Posts Tagged ‘ನ್ಯಾಯಾಲಯ’

ಉಡುಪಿ: ಉಡುಪಿ ನಗರದ ಕಾಡಬೆಟ್ಟು ಜೀವನ್ ನಗರದ ರಾಮಣ್ಣ ಶೆಟ್ಟಿ ಕಂಪೌಂಡಿನಲ್ಲಿರುವ ನಿವಾಸಿ ಶ್ರೀಮತಿ ಪ್ರಭಾಮಣಿ ಶೆಟ್ಟಿ ಎಂಬವರು ತಮ್ಮ ಮನೆಯಲ್ಲಿ ಒಬ್ಬರೇ ಇದ್ದಾಗ ಮೈಮೇಲಿದ್ದ ಚಿನ್ನಾಭರಣ ಮತ್ತು ಇತರ ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ಧೇಶದಿಂದ ಮನೆಗೆ ಅಕ್ರಮ ಪ್ರವೇಶ ಮಾಡಿ ಅಡುಗೆ ಮನೆಯಲ್ಲಿದ್ದ ಪ್ರಭಾಮಣಿ ಶೆಟ್ಟಿಯವರ ಕುತ್ತಿಗೆಗೆ ಇಲೆಕ್ಟ್ರಿಕ್ ವಯರ್ ಬಿಗಿದು ಕೊಲೆ ಮಾಡಲು ಯತ್ನಿಸಿ, ಪ್ರಭಾಮಣಿ ಬೊಬ್ಬಿಟ್ಟಾಗ, ಪರಿಸರವಾಸಿಗಳು ಬರುವುದನ್ನು ನೋಡಿ ಓಡಿ ಹೋಗಿ ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ಕಿದಿಯೂರು ಗ್ರಾಮದ ಶಿವಗಿರಿ ನಿವಾಸಿ ಗಿರೀಶ್ ಕುಮಾರ್ ಎಂಬಾತನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಶಂಕರ ಬಿ.ಅಮರಣ್ಣನವರ್ ಅವರು ಇಂದು 4 ವರ್ಷ ಕಠಿಣ ಸಜೆ ಮತ್ತು 2 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2013ರ ಜೂನ್ 28ರಂದು ಪೂರ್ವಾಹ್ನ 11 ಗಂಟೆಗೆ ಗಿರೀಶ್ ಕುಮಾರ್ ಈ ಕೊಲೆ ಯತ್ನ ಕೃತ್ಯ ಎಸಗಿದ್ದನು. ಇದರಿಂದಾಗಿ ಪ್ರಭಾಮಣಿ ಶೆಟ್ಟಿಯವರ ಕುತ್ತಿಗೆಗೆ ಸಾದಾ ಸ್ವರೂಪದ ಗಾಯವಾಗಿತ್ತು. ಪ್ರಭಾಮಣಿಯವರ ಬೊಬ್ಬೆ ಕೇಳಿ ಮನೆಗೆ ಬಂದ ಮನೆ ಪಕ್ಕದ ಶ್ರೀಮತಿ ಸುಲೋಚನಾ ಹಾಗೂ ಶ್ರೀಮತಿ ಸುಧಾ ಸಾಕ್ಷಿದಾರರಾಗಿದ್ದರು. ಕೃತ್ಯದ ಬಗ್ಗೆ ಪ್ರಭಾಮಣಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪ್ಪಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಕಾರಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು.

ಉಡುಪಿ: ನೀಲಾವರ ಗ್ರಾಮದ ಎಳ್ಳಂಪಳ್ಳಿ ದೀಪನಗುಡ್ಡೆ ಎಂಬಲ್ಲಿ ಬೈಕಲ್ಲಿ ಮನೆಗೆ ಹೋಗುತ್ತಿದ್ದ ಗಿರಿರಾಜ ಆಚಾರ್ಯ ಎಂಬವವರನ್ನು ತಡೆದುನಿಲ್ಲಿಸಿ ಕಬ್ಬಿಣದ ರಾಡ್ನಿಂದ ಬೆನ್ನಿಗೆ ಮತ್ತು ಎದೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ ಮತ್ತು ಬಿಡಿಸಲು ಬಂದ ಗಿರಿರಾಜ ಆಚಾರ್ಯರ ತಮ್ಮ ಜಯರಾಜ ಆಚಾರ್ಯರಿಗೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಗಾಯಾಳುಗಳ ಸಂಬಂಧಿಕರೇ ಆದ ಪ್ರಮೋದ್ ರಾಜ್ (29) ಹಾಗೂ ಪ್ರಸಾದ್ ಆಚಾರ್ಯ (34) ಎಂಬವರಿಗೆ ಉಡುಪಿ ಹೆಚ್ಚುವರಿ
ಜೆ.ಎಂ.ಎಫ್.ಸಿ.ನ್ಯಾಯಾಲಯದ ನ್ಯಾಯಾಧೀಶೆ ಶ್ರೀಮತಿ ವಿ.ಎನ್.ಮಿಲನ ಅವರು ಮೂರು ವರ್ಷಗಳ ಕಠಿಣ ಸಜೆ ಮತ್ತು 5 ಸಾವಿರ ರು. ದಂಡ ವಿಧಿಸಿ ಸೆ.3ರಂದು ತೀಪರ್ು ನೀಡಿದ್ದಾರೆ.

