Posts Tagged ‘ಕುಂದಾಪುರ ಸುದ್ದಿ’

ಉಡುಪಿ: ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕು ಮಟ್ಟಹಳ್ಳಿ ಗ್ರಾಮದ ನಿವಾಸಿ ಕೋಟಿ (28) ಎಂಬವರು ಕುಂದಾಪುರ ತಾಲೂಕು ಹಟ್ಟಿಯಂಗಡಿ ಬಳಿಯ ಬಾಚಿನಕೊಡ್ಲು ಎಂಬಲ್ಲಿ ಅ.9 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರ ತಾಲೂಕು ಕನ್ಯಾನ ಗ್ರಾಮದ ‘ನಮ್ಮ ಭೂಮಿ’ ಎಂಬ ಸರಕಾರೇತರ ಸ್ವಯಂಸೇವಾ ಸಂಸ್ಥೆ (ಎನ್.ಜಿ.ಒ) ಯ ಸಿಡಬ್ಲ್ಯುಸಿ ಆಡಳಿತಾಧಿಕಾರಿ ಶ್ರೀನಿವಾಸ ಗಾಣಿಗ ಕುಂದಾಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಕೋಟಿ ಅವರು 1996 ರಲ್ಲಿ ದಾವಣಗೆರೆಯಿಂದ ನಮ್ಮ ಭೂಮಿಗೆ ಬಂದು ಕಟ್ಟಡ ತರಬೇತಿ ಪಡೆದುಕೊಂಡು 1998 ರಲ್ಲಿ ಊರಿಗೆ ಮರಳಿದ್ದರು ಎಂದು ನಮ್ಮ ಭೂಮಿ ಸಂಸ್ಥೆ
ಹೇಳಿಕೊಂಡಿದೆ. 1998 ರಲ್ಲಿ ದಾವಣಗೆರೆಗೆ ಮರಳಿದ ಕೋಟಿ, ಇದೀಗ ಹಟ್ಟಿಯಂಗಡಿಗೆ ಬಂದು ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬ ಪ್ರಶ್ನೆ ಈಗ ಸಹಜವಾಗಿಯೇ ಮೂಡಿದೆ.
1996 ರಲ್ಲಿ ನಮ್ಮ ಭೂಮಿಗೆ ಬಂದು, 1998 ರಲ್ಲಿ ದಾವಣಗೆರೆಗೆ ಮರಳಿದ ಕೋಟಿ, 14 ವರ್ಷಗಳ ಬಳಿಕ ಹಟ್ಟಿಯಂಗಡಿ ಬಳಿ ಆತ್ಮಹತ್ಯೆ ಮಾಡಿಕೊಂಡರೆ, ಈ ಬಗ್ಗೆ ನಮ್ಮ ಭೂಮಿ ಸಂಸ್ಥೆ ಯಾಕೆ ಪೊಲೀಸರಿಗೆ ದೂರು ನೀಡಿಬೇಕು ಎಂಬ ಪ್ರಶ್ನೆಯೊಂದಿಗೆ ಈ ಇಡೀ ಪ್ರಕರಣದ ಹಿನ್ನೆಲೆ ಅನೇಕ ಸಂಶಯಗಳಿಗೆ ಕಾರಣವಾಗಿದೆ.

ಉಡುಪಿ: ಕುಂದಾಪುರ ತಾಲೂಕಿನ ನಾಡಾ ಗುಡ್ಡೆಯಂಗಡಿ ನಿವಾಸಿ ಯೋಗೀಶ್ ಗಾಣಿಗ (28) ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಟೆಂಪೊ ಚಾಲಕರೂ, ಮಾಲಕರೂ ಆಗಿರುವ ಯೋಗೀಶ್, ಟೆಂಪೊ ಬಾಡಿಗೆ ಮಾಡುತ್ತಿದ್ದವರು ಸೆ.25 ರಂದು ರಾತ್ರಿ ಮನೆಗೆ ಬಾರದೆ ನಿಗೂಢವಾಗಿ ಕಾಣೆಯಾಗಿದ್ದರು. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಮನೆಯವರು ತಿಳಿಸಿದ್ದಾರೆ.
ಸೆ.26 ರಂದು ಬೆಳಗ್ಗೆ ಆಲೂರು ರಸ್ತೆಯ ಕಾಸ್ ಬೆಟ್ಟು ಕ್ರಾಸ್ ಬಳಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ನಿಂತಿದ್ದು, ಪರಿಸರದಲ್ಲಿ ಹುಡುಕಾಡಿದಾಗ ಅಲ್ಲೇ ಸಮೀಪ ಹೆಮ್ಮುಂಜೆ ಕಲ್ಲುಡಿ ಸುಬ್ಬಣ್ಣ ಶೆಟ್ಟಿಯವರ ಮನೆಗೆ ಹಾದುಹೋಗುವ ಮಣ್ಣಿನ ರಸ್ತೆಯ ಬದಿಯಲ್ಲಿ ಕಾಚಿನ ಮರದ ಕೊಂಬೆಗೆ ತನ್ನದೇ ಪ್ಯಾಂಟಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಯೋಗೀಶ್ ಮೃತದೇಹ ಕಂಡುಬಂದಿದೆ.
ಕೃಷ್ಣ ಗಾಣಿಗ ಎಂಬವರ ಮಗನಾದ ಯೋಗೀಶ್ ಅವರು ಯಾವುದೇ ರೀತಿಯಲ್ಲೂ ಆತ್ಮಹತ್ಯೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಯಾರೋ, ಯಾವುದೋ ಉದ್ಧೇಶಕ್ಕೆ ಕೊಲೆ ಮಾಡಿದ್ದಾರೆ ಎಂದು ಯೋಗೀಶನ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಗಂಗೊಳ್ಳಿ ಠಾಣೆಯ ಪೋಲೀಸರು ಪ್ರಕರಣ ದಾಕಲಿಸಿಕೊಂಡಿದ್ದಾರೆ.

ಉಡುಪಿ: ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯು ಕೊಡಮಾಡುವ ಆರನೇ ವರ್ಷದ `ಕಡಲ ತೀರದ ಭಾರ್ಗವ ಡಾ.ಕೆ.ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ’ ಗೆ `ವಿಜಯವಾಣಿ’ ದಿನ ಪತ್ರಿಕೆಯ ಉಡುಪಿ ಜಿಲ್ಲಾ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ
ಆಯ್ಕೆಯಾಗಿದ್ದಾರೆ.
ಅ.6 ರಂದು ಬೆಂಗಳೂರಿನ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾಜ ಸೇವೆ ಮತ್ತು ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಅನುಪಮವಾದ ಸೇವೆಯನ್ನು ಗುರುತಿಸಿ ಈ ಪ್ರಸಸ್ಯಿಗೆ ಆಯ್ಕೆ ಮಾಡಲಾಗಿದೆ ಎಂದು ಕಲಾವಿದರ ಕಲ್ಯಾಣ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.