ಸನ್ಯಾಸಿಯೂ ಅಲ್ಲ, ಮಠಾಧೀಶರೂ ಅಲ್ಲ, ‘ಚಾತುರ್ಮಾಸ’ ಪಾಲಿಸಿದ ಶ್ರೀ ಸಾಮಾನ್ಯ !

Posted: ನವೆಂಬರ್ 9, 2014 in Uncategorized

# http://www.udupibits.in news * ಶ್ರೀರಾಮ ದಿವಾಣ.
ಉಡುಪಿ: ಸನ್ಯಾಸಾಶ್ರಮ ಸ್ವೀಕರಿಸಿ ಮಠಾಧೀಶರಾದವರು ವರ್ಷಕ್ಕೊಂದೊಂದು ಬಾರಿ ಎರಡು ತಿಂಗಳ ಕಾಲ ‘ಚಾತುರ್ಮಾಸ ವೃತ’ ಪಾಲಿಸುವುದು ಹೊಸ ವಿಷಯವವೂ ಅಲ್ಲ, ವಿಶೇಷವೂ ಅಲ್ಲ. ಆದರೆ, ಸನ್ಯಾಸಿಯೂ ಅಲ್ಲದ, ಮಠಾಧೀಶರೂ ಅಲ್ಲದ, ವೃತ್ತಿಯಲ್ಲಿ ಚಾಲಕರಾದ ವ್ಯಕ್ತಿಯೊಬ್ಬರು ‘ಚಾತುರ್ಮಾಸ ವೃತ’ಕ್ಕೆ ಅನ್ವರ್ಥವಾಗಿ ಸರಿಯಾಗಿ ನಾಲ್ಕು ತಿಂಗಳ ಕಾಲ ‘ಚಾತುರ್ಮಾಸ ವೃತ’ ಆಚರಿಸುತ್ತಿರುವುದು ಆಶ್ಚರ್ಯವೇ ಸರಿ.

ಆಡಳಿತಾತ್ಮಕವಾಗಿ ಕೇರಳ ರಾಜ್ಯದಲ್ಲಿರುವ ಗಡಿನಾಡು ಮತ್ತು ಕನ್ನಡನಾಡು ಆಗಿರುವ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಸೂರಂಬೈಲಿನ ಬಾಡಿಗೆ ರೂಮಿನಲ್ಲಿ ವಾಸವಾಗಿರುವ ಸತ್ಯ ನಾರಾಯಣ ಅವರು 2014ರ ಚಾತುರ್ಮಾಸವನ್ನು ಪರಿಸಮಾಪ್ತಿಗೊಳಿಸಿ ಸೀಮೋಲ್ಲಂಘನೆ ಪ್ರಕ್ರಿಯೆಯನ್ನೂ ಮುಕ್ತಾಯಗೊಳಿಸಿ ಮತ್ತೆ ಎಂದಿನಂತೆ ತಮ್ಮ ಚಾಲಕ ವೃತ್ತಿಯನ್ನು ಆರಂಭಿಸಿದ್ದಾರೆ.

ಅಧ್ಯಾತ್ಮದಲ್ಲಿ ಆಸಕ್ತರಾಗಿರುವ ಸತ್ಯ ನಾರಾಯಣ ಅವರು, ನಾಲ್ಕು ವರ್ಷಗಳ ಹಿಂದೆಯೇ ‘ಚಾತುರ್ಮಾಸ ವೃತ’ ಆರಂಭಿಸಿದ್ದಾರೆ. ಆದರೆ, ಮೊದಲ ಎರಡು ವರ್ಷಗಳ ಕಾಲ ಕೇವ ಎರಡು ತಿಂಗಳ ಅವಧಿಯ ‘ಚಾತುರ್ಮಾಸ ವೃತ’ ಪಾಲಿಸಿದ ಇವರು, ಭಗವಾನ್ ಶ್ರೀಧರ ಗುರುಗಳಿಗೆ ಸಂಬಂಧಿಸಿದ ಗ್ರಂಥವೊಂದನ್ನು ಓದಿದ ಬಳಿಕ ನಾಲ್ಕು ತಿಂಗಳ ಕಾಲದ ‘ಚಾತುರ್ಮಾಸ ವೃತ’ ಪಾಲಿಸಿಕೊಂಡು ಬರುತ್ತಿದ್ದಾರೆ.