ಗಾಯಾಳುಗಳು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಎ.ಎಸ್.ಐ ಶೀನ ಬಿಲ್ಲವ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು. ಪಿಎಸ್ಐ ಗಿರೀಶ್ ಕುಮಾರ್ ಎಸ್.ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪಿಗಳಿಗೆ ವಿಧಿಸಿದ ಐದು ಸಾವಿರ ರು.ದಂಡವನ್ನು ಗಾಯಾಳು ಗಿರಿರಾಜ್ ಅವರಿಗೆ ನೀಡುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಸೂಚಿಸಿದ್ದಾರೆ.

ಸರಕಾರದ ಪರವಾಗಿ ಹಿಂದಿನ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಶಾಂತಿ ಬಾಯಿ ಇವರು ಸಾಕ್ಷಿದಾರರ ವಿಚಾರಣೆ ನಡೆಸಿದ್ದರು. ಹಾಲಿ ಸಹಾಯಕ ಸರಕಾರಿ ಅಭಿಯೋಜಕರಾದ ಶ್ರೀಮತಿ ಮಮ್ತಾಜ್ ವಾದ ಮಂಡಿಸಿದ್ದರು.

ಉಡುಪಿ: ಇಲ್ಲಿನ ಪ್ರತಿಷ್ಟಿತ ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಪಟ್ಟಿಯಿಂದ ಕೈಬಿಡಬೇಕೆಂದು ಕೋರಿ (ಡಿನೋಮಿನೇಶನ್) ದೇವಸ್ಥಾನದ ಆಡಳಿತ ಮೊಕ್ತೇಸರರು ಉಡುಪಿ ಪ್ರಿನ್ಸಿಪಲ್ ಸಿವಿಲ್ ಸೀನಿಯರ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಹೂಡಿದ ವ್ಯಾಜ್ಯವನ್ನು ನ್ಯಾಯಾಲಯವು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಅಂಬಲಪಾಡಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ನೀ.ಅಣ್ಣಾಜಿ ಬಲ್ಲಾಳರು 2003ರಲ್ಲಿ ಈ ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ಹೂಡಿದ್ದರು. ನ್ಯಾಯಾಲಯದಲ್ಲಿ ವ್ಯಾಜ್ಯದ ವಿಚಾರಣೆ ನಡೆಯುತ್ತಿರುವಂತೆಯೇ ಮಧ್ಯೆ ಅಣ್ಣಾಜಿ ಬಲ್ಲಾಳರು ನಿಧನರಾಗಿದ್ದರು. ಬಳಿಕ ಈ ವ್ಯಾಜ್ಯವನ್ನು ಅಣ್ಣಾಜಿ ಬಲ್ಲಾಳರ ಪುತ್ರರಾದ, ಹಾಲಿ ದೇವಸ್ಥಾನದ ಆಡಳಿತ
ಮೊಕ್ತೇಸರರಾದ ಡಾ.ನೀ.ವಿಜಯ ಬಲ್ಲಾಳರು ಮುಂದುವರಿಸಿದ್ದರು.

2003ರಿಂದ ಆರಂಭಗೊಂಡು ಕಳೆದ ಹತ್ತು ವರ್ಷಗಳ ಸುಧೀರ್ಘ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವು ಅಂತಿಮವಾಗಿ ಇದೇ ಮೇ. 15ರಂದು ಬಲ್ಲಾಲರ ವ್ಯಾಜ್ಯವನ್ನೇ ವಜಾಗೊಳಿಸಿ ಆದೇಶಿಸಿದೆ. ದಶಕದ ಕಾಲ ನಡೆದ ವಿಚಾರಣಾ ಪ್ರಕ್ರಿಯೆಯಲ್ಲಿ ಸರಕಾರದ ಪರವಾಗಿ ಇಬ್ಬರು ಸರಕಾರಿ ವಕೀಲರು ಈ ಪ್ರಕರಣದ ಬಗ್ಗೆ ವಾದಿಸಿದ್ದರು.

