Posts Tagged ‘ಕಾಂಗ್ರೆಸ್ ಸರಕಾರ’

ಉಡುಪಿ: ಬಿಜೆಪಿ ರೈತ ಮೋರ್ಛಾ ರಾಜ್ಯ ಸಮಿತಿ ಕರೆಯಂತೆ ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಛಾ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಆಗಸ್ಟ್ 4ರಂದು ಬೆಳಗ್ಗೆ ಉಡುಪಿ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿ, ಮೆಸ್ಕಾಂ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು, ಕನಿಷ್ಟ 12 ಗಂಟೆ 3 ಫೆಸ್ ವಿದ್ಯುತ್ ಪೂರೈಸಬೇಕು, ಸುಟ್ಟುಹೋದ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣ ಬದಲಾಯಿಸಬೇಕು, ರೈತರ ಪಂಪ್ ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್ ಸೆಟ್ ಗಳನ್ನು ಉಳಿಸಬೇಕು, ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಬೇಕು ಹಾಗೂ ಲೈನ್ ಮ್ಯಾನ್ ಗಳ ಕೊರತೆ ನೀಗಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮತ್ತು ಮೆಸ್ಕಾಂ ಮುಂದಿಡಲಾಯಿತು.

ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸವಾಲು ಹಾಕಿದರು. ರೈತಮೋರ್ಛಾ ಉಡುಪಿ ಗ್ರಾಮಾಂತರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಒಂದು ತಿಂಗಳಲ್ಲಿ 28 ದಿನ ಸದನದಲ್ಲಿ ನಿದ್ದೆ ಮಾಡಿದ ಸಿದ್ಧರಾಮಯ್ಯರಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ, ಉತ್ತಮ ಆಡಳಿತ ನೀಡುತ್ತಾರೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ, ರಾಜ್ಯದಲ್ಲಿರುವುದು ರೈತ ವಿರೋಧಿ ಸರಕಾರವೆಂದು ಆರೋಪಿಸಿದರು.

ರೈತಮೋರ್ಛಾ ಜಿಲ್ಲಾಧ್ಯಕ್ಷ ದೇವದಾಸ ಹೆಬ್ಬಾರ್, ಪ್ರ.ಕಾರ್ಯದರ್ಶಿ ರಾಘವೇಂದ್ರ ಉಪ್ಪೂರು, ಪಕ್ಷದ ಮುಖಂಡರಾದ ಶ್ಯಾಮಲಾ ಕುಂದರ್, ವಿಲಾಸ್ ನಾಯಕ್, ಜಯಂತಿ ವಾಸುದೇವ, ಶ್ಯಾಮಪ್ರಸಾದ ಕುಡ್ವ, ಸುಭಾಶಿತ್ ಶೆಟ್ಟಿಗಾರ್, ಸುರೇಶ್ ನಾಯಕ್ ಕೊಯಿಲಾಡಿ, ಶೈಲೇಂದ್ರ, ಸಂಧ್ಯಾ ರಮೇಶ್, ಅಶೋಕ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ವೀಣಾ ಶೆಟ್ಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಪಡುಬಿದ್ರಿ ಗ್ರಾಮದಲ್ಲಿ ಸ್ಥಾಪನೆಗೊಂಡ ಸುಜ್ಲಾನ್ ಕಂಪೆನಿಗಾಗಿ ಭೂಮಿ ಕಳೆದುಕೊಂಡು ನಿರ್ವಸಿತರಾದ ಮೂಲನಿವಾಸಿ ಕಡುಬಡ ಕೊರಗ ಕುಟುಂಬಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಡಿವೈಎಫ್ಐ ಮತ್ತು ಕರ್ನಾಟಕ ಜನಪರ ವೇದಿಕೆ ಇವುಗಳ ಜಂಟೀ ಆಶ್ರಯದಲ್ಲಿ ಜುಲೈ 22ರಂದು ಪಡುಬಿದ್ರಿಯಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೇಡಿ ಆರ್ಆರ್ ಕಾಲನಿಯಿಂದ ಹೊರಟ ಜಾಥಾ, ಪಡುಬಿದ್ರಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಜಾಥಾದುದ್ದಕ್ಕೂ ಜಾಥಾದಲ್ಲಿ ಪಾಲ್ಗೊಂಡವರು ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸುಜ್ಲಾನ್ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದ ಬಳಿಕ ಗ್ರಾ.ಪಂ.ಕಚೇರಿ ಎದುರು ಸಭೆ ನಡೆಸಲಾಯಿತು. ದಲಿತ ಚಿಂತಕರಾದ ಲೋಲಾಕ್ಷ, ದಸಂಸ ವಿಭಾಗೀಯ ಸಂಚಾಲಕರಾದ ಶೇಖರ ಹೆಜಮಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾದ ಶ್ರೀರಾಮ ದಿವಾಣ, ದಲಿತ ಪರ ಹೋರಾಟಗಾರರಾದ ಲಿಂಗಪ್ಪ ನಂತೂರು ಮೊದಲಾದವರು ನಿರ್ವಸಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಗಳ ಪರವಾಗಿ ಎಂಎಸ್ಡಬ್ಲೂ ಪದವೀಧರೆ ಶ್ರೀಮತಿ ಮಾತನಾಡಿದರು.

