Posts Tagged ‘government of karnataka’

ಉಡುಪಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ ಮಂಗಳೂರು ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿರುವ ರಕ್ತನಿಧಿ (ಬ್ಲಡ್ ಬ್ಯಾಂಕ್)ಯ ಸಂಗ್ರಹದಲ್ಲಿದ್ದ
ಸಾರ್ವಜನಿಕರಿಂದ ಸಂಗ್ರಹಿಸಲಾದ 43 ಯುನಿಟ್ ರಕ್ತ ಚರಂಡಿಗೆ ಎಸೆಯಲಾದ ದುರಂತ ವಿದ್ಯಾಮಾನವೊಂದು ನಡೆದಿದೆ.

ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಊರಿನಲ್ಲಿಯೇ, ರಾಜ್ಯ ಸರಕಾರದ ಅಧೀನದಲ್ಲಿರುವ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ ಬ್ಲಡ್ ಬ್ಯಾಂಕ್ ನ ರಕ್ತ ಚರಂಡಿಗೆಸೆಯಲ್ಪಟ್ಟಿರುವುದು ವಿಪರ್ಯಾಸವೇ ಸರಿ.

43 ಯುನಿಟ್ ರಕ್ತವನ್ನು ಈಗಾಗಲೇ ಚರಂಡಿಗೆ ಹರಿಯಬಿಡಲಾಗಿದ್ದರೆ, 47 ಯುನಿಟ್ ರಕ್ತವನ್ನು ಇನ್ನು ಒಂದೆರಡು ದಿನಗಳಲ್ಲಿ ಚರಂಡಿಗೆ ಹರಿಯಬಿಡಲು ಸಿದ್ದತೆ
ನಡೆಸಲಾಗಿತ್ತು ಎಂದು ಹೇಳಲಾಗಿದೆ.

ಅತ್ಯಮೂಲ್ಯವಾಗಿರುವ ರಕ್ತವನ್ನು ಹೀಗೆ ಚರಂಡಿಗೆ ಸೆಯುವುದು ಅಕ್ಷಮ್ಯ ಅಪರಾಧವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಸರಕಾರ ಐಪಿಸಿ ಕಲಂ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಮಂಗಳೂರಿನವರೇ ಆಗಿರುವ ಸಚಿವ ಖಾದರ್ ಪೊಲೀಸರಿಗೆ ಆದೇಶಿಸುವುದು ಅತೀ ಅಗತ್ಯವಾಗಲಿದೆ. ಇದನ್ನು ಸಚಿವರು ಮಾಡದೇ ಇದ್ದಲ್ಲಿ ಸಚಿವರು ಆರೋಪಿಗಳನ್ನು ರಕ್ಷಿಸದಂತಾಗಲಿದೆ.

ಚರಂಡಿಗೆಸೆಯಲಾದ ರಕ್ತ ರೆಡ್ ಕ್ರಾಸ್ ಸೊಸೈಟಿಗೆ ಸೇರಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೂಡಲೇ ರೆಡ್ ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್ ಅಧಿಕಾರಿಯನ್ನು ಅಮಾನತುಗೊಳಿಸಬೇಕಾಗುತ್ತದೆ.

ದಕ್ಷ ಮತ್ತು ಪ್ರಾಮಾಣಿಕ ವೈದ್ಯಾಧಿಕಾರಿಗಳನ್ನು ಸುಳ್ಳು ದೂರಿನಡಿಯಲ್ಲಿ ಅಮಾನತು ಮಾಡುವ, ಸರಕಾರಿ ರಕ್ತನಿಧಿಯನ್ನು ನಾಶಗೊಳಿಸಿ, ಖಾಸಗಿ ಬ್ಲಡ್ ಬ್ಯಾಂಕ್ ಗಳನ್ನು ಪೋಷಿಸುವ ರಾಜ್ಯ ಸರಕಾರ ಮತ್ತು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್, ಆರೋಗ್ಯ ಇಲಾಖೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ಐಎಎಸ್, ಹಾಲಿ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಂ ಮೊದಲಾದವರು ನೀತಿಗಳೇ, ಪ್ರಸ್ತುತ ಸಾರ್ವಜನಿಕರಿಂದ ಸಂಗ್ರಹಿಸಲಾದ ಜೀವ ರಕ್ಷಕ ರಕ್ತ ಚರಂಡಿಗೆಸೆಯಲ್ಪಡಲು ಮೂಲ ಕಾರಣವೆನ್ನಲಾಗಿದೆ.