ಎಲ್ಲಾ ಜಾತಿಯ ಜನರೂ ಅಂಬಲಪಾಡಿ ದೇವಸ್ಥಾನದ ಭಕ್ತರಾಗಿದ್ದು, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಆಸ್ತಿಕರು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಯಾತ್ರಾರ್ಥಿಗಳಾಗಿ ಬರುತ್ತಿರುತ್ತಾರೆ. ವಾರ್ಷಿಕವಾಗಿ ಕೋಟ್ಯಂತರ ರು. ಸಂಪಾದನೆ ಇರುವ ದೇವಸ್ಥಾನಕ್ಕೆ, ಹಿಂದಿನಿಂದಲೂ ಸರಕಾರದ ತಸ್ತೀಕು ಇತ್ಯಾದಿಗಳು ಲಭಿಸುತ್ತಿದ್ದು ಸಾರ್ವಜನಿಕ ದೇವಸ್ಥಾನವೆಂದು ಜನಜನಿತವಾಗಿದೆ.

ಈ ನಡುವೆ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಪಟ್ಟಿಯಿಂದ ‘ಡಿ’ನೋಟಿಫೀಕೇಶನ್ಗೊಳಿಸುವ ಪ್ರಯತ್ನ ಆರಂಭಿಸಲಾಯಿತು. ಇದಾದರೆ ಸಾರ್ವಜನಿಕ
ದೇವಸ್ಥಾನವಾಗಿರುವುದು ಒಂದು ಕುಟುಂಬದ ಸೊತ್ತಾಗಿ ಬದಲಾವಣೆ ಆಗಿಬಿಡುವ ಅಪಾಯವಿತ್ತು ಎನ್ನಲಾಗಿದೆ.

ಇದೀಗ ಈ ಸಂಬಂಧ ಬಲ್ಲಾಳರು ಹೂಡಿದ್ದ ವ್ಯಾಜ್ಯವನ್ನು ನ್ಯಾಯಾಲಯವು ವಜಾಗೊಳಿಸಿದ ಹಿನ್ನೆಲೆಯಲ್ಲಿ ದೇವಸ್ಥಾನ ಸಾರ್ವಜನಿಕ ದೇವಸ್ಥಾನವಾಗಿಯೇ ಉಳಿಯುವಂತಾಗಿದೆ. ಸಾರ್ವಜನಿಕರು ನ್ಯಾಯಾಲಯದ ಈ ತೀರ್ಪನ್ನು ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.

ಉಡುಪಿ: ತಂಪು ಪಾನೀಯಕ್ಕೆ ಅಮಲು ಪದಾರ್ಥ ಬೆರೆಸಿ ಕುಡಿಸಿ, ಪ್ರಜ್ಞಾಹೀನಳಾದಾಗ ಅತ್ಯಾಚಾರವೆಸಗಿ, ಬಳಿಕ ಮದುವೆಯಾಗುವುದಾಗಿ ಮಾತುಕೊಟ್ಟು ಕೊನೆಗೆ ವಂಚಿಸಿದ ಶಂಕರಪುರ ಸಮೀಪದ ಮೂಡಬೆಟ್ಟು ಗ್ರಾಮದ ಶಿವಾನಂದ ನಗರ ನಿವಾಸಿ ಪೈಂಟರ್ ರಘುರಾಮ (41) ಎಂಬಾತನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರೇಂದ್ರ ಕುಮಾರ ಗುಣಕಿ ಅವರು ಮೂರು ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಎರಡನೇ ಆರೋಪಿ ಐತಪ್ಪ ಎಂಬವರನ್ನು ದೋಷಮುಕ್ತಿಗೊಳಿಸಿದ್ದಾರೆ.
