಹಳ್ಳಿಯ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿ ನಂದಿತಾಳ ನಿಗೂಢ ಸಾವಿನ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಪ್ ಇಮಡಿಯಾದ ವಿದ್ಯಾರ್ಥಿಗಳು ನಿನ್ನೆ (03.11.2014) ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದ ಗಡಿಯಾರ ಗೋಪುರದ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.

ನಂದಿತಾಳ ಸಾವಿನ ಬಗ್ಗೆ ಎರಡು ಬೇರೆ ಬೇರೆ ಮಾಹಿತಿಗಳಿದ್ದು, ಇದರಿಂದಾಗಿ ಪ್ರಕರಣದ ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಈ ಗೊಮದಲವನ್ನು ಮುಂದಿಟ್ಟುಕೊಂಡು ಕೆಲವರು ತೀರ್ಥಹಳ್ಳಿಯಲ್ಲಿ ಅಶಾಂತಿಯನ್ನು ಸೃಷ್ಟಿಸುವ ಪ್ರಯತ್ನವನ್ನೂ ನಡೆಸಿದ್ದಾರೆ. ಆದುದರಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿದ್ಯಾರ್ಥಿ ಮುಖಮಡರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಶಾಲೆಗೆ ಹೋಗುವ ಸಮಯದಲ್ಲಿ ನಂದಿತಾ ಬೇರೆ ಕೋಮಿನ ಯುವಕನ ಜೊತೆಗೆ ಮಾತನಾಡಿದ್ದಾಳೆ, ಇದನ್ನು ನೋಡಿದ ಸ್ಥಳೀಯರು ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ಮನೆಯವರ ಬೈಯ್ಗುಳಕ್ಕೆ ಅಂಜಿ ನಂದಿತಾ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಅಭಿಪ್ರಾಯ ಒಂದೆಡೆ ಇದೆ. ಇನ್ನೊಂದೆಡೆ, ನಾಲ್ವರು ಯುವಕರು ಮತ್ತು ಬರಿಸುವ ಔಷಧಿ ನೀಡಿ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಸ್ಥಳೀಯರು ನೋಡಿದಾಗ ನೋಡಿ ಹೋಗಿದ್ದಾರೆ. ಬಳಿಕ ನಂದಿತಾಳನ್ನು ಸ್ಥಳೀಯರು ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಪ್ರಕರಣ ನಡೆದಿದೆ ಎನ್ನಲಾದ ದಿನದಿಂದ ಎರಡು ದಿನಗಳವರೆಗೆ ಮೌನವಾಗಿದ್ದ ಮನೆಯವರು ಬಳಿಕ ನಾಲ್ವರು ಯುವಕರ ವಿರುದ್ಧ ಅತ್ಯಾಚಾರ ಯತ್ನ, ಕೊಲೆ ದೂರು ನೀಡಿದ್ದಾರೆ.

ಇಂಥ ಗೊಂದಲಗಳನ್ನು ನಿವಾರಿಸಿ ಸತ್ಯಾಸತ್ಯತೆಯನ್ನು ಬಯಲುಪಡಿಸುವ ನಿಟ್ಟಿನಲ್ಲಿ ಪ್ರಕರಣದ ಕೂಲಂಕಷ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಆಗ್ರಹಿಸಿರುವ ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾ, ಈ ಪ್ರಕರಣವನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಸೊತ್ತುಗಳಿಗೆ ಹಾನಿ ಎಸಗಿ, ಅಶಾಂತಿ ಸೃಷ್ಟಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಿ.ಎಫ್.ಐ ನಾಯಕರುಗಳಾದ ಫರ್ಹಾನ ಹೊನ್ನಾಳ, ಸಹೀಲ್ ಗಂಗೊಳ್ಳಿ, ಅಬೂಬಕರ್ ಸಿದ್ದಿಕ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s