http://www.udupibits.in news
ಉಡುಪಿ: ಕೈಗಾರಿಕೋದ್ಯಮಿಗಳು, ಅಧಿಕಾರಿಗಳು, ಶ್ರೀಮಂತರು ಸುಳ್ಳು ದಾಖಲೆ ಸೃಷ್ಟಿಸಿ ಮತ್ತು ಕಾನೂನಿನ ಕಣ್ಣಿಗೆ ಮಣ್ಣೆರಚಿ ನೂರಾರು, ಸಾವಿರಾರು ಎಕರೆ ಸರಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಹೀಗೆ ಕಬಳಿಸಿರುವ ಭೂಮಿಯನ್ನು ಯಾವುದೇ ರಿಯಾಯಿತಿಯೂ ಮಾಡದೆ ನಿರ್ದಾಕ್ಷಿಣ್ಯವಾಗಿ ಸರಕಾರ ಸ್ವಾಧೀನಪಡಿಸಿಕೊಳ್ಳಬೇಕು. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನಿವೇಶನ ರಹಿತರಿಗೆ ವಿತರಿಸಲು ಬಳಕೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ನಾಯಕ ನಿತ್ಯಾನಂದ ಸ್ವಾಮಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

10 ಎಕರೆಗಿಂತ ಕಡಿಮೆ ಭೂಮಿಯಲ್ಲಿ ಅಕ್ರಮ ಸಾಗುವಳಿ ಮಾಡುವವರಿಗೆ ಭೂಮಿಯ ಹಕ್ಕುಪತ್ರ ಕೊಡಬೇಕು, ಒಕ್ಕಲೆಬ್ಬಿಸುವ ಪ್ರಯತ್ನ ಕೈಬಿಡಬೇಕು, ಬಡ ನಿವೇಶನ ರಹಿತರಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಹತೆ ಇದ್ದವರ ಪಟ್ಟಿ ಮಾಡಿ ಕೊಡಬೇಕು ಮತ್ತು ನಿವೇಶನ ವಿತರಿಸಲು ತುತರ್ು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಂಘದ ಉಡುಪಿ ತಾಲೂಕು ಸಮಿತಿಯ ವತಿಯಿಂದ ಉಡುಪಿ ತಾಲೂಕು ಕಚೇರಿ ಮುಂದೆ ಆರಂಭಿಸಲಾದ ಅನಿರ್ಧಿಷ್ಟಾವಧಿ ಧರಣಿಯ ಎರಡನೇ ದಿನವಾದ ಇಂದು (28.10.2014) ಪೂರ್ವಾಹ್ನ ನಿತ್ಯಾನಂದ ಸ್ವಾಮಿ ಮಾತನಾಡಿದರು.

ಸುಪ್ರೀಂ ಕೋರ್ಟ್ ಆದೇಶವನ್ನು ಮುಮದಿಟ್ಟುಕೊಂಡು ರಾಜ್ಯ ಸರಕಾರ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಬಗರ್ ಹುಕುಂ ಸಾಗುವಳಿದಾರರು ಜೀವನ ನಿರ್ವಹಣೆಗಾಗಿ ಒಂದೆರಡು ಎಕರೆ ಭೂಮಿಯಲ್ಲಿ ಸಾಗುವಳಿ ಮಾಡುವವರಾಗಿದ್ದು, ಇವರನ್ನು ಒಕ್ಕಲೆಬ್ಬಿಸಲು ನೋಟೀಸ್ ಮಾಡುವ ಸರಕಾರ, ಸಾವಿರಾರು ಎಕರೆ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿರುವ ಶ್ರೀಮಂತ ಭೂಗಳ್ಳರಿಗೆ ಮಾತ್ರ ನೋಟೀಸ್ ಮಾಡುತ್ತಿಲ್ಲ. ಭೂಗಳ್ಳರೊಂದಿಗೆ ಬಗರ್ ಹುಕುಂ ಸಾಗುವಳಿದಾರರನ್ನು ಹೋಲಿಸಬಾರದು ಎಂದು ನಿತ್ಯಾನಂದ ಸ್ವಾಮಿ ಮನವಿ ಮಾಡಿದರು.

ಸರಕಾರ ಬದಲಾಗಬಹುದು, ಆದರೆ ಭೂಮಿಗೆ ಸಂಬಂಧಿಸಿದಂತೆ ಸರಕಾರದ ಧೋರಣೆ ಬದಲಾಗುವವರೆಗೂ, ನಿವೇಶನದ ವಿಷಯ ತಾರ್ಕಿಕ ಅಂತ್ಯ ಕಾಣುವವರೆಗೂ ಸಂಘ ನಿವೇಶನ ರಹಿತರ ಪರವಾದ ಹೋರಾಟವನ್ನು ಮುಂದುವರಿಸಲಿದೆ. ಸರಕಾರ ಅಕ್ರಮ ಸಕ್ರಮಕ್ಕೆ ಇದೀಗ ಮುಂದಾಗಿದ್ದು, ಇದು ಸಂಗದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ನಿತ್ಯಾನಂದ ಸ್ವಾಮಿ ತಿಳಿಸಿದರು.

ಸಂಘದ ಪ್ರಮುಖರಾದ ಕೆ.ಶಂಕರ್, ಬಾಲಕೃಷ್ಣ ಶೆಟ್ಟಿ, ಎಚ್.ವಿಠಲ, ಕೆ.ಲಕ್ಷ್ಮಣ್, ವಿದ್ಯಾರಾಜ್ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು.

ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಮತ್ತು ಉಡುಪಿ ತಾಲೂಕು ಕಚೇರಿ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಿವೇಶನ ರಹಿತರ ಪರವಾದ ಅನಿರ್ಧಿಷ್ಟಾವಧಿ ಧರಣಿ ನಡೆಯುತ್ತಿದೆ.

http://www.udupibits.in news
ಉಡುಪಿ: ಗುತ್ತಿಗೆದಾರ, ಉದ್ಯಮಿ ಜಿ.ಶಂಕರ್ ಸಹಿತ ರಾಜ್ಯ ಮಟ್ಟದ ಪ್ರಮುಖ ಗುತ್ತಿಗೆದಾರರ ಮನೆಗಳು, ಕಚೇರಿಗಳು, ಗುತ್ತಿಗೆದಾರ ಸಂಸ್ಥೆಗಳ ಕಚೇರಿಗಳಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಭಾರೀ ದಾಳಿಯಲ್ಲಿ, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಒಟ್ಟು 200 ಕೋಟಿ ರು. ನಗದು ಹಣ, 30 ಕೆ.ಜಿ. ಚಿನ್ನಾಭರಣಗಳು ಮತ್ತು ಹಲವಾರು ನಕಲಿ ಬಿಲ್ ಗಳು ಪತ್ತೆಯಾಗಿವೆ.

ಆದಾಯ ತೆರಿಗೆ ಇಲಾಖೆಯ 500 ಮಂದಿ ಅಧಿಕಾರಿಗಳು ಅಕ್ಟೋಬರ್ 9ರಂದು ಬೆಂಗಳೂರು, ರಾಯಚೂರು, ಬಿಜಾಪುರ, ಗುಲ್ಬರ್ಗ, ಉಡುಪಿ ಸಹಿತ ರಾಜ್ಯದಾದ್ಯಂತದ 50 ಮನೆ ಮತ್ತು ಕಚೇರಿಗಳಿಗೆ ಏಕ ಕಾಲಕ್ಕೆ ದಾಳಿ ನಡೆಸಿದರು. ಆದಾಯ ತೆರಿಗೆ ಇಲಾಖೆ ಇತ್ತೀಚೆಗಿನ ಅವಧಿಯಲ್ಲಿ ಸಂಘಟಿಸಿದ ಅತೀ ದೊಡ್ಡ ದಾಳಿ ಕಾರ್ಯಾಚರಣೆ ಇದು ಎನ್ನಲಾಗಿದೆ.

ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್, ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ಮತ್ತು ಕಾವೇರಿ ನೀರಾವರಿ ನಿಗಮ ಲಿಮಿಟೆಡ್ ಇವುಗಳ ರಾಜ್ಯ ಮಟ್ಟದ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳಿಗೂ ದಾಳಿ ನಡೆದಿದೆ. ಇವುಗಳು ವಾರ್ಷಿಕವಾಗಿ 4 ಸಾವಿರ ಕೋಟಿ ರು.ಗಳ ಟೆಂಡರು ಪ್ರಕ್ರಿಯೆ ನಡೆಸುತ್ತಿದೆ ಎನ್ನಲಾಗಿದೆ. ಈ ಮೂರೂ ನಿಗಮಗಳ ಅಧ್ಯಕ್ಷರು ಮುಖ್ಯಮಂತ್ರಿಗಳಾಗಿದ್ದಾರೆ.

ರಾಜ್ಯ ಮಟ್ಟದ ನೀರಾವರಿ ಗುತ್ತಿಗೆದಾರರು, ಹೆದ್ದಾರಿ ಗುತ್ತಿಗೆದಾರರು ಹಾಗೂ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ
ಗುರಿಯಾಗಿದ್ದಾರೆ. ಇವರಲ್ಲಿ ಕೆಲವು ಮಂದಿ ಗುತ್ತಿಗೆದಾರರು ಕೌಟುಂಬಿಕ ಉದ್ಯಮಗಳನ್ನು ನಡೆಸುತ್ತಿರುವುದು ದಾಳಿಯ ಸಮಯದಲ್ಲಿ ಕಂಡುಬಂದಿದೆ.

ಬಲೆಗೆ ಬಿದ್ದ ಗುತ್ತಿಗೆದಾರರಲ್ಲಿ ಡಿ.ವೈ.ಉಪ್ಪಾರ ಹಾಗೂ ಡಾ.ಜಿ.ಶಂಕರ್ ಪ್ರಮುಖರಾಗಿದ್ದಾರೆ. ಉಪ್ಪಾರ ಅವರು ವಾರ್ಷಿಕ 4 ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತದ ಗುತ್ತಿಗೆ ವ್ಯವಹಾರ ನಡೆಸುತ್ತಿದ್ದರೆ, ಜಿ.ಶಂಕರ್ ಸಹಿತ ಉಳಿದವರು ವಾರ್ಷಿಕವಾಗಿ 300ರಿಂದ 600 ಕೋಟಿ ರು.ಗಳಿಗೂ ಅಧಿಕ ಮೊತ್ತದ ಗುತ್ತಿಗೆ ವ್ಯವಹಾರ ನಡೆಸುತ್ತಿದ್ದರೆನ್ನಲಾಗಿದೆ. ಇವರುಗಳ ಅಧೀನದಲ್ಲಿ ಇನ್ನೂ ಕೆಲವು ಮಂದಿ ಗುತ್ತಿಗೆದಾರರು ಇದ್ದಾರೆನ್ನಲಾಗದೆ.

