Posts Tagged ‘dalith sangharsha samithi’

ಉಡುಪಿ: ಪಡುಬಿದ್ರಿ ಗ್ರಾಮದಲ್ಲಿ ಸ್ಥಾಪನೆಗೊಂಡ ಸುಜ್ಲಾನ್ ಕಂಪೆನಿಗಾಗಿ ಭೂಮಿ ಕಳೆದುಕೊಂಡು ನಿರ್ವಸಿತರಾದ ಮೂಲನಿವಾಸಿ ಕಡುಬಡ ಕೊರಗ ಕುಟುಂಬಗಳಿಗೆ ಪುನರ್ವಸತಿ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಡಿವೈಎಫ್ಐ ಮತ್ತು ಕರ್ನಾಟಕ ಜನಪರ ವೇದಿಕೆ ಇವುಗಳ ಜಂಟೀ ಆಶ್ರಯದಲ್ಲಿ ಜುಲೈ 22ರಂದು ಪಡುಬಿದ್ರಿಯಲ್ಲಿ ಹಕ್ಕೊತ್ತಾಯ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ನಡೆಯಿತು.

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೇಡಿ ಆರ್ಆರ್ ಕಾಲನಿಯಿಂದ ಹೊರಟ ಜಾಥಾ, ಪಡುಬಿದ್ರಿ ಗ್ರಾ.ಪಂ.ಕಚೇರಿ ಮುಂಭಾಗದಲ್ಲಿ ಸಮಾಪ್ತಿಗೊಂಡಿತು. ಜಾಥಾದುದ್ದಕ್ಕೂ ಜಾಥಾದಲ್ಲಿ ಪಾಲ್ಗೊಂಡವರು ಸರಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಸುಜ್ಲಾನ್ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಾಥಾದ ಬಳಿಕ ಗ್ರಾ.ಪಂ.ಕಚೇರಿ ಎದುರು ಸಭೆ ನಡೆಸಲಾಯಿತು. ದಲಿತ ಚಿಂತಕರಾದ ಲೋಲಾಕ್ಷ, ದಸಂಸ ವಿಭಾಗೀಯ ಸಂಚಾಲಕರಾದ ಶೇಖರ ಹೆಜಮಾಡಿ, ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರಾದ ಶ್ರೀರಾಮ ದಿವಾಣ, ದಲಿತ ಪರ ಹೋರಾಟಗಾರರಾದ ಲಿಂಗಪ್ಪ ನಂತೂರು ಮೊದಲಾದವರು ನಿರ್ವಸಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸರಕಾರವನ್ನು ಒತ್ತಾಯಿಸಿದರು. ಸಂತ್ರಸ್ತ ಕುಟುಂಬಗಳ ಪರವಾಗಿ ಎಂಎಸ್ಡಬ್ಲೂ ಪದವೀಧರೆ ಶ್ರೀಮತಿ ಮಾತನಾಡಿದರು.

ಭಾರತ ಅಭ್ಯುದಯ ಪ್ರತಿಷ್ಠಾನದ ಅಧ್ಯಕ್ಷರಾದ ಉಮಾನಾಥ ಪಡುಬಿದ್ರಿ, ದಸಂಸ ಮುಖಂಡರಾದ ಹರೀಶ್ ಕಂಚಿನಡ್ಕ, ಕೇಶವ ಸಿ.ಸಾಲ್ಯಾನ್, ಡಿವೈಎಫ್ಐ ಮುಖಂಡರಾದ ವರಪ್ರಸಾದ್ ಬಜಾಲ್, ವಿಠಲ ಮಲೆಕುಡಿಯ, ಜನಪರ ವೇದಿಕೆ ಮುಖಂಡರಾದ ಮೊಹಮ್ಮದ್ ಹಂದಟ್ಟು, ಹೇಮಂತ್ ಕುಂದರ್, ಶೇಖರ ಶೆಟ್ಟಿ, ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ಹಕ್ಕೊತ್ತಾಯ ಸಭೆಯ ಬಳಿಕ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಸನಿಲ್ ಹಾಗೂ ಪಿಡಿಓ ಮಮತಾ ಶೆಟ್ಟಿ ಇವರ ಮೂಲಕ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಸುಜ್ಲಾನ್ ಕಂಪೆನಿಯು ಇದುವರೆಗೆ ನಡೆಸಿದ ಎಲ್ಲಾ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು, ಸುಜ್ಲಾನ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ಹಂಚಬೇಕು, ಪಡುಬಿದ್ರಿ ಗ್ರಾಮದ ಸರ್ವೆ ನಂಬ್ರ 69/1 ರಲ್ಲಿರುವ ಭೂಮಿ ಪ್ರಸ್ತುತ ಕೆಐಡಿಬಿ ಸ್ವಾಧೀನದಲ್ಲಿದ್ದು, ಇದನ್ನು ಯಾವುದೇ ಕಾರಣಕ್ಕೂ ಸುಜ್ಲಾನ್ ಗೆ ನೀಡಬಾರದು, ಬದಲಾಗಿ ಇದನ್ನೂ ಸಹ ನಿರ್ವಸಿತರಿಗೆ ಹಾಗೂ ಭೂರಹಿತರಿಗೆ ವಿತರಿಸಬೇಕು, ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರನ್ನು ಸಂಪುಟದಿಂದ ಕೈಬಿಡಬೇಕು, ನಿರ್ವಸಿತ ಕೊರಗ ಕುಟುಂಬದಲ್ಲಿ ಮೂವರು ಪದವೀಧರ ವಿದ್ಯಾರ್ಥಿನಿಯರಿದ್ದು, ಇವರಿಗೆ ಸೂಕ್ತ ಉದ್ಯೋಗ ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರದ ಮುಂದೆ ಇರಿಸಲಾಗಿದೆ.

