ಅರ್ಹತೆ ಇಲ್ಲದೆಯೇ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿಯಾಗಿದ್ದ ಡಾ.ಅಶೋಕ್ ಕೊನೆಗೂ ತರಬೇತಿಗೆ ಶರಣು !

Posted: November 4, 2014 in Uncategorized

ಉಡುಪಿ: ಉಡುಪಿ ಜಿಲ್ಲಾ ಮಲೇರಿಯಾ ಮತ್ತು ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿ (DAPCAU) ಡಾ.ಕೆ.ಅಶೋಕ್ ಅವರು ಡಿಪ್ಲೋಮಾ ಇನ್ ಪಬ್ಲಿಕ್ ಹೆಲ್ತ್ (DPH) ವಿಷಯದಲ್ಲಿ ತರಬೇತಿ ಪಡೆಯಲು ಬೆಂಗಳೂರಿಗೆ ತೆರಳಲು ನಿರ್ಧಿರಿಸಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನದಿಂದ ನಿರ್ಗಮಿಸಿದ್ದು, ಅವರ ಸ್ಥಾನಕ್ಕೆ ಕುಂದಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ರಾಮ್ ರಾವ್ ನಿಯುಕ್ತಿಗೊಂಡಿದ್ದಾರೆ.

ಕೇವಲ ಎಂ.ಬಿ.ಬಿ.ಎಸ್. ಪದವೀಧರರಾದ ಡಾ.ಅಶೋಕ್ ಅವರು ಗ್ರಾಮೀಣ ಸೇವೆಯನ್ನೂ ಸರಿಯಾಗಿ ಸಲ್ಲಿಸದೆ, ಅರ್ಹತೆ ಇಲ್ಲದಿದ್ದರೂ ಖಾಸಗಿ ಗುತ್ತಿಗೆದಾರರು ಹಾಗೂ ರಾಜಕಾರಣಿಗಳ ಪ್ರಭಾವ ಬಳಸಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿಯಾಗಿಯ ಸ್ಥಾನವನ್ನು ಅಲಂಕರಿಸಿದ್ದರು ಎನ್ನಲಾಗಿದೆ.

ಇನ್ನು ಕೆಲವು ಕಾಲ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಅಧಿಕಾರಿಯಾಗಿ ಡಾ.ಅಶೊಕ್ ಅವರು ಮುಮದುವರಿಯುತ್ತಿದ್ದರೆ, ಸರಕಾರವೇ ಅವರನ್ನು ಹಿಂಭಡ್ತಿಗೊಳಿಸುವ ಸಾಧ್ಯತೆ ಇತ್ತೆನ್ನಲಾಗಿದೆ. ಇದನ್ನು ಮೊದಲೇ ತಿಳಿದುಕೊಂಡ ಅಶೋಕ್ ಅವರು ತಾವಾಗಿಯೇ ಜಿಲ್ಲಾ ಮಟ್ಟದ ಅಧಿಕಾರಿ ಹುದ್ದೆಯನ್ನು ತೊರೆದು, ಜಿಲ್ಲಾ ಮಟ್ಟದ ಅಧಿಕಾರಿಯಾಗಲು ಬೇಕಾದ ಅರ್ಹತೆ ಗಳಿಸಿಕೊಳ್ಳಲು ಇದೀಗ ತರಬೇತಿಗೆ ಹೋಗಿದ್ದಾರೆ ಎಂಬ ವಿಷಯ ಬಯಲಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s