ಅಮೃತ ಕನ್ಸ್ಟ್ರಕ್ಷನ್ ಪ್ರೈವೆಟ್ ಲಿಮಿಟೆಡ್, ಎಸ್.ಎನ್.ಸಿ.ಪವರ್ ಕಾರ್ಪೋರೇಷನ್ ಪ್ರೈವೆಟ್ ಲಿಮಿಟೆಡ್, ರಘು ಇನ್ಫ್ರಾ ಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳು ಸಹ ಆದಾಯ ತೆರಿಗೆ ಇಲಾಖಾಧಿಕಾರಿಗಳ ದಾಳಿಗೆ ತುತ್ತಾಗಿದೆ. ದಾಳಿಗೆ ಗುರಿಯಾದ ಗುತ್ತಿಗೆದಾರರಲ್ಲಿ ಓರ್ವರಿಗೆ ಸ್ವಂತ ಹೆಲಿಕಾಫ್ಟರ್ ಇದ್ದು, ಇದನ್ನು ಮುಂದಿನ ಸೂಚನೆ ಕೊಡುವ ವರೆಗೆ ಉಪಯೋಗಿಸದಂತೆ ಅಧಿಕಾರಿಗಳು ಗುತ್ತಿಎಗದಾರನಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕೆಲವು ಮಂದಿ ಗುತ್ತಿಗೆದಾರರು ನಕಲಿ ಬಿಲ್ ಮಾಡಿ ಹಣ ನಗದೀಕರಿಸುತ್ತಿರುವುದು ಕೂಡಾ ದಾಳಿ ವೇಳೆಯಲ್ಲಿ ಪತ್ತೆಯಾಗಿದೆ. ದಾಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ ಎಂದು ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರ : ಜಿ.ಶಂಕರ್ ನೇತೃತ್ವದಲ್ಲಿ 27.09.2014ರಂದು ಉಡುಪಿ ಜಿಲ್ಲೆಯಲ್ಲಿ ನಡೆದ ಎರಡು ನಿರ್ಧಿಷ್ಟ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಗಮಿಸಿದಾಗ, ಮುಖ್ಯಮಂತ್ರಿಗಳ ಜೊತೆಗೆ ಜಿ.ಶಂಕರ್.

# ‘ಮಾಹಿತಿ ಹಕ್ಕು ಅಧಿನಿಯಮ ಜಾರಿಯಾದುದು 2005ರಲ್ಲಿ. 2007ರಿಂದ ನಾನು ಈ ಕಾಯ್ದೆಯನ್ನು ಉಪಯೋಗಿಸಿಕೊಂಡು ಬಂದಿದ್ದೇನೆ. 2012ರವರೆಗೂ ನಾನು ಕೇಳಿದ ಬಹುತೇಕ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಸಂಬಂಧಿಸಿದ ಸರಕಾರಿ ಕಚೇರಿಗಳ ಮತ್ತು ಅನುದಾನಿತ ಸಂಸ್ಥೆಗಳ ಅಧಿಕಾರಿಗಳು ನೀಡುತ್ತಾ ಬಂದಿದ್ದಾರೆ. ಮೂರ್ನಾಲ್ಕು ಸಂದರ್ಭಗಳಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಮಾಹಿತಿ ಮತ್ತು ದಾಖಲೆ ಕೊಡುವಲ್ಲಿ ಅತೀ ಬುದ್ದಿವಂತಿಕೆಯನ್ನು ಪ್ರದರ್ಶಿಸಿದ್ದರು. ನನಗೂ ಸಂಬಂಧಿಸಿದ ಪ್ರಕರಣಗಳಲ್ಲಿ ಆಸಕ್ತಿ ಕಡಿಮೆ ಇದ್ದ ಕಾರಣ ಆ ಪ್ರಕರಣಗಳನ್ನು ಮುಂದುವರಿಸದೆ ಕೈಬಿಟ್ಟಿದ್ದೆ.

