Posts Tagged ‘ಕೊಲೆ ಯತ್ನ’

ಉಡುಪಿ: ಉಡುಪಿ ನಗರದ ಕಾಡಬೆಟ್ಟು ಜೀವನ್ ನಗರದ ರಾಮಣ್ಣ ಶೆಟ್ಟಿ ಕಂಪೌಂಡಿನಲ್ಲಿರುವ ನಿವಾಸಿ ಶ್ರೀಮತಿ ಪ್ರಭಾಮಣಿ ಶೆಟ್ಟಿ ಎಂಬವರು ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಮೈಮೇಲಿದ್ದ ಚಿನ್ನಾಭರಣ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ಧೇಶದಿಂದ ಮನೆಗೆ ಅಕ್ರಮ ಪ್ರವೇಶ ಮಾಡಿ ಅಡುಗೆ ಮನೆಯಲ್ಲಿದ್ದ ಪ್ರಭಾಮಣಿ ಶೆಟ್ಟಿಯವರ ಕುತ್ತಿಗೆಗೆ ಇಲೆಕ್ಟ್ರಿಕ್ ವಯರ್ ಬಿಗಿದು ಕೊಲೆ ಮಾಡಲು ಯತ್ನಿಸಿ, ಪ್ರಭಾಮಣಿ ಬೊಬ್ಬಿಟ್ಟಾಗ, ಪರಿಸರವಾಸಿಗಳು ಬರುವುದನ್ನು ನೋಡಿ ಓಡಿ ಹೋಗಿ ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ಕಿದಿಯೂರು ಗ್ರಾಮದ ಶಿವಗಿರಿ ನಿವಾಸಿ ಗಿರೀಶ್ ಕುಮಾರ್ ಎಂಬಾತನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ ಬಿ.ಅಮರಣ್ಣನವರ್ ಅವರು ಇಂದು 4 ವರ್ಷ ಕಠಿಣ ಸಜೆ ಮತ್ತು 2 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2013ರ ಜೂನ್ 28ರಂದು ಪೂರ್ವಾಹ್ನ 11 ಗಂಟೆಗೆ ಗಿರೀಶ್ ಕುಮಾರ್ ಈ ಕೊಲೆ ಯತ್ನ ಕೃತ್ಯ ಎಸಗಿದ್ದನು. ಇದರಿಂದಾಗಿ ಪ್ರಭಾಮಣಿ ಶೆಟ್ಟಿಯವರ ಕುತ್ತಿಗೆಗೆ ಸಾದಾ ಸ್ವರೂಪದ ಗಾಯವಾಗಿತ್ತು. ಪ್ರಭಾಮಣಿಯವರ ಬೊಬ್ಬೆ ಕೇಳಿ ಮನೆಗೆ ಬಂದ ಮನೆ ಪಕ್ಕದ ಶ್ರೀಮತಿ ಸುಲೋಚನಾ ಹಾಗೂ ಶ್ರೀಮತಿ ಸುಧಾ ಸಾಕ್ಷಿದಾರರಾಗಿದ್ದರು. ಕೃತ್ಯದ ಬಗ್ಗೆ ಪ್ರಭಾಮಣಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪ್ಪಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು.

ಉಡುಪಿ: ರಾಜ್ಯದ ಮುಜರಾಯಿ, ಬಂದರು, ಒಳನಾಡು ಜಲಸಾರಿಗೆ ಮತ್ತು ಜಿಲ್ಲಾ ಉಸ್ತುವರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಕೋಟದಲ್ಲಿರುವ ಮನೆಯ ಆವರಣಕ್ಕೆ ಡಿ.31 ರ ಮಧ್ಯರಾತ್ರಿ ಗಂಟೆ 12.15 ಕ್ಕೆ ಮೂರು ಬೈಕ್ಗಳಲ್ಲಿ ಬಂದ ಆರು ಮಂದಿ ಕಿಡಿಗೇಡಿಗಳು, ಮಾರಕಾಯುಧ ಮತ್ತು ದೊಡ್ಡ ದೊಡ್ಡ ಕಲ್ಲುಗಳಿಂದ ಸಚಿವರ ಸರಕಾರಿ ಕಾರನ್ನು (ಕೆಎ 01-ಜಿ. 5633) ಹಾನಿ ಮಾಡಿದ್ದಾರೆ. ಮನೆಯೊಳಗೆ ಇದ್ದ ಸಚಿವರನ್ನು ಹೊರಗೆ ಬರುವಂತೆ ಸೂಚಿಸಿ ಕೊಲೆಗೆ ಯತ್ನಿಸಿದ ಬಳಿಕ ಬಂದ ಬೈಕ್ಗಳಲ್ಲಿ ಪರಾರಿಯದ ಪ್ರಕರಣ ನಡೆದಿದೆ. ಇದು ಬಿಲ್ಲವ ಸಮಾಜದ ಮೇಲೆ ನಡೆದ ಹಲ್ಲೆಯಾಗಿದ್ದು, ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಶಿಕ್ಷಿ ವಿಧಿಸಬೇಕು, ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೋಟದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ (ರಿ) ದ ಅಧ್ಯಕ್ಷರಾದ ಸತೀಶ್ ಪೂಜಾರಿ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಮಧ್ಯಾಹ್ನ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ವಿವಿಧ ಬಿಲ್ಲವ ಸಂಘಟನೆಗಳ ಪ್ರತಿನಿಧಿಗಳ ಜೊತೆ ಅವರು ಮಾತನಾಡುತ್ತಿದ್ದರು.