ಈ ವರ್ಷದ ಚಾತುರ್ಮಾಸ ವೃತವನ್ನು ಜುಲೇ 12ರಂದು ಆರಂಭಿಸಿದ ಸತ್ಯ ನಾರಾಯಣ ಅವರು, ನವೆಂಬರ್ 3ರಂದು ಪರಿಸಮಾಪ್ತಿಗೊಳಿಸಿದ್ದಾರೆ. ನವೆಂಬರ್ 4ರಂದು ಸೀಮೋಲ್ಲಂಘನೆ ಮಾಡಿದ್ದಾರೆ. ಉಡುಪಿಯ ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನ, ಶಿರಸಿಯ ಶ್ರೀ ಮಾರಿಕಾಂಬೆ ದೇವಸ್ಥಾನ, ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನ, ಸೋಂದಾದ ಶ್ರೀ ವಾದಿರಾಜ ಮಠ, ತ್ರಿವಿಕ್ರಮ ದೇವಸ್ಥಾನ, ಸ್ವರ್ಣವಲ್ಲಿ ಮಠ, ಉಡುಪಿಯ ಕುಂಜಾರುಗಿರಿ ಶ್ರೀ ದುರ್ಗಾ ದೇವಿ ದೇವಸ್ಥಾನ, ಶ್ರೀ ಪರಶುರಾಮ ದೇವಸ್ಥಾನ, ಉದ್ಯಾವರದ ಶ್ರೀ ವೀರಭದ್ರ, ಮಹಾಕಾಳಿ, ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಪಂಜುರ್ಲಿ ದೈವಸ್ಥಾನಗಳ ದರ್ಶನದೊಂದಿಗೆ ಸೀಮೋಲ್ಲಂಘನೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ್ದಾರೆ.
tags: ಸತ್ಯ ನಾರಾಯಣ, ಎಡನಾಡು, ಕುಂಬಳೆ, ಸೀಮೆ, ಕಾಸರಗೋಡು, ಮಹಾಜನ ವರದಿ, ಕನ್ನಡ, ಕನ್ನಡನಾಡು, ಗಡಿನಾಡು, ಕುಂಬಳೆ ಸೀಮೆ, ಸೀಮೋಲ್ಲಂಘನೆ, ಚಾತುರ್ಮಾಸ, ಸ್ವಾಮೀಜಿ, ಸನ್ಯಾಸಿ, ಸನ್ಯಾಸಾಶ್ರಮ, ಮಠಗಳು, ಮಠಾಧೀಶರು, ಹವ್ಯಕ, ಬ್ರಾಹ್ಮಣರು, ಭಗವಾನ್ ಶ್ರೀಧರ ಗುರುಗಳು, ಉಡುಪಿ, ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನ ಅಂಬಲಪಾಡಿ, ಶಿರಸಿ, ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ, ಶ್ರೀ ಮಧುಕೇಶ್ವರ ದೇವಸ್ಥಾನ ಬನವಾಸಿ, ಬನವಾಸಿ, ಸೋಂದಾ, ಶ್ರೀ ಸೋದೆ ವಾದಿರಾಜ ಮಠ ಸೋಂದಾ, ತ್ರಿವಿಕ್ರಮ ದೇವಸ್ಥಾನ ಸೋಂದಾ, ಸ್ವರ್ಣವಲ್ಲಿ, ಸ್ವರಣವಲ್ಲಿ ಮಠ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ, ಶ್ರೀ ದುರ್ಗಾ ದೇವಿ ದೇವಸ್ಥಾನ ಕುಂಜಾರುಗಿರಿ, ಶ್ರೀ ಶಂಭುಕಲ್ಲು ದೇವಸ್ಥಾನ ಉದ್ಯಾವರ, shambhukallu temple udyavara, durgadevi temple kunjarugiri, parasurama temple kunjarugiri, udupi, mahakali and janardana temple ambalapady udupi, marikamba temple sirsi, madhukeshwara temple banavasi, sode vadiraja matha sonda, swarnavalli mahasamsthanam sonda, sathya narayana, chathurmasa, bhagavan sridhara swamy, udupibits]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s