ಇದೀಗ 2014ರ ಫೆಬ್ರವರಿಯಲ್ಲಿ ಒಟ್ಟು ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಮಾಹಿತಿ ಆಯೋಗದ ಮೆಟ್ಟಿಲು ಹತ್ತುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಐದೂ ಪ್ರಕರಣಗಳು ಗಂಭೀರವಾದ ಪ್ರಕರಣಗಳೇ. ಅತೀ ಸಾಮಾನ್ಯ, ಸಾಮಾನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಅರ್ಜಿದಾರರಿಗೆ ಕೋರಿದ ಮಾಹಿತಿಗಳನ್ನು ಸಮಸ್ಯೆಯನ್ನು ಉಂಟುಮಾಡದೆ ಕೊಡುವ
ಅಧಿಕಾರಿಗಳು, ಗಂಭೀರವಾದ ಪ್ರಕರಣಗಳಾದಾಗ ಮಾತ್ರ ಅರ್ಜಿದಾರರು ಕೋರಿದ
ಮಾಹಿತಿಗಳನ್ನಾಗಲೀ, ದಾಖಲೆಗಳನ್ನಾಗಲೀ ತೊಂದರೆ ಕೊಡದೆ ನೀಡಲು ಮುಂದಾಗುವ ಮನಸ್ಸೇ ಮಾಡುವುದಿಲ್ಲ. ಕೆಲವೊಮ್ಮೆ ಕೋರಿದ ಮಾಹಿತಿಗಳನ್ನಾಗಲೀ, ದಾಖಲೆಗಳನ್ನಾಗಲೀ ಕೊಡುವುದೇ ಇಲ್ಲ. ಕಾರಣ, ಅಮೂಲ್ಯ ಮಾಹಿತಿ ಇಲ್ಲವೇ ದಾಖಲೆಗಳನ್ನು ನೀಡಿದಲ್ಲಿ ಅದರ ಮುಂದಿನ ಪರಿಣಾಮವನ್ನು ತಾವೇ ಅನುಭವಿಸಬೇಕಾದೀತು ಎಂಬ ಭಯ, ಮುಂಜಾಗ್ರತೆ.

ಇಲ್ಲಿ ಒಂದು ವಿಷಯ ಸ್ಪಷ್ಟ. ಯಾವ ಮಾಹಿತಿ ಅಥವಾ ದಾಖಲೆಗಳನ್ನು ನೀಡಿದಲ್ಲಿ, ವಯುಕ್ತಿಕವಾಗಿ ತಮಗೆ ಅಥವಾ ತಮ್ಮ ಹಿರಿಯ ಹಿರಿಯ ಅಧಿಕಾರಿಗಳಿಗೆ ಇಲ್ಲವೇ
ಜನಪ್ರತಿನಿಧಿಗಳ ಕುತ್ತಿಗೆಗೆ ಬರಬಹುದು ಎಂಬ ಆತಂಕವಿರುತ್ತದೆಯೋ, ಅಂಥ ಮಾಹಿತಿ ಅಥವಾ ದಾಖಲೆಗಳನ್ನು ಸರಕಾರಿ ಅಧಿಕಾರಿಗಳು ಅರ್ಜಿದಾರರಿಗೆ ನೀಡವುದೇ ಇಲ್ಲ. ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಿ ಎಂಟೂವರೆ ವರ್ಷ ಕಳೆದರೂ, ಇನ್ನೂ ಸಹ ನಮ್ಮ ರಾಜ್ಯದ, ದೇಶದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಗಮನಾರ್ಹ ಎನ್ನಬಹುದಾದ
ಪಾರದರ್ಶಕತೆಯಾಗಲೀ, ಹೊಣೆಗಾರಿಕೆಯಾಗಲೀ ಮೂಡಿಲ್ಲ, ಬಂದಿಲ್ಲ, ಸೃಷ್ಟಿಯಾಗಿಲ್ಲ ಎಂದರೆ ನಮ್ಮ ದೇಶಕ್ಕೆ ಇನ್ನೆಷ್ಟು ಕಾಯ್ದೆ ಬಂದರೇನು ಪ್ರಯೋಜನ ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಕೆ.ಎ.ಎಸ್.(ಆಯ್ಕೆ ಶ್ರೇಣಿ) ಅಧಿಕಾರಿಯವರನ್ನು 2013ರ ಅಗೋಸ್ತು 26ರಂದು ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು.

ಆರೋಗ್ಯ ಇಲಾಖೆಯಲ್ಲಿ ನಡೆದ ಮತ್ತು ನಡೆಯುತ್ತಲೇ ಇರುವ ಬಹುಕೋಟಿ ಹಗರಣವೊಂದರ ಬಗ್ಗೆ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ನರಸಿಂಹಮೂರ್ತಿಯವರು ತನಿಖೆ ನಡೆಸುತ್ತಿರುವ ಹಂತದಲ್ಲಿ, ತನಿಖೆಯ ಮಧ್ಯೆ ವರ್ಗಾವಣೆ ಮಾಡಿದ್ದು ಸಂಶಯಕ್ಕೆ ಕಾರಣವಾಗಿತ್ತು. ಸಂಶಯ ನಿವಾರಣೆಗಾಗಿ, ವರ್ಗಾವಣೆಯ ಹಿಂದಿನ ದುರುದ್ಧೇಶವನ್ನು ಪತ್ತೆಹಚ್ಚುವ ಸಲುವಾಗಿ 2013ರ ಸೆಪ್ಟೆಂಬರ್ 7ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕು
ಅರ್ಜಿಯೊಂದನ್ನು ಸಲ್ಲಿಸಿದ್ದೆ. ಈ ಅರ್ಜಿಯಲ್ಲಿ, ವರ್ಗಾವಣೆ ಆದೇಶದ ಯಥಾಪ್ರತಿ, ವರ್ಗಾವಣೆಗೆ ಕಾರಣ, ವರ್ಗಾವಣೆ ಸಂಬಂಧ ಇಲಾಖೆ ನಡೆಸಿದ ಲಿಖಿತ ಮತ್ತು ಮೌಖಿಕ ವ್ಯವಹಾರಗಳ ಬಗ್ಗೆ ಮಾಹಿತಿ ಹಾಗೂ ಇತರ ಟಿಪ್ಪಣಿಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಿದ್ದೆ.