ಭಾರತ ಅಭ್ಯುದಯ ಪ್ರತಿಷ್ಠಾನದ ಅಧ್ಯಕ್ಷರಾದ ಉಮಾನಾಥ ಪಡುಬಿದ್ರಿ, ದಸಂಸ ಮುಖಂಡರಾದ ಹರೀಶ್ ಕಂಚಿನಡ್ಕ, ಕೇಶವ ಸಿ.ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ವರಪ್ರಸಾದ್ ಬಜಾಲ್, ವಿಠಲ ಮಲೆಕುಡಿಯ, ಜನಪರ ವೇದಿಕೆ ಮುಖಂಡರಾದ ಮೊಹಮ್ಮದ್ ಹಂದಟ್ಟು, ಹೇಮಂತ್ ಕುಂದರ್, ಶೇಖರ ಶೆಟ್ಟಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಸನಿಲ್ ಹಾಗೂ ಪಿಡಿಓ ಮಮತಾ ಶೆಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸುಜ್ಲಾನ್ ಕಂಪೆನಿಯು ಇದುವರೆಗೆ ನಡೆಸಿದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು, ಸುಜ್ಲಾನ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ಹಂಚಬೇಕು, ಪಡುಬಿದ್ರಿ ಗ್ರಾಮದ ಸರ್ವೆ ನಂಬ್ರ 69/1 ರಲ್ಲಿರುವ ಭೂಮಿ ಪ್ರಸ್ತುತ ಕೆಐಡಿಬಿ ಸ್ವಾಧೀನದಲ್ಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಸುಜ್ಲಾನ್ ಗೆ ನೀಡಬಾರದು, ಬದಲಾಗಿ ಇದನ್ನೂ ಸಹ ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ವಿತರಿಸಬೇಕು, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಿರ್ವಸಿತ ಕೊರಗ ಕುಟುಂಬದಲ್ಲಿ ಮೂವರು ಪದವೀಧರ ವಿದ್ಯಾರ್ಥಿನಿಯರಿದ್ದು, ಇವರಿಗೆ ಸೂಕ್ತ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ.

ಉಡುಪಿ: ನಗರದ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಆಯುರ್ವೇದ ವಿಭಾಗದಲ್ಲಿ ಜೂನ್ 9ರಂದು ಬೆಳಗ್ಗೆ ವೈದ್ಯರಿಲ್ಲದೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದವರು ಬಳಿಕ ಬೇರೆ ದಾರಿ ಇಲ್ಲದೆ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾದ ವಿದ್ಯಾಮಾನ ನಡೆದಿದೆ.

ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದ ವಿಭಾಗವಿದ್ದು, ಇಲ್ಲಿ ಇಬ್ಬರು ವೈದ್ಯರು ಹಾಗೂ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಎಂದಿನಂತೆ ಸೋಮವಾರ ಬೆಳಗ್ಗೆ ಕೂಡಾ ಈ ವಿಭಾಗಕ್ಕೆ ಚಿಕಿತ್ಸೆಗಾಗಿ ಮತ್ತು ಔಷಧಕ್ಕಾಗಿ ಅಸೌಖ್ಯ ಬಾಧಿತರು ಆಗಮಿಸಿದ್ದರು. ವೈದ್ಯರನ್ನು ಭೇಟಿಯಾಗಲು ವೈದ್ಯರನ್ನು ಭೇಟಿಯಾಗುವ ಮೊದಲು ಮಾಡಿಸಬೇಕಾದ ಚೀಟಿಯನ್ನು ಸಹ ಹಣ ನೀಡಿ ಪಡೆದುಕೊಂಡಿದ್ದರು.

ಔಷಧಕ್ಕಾಗಿ ಆಸ್ಪತ್ರೆಗೆ ಬಮದ ಚೀಟಿಯನ್ನೂ ಮಾಡಿಸಿಕೊಂಡ ರೋಗಿಗಳು ಮಾತ್ರ ಸೋಮವಾರ ತೀವ್ರ ನಿರಾಸೆ ಅನುಭವಿಸಿದರು. ಇರಬೇಕಾದ ಇಬ್ಬರು ವೈದ್ಯರೂ ಸೋಮವಾರ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗಲೇ ಇಲ್ಲ. ಬೆಳಗ್ಗೆ ಗಂಟೆ 10ರಿಂದ 12.15ರ ವರೆಗೆ ವೈದ್ಯರು ಬರಬಹುದು ಎಂದು ಆಸ್ಪತ್ರೆಯಲ್ಲಿ ಕಾದುಕುಳಿತ ರೋಗಿಗಳು ನಂತರ ಸುಸ್ತಾಗಿ ವೈದ್ಯರಿಗೆ, ಸಿಬ್ಬಂದಿಗಳಿಗೆ ಹಾಗೂ ಸರಕಾರಕ್ಕೆ ಹಿಡಿಶಾಪ ಹಾಕುತ್ತಾ ಆಸ್ಪತ್ರೆಯಿಂದ
ನಿರ್ಗಮಿಸಿದರು.

ಆಸ್ಪತ್ರೆಯಿಂದ ನಿರ್ಗಮಿಸುವ ಸಮಯದಲ್ಲಿ ಸಿಬ್ಬಂದಿಗಳು ರೋಗಿಗಳಲ್ಲಿ ಸಂಜೆ ಗಂಟೆ 3.30ಕ್ಕೆ ಮತ್ತೆ ಬರುವಂತೆ ಸೂಚಿಸಿದರೆನ್ನಲಾಗಿದೆ. ಇಲ್ಲಿನ ವೈದ್ಯರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ತಮ್ಮದೇ ಸಮಯಕ್ಕೆ ಆಸ್ಪತ್ರೆಗೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವುದು, ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಯಾರಾದರೂ ಬಂದದ್ದಿದ್ದಲ್ಲಿ ಆಗ ಮಾತ್ರ ಅವರನ್ನು ಪರೀಕ್ಷಿಸಿ ಮತ್ತೆ ಹೊರಗಡೆಗೆ ಹೋಗುವುದು, ಒಂದಿಡೀ ದಿನ ಆಸ್ಪತ್ರೆಗೆ ಬಾರದೇ ಮರುದಿನ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವುದು ಇತ್ಯಾದಿ ನಡೆಯುತ್ತಿದೆ. ಇದಾವುದನ್ನೂ ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ನೊಂದವರು ದೂರಿದ್ದಾರೆ.

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾ ಸರ್ಜನ್ ಡಾ.ಆನಂದ ನಾಯಕ್ ಅವರಲ್ಲಿ ಈ ಹಿಂದೆ ಅನೇಕರು ದೂರು ನೀಡಿದಂತೆಯೇ ಸೋಮವಾರವೂ ದೂರು ನೀಡಿದ್ದಾರೆ. ಆದರೆ ಡಾ.ನಾಯಕ್ರವರು ಬಡ ರೋಗಿಗಳ ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ದೂರುಗಳನ್ನು
ಕಡೆಗಣಿಸುವುದರಿಂದಾಗಿ ವೈದ್ಯರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದಿಲ್ಲ ಎನ್ನಲಾಗಿದೆ.

ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೋರ್ವಳಿಗೆ ಡಾ.ಭಾಸ್ಕರ ಪಾಲನ್ ಎಂಬವರು ಚಿಕಿತ್ಸೆ ನಿರಾಕರಿಸಿದ ಘಟನೆಯೂ ನಡೆದಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿತ್ತು. ಪ್ರಧಾನ ಕಾರ್ಯದರ್ಶಿಗಳು ಪ್ರಕರಣದ ತನಿಖೆ ನಡೆಸುವಂತೆ ಇಲಾಖಾ ಆಯುಕ್ತರಿಗೆ ಆದೇಶ
ನೀಡಿದ್ದಾರಾದರೂ, ಆಯುಕ್ತರು ದೂರಿನ ಮೇಲೆ ತನಿಖೆಯನ್ನೇ ನಡೆಸದೆ ಮುಚ್ಚಿ
ಹಾಕಿದ್ದಾರೆನ್ನಲಾಗಿದೆ. ಇಂಥ ಹಲವಾರು ಪ್ರಕರಣಗಳು ಇಲ್ಲಿ ನಿರಂತರವಾಗಿ
ನಡೆಯುತ್ತಿದೆಯಾದರೂ, ಸಂತ್ರಸ್ತರಿಗೆ ಮಾತ್ರ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾತ್ರ ಯಾರೊಬ್ಬರೂ ಮಾಡುತ್ತಿಲ್ಲವೆಂದು ಆರೋಪಿಸಲಾಗಿದೆ.

ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸರಕೆ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಯಾರೊಬ್ಬರೂ ಸರಕಾರಿ ಆಸ್ಪತ್ರೆಯನ್ನು ಬಡ ರೋಗಿಗಳ ಪರವಾಗಿ ಸುಧಾರಣೆ ಮಾಡುವ ಕಡೆಗೆ ಕಾಳಜಿಯಿಂದ ಗಮನ ಕೊಡದೆ ಕಾರಣ, ಸರಕಾರಿ
ಆಸ್ಪತ್ರೆಗಳೆಂದರೆ ಬಡವರಿಗೆ ಇಂದು ನರಕಮಯವಾಗಿ ಪರಿಣಮಿಸಿದೆ.

ಉಡುಪಿ: ನಗರದ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಆಯುರ್ವೇದ ವಿಭಾಗದಲ್ಲಿ ಜೂನ್ 9ರಂದು ಬೆಳಗ್ಗೆ ವೈದ್ಯರಿಲ್ಲದೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದವರು ಬಳಿಕ ಬೇರೆ ದಾರಿ ಇಲ್ಲದೆ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾದ ವಿದ್ಯಾಮಾನ ನಡೆದಿದೆ.

ಜಿಲ್ಲಾಸ್ಪತ್ರೆಯಲ್ಲಿ ಆಯುರ್ವೇದ ವಿಭಾಗವಿದ್ದು, ಇಲ್ಲಿ ಇಬ್ಬರು ವೈದ್ಯರು ಹಾಗೂ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಎಂದಿನಂತೆ ಸೋಮವಾರ ಬೆಳಗ್ಗೆ ಕೂಡಾ ಈ ವಿಭಾಗಕ್ಕೆ ಚಿಕಿತ್ಸೆಗಾಗಿ ಮತ್ತು ಔಷಧಕ್ಕಾಗಿ ಅಸೌಖ್ಯ ಬಾಧಿತರು ಆಗಮಿಸಿದ್ದರು. ವೈದ್ಯರನ್ನು ಭೇಟಿಯಾಗಲು ವೈದ್ಯರನ್ನು ಭೇಟಿಯಾಗುವ ಮೊದಲು ಮಾಡಿಸಬೇಕಾದ ಚೀಟಿಯನ್ನು ಸಹ ಹಣ ನೀಡಿ ಪಡೆದುಕೊಂಡಿದ್ದರು.

ಔಷಧಕ್ಕಾಗಿ ಆಸ್ಪತ್ರೆಗೆ ಬಮದ ಚೀಟಿಯನ್ನೂ ಮಾಡಿಸಿಕೊಂಡ ರೋಗಿಗಳು ಮಾತ್ರ ಸೋಮವಾರ ತೀವ್ರ ನಿರಾಸೆ ಅನುಭವಿಸಿದರು. ಇರಬೇಕಾದ ಇಬ್ಬರು ವೈದ್ಯರೂ ಸೋಮವಾರ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗಲೇ ಇಲ್ಲ. ಬೆಳಗ್ಗೆ ಗಂಟೆ 10ರಿಂದ 12.15ರ ವರೆಗೆ ವೈದ್ಯರು ಬರಬಹುದು ಎಂದು ಆಸ್ಪತ್ರೆಯಲ್ಲಿ ಕಾದುಕುಳಿತ ರೋಗಿಗಳು ನಂತರ ಸುಸ್ತಾಗಿ ವೈದ್ಯರಿಗೆ, ಸಿಬ್ಬಂದಿಗಳಿಗೆ ಹಾಗೂ ಸರಕಾರಕ್ಕೆ ಹಿಡಿಶಾಪ ಹಾಕುತ್ತಾ ಆಸ್ಪತ್ರೆಯಿಂದ ನಿರ್ಗಮಿಸಿದರು.

ಆಸ್ಪತ್ರೆಯಿಂದ ನಿರ್ಗಮಿಸುವ ಸಮಯದಲ್ಲಿ ಸಿಬ್ಬಂದಿಗಳು ರೋಗಿಗಳಲ್ಲಿ ಸಂಜೆ ಗಂಟೆ 3.30ಕ್ಕೆ ಮತ್ತೆ ಬರುವಂತೆ ಸೂಚಿಸಿದರೆನ್ನಲಾಗಿದೆ. ಇಲ್ಲಿನ ವೈದ್ಯರು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ತಮ್ಮದೇ ಸಮಯಕ್ಕೆ ಆಸ್ಪತ್ರೆಗೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವುದು, ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಯಾರಾದರೂ ಬಂದದ್ದಿದ್ದಲ್ಲಿ ಆಗ ಮಾತ್ರ ಅವರನ್ನು ಪರೀಕ್ಷಿಸಿ ಮತ್ತೆ ಹೊರಗಡೆಗೆ ಹೋಗುವುದು, ಒಂದಿಡೀ ದಿನ ಆಸ್ಪತ್ರೆಗೆ ಬಾರದೇ ಮರುದಿನ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವುದು ಇತ್ಯಾದಿ ನಡೆಯುತ್ತಿದೆ. ಇದಾವುದನ್ನೂ ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ನೊಂದವರು ದೂರಿದ್ದಾರೆ.