ಉಡುಪಿ: ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು ಜಂಟಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ವಂಚಿಸಿದ ವಿದ್ಯಾಮಾನವೊಂದು ಬೆಳಕಿಗೆ ಬಂದಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ
ಉಪಯೋಜನೆಯಡಿಯಲ್ಲಿ 2013-14 ನೇ ಸಾಲಿನಲ್ಲಿ ಅತೀ ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ಐದು ಲಕ್ಷ ರು. ಗಳ ವರೆಗಿನ ಆರ್ಥಿಕ ಧನ ಸಹಾಯವನ್ನು ವಾಣಿಜ್ಯ ಬ್ಯಾಂಕ್ ಗಳ ಮೂಲಕ ಮಂಜೂರು ಮಾಡಿಸಿಕೊಟ್ಟು ನಿರ್ಧಿಷ್ಟ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ದಲಿತ ಸಮುದಾಯವನ್ನು ಮೋಸಗೊಳಿಸಲು ಹುನ್ನಾರ ನಡೆಸಿದ್ದರು.
ಈ ಯೋಜನೆಗೆ ದಲಿತ ಅರ್ಜಿದಾರರು ಮೇ 31 ರ ಒಳಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಅಧಿಕಾರಿಗಳು ದುರುದ್ಧೇಶಪೂರ್ವಕವಾಗಿ ತಡವಾಗಿ ಈ ಬಗ್ಗೆ ಪತ್ರಿಕೆಗಳಲ್ಲಿ
ಪ್ರಕಟವಾಗುವಂತೆ ನೋಡಿಕೊಳ್ಳುವ ಮೂಲಕ ದಲಿತ ಫಲಾನುಭವಿಗಳು ಅರ್ಜಿ ಹಾಕಲು
ಸಾಧ್ಯವಾಗದಂತೆ ಮಾಡಿ ಈ ಸಹಾಯಧನವನ್ನು ಬೇನಾಮಿಗಳ ಮೂಲಕ ತಾವೇ ಸ್ವತಹಾ ಗುಳುಂ ಮಾಡಲು ಸಂಚು ರೂಪಿಸಿದ್ದರು.
ಈ ಸಂಬಂಧದ ಮಾಹಿತಿಗಳು ಪತ್ರಿಕೆಗಳಲ್ಲಿ ಪ್ರಕಟವಾದದ್ದು ಮೇ 29 ರಂದು. ಅದೇ ದಿನ ಪತ್ರಿಕೆ ಓದಿದವರು ಈ ಬಗ್ಗೆ ಯೋಚಿಸಿ ಒಂದು ಸಪಷ್ಟ ನಿಧಾರಕ್ಕೆ ಬರಲು ಕನಿಷ್ಟವೆಂದರೂ ಒಂದು ವಾರ ಬೇಕು. ಹಲವರಿಗೆ ಈ ವಿಷಯ ಗಮನಕ್ಕೆ ಬರುವಾಗ ಮತ್ತೆ ಒಂದು ವಾರ ಆಗಿಯೇ ಆಗುತ್ತೆ. ಮತ್ತೆ ಅಂಥವರು ಅರ್ಜಿ ಪಡೆದುಕೊಳ್ಳಲು ಮಣಿಪಾಲದಲ್ಲಿರುವ ಕೈಗಾರಿಕಾ ಕೇಂದ್ರಕ್ಕೆ ಹೋಗಬೇಕು, ಅರ್ಜಿ ಕೇಳಿ ತರಬೇಕು, ಫಲಾನುಭವಿಯಾಗಲು ಅಜರ್ಿಯೊಂದಿಗೆ ಲಗ್ತೀಕರಿಸಲು ಬೇಕಾದ ದಾಖಲಾತಿಗಳನ್ನು ಸಿದ್ದಪಡಿಸಿಕೊಳ್ಳಬೇಕು. ಇದೆಲ್ಲಕ್ಕೂ ಕನಿಷ್ಟ 10-15 ದಿನಗಳು ಬೇಕೇ ಬೇಕು. ಕನಿಷ್ಟ ಒಮದು ತಿಂಗಳ ಕಾಲಾವಕಾಶ ಇದ್ದಲ್ಲಿ ಮಾತ್ರ ಈ ಯೋಜನೆ ದಲಿತರಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಲು ಸಾಧ್ಯ.