ನಾನು ಯಾವ ಮಾಹಿತಿ ಮತ್ತು ದಾಖಲೆಗಳನ್ನು ಕೋರಿದ್ದೆನೋ, ಆ ಎಲ್ಲಾ ದಾಖಲೆಗಳೂ ಪ್ರಧಾನ ಕಾರ್ಯದರ್ಶಿಗಳ ಕಚೇರಿಯಲ್ಲೇ ಲಭ್ಯವಿರುವಂಥವು. ಇದೇ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೇ ನೇರವಾಗಿ ನಾನು ಕೇಳಿದ ಮಾಹಿತಿಗಳನ್ನು ಕಳುಹಿಸಿಕೊಡಬಹುದಿತ್ತು. ಆದರೆ, ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ಎಸ್.ನಾಗರಾಜ್ ಎಂಬವರು ಮಾತ್ರ ಹಾಗೆ ಮಾಡದೆ, ಮಾಹಿತಿ ಕೋರಿ ಕಳುಹಿಸಿದ ಅರ್ಜಿಯನ್ನು ಕಲಂ 6(3)ರಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿದೇಶನಾಲಯದ ಆಯುಕ್ತರಿಗೆ ವರ್ಗಾಯಿಸಿದರು. ನಮಗೇನಂತೆ, ಕೋರಿದ ದಾಖಲೆಗಳು ಸಿಕ್ಕರಾಯಿತಷ್ಟೆ, ಎಂದು ಸುಮ್ಮನಾದೆ.

ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆಯುಕ್ತರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಆಡಳಿತಾಧಿಕಾರಿ (ಸಾಮಾನ್ಯ)ಯವರು ಡಾ.ನರಸಿಂಹಮೂರ್ತಿಯವರನ್ನು ವರ್ಗಾವಣೆ ಮಾಡಿದ ಆದೇಶದ ಯಥಾಪ್ರತಿಯನ್ನು ಕಳುಹಿಸಿಕೊಟ್ಟರು. ಆದರೆ, ನಾನು ಕೋರಿದ ಇತರ ಯಾವುದೇ ದಾಖಲೆಗಳನ್ನಾಗಲೀ, ಮಾಹಿತಿಗಳನ್ನಾಗಲೀ ಕಳುಹಿಸಿಕೊಡದೆ ಅಪೂರ್ಣ ಮಾಹಿತಿಯನ್ನು ನೀಡಿ ಮಾಹಿತಿಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದರು.

ವರ್ಗಾವಣೆ ಆದೇಶದ ಪ್ರತಿಯಲ್ಲಿ, ‘ನರಸಿಂಹಮೂರ್ತಿ ಇವರನ್ನು ಸಾರ್ವಜನಿಕ
ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ’ ಎಂದು
ಸ್ಪಷ್ಟವಾಗಿದೆ. ಆದರೆ, ಸಾರ್ವಜನಿಕ ಹಿತದೃಷ್ಠಿ ಯಾವುದು, ಏನು ಎಂಬುದರ ಬಗ್ಗೆ ಯಾವುದೇ ರೀತಿಯ ಮಾಹಿತಿಯೂ ಅದರಲ್ಲಿಲ್ಲ. ಈ ಸಾರ್ವಜನಿಕ ಹಿತದೃಷ್ಠಿ ಏನು ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕಲ್ಲ ? ಸಾರ್ವಜನಿಕ ಹಿತದೃಷ್ಠಿಯನ್ನೇಕೆ ಇವರು ಗುಟ್ಟು ಮಾಡಬೇಕು ? ಒಬ್ಬನೇ ಒಬ್ಬ ಜನಪ್ರತಿನಿಧಿಯ ಅಥವಾ ಉನ್ನತ ಅಧಿಕಾರಿಯ ಲಿಖಿತ ಇಲ್ಲವೇ ಮೌಖಿಕ ಸೂಚನೆ, ಆದೇಶ ಇಲ್ಲದೆ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಡಲು ಸಾಧ್ಯವೇ ? ಖಂಡಿತಾ ಇಲ್ಲ.

ಮತ್ತೆ, ಕಾಯ್ದೆಯಂತೆ ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಮೇಲ್ಮನವಿ ಪ್ರಾಧಿಕಾರಿಯಾಗಿರುವ ಮುಖ್ಯ ಅಡಳಿತಾಧಿಕಾರಿ ಡಾ.ಕೆ.ಎನ್.ಅನುರಾಧಾ ಇವರಿಗೆ ಡಿಸೆಂಬರ್ 28ರಂದು ಮೇಲ್ಮನವಿ ಸಲ್ಲಿಸಿದೆ. ಡಾ.ಅನುರಾಧಾ ಇವರು ಮೇಲ್ಮನವಿಯನ್ನು ಇತ್ಯರ್ಥಪಡಿಸಲು 2014ರ ಜನವರಿ 18ಕ್ಕೆ ದಿನ ನಿಗದಿ ಮಾಡುತ್ತಾರೆ. ಮೇಲ್ಮನವಿ ಸಲ್ಲಿಸಿದ ನನ್ನನ್ನು ತಮ್ಮ ಬೆಂಗಳೂರಿನಲ್ಲಿರುವ ಕಚೇರಿಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸುತ್ತಾರೆ.