ವೈದ್ಯರ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾ ಸರ್ಜನ್ ಡಾ.ಆನಂದ ನಾಯಕ್ ಅವರಲ್ಲಿ ಈ ಹಿಂದೆ ಅನೇಕರು ದೂರು ನೀಡಿದಂತೆಯೇ ಸೋಮವಾರವೂ ದೂರು ನೀಡಿದ್ದಾರೆ. ಆದರೆ ಡಾ.ನಾಯಕ್ರವರು ಬಡ ರೋಗಿಗಳ ದೂರುಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ದೂರುಗಳನ್ನು ಕಡೆಗಣಿಸುವುದರಿಂದಾಗಿ ವೈದ್ಯರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದಿಲ್ಲ ಎನ್ನಲಾಗಿದೆ.

ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೋರ್ವಳಿಗೆ ಡಾ.ಭಾಸ್ಕರ ಪಾಲನ್ ಎಂಬವರು ಚಿಕಿತ್ಸೆ ನಿರಾಕರಿಸಿದ ಘಟನೆಯೂ ನಡೆದಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲಾಗಿತ್ತು. ಪ್ರಧಾನ ಕಾರ್ಯದರ್ಶಿಗಳು ಪ್ರಕರಣದ ತನಿಖೆ ನಡೆಸುವಂತೆ ಇಲಾಖಾ ಆಯುಕ್ತರಿಗೆ ಆದೇಶ
ನೀಡಿದ್ದಾರಾದರೂ, ಆಯುಕ್ತರು ದೂರಿನ ಮೇಲೆ ತನಿಖೆಯನ್ನೇ ನಡೆಸದೆ ಮುಚ್ಚಿ ಹಾಕಿದ್ದಾರೆನ್ನಲಾಗಿದೆ. ಇಂಥ ಹಲವಾರು ಪ್ರಕರಣಗಳು ಇಲ್ಲಿ ನಿರಂತರವಾಗಿ
ನಡೆಯುತ್ತಿದೆಯಾದರೂ, ಸಂತ್ರಸ್ತರಿಗೆ ಮಾತ್ರ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾತ್ರ ಯಾರೊಬ್ಬರೂ ಮಾಡುತ್ತಿಲ್ಲವೆಂದು ಆರೋಪಿಸಲಾಗಿದೆ.

ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸರಕೆ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಯಾರೊಬ್ಬರೂ ಸರಕಾರಿ ಆಸ್ಪತ್ರೆಯನ್ನು ಬಡ ರೋಗಿಗಳ ಪರವಾಗಿ ಸುಧಾರಣೆ ಮಾಡುವ ಕಡೆಗೆ ಕಾಳಜಿಯಿಂದ ಗಮನ ಕೊಡದೆ ಕಾರಣ, ಸರಕಾರಿ ಆಸ್ಪತ್ರೆಗಳೆಂದರೆ ಬಡವರಿಗೆ ಇಂದು ನರಕಮಯವಾಗಿ ಪರಿಣಮಿಸಿದೆ.

ಉಡುಪಿ: ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರನ್ನು ಜೀವಂತವಾಗಿ ಮುಗಿಸಲು ಪ್ರಭಾವಿಗಳ ತಂಡವೊಂದು ಅತ್ಯಂತ ವ್ಯವಸ್ಥಿತವಾಗಿ ಹುನ್ನಾರ ನಡೆಸುತ್ತಿರುವುದು ಬಹಿರಂಗಕ್ಕೆ ಬಂದಿದೆ. ಉಡುಪಿ ರಕ್ತನಿಧಿಗೆ ರಾಜ್ಯದಲ್ಲಿಯೇ ಅತ್ಯುತ್ತಮವಾದ ಹೆಸರಿದೆ. ರಾಜ್ಯದಲ್ಲೇ ಮಾದರಿ ರಕ್ತನಿಧಿ ಎಂದು ಗುರುತಿಸಲ್ಪಟ್ಟಿರುವ ಉಡುಪಿ ರಕ್ತನಿಧಿ ಈ ರೀತಿ
ಗುರುತಿಸಿಕೊಳ್ಳುವಂತಾಗಲು ಕೇಂದ್ರದ ವೈದ್ಯಾಧಿಕಾರಿ ಡಾ.ಶರತ್ ಅವರೇ ಪ್ರಮುಖ ಕಾರಣ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದಿರುವ ಸತ್ಯವೇ ಆಗಿದೆ.
ಡಾ.ಶರತ್ ಕುಮಾರ್ ರಾವ್ ಅವರ ವಿರುದ್ಧ ಇದುತನಕ ಯಾವುದೇ ದೂರುಗಳಿರಲಿಲ್ಲ. ತನ್ನ ಕರ್ತವ್ಯ ದಕ್ಷತೆಯ ಅವಧಿಯಲ್ಲಿ ಒಂದೇ ಒಂದು ಕಪ್ಪುಚುಕ್ಕೆಯನ್ನೂ ಮೈಗೆ ಅಂಟಿಸಿಕೊಳ್ಳದ ಇವರ ಪ್ರಾಮಾಣಿಕ ಸೇವೆಗೆ ಕಪ್ಪುಚುಕ್ಕೆಯನ್ನು ಅಂಟಿಸಲು ಜಿಲ್ಲೆಯ ಪ್ರಮುಖರ ತಂಡವೊಂದು ಇದೀಗ ತೆರೆಮರೆಯಲ್ಲಿ ಷಡ್ಯಂತ್ರ ನಡೆಸಿದ್ದು, ಅಡ್ಡ ದಾರಿಯಲ್ಲಿ
ಕಾರ್ಯೋನ್ಮುಖವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೆಲವು ಮಂದಿ ಪ್ರಮುಖ ಅಧಿಕಾರಿಗಳು, ಅರೆ ಸರಕಾರಿ ಸಂಸ್ಥೆಯಂತೆ ಕಾರ್ಯವೆಸಗುತ್ತಿರುವ ಎನ್ಜಿಓ, ಇನ್ನೂ ಒಂದಿಬ್ಬರು ಸರಕಾರಿ ಅಧಿಕಾರಿಗಳು ಹಾಗೂ ಉಡುಪಿಯ ಇಡೀ ಜಿಲ್ಲಾಡಳಿತದ ವ್ಯವಸ್ಥೆಯನ್ನೇ ಹಣಕೊಟ್ಟು ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿರುವ ಪ್ರಭಾವೀ ವ್ಯಕ್ತಿ, ಇವರೆಲ್ಲರೂ ಡಾ.ಶರತ್ ವಿರುದ್ಧ ಸಂಚು ರೂಪಿಸಿ ತಮ್ಮ ದಾಳಗಳನ್ನು ಉರುಳಿಸುತ್ತಿದ್ದಾರೆ ಎಂಬ ಮಾಹಿತಿ ಈಗಾಗಲೇ ಬಟಾಬಯಲಾಗಿದೆ.
ಸಮಾಜದಲ್ಲಿ ಗಣ್ಯರೆಂದು ಕರೆಸಿಕೊಳ್ಳುತ್ತಿರುವ ಕೆಲವು ಮಂದಿ ವಾಸ್ತವವಾಗಿ ಗೋಮುಖವ್ಯಾಘ್ರಗಳು ಎನ್ನುವುದು ಹೊಸ ವಿಷಯವೇನೂ ಅಲ್ಲ. ಪ್ರಭಾವೀಗಳೇ ಆಗಿರುವ ಇಂಥವರು ಯಾವತ್ತೂ ತಮಗೆದುರು ನಿಂತವರನ್ನು ಮುಗಿಸಲು ಟೊಂಕಕಟ್ಟಿ ನಿಲ್ಲುತ್ತಾರೆ. ಆದರೆ ಹಾಗೆ ಮುಗಿಸಲು ಎದುರು ನಿಂತು ಕೆಲಸ ಮಾಡುವುದಿಲ್ಲ. ಇನ್ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವುದು ಇಂಥವರ ಹಳೆ ಚಾಳಿ. ಅದೇ ಹಳೆಯ ಚಾಳಿಯನ್ನೇ ಉಡುಪಿಯಲ್ಲೂ ತಂಡವೊಂದು ಡಾ.ಶರತ್ ವಿರುದ್ಧ ಮುಂದುವರಿಸಿದ್ದಾರೆ.