ಸಚಿವರಿಗಾದ ಅಪಮಾನ ಜಿಲ್ಲೆಗಾದ ಅಪಮಾನ ಎಂದು ವ್ಯಾಖ್ಯಾನಿಸಿದ ಸತೀಶ್ ಪೂಜಾರಿ, ಶ್ರೀನಿವಾಸ ಪೂಜಾರಿಯವರ ಏಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಈ ಕೃತ್ಯ ಎಸಗಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದರ ಹಿಂದೆ ವಯುಕ್ತಿಕ ಕಾರಣಗಳೂ, ರಾಜಕೀಯ ಕಾರಣಗಳೂ ಇರಬಹುದು. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಮನವಿ ಮಾಡಿಕೊಂಡರು.
ಶ್ರೀನಿವಾಸ ಪೂಜಾರಿಯವರದು ಸರಳ ಸ್ವಭಾವ. ಈ ಸರಳತೆಯೇ ಅವರಿಗಿಂದು ಮುಳ್ಳಾಗಿ ಪರಿಣಮಿಸಿದೆ. ಸರಳತೆಯನ್ನೇ ದುರ್ಬಲತೆಯೆಂದು ತಿಳಿದುಕೊಂಡು ಕಿಡಿಗೇಡಿಗಳು ಸಚಿವರಿಗೆ ತೊಂದರೆ ಕೊಡುತ್ತಿದ್ದಾರೆ. ವರ್ಷದ ಹಿಂದೆ ಕೊಲೆಗೆ ಸಂಚು ಹೂಡಿದ ಪ್ರಕರಣ ನಡೆಯಿತು. ಆ ಪ್ರಕರಣವನ್ನು ಮುಂದುವರಿಸುವುದು ಅವರಿಗೆ ಇಷ್ಟವಿರಲಿಲ್ಲವಾದ ಕಾರಣ ಪ್ರಕರಣ ಅಲ್ಲಿಗೆ ಮುಕ್ತಾಯಕಂಡಿತು. ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ಅವರಿಗೆ ಮಾನಸಿಕ ಕಿರುಖುಳ ನೀಡಲಾಗುತ್ತಿದೆ. ಆದರೂ ಸಚಿವರೂ ಬಂದೋಬಸ್ತ್ ಇರಿಸಿಕೊಂಡಿಲ್ಲ. ಕೊಲೆ ಸಂಚು ಬಯಲಾದಾಗ ಸರಕಾರ ಗಾರ್ಡ್ ನೀಡಿತಾದರೂ ಸಚಿವರು ಅದನ್ನು ನಿರಾಕರಿಸಿದರು. ಬಂದೋಬಸ್ತ್ ನ್ನೂ ನಿರಾಕರಿಸಿದರು. ಸೆಕ್ಯುರಿಟಿ ಪಡೆದುಕೊಳ್ಳಲು ಸಚಿವರು ನಿರಾಕರಿಸಿರುವುದು ಅವರ ವಯುಕ್ತಿಕ ನಿಲುವಾದರೂ, ತಾವು ಇದೀಗ ಇನ್ನಾದರೂ ಸೆಕ್ಯುರಿಟಿ ಪಡೆದುಕೊಳ್ಳಬೇಕೆಂದು ಮನವಿ ಮಾಡುವುದಾಗಿ ಸತೀಶ್ ಪೂಜಾರಿ ಹೇಳಿದರು.
ಸಚಿವರು ಮನೆಗೆ ಬರುವಾಗ ಬಂದೋಬಸ್ತ್ ಇತ್ತು. ಸಚಿವರನ್ನು ಮನೆಗೆ ಬಿಟ್ಟು ಬಂದೋಬಸ್ತ್ ಪೊಲೀಸರು ಮನೆಯಿಂದ ನಿರ್ಗಮಿಸಿದ್ದಾರೆ. ಸಚಿವರು ಮನೆಯೊಳಗೆ ಹೋದ ಸ್ವಲ್ಪವೇ ಹೊತ್ತಿನಲ್ಲಿ ಕಿಡಿಗೇಡಿಗಳು ಮನೆ ಆವರಣಕ್ಕೆ ಬಂದಿದ್ದಾರೆ. ಮನೆ ಎದುರುಗಡೆ ನಿಲ್ಲಿಸಲಾಗಿದ್ದ ವಾಹನವನ್ನು ನಾಶ ಮಾಡಿದ ಕಿಡಿಗೇಡಿಗಳನ್ನು ಸಚಿವರು
ಮನೆಯೊಳಗಿನಿಂದಲೇ ಗಮನಿಸಿದ್ದಾರೆ. ಮುಂಜಾನೆ 4 ಗಂಟೆಗೆ ಸಚಿವರು ಆರೂ ಜನರ ಹೆಸರಿನಿಂದಿಗೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ತನಿಖೆ ನಡೆಸಿ, ಆರೋಪಿಗಳನ್ನು ಶಿಕ್ಷಿಸುವಂತೆ ಕೋರಿದ್ದಾರೆ. ಘಟನೆ ನಡೆದ ಬೆನ್ನಿಗೆ ಸಚಿವರ ಮನೆಗೆ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಇತರ ಪೊಲೀಸರು ಬಂದಿದ್ದಾರೆ ಎಂದು ಸತೀಶ್ ಪೂಜಾರಿ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ವಿವಿಧ ಬಿಲ್ಲವ ಸಂಘಟನೆಗಳ ಪದಾಧಿಕಾರಿಗಳಾದ ಮಾಜಿ
ತಾ.ಪಂ.ಸದಸ್ಯ ಕೋಟ ತಿಮ್ಮ ಪೂಜಾರಿ, ನಾರಾಯಣ ಪೂಜಾರಿ, ಕೃಷ್ಣ ಪೂಜಾರಿ ಕಾರ್ಕಡ, ನರಸಿಂಹ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.