ಮಾಹಿತಿ ಕೋರಿ ಸಲ್ಲಿಸಿದ ಮೂಲ ಅರ್ಜಿಯಲ್ಲಿಯೇ ನಾನು ಕೋರಿದ ಮಾಹಿತಿ ಮತ್ತು ದಾಖಲೆಗಳು ಯಾವುದು ಎಂಬುದು ಸ್ಪಷ್ಟವಾಗಿಯೇ ಇತ್ತು. ನಾನು ಕೇಳಿದ ದಾಖಲೆಗಳಲ್ಲಿ ಒಂದು ದಾಖಲೆಯನ್ನು ಮಾತ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿದ್ದು, ಉಳಿದ ದಾಖಲೆ ಮತ್ತು ಮಾಹಿತಿಗಳನ್ನು ನೀಡದೆ ಕಾಯ್ದೆಯನ್ನು ಉಲ್ಲಂಘಿಸಿದ್ದೂ ಸ್ಪಷ್ಟವಾಗಿಯೇ ಇತ್ತು. ಹೀಗಿದ್ದೂ ಉಡುಪಿಯಲ್ಲಿರುವ ಅರ್ಜಿದಾರನನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ಅಗತ್ಯ ಖಂಡಿತಾ ಇರಲಿಲ್ಲ. ಆದರೆ, ಆಡಳಿತಶಾಹಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು ಹೇಳಿ. ಆದರೂ, ಅರ್ಜಿದಾರನಾದ ನಾನು ಮೇಲ್ಮನವಿಯನ್ನು ಇತ್ಯರ್ಥಪಡಿಸುವ ದಿನದಂದು ಹಾಜರಾಗಲು ಸಾಧ್ಯವಾಗದ ಬಗ್ಗೆ ಸ್ಪಷ್ಟಪಡಿಸಿ, ಮತ್ತೊಮ್ಮೆ ನಾನು ಮಾಹಿತಿ ಹಕ್ಕು ಅರ್ಜಿಯಲ್ಲಿ ಕೋರಿದ್ದೇನು, ಸಾರ್ವಜನಿಕ ಮಾಹಿತಿ ಅಧಿಕಾರಿ ಕೊಟ್ಟದ್ದೇನು, ಕೊಡದೇ ಇದ್ದುದೇನು ಎಂಬ ಬಗ್ಗೆ ಎರಡು ಪುಟಗಳ ಪತ್ರದಲ್ಲಿ ಸವಿವರವಾಗಿ ವಿವರ ನೀಡಿ ನೋಂದಾಯಿತ ಅಂಚೆಯಲ್ಲಿ ಆ ಪತ್ರವನ್ನು ಮೇಲ್ಮನವಿ ಪ್ರಾಧಿಕಾರಿಯಾದ ಡಾ.ಅನುರಾಧಾರಿಗೆ ಕಳುಹಿಸಿಕೊಟ್ಟಿದ್ದೆ.

ಆಡಳಿತಶಾಹಿ ವರ್ಗಕ್ಕೆ ಜನಸಾಮಾನ್ಯರ ಮೇಲೆ, ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ಎಷ್ಟೊಂದು ನಿರ್ಲಕ್ಷ್ಯ, ಅಸಡ್ಡೆ ಎಂದರೆ, ಡಾ.ಅನುರಾಧಾ ಅವರು ನನ್ನ ಪತ್ರವನ್ನು ಕನಿಷ್ಟ ಪರಿಗಣನೆಗೂ ತೆಗೆದುಕೊಳ್ಳದೆ, ‘ಅರ್ಜಿದಾರರು ಗೈರು ಹಾಜರಿದ್ದರು, ಅವರ ಗೈರು ಹಾಜರಿಯಲ್ಲಿ ಮೇಲ್ಮನವಿಯನ್ನು ವಜಾಗೊಳಿಸಲಾಯಿತು’ ಎಂದು ‘ಉಕ್ತ ಲೇಖನ ನೀಡಿ, ಕರಡು ಸರಿಪಡಿಸಿ ಸಹಿ ಮಾಡಿ, ಪ್ರಕರಣವನ್ನು ಮುಕ್ತಾಯಗೊಳಿಸಿಬಿಟ್ಟರು’.