ಎಚ್ಐವಿ/ಏಡ್ಸ್ ಮೇಲೆ ಕೆಲಸ ಮಾಡುವ, ಎಚ್ಐವಿ ಬಾಧಿತರ ಸರಕಾರೇತರ ಸ್ವಯಂಸೇವಾ ಸಂಸ್ಥೆಯೊಂದರ ಮಹಿಳಾ ಮುಖ್ಯಸ್ಥೆಯನ್ನು `ಗಣ್ಯರ ತಂಡ’ ತನ್ನ ಕಾರ್ಯಸಾಧನೆಗಾಗಿ, ತಮ್ಮ ಬಂದೂಕು ಇರಿಸಿಕೊಳ್ಳಲು ಹೆಗಲನ್ನಾಗಿ ಉಪಯೋಗಿಸಲು ದುರ್ಬಳಕೆ ಮಾಡಿಕೊಂಡಿದ್ದಾರೆ. ಈಕೆಯನ್ನು ಎದುರಿಗಿಟ್ಟುಕೊಂಡು ಡಾ.ಶರತ್ ವಿರುದ್ಧ ಯುದ್ಧ ಮಾಡಲು ಹೊರಟ ಮಹಾ ಭ್ರಷ್ಟರು ಆರಂಭಿಕ ಮುನ್ನಡೆಯನ್ನು ಸಾಧಿಸಿದ್ದಾರೆ.
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಎಂಬ ನೆಲೆಯಲ್ಲಿ ಈ ಹಿಂದೆ ಡಾ.ಶರತ್ ಅವರನ್ನು ಅರೆ ಸರಕಾರಿ ಸಂಸ್ಥೆಯೊಂದಕ್ಕೆ ಕಾರ್ಯದಶರ್ಿಯನ್ನಾಗಿ ನೇಮಕ ಮಾಡಲಾಗಿತ್ತು. ಇಲ್ಲಿ ಭ್ರಷ್ಟಾಚಾರ ನಡೆಸಲು ಅಡ್ಡಿಯಾಗಿ ಪರಿಣಮಿಸಿದ ಕಾರಣಕ್ಕೆ ಡಾ.ಶರತ್ ಅವರನ್ನು ಇಲ್ಲಿಂದ ಕೈಬಿಡಲಾಯಿತು.
ಈ ನಡುವೆ ಸರಕಾರಿ ಅಧಿಕಾರಿಗಳು ನೇರವಾಗಿ ಶಾಮೀಲಾಗಿರುವ ಬಹುಕೋಟಿ ಹಗರಣವೊಂದು ಡಾ,ಶರತ್ ಕುಮಾರ್ ರಾವ್ ಅವರ ಗಮನಕ್ಕೆ ಬಂತು. ಗಮನಕ್ಕೆ ಬಂದ ಕೂಡಲೇ ಹಗರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅಧ್ಯಯನ ಮಾಡತೊಡಗಿದರು ಡಾ.ಶರತ್. ಹಗರಣಕೋರರನ್ನು ಸಾಕ್ಷ್ಯಾಧಾರಗಳ ಸಹಿತ ಪತ್ತೆಹಚ್ಚಬೇಕೆಂಬ ನಿಟ್ಟಿನಲ್ಲಿ ಕಾರ್ಯವೆಸಗಲು ಮುಂದಾದಾಗ ಭ್ರಷ್ಟರ ಜಾಲದ ಸಕ್ರಿಯ ಸದಸ್ಯರು ಡಾ.ಶರತ್ ಅವರೇ ತಮ್ಮ ಪರಮ ಶತ್ರುವೆಂದು ಬಗೆದು ಅವರನ್ನು ಮುಗಿಸಲು ಇನ್ನಿಲ್ಲದ ಲಾಬಿ ಮಾಡತೊಡಗಿದರು. ಪ್ರಭಾವ ಬೀರಿದರು.
ಎಲ್ಲೆಲ್ಲಿಗೆ ಬೋಕೋ ಅಲ್ಲೆಲ್ಲಾ ಹಣ ಚೆಲ್ಲಿದರು. ಡಾ.ಶರತ್ ಅವರನ್ನು ಮಣಿಸಲು, ಹಣಿಯಲು ಆರಂಭಿಸಿದರು.
ಡಾ.ಶರತ್ ಕುಮಾರ್ ರಾವ್ ಎಂಥವರು ಎಂಬುದು ಗೊತ್ತಿರುವವರಿಗೆ ಚೆನ್ನಾಗಿಯೇ ಗೊತ್ತಿದೆ. ಹಾಗಾಗಿ ಜಿಲ್ಲೆಯ ಅನೇಕ ಪ್ರಾಮಾಣಿಕ, ಸಭ್ಯ ವ್ಯಕ್ತಿತ್ವದ ವ್ಯಕ್ತಿಗಳು ಶಕ್ತಿಯಾಗಿ ಡಾ.ಶರತ್ ಅವರ ಬೆನ್ನಿಗೆ ನಿಂತಿದ್ದಾರೆ.
ಕೃಪೆ: ‘ಜನಪರ ರಾಜಕೀಯ’ ಪಾಕ್ಷಿಕ, ಉಡುಪಿ (ಸೆಪ್ಟೆಂಬರ್ 16-30, 2013)