2007 ರಲ್ಲಿ ಶಂಕರಪುರದಲ್ಲಿರುವ ಮಾವನ ಮನೆಗೆ ಹೋಗಲೆಂದು ಉಡುಪಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದು ನಿಂತಿದ್ದ ಯುವತಿಯನ್ನು ಆರೋಪಿ ತಾನೂ ಸಹ ಶಂಕರಪುರಕ್ಕೆ ಹೋಗುವುದಾಗಿ ಹೇಳಿ ತನ್ನ ಕಾರಿಗೆ ಹತ್ತಿಸಿದ್ದ. ಬಳಿಕ ಕಾರ್ಕಳದಲ್ಲಿ ತಾನು ಪೈಂಟಿಂಗ್ ಮಡುತ್ತಿದ್ದ ಹೊಸ ಕಟ್ಟಡಕ್ಕೆ ಕರೆದೊಯ್ದು, ಅಲ್ಲಿ ತಂಪು ಪಾನೀಯಕ್ಕೆ ಅಮಲು ಪದಾರ್ಥ ಬೆರೆಸಿ ಕುಡಿಸಿ, ಪ್ರಜ್ಙಾಹೀನಳಾದಾಗ ಅತ್ಯಾಚಾರವೆಸಗಿದ್ದ. ಯುವತಿಗೆ ಎಚ್ಚರವಾದಾಗ, ನಡೆದ ವಿಷಯವನ್ನು ಮನೆಯವರಲ್ಲಿ ಹೇಳಬಾರದೆಂದೂ, ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿ, ಮುಂದಕ್ಕೆ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ ಎಂದು ರಘುರಾಮ್ ವಿರುದ್ಧ ಯುವತಿ ಆರೋಪಿಸಿದ್ದಳು.
ಈ ಘಟನೆಯ ಬಳಿಕ ರಘುರಾಮ ಹಲವಾರು ಬಾರಿ ತಾನು ಪೈಂಟಿಂಗ್ ಮಾಡುತ್ತಿದ್ದ ಕಟ್ಟಡಕ್ಕೆ ಕರೆದೊಯ್ದು ಸಂಭೋಗ ನಡೆಸಿದ್ದಾನೆ. ಗರ್ಭಪಾತವನ್ನೂ ನಡೆಸಿದ್ದಾನೆ. ಕೊನೆಗೆ ತಂಗಿಯ ನೆಪ ಮುಂದಿಟ್ಟು ಮದುವೆಯಾಗಲು ನಿರಾಕರಿಸಿದ. ಇದನ್ನು ಪ್ರಶ್ನಿಸಿ, ನ್ಯಾಯ ಕೇಳಲು, ತಾನು 2009 ರ ಮಾರ್ಚ್ 9 ರಂದು ಆರೋಪಿಯ ಮನೆಗೆ ಹೋದಾಗ, ಆರೋಪಿ ರಘುರಾಮ, ಐತಪ್ಪ ಹಾಗೂ ಇತರರು ತನ್ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಲೆ ಬೆದರಿಕೆ ಹಾಕಿದರೆಂದು ದೂರಲಾಗಿತ್ತು.
ಈ ಬಗ್ಗೆ ನೊಂದ ಯುವತಿ ದಸಂಸ ನಾಯಕ ಜಯನ್ ಮಲ್ಪೆಯವರ ಮೂಲಕ ಮಲ್ಪೆ ಪೋಲಿಸ್ ಠಾಣೆಗೆ ದುರು ನೀಡಿದ್ದು, ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಅಂದಿನ ಉಡುಪಿ ವೃತ್ತ ನಿರೀಕ್ಷಕ ಎಸ್.ವಿ.ಗಿರೀಶ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು.

ಉಡುಪಿ: ಬೊಮ್ಮರಬೆಟ್ಟು ನಿವಾಸಿ ನಿವೃತ್ತ ಸೈನಿಕ ತನಿಯಪ್ಪ (56) ಎಂಬವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದ ಆರೋಪಿ, ಮಣಿಪಾಲದ ಬೆಸ್ಟ್ ಸೆಲ್ಲರ್ ಗಾರ್ಮೆಂಟ್ಸ್ ನಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ದೆಹಲಿ ಮೂಲದ ಧರ್ಮೇಂದ್ರ ಶರ್ಮ (39) ಎಂಬಾತನಿಗೆ ಉಡುಪಿ ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶರಾದ
ಜಿ.ಎಸ್.ರೇವಣಕರ ಅವರು ಜೀವಾಧಿ ಶಿಕ್ಷೆ ಮತ್ತು ಹತ್ತು ಸಾವಿರ ರು. ದಂಡ ವಿಧಿಸಿ ಎ.20 ರಂದು ತೀರ್ಪು ನೀಡಿದ್ದಾರೆ.
