ವಿಚಿತ್ರ ರೋಗದಿಂದ ಬಳಲುತ್ತಿರುವ ಹೆಣ್ಮಕ್ಕಳು: ಪುನರ್ವಸತಿಗೆ ಒತ್ತಾಯ

Posted: ನವೆಂಬರ್ 8, 2014 in Uncategorized

ಕಾರ್ಕಳ: ವೈದ್ಯ ಲೋಕಕ್ಕೆ ಸವಾಲಾಗಿ ಮನೆಯಲ್ಲೇ ನರಳಾಟ ನಡೆಸುತ್ತಿರುವ ಬಡ ಕುಟುಂಬದ ಮೂವರು ಹೆಣ್ಣು ಮಕ್ಕಳು ವಿಚಿತ್ರ ಕಾಯಿಲೆಗೆ ತುತ್ತಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಚಿಂತಾಜನಕ ಕಥೆಯಿದು.

ಕಾರ್ಕಳ ತಾಲೂಕಿನ ಈದು ಗ್ರಾ.ಪಂ. ವ್ಯಾಪ್ತಿಯ ನೂರಳ್ಬೆಟ್ಟುವಿನ ಕನ್ಯಾಲು ಎಂಬಲ್ಲಿನ ಕುದುರೆಮುಖ ವನ್ಯಜೀವಿ ಸಂರಕ್ಷಣಾ ಅಭಯಾರಣ್ಯದ ಸೀಮೆಗೆ ತಾಗಿರುವ ದಿ.ಕೊರಗ ಮಲೆಕುಡಿಯರ ಪತ್ನಿ ಶ್ರೀಮತಿ ಚೆನ್ನಮ್ಮ (57), ಇವರ ಮಕ್ಕಳಾದ ಕು.ವನಜಾ (33), ಕು.ಸುರೇಖಾ (21) ಹಾಗೂ ಕು.ಸುಗುಣಾ (20) ಎಂಬವರೇ ವಿಚಿತ್ರ ಕಾಯಿಲೆಯಿಂದ ನರಳುತ್ತಿರುವ ನತದೃಷ್ಠೆಯರು.

ಕಳೆದ ಆರು ವರ್ಷದ ಹಿಂದೆ ಒಬ್ಬರ ನಂತರ ಒಬ್ಬರಿಗೆ ಹಠಾತ್ತನೆ ಈ ರೋಗ ತಗುಲಿದ್ದು, ರೋಗದ ಹುಟ್ಟು ಪತ್ತೆಯಾಗದೆ ವೈದ್ಯಲೋಕಕ್ಕೆ ಸವಾಲಾಗಿತ್ತು. ಚೆನ್ನಮ್ಮರ ಗಂಡ 45ನೇ ವಷಕ್ಕೆ ಇದೇ ರೋಗಕ್ಕೆ ತುತ್ತಾಗಿ ಚಿಕಿತ್ಸೆಗೆ ಸ್ಪಂಧಿಸದೆ 50ನೇ ವರ್ಷದಲ್ಲಿ ಸಾವನ್ನಪ್ಪಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಗುಣಮುಖವಾಗುವ ಲಕ್ಷಣ ಕಾಣಲಿಲ್ಲ. ಬುದ್ದಿಮಾಂದ್ಯತೆ, ಅಂಗನೂನ್ಯತೆಯಿಂದ ಬಳಲುತ್ತಿರುವ ಇವರು ಮಲಗಿದಲ್ಲಿಯೇ ತಲೆಯನ್ನು ಗೋಡೆಗೆ ಹೊಡೆದು ಒರಳಾಟ ನಡೆಸುತ್ತಿರುವ ದೃಶ್ಯವು ಮನಕಲಕುವಂತದ್ದು.

ಇರುವ ಒಬ್ಬ ಮಗನಿಂದ ಕುಟುಂಬ ನಿರ್ವಹಣೆ ನಡೆಯುತ್ತಿದ್ದು, ತಾಯಿ, ರೋಗಿಗಳ ಸೇವೆಯಲ್ಲೇ ನಿರತರಾಗಿದ್ದಾರೆ. ಕುಗ್ರಾಮವಾದ ಈ ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳು
ಮರೀಚಿಕೆಯಾಗಿದೆ. ಯಾವುದೇ ಮನೆ ಸಾಮಾಗ್ರಿಗಳನ್ನು ತರಬೇಕಾದರೆ 12 ಕಿ.ಮೀ. ದೂರದ ಹೊಸ್ಮಾರಿಗೆ ಹೋಗಬೇಕು. ಮನೆಯಿಂದ 4 ಕಿ.ಮೀ. ದೂರದವರೆಗೆ ಯಾವುದೇ ವಾಹನ ಸಂಚಾರವಿಲ್ಲ. ಕಾರಣ ತೀರಾ ಕಾಡು ಪ್ರದೇಶ ಮತ್ತು ಅರಣ್ಯ ಸಂರಕ್ಷಿತ ಪ್ರದೇಶವಾದ್ದರಿಂದ ಮಾರ್ಗದ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಅನಾರೋಗ್ಯ ಭಾದಿತರ ಬದುಕು
ಕರುಣಾಜನಕವಾಗಿದೆ.

ಚಿಕಿತ್ಸೆ ಹಾಗೂ ಪುನರ್ವಸತಿಗೆ ಒತ್ತಾಯ

ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹೊನ್ನಯ್ಯ ಕಾಟಿಪಳ್ಳ ಅವರು ವಿಚಿತ್ರ ರೋಗದಿಂದ ಬಳಲುತ್ತಿರುವ ಕುಟುಂಬಕ್ಕೆ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಉಡುಪಿ ಜಿಲ್ಲಾಧಿಕಾರಿಗಳು, ಕಾರ್ಕಳ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್ ಹಾಗೂ ನ.6ರಂದು ಉಡುಪಿಯ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜರುಗಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s