ಉಡುಪಿ: ಕಂದಾಯ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳನ್ನೂ ಕೂಡಲೇ ಪರಿಹರಿಸುವಂತೆ ಒತ್ತಾಯಿಸಿ ಕಂದಾಯ ಇಲಾಖಾ ಸಮಸ್ಯೆಗಳ ಪರಿಹಾರ ಸಮಿತಿ ನೇತೃತ್ವದಲ್ಲಿ ಸೆ.16 ರಂದು ನಾಗರಿಕರು ಉಡುಪಿ ಬನ್ನಂಜೆಯಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಸತ್ಯಾಗ್ರಹ ನಡೆಸಿದರು.
ನಮೂನೆ 9 ಮತ್ತು 11, ಕ್ಲಿಷ್ಟಕರವಾದ ಭೂ ಪರಿವರ್ತನೆ ಪ್ರಕ್ರಿಯೆ, ಪಹಣಿ
ಪತ್ರಿಕೆಯಲ್ಲಿನ ಲೋಪದೋಷ, ಏಕ ನಿವೇಶನ ಸಮಸ್ಯೆ, ಭೂ ನೋಂದಣಿಗೆ ಬೇಕಾದ ಭೂ ನಕ್ಷೆಗೆ ಮತ್ತು ಹತ್ತು ಹಲವು ಸಮಸ್ಯೆಗಳಿಂದಾಗಿ ಕಂದಾಯ ಇಲಾಖೆ ಸಾರ್ವಜನಿಕರಿಗೆ ದುಸ್ವಪ್ನವಾಗಿ ಪರಿಣಮಿಸಿದೆ. ಭೂ ಮಾರಾಟ ಮತ್ತು ಖರೀದಿ ಜನರ ಹಕ್ಕಾಗಿದ್ದು, ಜನರ ಹಕ್ಕಿಗೆ ಸಂಬಂಧಿಸಿದ ಭೂ ಸಂಬಂಧಿ ವಿಷಯಗಳಲ್ಲಿ ಕಂದಾಯ ಇಲಾಖೆಯು ಜನರನ್ನು ಅನಗತ್ಯವಾಗಿ ಸತಾಯಿಸುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಂದಾಯ ಇಲಾಖೆಯ ಕೆಲವು ಕ್ರಮಗಳಿಂದಾಗಿ ನಾಗರಿಕರಲ್ಲಿ ಅನೇಕ ಗೊಂದಲಗಳು
ಸೃಷ್ಟಿಯಾಗಿದೆ. ಜನಸಾಮಾನ್ಯರ ಅಭಿವೃದ್ಧಿ ಯೋಜನೆಗಳಿಗೆ ಸಮಸ್ಯೆ ಉದ್ಭವಿಸಿದೆಯಾದರೂ ಸಮಸ್ಯೆಗೆ ಪರಿಹಾರ ಸೂಚಿಸುವವರೇ ಇಲ್ಲದಂತಾಗಿದೆ. ಸಮಸ್ಯೆಯ ಸುಳಿಯಲ್ಲಿ
ಸಿಲುಕಿದವರಿಗೆ ಸಮಸ್ಯೆ ಬಗ್ಗೆ ಯಾರಲ್ಲಿ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ. ಸರಕಾರದ ಕ್ರಮದಿಂದಾಗಿ ಈಗಾಗಲೇ ಕೊಟ್ಯಂತರ ರು. ನಷ್ಟ ಉಂಟಾಗಿದೆ ಎಂದು ಪ್ರತಿಭಟನಾಕಾರರು ದೂರಿಕೊಂಡರು.
ಕರಾವಳಿ ಜಿಲ್ಲೆಗಳಲ್ಲಿ ತುಂಡುಭೂಮಿಗಳೇ ಜಾಸ್ತಿ ಇರುವುದರಿಂದ, ಅರ್ಧ ಸೆಂಟ್ಸಿಗೂ ಒಂದು ಆರ್ ಟಿ ಸಿ ಇದೆ. ಇದರೊಂದಿಗೆ ಸುತ್ತಲೂ ನದಿ, ಸಮುದ್ರ, ಇರುವುದರಿಂದ ಕರಾವಳಿ ನಿಯಂತ್ರಣ ವಲಯದ ಕಾನೂನು ಜನರನ್ನು ಬಾಧಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಅವೈಜ್ಞಾನಿಕವಾಗಿ 45 ಶೇಕಡಾ ಸ್ಥಳವನ್ನು ಬಿಟ್ಟು ಉಳಿದ 55 ಶೇಕಡಾ ಸ್ಥಳಕ್ಕೆ ಮಾತ್ರ ಭೂಪರಿವರ್ತನೆ, ಮಾರಾಟ, ಖರೀದಿಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಬೇಕೆನ್ನುವುದು ಸರಿಯಲ್ಲ ಎಂದು ಹೇಳಿದ ಪ್ರತಿಭಟನಾಕಾರರು, ಸಮಸ್ಯೆಗಳ ಪರಿಹಾರಕ್ಕೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಮದಿನ ದಿನಗಳಲ್ಲಿ ಉಗ್ರ ಹೋರಟ
ಹಮ್ಮಿಕೊಳ್ಳುವುದಾಗಿ ಮುನ್ನೆಚ್ಚರಿಕೆ ನೀಡಿದರು.
ಪ್ರತಿಭಟನೆಯ ಬಳಿಕ, 12 ಪ್ರಮುಖ ಬೇಡಿಕೆಗಳಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಯಿತು. ಕಂದಾಯ ಇಲಾಖಾ ಸಮಸ್ಯೆಗಳ ಪರಿಹಾರ ಸಮಿತಿಯ ಅಧ್ಯಕ್ಷರಾದ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಬಿ.ಭುಜಂಗ ಶೆಟ್ಟಿ, ಗುರುಪ್ರಸಾದ್ ಪೂಜಾರಿ, ಕಿಶೋರ್ ಶೆಟ್ಟಿ, ಪ್ರಸಾದ್ ಶೆಟ್ಟಿ ಹಾಗೂ ಬ್ಯಾಪ್ಟಿಸ್ಟ್ ಡಯಾಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಿಜೆಪಿ ಜಿಲ್ಲಾದ್ಯಕ್ಷ ಉದಯಕುಮಾರ್ ಶೆಟ್ಟಿ, ಬಿಜೆಪಿ ಯುವಮೋರ್ಛಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ ಮೊದಲಾದವರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ: ಕಾಂಗ್ರೆಸ್ ಪಕ್ಷದ ಮೂವರು ಪ್ರಭಾವೀ ಜನಪ್ರತಿನಿಧಿಗಳು ತಮ್ಮ ತಮ್ಮ ಜಾತಿಯ ಮತ್ತು ತಮ್ಮ ಪ್ರಮುಖ ಹಿಂಬಾಲಕರನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಿಕೊಳ್ಳಲು ಭಾರೀ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗಕ್ಕೆ ಬಂದಿದೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸಹಿತ ವಿವಿಧ ನಿಗಮ, ಮಂಡಳಿ, ಪ್ರಾಧಿಕಾರ, ನಗರ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಇರುವ ಹಲವಾರು ಸಮಿತಿಗಳಲ್ಲಿ ಸದಸ್ಯರಾಗಲು ಪಕ್ಷದ ಅನೇಕ ಮಂದಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಶಾಸಕರು, ಸಂಸದರು, ಸಚಿವರುಗಳ ಮೂಲಕ ಪ್ರಯತ್ನ ಆರಂಭಿಸಿದ್ದಾರೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ ಈ ಬಾರಿ ಯಾರಿಗೆ ಲಭಿಸಲಿದೆ ಎಂಬುದು ಪಕ್ಷದೊಳಗೆ ಇದೀಗ ಬಿಸಿಬಿಸಿಯಾಗಿ ನಡೆಯುತ್ತಿರುವ ಹಸಿ ಹಸಿ ಚರ್ಚೆ. ಈ ಸ್ಥಾನಕ್ಕೆ ಮೂವರು ಪ್ರಮುಖರ ಹೆಸರುಗಳು ಈಗ ಕೇಳಿ ಬರುತ್ತಿವೆ. ಈ ಮೂವರ ಪರವಾಗಿ ಜಿಲ್ಲೆಯ ಮೂವರು ಪ್ರಭಾವೀ ಜನಪ್ರತಿನಿಧಿಗಳು ವಕಾಲತ್ತು ವಹಿಸಿರುವುದು ಚರ್ಚೆಗೆ ಇನ್ನೊಂದು ಮುಖ್ಯ ಕಾರಣ.