2010 ರ ಸೆಪ್ಟೆಂಬರ್ 16 ರಂದು ರಾತ್ರಿ ಗಂಟೆ 10.30 ಕ್ಕೆ ಧರ್ಮೇಂದ್ರ
ತನಿಯಪ್ಪರನ್ನು ಕೊಲೆ ಮಾಡಿದ್ದ. ಈ ಸಂದರ್ಭದಲ್ಲಿ ಧರ್ಮೇಂದ್ರನಿಗೂ ಗಾಯಗಳಾಗಿತ್ತು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಜಿ.ಕೃಷ್ಣಮೂರ್ತಿ ಅವರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿ ಸಲ್ಲಿಸಿದ್ದರು.
ತನಿಯಪ್ಪ ಅವರು ಸೇನೆಯಿಂದ ಊರಿಗೆ ಬಂದು ಪತ್ನಿ ಸುಮನಾ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರು. ಸುಮನಾ ಅವರ ಹತ್ತಿರದ ಸಂಬಂಧಿಯಾದ ಧಮೇಂದ್ರ ಶರ್ಮ ಸ್ವಲ್ಪ ದಿನ ಸಂಬಂಧಿ ಸುಮನಾ ಅವರ ಮನೆಯಲ್ಲಿ ತಂಗಲು ಬಂದವರು, ಸುಮನಾ ಜೊತೆಗೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದರು. ಧರ್ಮೇಂದ್ರನ ವರ್ತನೆ ಸರಿ ಕಾಣದ ಹಿನ್ನೆಲೆಯಲ್ಲಿ ಆತನಿಗೆ ಬುದ್ಧಿವಾದ ಹೇಳಿ ಮನೆಯಿಂದ ಹೊರಗೆ ಹಾಕಿದ್ದರು ತನಿಯಪ್ಪ.
ಬಳಿಕ ಮಣಿಪಾಲದ ಗಾರ್ಮೆಂಟ್ಸ್ ನಲ್ಲಿ ಟೈಲರಿಂಗ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ಧರ್ಮೇಂದ್ರ, ಆಗಾಗ ಸುಮನಾರ ಮನೆಗೆ ಬಂದು ಹೋಗಿ ಮಾಡುತ್ತಿದ್ದ. ಮಾತ್ರವಲ್ಲ, ದೂರವಾಣಿ ಸಂಪರ್ಕವನ್ನೂ ಇರಿಸಿಕೊಂಡಿದ್ದ. ತನಿಯಪ್ಪ ಅವರು ಇದಕ್ಕೂ ಆಕ್ಷೇಪಿಸಿ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಮನೆಗೆ ಬಾರದಂತೆ ತಿಳಿಸಿದ್ದರು.
ತನಿಯಪ್ಪ ಜೀವಂತ ಇದ್ದುದೇ ಆದಲ್ಲಿ ತನಗೆ ಸುಮನಾಳ ಜೊತೆಗೆ ಸಲುಗೆಯಿಂದ ಇರಲು ಸಾಧ್ಯವಿಲ್ಲ ಎಂದು ತಿಳಿದ ಧರ್ಮೇಂದ್ರ, ತನಿಯಪ್ಪರನ್ನು ಕೊಲೆಗೈದ ಎಂದು
ಆರೋಪಿಸಲಾಗಿತ್ತು. ಕೊಲೆ ಕೃತ್ಯ ನಡೆಯುವ ಸಮಯದಲ್ಲಿ ಆರೋಪಿಗೂ ಧರ್ಮೇಂದ್ರನಿಗೂ ಗಾಯಗಳಾಗಿತ್ತು. ಕೊಲೆ ಮಡುವ ಸಂದಭದಲ್ಲಿ ಈತ ಧರಿಸಿದ್ದ ಬಟ್ಟೆಗಳನ್ನು, ಕೊಲೆಗೆ ಬಳಸಿದ ಕತ್ತಿ, ಆರೋಪಿ ಬಳಸಿದ ಮೊಬೈಲ್ ಇತ್ಯಾದಿಗಳನ್ನು ವಶಪಡಿಸಿಕೊಂಡ ಪೊಲೀಸರು ಇವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮೊಬೈಲ್ ಕರೆಗಳು, ಸಾಂದರ್ಭಿಕ ಸಾಕ್ಷ್ಯ ಇತ್ಯಾದಿಗಳನ್ನು ಪರಿಗಣಿಸಿದ ನ್ಯಾಯಾಧೀಶರು ಧರ್ಮೇಂದ್ರ ಶರ್ಮನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀಪರ್ು ಪ್ರಕಟಿಸಿದರು.