ಆದರೆ, ಇದಾವುದಕ್ಕೂ ಕೈಗಾರಿಕಾ ಕೇಂದ್ರ ಅಧಿಕಾರಿಗಳು ಅವಕಾಶ ಒದಗಿಸದೆ ಮೇ 29 ರಂದು ಪತ್ರಿಕೆಗಳಲ್ಲಿ ಈ ಬಗೆಗಿನ ಪ್ರಕಟಣೆ ಬರುವಂತೆ ಮಾಡಿ, ಕೇವಲ ಎರಡೇ ದಿನಗಳ ಅಂತರದಲ್ಲಿ, ಅಂದರೆ, ಮೇ 31 ರ ಒಳಗೆ ಆಸಕ್ತರು ಅರ್ಜಿ ಸಲ್ಲಿಸಬೇಕೆಂದು ಯೋಜನೆಯನ್ನು ರೂಪಿಸಿದ್ದರು. ಪತ್ರಿಕೆಯಲ್ಲಿ ಪ್ರಕಟವಾದ ಎರಡೇ ದಿನಕ್ಕೆ ಎಲ್ಲಾ ದಾಖಲಾತಿಗಳನ್ನು ಸಿದ್ಧಪಡಿಸಿ ಅರ್ಜಿ ಸಲ್ಲಿಸಲು ಸಧ್ಯದ ವ್ಯವಸ್ಥೆಯಲ್ಲಿ ಯಾರಿಗೂ ಸಾಧ್ಯವಿಲ್ಲ ಎನ್ನುವುದನ್ನು ಮೊದಲೇ ಅರಿತುಕೊಂಡಿದ್ದ ಅಧಿಕಾರಿಗಳು ತಮಗೆ ಬೇಕಾದ ನಿರ್ಧಿಷ್ಟ ದಲಿತ ವ್ಯಕ್ತಿಗಳಿಗೆ ಈ ಬಗ್ಗೆ ಮೊದಲೇ ತಿಳಿಸಿ ಇವರು ಮಾತ್ರವೇ ಅರ್ಜಿ ಹಾಕುವಂತೆ ನೋಡಿಕೊಂಡು, ಇವರಿಗೆ ಸಹಾಯಧನ ಮಂಜೂರುಗೊಳಿಸಿ, ಇವರಿಂದ ದೊಡ್ಡಮಟ್ಟದ ಕಮಿಷನ್ ಗಿಟ್ಟಿಸಿಕೊಳ್ಳಲು ಯೋಜನೆ ಹಾಕಿಕೊಮಡಿದ್ದರು ಎಂಬ ಬಲವಾದ ಸಂಶಯ ವ್ಯಕ್ತವಾಗಿದೆ. ತಡವಾಗಿ ಪತ್ರಿಕೆಗಳಲ್ಲಿ ಮಾಹಿತಿ ಪ್ರಕಟಿಸಿ ವಂಚಿಸಲು ಯತ್ನಿಸಿದ ಅಧಿಕಾರಿಗಳ ವಿರುದ್ಧ ದಲಿತರು ಇದೀಗ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ದಸಂಸ ಮುಖಂಡ ಜಯನ್ ಮಲ್ಪೆ ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ದಲಿತರಿಗಾಗುತ್ತಿರುವ ಅನ್ಯಾಯದ ಬಗ್ಗೆ ಮೌಖಿಕ ದೂರು ಸಲ್ಲಿಸಿದ್ದಾರೆ.

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಅವರನ್ನು ಜಿಲ್ಲೆಯಿಂದ ಸಚಿವರನ್ನಾಗಿ ಆಯ್ಕೆ ಮಾಡುವಂತೆ ಜಿಲ್ಲೆಯ ದಲಿತ ಮುಖಂಡರ ನಿಯೋಗವೊಂದು ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡು ಒತ್ತಡ ಹಾಕಿದೆ.