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಕಾಶ್ ಎಂ.ಕೊಡವೂರು, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾದ್ಯಕ್ಷ ಕೇಶವ ಕೋಟ್ಯಾನ್ ಹಾಗೂ ಹಿರಿಯ ನ್ಯಾಯವಾದಿ ವಿಜಯ್ ಹೆಗ್ಡೆ ಇವರಲ್ಲಿ ಯಾರಾದರೊಬ್ಬರು ಪ್ರಾಧಿಕಾರದ ಅಧ್ಯಕ್ಷರಾಗಬಹುದು ಎಂಬ ಮಾತು ಕೇಳಿ ಬರುತ್ತಿವೆ. ಈ ಮೂವರಲ್ಲಿ ಯಾರಾದರೊಬ್ಬರು ಪ್ರಾಧಿಕಾರದ ಅಧ್ಯಕ್ಷರಾದಲ್ಲಿ ಉಳಿದ ಇಬ್ಬರಿಗೆ ಇತರ ಯಾವುದಾದರೂ ನಿಗಮ-ಮಂಡಳಿಗಳಲ್ಲಿ ಸ್ಥಾನ-ಮಾನ ಸಿಗುವುದು ಖಚಿತ. ಪ್ರಕಾಶ್ ಕೊಡವೂರು ಪರವಾಗಿ ರಾಜ್ಯದ ನಗರಾಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ, ಕೇಶವ ಕೋಟ್ಯಾನ್ ಪರವಾಗಿ ಶಾಸಕ ಪ್ರಮೋದ್ ಮಧ್ವರಾಜ್ ಹಾಗೂ ವಿಜಯ್ ಹೆಗ್ಡೆ ಪರವಾಗಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಕೆಪಿಸಿಸಿ ಮತ್ತು ಮುಖ್ಯಮಂತ್ರಿಗಳ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಜಾತ್ಯಾತೀತವಾಗಿ ಆಯ್ಕೆ ಮಾಡುತ್ತದೆ ಎಂದು ಹೇಳಿಕೊಳ್ಳಲಾಗುತ್ತೆ. ಹೀಗೆ ಜಾತ್ಯಾತೀತ ಅಭ್ಯರ್ಥಿಗಳಾಗಿ ಆಯ್ಕೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಗಳಾಗಿ ಆರಿಸಿಬಂದವರು, ಬಳಿಕ ತಮ್ಮ ತಮ್ಮ ಜಾತಿ ಜನರ ಬೇಕು ಬೇಡಗಳಿಗಾಗಿ ತಮ್ಮ
ಶಕ್ತಿ-ಸಾಮಥ್ರ್ಯ ಪ್ರದರ್ಶಿಸುವುದು ಮಾತ್ರ ಪಕ್ಷದೊಳಗೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಲ್ಲವ ಸಮುದಾಯಕ್ಕೆ ಸೇರಿದ ವಿನಯ ಕುಮಾರ್ ಸೊರಕೆಯವರು ಬಿಲ್ಲವ ಸಮುದಾಯಕ್ಕೇ ಸೇರಿದ ಪ್ರಕಾಶ್ ಕೊಡವೂರು ಪರವಾಗಿ, ಮೊಗವೀರ ಸಮುದಾಯಕ್ಕೆ ಸೇರಿದ ಪ್ರಮೋದ್ ಮಧ್ವರಾಜ್ ರವರು ಮೊಗವೀರ ಸಮುದಾಯಕ್ಕೇ ಸೇರಿದ ಕೇಶವ ಕೋಟ್ಯಾನ್ ಪರವಾಗಿ ಹಾಗೂ ಬಂಟ ಸಮುದಾಯಕ್ಕೆ ಸೇರಿದ ಜಯಪ್ರಕಾಶ್ ಹೆಗ್ಡೆಯವರು ಬಂಟ ಸಮುದಾಯಕ್ಕೇ ಸೇರಿದ ವಿಜಯ್ ಹೆಗ್ಡೆ ಪರವಾಗಿ ವಕಾಲತ್ತು ವಹಿಸಿ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಶಾಸಕರಾಗಿ ಮತ್ತು ಸಚಿವರಾಗಿ ಆಯ್ಕೆಯಾದ ಸೊರಕೆಯವರನ್ನು ಅಭಿನಂದಿಸಿ ಪ್ರಕಾಶ್ ಕೊಡವೂರು ಅವರು ಅಲ್ಲಲ್ಲಿ ಬೃಹತ್ ಫ್ಲೆಕ್ಸ್ ಬ್ಯಾನರ್ ಹಾಕುವ ಮೂಲಕ ಸೊರಕೆಯವರಿಗೆ ಮತ್ತಷ್ಟೂ ಹತ್ತಿರವಾಗಿದ್ದಾರೆ. ವಿಜಯ್ ಹೆಗ್ಡೆಯವರು ಸಂಸದ ಜಯಪ್ರಕಾಸ್ ಹೆಗ್ಡೆಯವರ ಲೋಕಸಭಾ ಚುನಾವಣೆಯ ಚುನಾವಣಾ ಏಜೆಂಟ್ ಆಗಿ ಕರ್ತವ್ಯ ಸಲ್ಲಿಸುವ ಮೂಲಕ ಹೆಗ್ಡೆಯವರಿಗೆ ಇನ್ನಷ್ಟೂ ಆಪ್ತರಾದವರು.
ಶಾಸಕ, ಸಂಸದ ಹಾಗೂ ಸಚಿವರು ತಮ್ಮ ತಮ್ಮ ಜಾತಿ ಜನರ ಪರವಾಗಿ ಲಾಬಿ ನಡೆಸುತ್ತಿರುವ ವಿಷಯ ಬೆಳಕಿಗೆ ಬರುತ್ತಿರುವಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿರುವ ಇತರ ಜನಾಂಗಕ್ಕೆ ಸೇರಿದ ಪ್ರಮುಖ ಪದಾಧಿಕಾರಿಗಳು ಈ ಮೂರೂ ಮಂದಿ ಜನಪ್ರತಿನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ. ಈ ಆಕ್ರೋಶ ಪ್ರಸ್ತುತ ಪಕ್ಷದೊಳಗಡೆಯೇ ಇದೆಯಾದರೂ ನಿಧಾನವಾಗಿ ಇದು ಬಹಿರಂಗಕ್ಕೆ ಬರುವ ಸಾಧ್ಯತೆಯೂ ಇದೆ.
ಜನಪ್ರತಿನಿಧಿಯಾದವರು, ಪಕ್ಷದಲ್ಲಿ ಪ್ರಾಮಾಣಿಕವಾಗಿ ಮತ್ತು ಸಕ್ರಿಯವಾಗಿರುವವರನ್ನು ಜಾತಿ, ಮತ, ಲಿಂಗ ಬೇಧ ಮಾಡದೆ ಗುರುತಿಸಿ ಅವರಿಗೆ ಸೂಕ್ತ ಸ್ಥಾನ-ಮಾನಗಳನ್ನು ಕಲ್ಪಿಸಿಕೊಡಬೇಕು. ಅದು ಬಿಟ್ಟು ಜಾತಿವಾದಿಗಳಾಗಿ ಮುಂದುವರಿದರೆ ಪಕ್ಷದಲ್ಲಿ ಸಕ್ರಿಯವಾಗಿರುವ ಇತರ ಸಣ್ಣ ಪುಟ್ಟ ಜಾತಿ ಮುಖಂಡರು ಏನು ಮಾಡಬೇಕು ಎಂಬುದು ಕೆಲವರ ಪ್ರಶ್ನೆ.
ಈ ನಡುವೆ ಏಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಹಾಗೂ ಇವರ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಅವರು ತಮ್ಮ ಪರಮಾಪ್ತರಾದ ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ನಿರ್ಧರಿಸಿರುವ ಅಂಶವೂ ಬಯಲಾಗಿದೆ.