ಪ್ರಾಸಿಕ್ಯೂಷನ್ ಪರವಾಗಿ ಟಿ.ಎಸ್.ಜಿತೂರಿ ವಾದಿಸಿದ್ದರು.

ಉಡುಪಿ: ಐದರ ಹರೆಯದ ಮಗನನ್ನು ಕಳೆದ 37 ದಿನಗಳ ಹಿಂದೆ ಅಪಹರಣ ಮಾಡಿ
ದಿಗ್ಭಂಧನದಲ್ಲಿರಿಸಿದ ಪ್ರಕರಣದ ಆರೋಪಿ ಪಣಿಯಾಡಿ ಯಮುನಾ ನಿಲಯದ ನಿವಾಸಿ, ಟ್ಯಾಕ್ಸಿ ಚಾಲಕ ಸುರೇಶ್ ನಾಯ್ಕನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಉಡುಪಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು, ಅಪ್ರಾಪ್ತ ಪ್ರಾಯದ ಬಾಲಕನ ಅಭಿಪ್ರಾಯದಂತೆ ಅತನನ್ನು ತಂದೆಯ ತಮ್ಮನೊಂದಿಗೆ ಕಳುಹಿಸಿಕೊಟ್ಟಿರುವ ವಿದ್ಯಾಮಾನ ಇಂದು ಸಂಜೆ ನಡೆದಿದೆ. ಈ ತೀರ್ಪಿನಿಂದಾಗಿ ತಾಯಿ ಸಂಗೀತಾಳ ರೋಧನ ಮುಗಿಲು ಮುಟ್ಟಿದೆ. ಉಡುಪಿ ನಗರ ಠಾಣೆಯ ಪೊಲೀಸರು ಸುರೇಶ್ ನಾಯ್ಕನನ್ನು ಶುಕ್ರವಾರ ಬೆಳಗ್ಗೆ
ಬಂಧಿಸಿದ್ದರು. ಸುರೇಶ್ ನಾಯ್ಕ ಕಳೆದ 37 ದಿನಗಳಿಂದ ದಿಗ್ಭಂದನದಲ್ಲಿರಿಸಿದ್ದ ಐದರ ಹರೆಯದ ಬಾಲಕನನ್ನೂ ವಶಕ್ಕೆ ಪಡೆದುಕೊಂಡಿದ್ದರು. ಸಂಜೆ ಉಡುಪಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಧೀಶರು ತಂದೆ ಸುರೇಶ್ ನಾಯ್ಕ ಹಾಗೂ ತಾಯಿ ಸಂಗೀತಾಳ ಸಮಕ್ಷಮ ಮಗನಲ್ಲಿ ಯಾರ ಜೊತೆ ಹೋಗುವುದಾಗಿ ಕೇಳಿದಾಗ ಮಗು ತಂದೆ ಜೊತೆ ಹೋಗುವುದಾಗಿ ಹೇಳಿದ್ದಾನೆ. ಬಳಿಕ ನ್ಯಾಯಾಧೀಶರು, ತಂದೆಯನ್ನು ಜೈಲಿಗೆ ಹಾಕುವುದಾಗಿ ತಿಳಿಸಿ, ಯಾರ ಜೊತೆ ಹೋಗುವುದಾಗಿ ಮತ್ತೆ ಪ್ರಶ್ನಿಸಿದಾಗ, ಮಗು ಚಿಕ್ಕಪ್ಪನ ಜೊತೆ ಹೋಗುವುದಾಗಿ ಉತ್ತರಿಸಿದ್ದಾನೆ. ಕಳೆದ 37 ದಿನಗಳಿಂದ ತಂದೆಯ ದಿಗ್ಭಂದನದಲ್ಲಿದ್ದ ಮಗನ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ನ್ಯಾಯಾಧೀಶರು, ಮಗನನ್ನು ತಂದೆಯ ತಮ್ಮನಿಗೆ ಒಪ್ಪಿಸಿ ಆದೇಶ ನೀಡಿದ್ದಾರೆ. 2012 ರ ಡಿಸೆಂಬರ್ 11 ರಂದು ಸಂಜೆ ಸುರೇಶ್ ನಾಯ್ಕ ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ಗಂಡನ ದೌರ್ಜನ್ಯದಿಂದಾಗಿ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಗೀತಾ ನೀಡಿದ ಹೇಳಿಕೆಯ ಪ್ರಕಾರ, ಸುರೇಶ್ ನಾಯ್ಕ ಹಾಗೂ ಈತನ ತಾಯಿ ಶ್ರೀಮತಿ ಪ್ರೇಮಾ ಎಂಬವರ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು. ಡಿ.12 ರಂದು ಸುರೇಶ್ ನಾಯ್ಕ ಹಾಗೂ ಪ್ರೇಮಾರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದರು. ಡಿ.12 ರಂದು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭದಲ್ಲಿ ತಾಯಿ ಸಂಗೀತಾ, ತನ್ನ ಮಗನನ್ನು ಗಂಡ ತನ್ನ ಮೇಲೆ ಹಲ್ಲೆ ನಡೆಸುತ್ತಿರುವಾಗ ಗಂಡನ ಮಿತ್ರ ಸಲೀಂ ಎಂಬಾತ ಬಲವಂತವಾಗಿ ಮನೆಯಿಂದ ಕರೆದೊಯ್ದಿದ್ದಾನೆ ಎಂಬುದಾಗಿ ನೀಡಿದ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳದೆ ಸಂಗೀತಾಳಿಗೆ ಅನ್ಯಾಯ ಮಾಡಿದ್ದರು. ಬಳಿಕ ಮಧ್ಯ ಪ್ರವೇಶ ಮಾಡಿದ ಸಾಂತ್ವನ ಮಹಿಳಾ ಸಹಾಯವಾಣಿಯ ಅಧಿಕೃತರು, ಸಂಗೀತಾಳ ಹೇಳಿಕೆಯನ್ನು ದಾಖಲಿಸಿ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಗೆ ದೂರು ನೀಡಿದ್ದರು.
ಮಕ್ಕಳ ಕಲ್ಯಾಣ ಸಮಿತಿಯು ಡಿ.22 ರಂದು ಸುರೇಶ್ ನಾಯ್ಕನಿಗೆ ಸಮನ್ಸ್ ಹೊರಡಿಸಿ, ಡಿ.29 ರಂದು ಮಗುವನ್ನು ಸಮಿತಿ ಮುಂದೆ ಹಾಜರುಪಡಿಸುವಂತೆ ಆದೇಶಿಸಿದ್ದರು. ಸುರೇಶ್ ಈ ಆದೇಶವನ್ನು ಕಡೆಗಣಿಸಿದ ಕಾರಣ, ಡಿ.29 ರಂದು ಸಮಿತಿಯು ಬಾಲಕನ ಸಹಿತ ಸುರೇಶ್ ನಾಯ್ಕನನ್ನು 2013 ರ ಜ. 5 ರಂದು ಸಮಿತಿ ಮುಂದೆ ಹಾಜರುಪಡಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಬಾಡಿ ವಾರೆಂಟ್ ಹೊರಡಿಸಿದ್ದರು.
ಈ ನಡುವೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ ಅವರು ತಾಯಿ ಸಮಗೀತಾ ಹಾಗೂ ಅಪ್ರಾಪ್ತ ಪ್ರಾಯದ ಮಗುವಿನ ಪರವಾಗಿ ಮಧ್ಯಪ್ರವೇಶ ಮಾಡಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಹಿನ್ನೆಲೆಯಲ್ಲಿ, ಜ.2 ರಂದು ಉಡುಪಿ ನಗರ ಠಾಣೆಯ ಪೊಲೀಸರು ಸುರೇಶ್ ನಾಯ್ಕ ಹಾಗೂ ಸಲೀಂ ವಿರುದ್ಧ ಅಪಹರಣ ಪ್ರಕರಣ
ದಾಖಲಿಸಿಕೊಂಡಿದ್ದರು. ಸಲೀಂನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಆರೋಪಿ ಸಲೀಂಗೆ ಜಾಮೀನು ನೀಡಿ
ಆದೇಶಿಸಿದ್ದರು.