ಪ್ರಮೋದ್ ಅವರು ಬಡವರು, ದಲಿತರು, ಮಹಿಳೆಯರ ಬಗ್ಗೆ ಅಪಾರವಾದ ಕಾಳಜಿಯುಳ್ಳವರು. ಜನ ಸಾಮಾನ್ಯರ ಕೈಗೆ ಸಿಕ್ಕುವಂಥ ವ್ಯಕ್ತಿ. ಯಾವುದೇ ಒಂದು ಜಾತಿಯವರ ಪರವಾಗಿಯಷ್ಟೇ ಕೆಲಸ ಮಾಡಿದವರೂ ಅಲ್ಲ. ಇವರನ್ನು ಸಚಿವರನ್ನಾಗಿ ಮಡಿದಲ್ಲಿ ಮಾತ್ರ ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗೆ ಪ್ರಯೋಜನವಾಗಲಿದೆ. ಮಾತ್ರವಲ್ಲ, ಪ್ರಮೋದರು ಸಚಿವರಾದರೆ ಮಾತ್ರವೇ ಜಿಲ್ಲೆಯ ಎಲ್ಲಾ ಜಾತಿ, ಮತ, ವರ್ಗಗಳ ಜನರಿಗೂ ಉಪಕಾರವಾಗಲಿದೆ ಎಂದು ದಲಿತ ನಾಯಕರು ಡಾ.ಪರಮೇಶ್ವರ್ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿದುಬಂದಿದೆ. ಕಾಪು ಕ್ಷೇತ್ರದಿಂದ ಶಾಸಕರಾದ ವಿನಯ ಕುಮಾರ್ ಸೊರಕೆಯವರು ಸಂಸದರಾಗಿದ್ದ ಅವಧಿಯಲ್ಲಿಯೂ ಅವರು ಜಿಲ್ಲೆಗಾಗಲೀ, ಜಿಲ್ಲೆಯ ಬಡ ಜನರಿಗಾಗಲೀ ಮಾಡಿದ್ದೇನೂ ಇಲ್ಲ. ಸ್ವಜಾತಿ ವಾದಿಯಾದ ಸೊರಕೆಯವರು ತಮ್ಮ ಸುತ್ತಲೂ ಸ್ವಜಾತಿ ಬಾಂಧವರನ್ನೇ ಇಟ್ಟುಕೊಂಡು ರಾಜಕೀಯ ಮಾಡಿದವರು. ಸೊರಕೆಯವರನ್ನು ಸಚಿವರನ್ನಾಗಿ ಮಡಿದಲ್ಲಿ ಇತರ ಯವ ಜಾತಿಯವರಿಗೂ ಯಾವುದೇ ಲಾಭವಾಗದು. ಸೊರಕೆಯವರನ್ನು ಸುತ್ತುವರಿದಿರುವ ಅವರ ಸ್ವಜಾತಿ ಬಾಂಧವರೂ ಇತರ ಯಾರನ್ನೂ ಶಾಸಕರ ಹತ್ತಿರ ಸುಳಿಯಲೂ ಬಿಡಲಾರದ ಸ್ಥಿತಿ ನಿರ್ಮಾಣವಾಗುವುದು ಖಚಿತ ಎಂದು ದಲಿತ ಮುಖಂಡರು ಸೊರಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಉಡುಪಿ ಜಿಲ್ಲೆಯಿಂದ ಸಚಿವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸೊರಕೆಯವರ ಬದಲಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಪರಿಗಣಿಸಬೇಕು. ಪ್ರಮೋದರನ್ನು ಸಚಿವರನ್ನಾಗಿ ಮಾಡಿದಲ್ಲಿ ಜಿಲ್ಲೆಯ ಸಮಸ್ತ ದಲಿತ ಸಮುದಾಯ ಪ್ರಮೋದ್ ಜೊತೆಗೆ ಸಹಕರಿಸಲಿದೆ. ಮಾತ್ರವಲ್ಲ, ಮುಂಬರುವ ಲೋಕಸಭ ಚುನಾವಣೆಯಲ್ಲಿ ದಲಿತ ಸಮುದಾಯ ಕಾಂಗ್ರೆಸ್ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದು ದಲಿತರ ನಿಯೋಗ ಕೆಪಿಸಿಸಿ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿತು. ಕೆಪಿಸಿಸಿ ಅಧ್ಯಕ್ಷರು ನಿಯೋಗದ ಜೊತೆಗೆ ಸಕರಾತ್ಮಕವಾಗಿ ಸ್ಪಂದಿಸಿತು ಎಂದು ಮಾಹಿತಿ ಮೂಲಗಳು ತಿಳಿಸಿವೆ.