ಸಿಡಬ್ಲ್ಯುಸಿ ಬಾಡಿ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಮತ್ತು ಅಪಹರಣ ಪ್ರಕರಣ ದಾಖಲಿಸಿಕೊಂಡ ಕಾರಣ ಸ್ವತಹ ಪೊಲೀಸರೇ ಆರೋಪಿ ಸುರೇಶನನ್ನು ಹುಡುಕಾಡಿದ್ದರು ಮತ್ತು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದರು. ಸುರೇಶ್ ತನ್ನ ಮನೆಗೆ ಬೀಗ ಹಾಕಿದ್ದು, ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಹೇಳಿಕೊಂಡಿದ್ದರು. ಇದೀಗ ಶುಕ್ರವಾರ ಬೆಳಗ್ಗೆ ಆರೋಪಿ ಸುರೇಶನನ್ನು ಬಂಧಿಸಿರುವ ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಸುರೇಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಕಳೆದ 37 ದಿನಗಳಿಂದ ಆರೋಪಿಯ ದಿಗ್ಭಂದನದಲ್ಲಿದ್ದ ಅಪ್ರಾಪ್ತ ಪ್ರಾಯದ ಬಾಲಕನ ಮಾತಿನಂತೆ ಬಾಲಕನನ್ನು ತಂದೆಯ ತಮ್ಮನೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಬೆಳವಣಿಗೆಯಿಂದ ತಾಯಿ ಸಂಗೀತಾ ದಿಕ್ಕು ತೋಚದವಂತಳಾಗಿದ್ದಾಳೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಕಳೆದ 37 ದಿನಗಳಿಂದ ತಂದೆಯ ದಿಗ್ಭಂಧನದಲ್ಲಿದ್ದ ಐದರ ಹರೆಯದ ಅಪ್ರಾಪ್ತ ಪ್ರಾಯದ ಬಾಲಕ ವ್ಯಕ್ತಪಡಿಸಿದ ಅಭಿಪ್ರಾಯದಂತೆ ಉಡುಪಿ ಜೆ ಎಂ ಎಫ್ ಸಿ ನ್ಯಾಯಾಲಯ ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು ಬಾಲಕನನ್ನು ತಾಯಿಯ ಜೊತೆ ಕಳಿಸದೆ ತಂದೆಯ ತಮ್ಮನ ಜೊತೆ ಕಳುಹಿಸಿದ ವಿದ್ಯಾನಾನ ಇಂದು ನಡೆದಿದೆ.
ಕಳೆದ 37 ದಿನಗಳಿಂದ ತಂದೆ ಸುರೇಶ್ ನಾಯ್ಕನ ದಿಗ್ಭಂದನದಲ್ಲಿದ್ದ ಬಾಲಕನಲ್ಲಿ ನ್ಯಾಯಾಧೀಶರು ‘ನೀನು ತಂದೆಯ ಜೊತೆ ಹೋಗ್ತಿಯ ? ತಾಯಿಯ ಜೊತೆ ಹೋಗ್ತಿಯ’ ಎಂದು ಪ್ರಶ್ನಿಸಿದಾಗ ಮಗು ‘ನಾನು ತಂದೆಯ ಜೊತೆ ಹೋಗ್ತೇನೆ’ ಎಂದು ಅಭಿಪ್ರಾಯ
ವ್ಯಕ್ತಪಡಿಸಿತು. ಆಗ ನ್ಯಾಯಾಧೀಶರು ‘ತಂದೆಯನ್ನು ಜೈಲಿಗೆ ಹಾಕ್ತೇನೆ, ನೀನು ಯಾರ ಜೊತೆ ಹೋಗ್ತಿಯ ?’ ಎಂದು ನ್ಯಾಯಾಧೀಶರು ಬಾಲಕನಲ್ಲಿ ಮರು ಪ್ರಶ್ನಿಸಿದಾಗ, ಬಾಲಕ ‘ನಾನು ಚಿಕ್ಕಪ್ಪನ ಜೊತೆ ಹೋಗ್ತೇನೆ’ ಎಂದು ಹೇಳಿದ ಕಾರಣಕ್ಕೆ ನ್ಯಾಯಾಧೀಶರಾದ ಅಬ್ದುಲ್ ರೆಹಮಾನ್ ಅವರು 5 ವರ್ಷ 5 ವರ್ಷ ಪ್ರಾಯದ ಮಗನನ್ನು ತಾಯಿಯಿಂದ ಬೇರ್ಪಡಿಸಿ ಚಿಕ್ಕಪ್ಪನ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ.
ಬಾಲಕನನ್ನು ಕಳೆದ 37 ದಿನಗಳಿಂದ ದಿಗ್ಭಂದನದಲ್ಲಿರಿಸಿದ್ದ ಆರೋಪಿ ಸುರೇಶ್ ನಾಯ್ಕನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಧೀಶರ ಈ ತೀರ್ಪಿನಿಂದಾಗಿ ಐದರ ಹರೆಯದ ಮಗುವಿನ ತಾಯಿ ಸಂಗೀತಾ ರೋಧನ ಮುಗಿಲು ಮುಟ್ಟಿದೆ.