ಮೂಲ ಮಾಹಿತಿ ಹಕ್ಕು ಅರ್ಜಿ, ಮೇಲ್ಮನವಿ ಮತ್ತು ಮೇಲ್ಮನವಿ ಇತ್ಯರ್ಥ ಪಡಿಸುವ ದಿನ ಖುದ್ದು ಹಾಜರು ಇರಲು ಸಾಧ್ಯವಾಗದ ಬಗ್ಗೆ ಬರೆದ ಪತ್ರ ಈ ಮೂರನ್ನೂ ಪರಿಶೀಲಿಸಿ ಮಾಹಿತಿಹಕ್ಕು ಅರ್ಜಿಯಲ್ಲಿ ಕೋರಲಾದ, ಆದರೆ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡದ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಅರ್ಜಿದಾರನಿಗೆ ಕಳುಹಿಸಿಕೊಡುವಂಥ ದಕ್ಷತೆ, ನಿಷ್ಠೆ, ಪ್ರಾಮಾಣಿಕತೆ ಮೇಲ್ಮನವಿ ಪ್ರಾಧಿಕಾರಿಯಾದ ಮುಖ್ಯ ಆಡಳಿತಾಧಿಕಾರಿ ಡಾ.ಅನುರಾಧಾ ಅವರಲ್ಲಿ ಇರಬೇಕಾಗಿತ್ತು. ನಮ್ಮ ಇಡೀ ಆಡಳಿತಶಾಹಿ ವ್ಯವಸ್ಥೆಯೇ ಅವ್ಯವಸ್ಥೆಯ ಕೊಂಪೆಯಲ್ಲಿರುವಾಗ, ದುಡ್ಡು ಹೊಡೆಯುವುದಷ್ಠೆ ಇವರ ಮುಖ್ಯ
ಕಾಯಕವಾಗಿರುವಾಗ, ಇಂಥ ಭ್ರಷ್ಟ, ದುಷ್ಟ ಮತ್ತು ದುರಹಂಕಾರಿ ಸರಕಾರಿ ಅಧಿಕಾರಿಗಳಿಂದ ಪಾರದರ್ಶಕತೆಯ, ಮುಕ್ತತೆಯ, ಹೊಣೆಗಾರಿಕೆಯ ಸೇವೆಯನ್ನು ನಿರೀಕ್ಷಿಸಲು ಸಾಧ್ಯವೇ ? – ಶ್ರೀರಾಮ ದಿವಾಣ.

On 27th September 2013 I Dr. Sharath kumar Rao J. has filed a private complaint on Mrs. Veena Shetty, Mr. Basruru Rajiv Shetty Chairman of Indian Red cross society Karnataka and Dr. Ramachandra Bairy District Health officer, udupi district. At J.M.F.C court and FIR has been lodged on 3rd October 2013 at udupi town police station for extortion and forgery.
Mrs. Veena shetty has filed 3 different versions of complaints. on me and has produced a forged document alleged to be signed by me. First complaint was filed on 15th march 2013 to Department of Health and family welfare & Indian Red Cross society. Allegations, of taking loan of 15 lakhs have been made. Mrs. veena shetty has given a complaint at Indian red Cross society that I have taken money to purchase a house (the current house where I am residing) and also gone to the extent of alleging illegal intimacy and with the health and family welfare department saying I have promised her an aid from government of 50 lakhs and I have taken bribe of 14 lakhs. She was on air on the Udaya TV too, saying I have taken money assuring her to get a house built. She and her team have been in action for the last 6 months, sending feelers to me asking for settlement. They have never approached the court or other bodies. But only have approached Indian red cross and local health department authorities as they were sure that they could manage the show without any real documents, and extort money from me. I was surprised that such baseless and false allegation has been made only with an intension to discredit me. it looks like it was an effort made to remove me from the post of Vice chairman of Indian red cross society and hence representation was made to Indian red cross society and also the Karnataka state government, whose employee I am and to ensure I am dismissed from service. The main aim of this complaint has been to eliminate me because I have made series of complaints on irregularities of Mr. Rajiv Shetty in Indian red cross society from as early as 12th may 2011 periodically. Based on complaints of Mrs. Veena Shetty, Mr. Basruru Rajiv Shetty using his position as chairman of Indian red cross conducted an imaginary enquiry and I was removed from the post of vice chairman. Mr. Rajiv shetty and Mrs. Veena shetty have connive together and Mrs. Veena shetty is an instrument in the hands of Mr. Rajiv shetty. Dr. Ramachandra bairy was selected executive member of the Red Cross soon after my suspension. The same Dr. Ramachandra bairy was appointed as enquiry officer.
Mrs. Veena shetty had given a complaint to vigilance department, health department of Karnataka government and she never attended the enquiry conducted by vigilance department on 4 occasions.
Dr. Bairy’s enquiry has been quoted as the basis for my suspension. This enquiry, supposed to have been conducted, was only collection of information separately from me and Mrs. Veena shetty, as he himself claims. I was purposely deprived of an opportunity to look at documents submitted by Mrs. Shetty and I was not given any hearing. Only after I received the suspension order I realized the basis for my suspension. My suspension order and a forged document supposed to have been signed by me was made available to the media within minutes of my suspension. Dr. Bairy conveniently has not shown this forged document to me during the enquiry. Hence I feel Dr. Bariy has collided with Mrs. Veena Sheety and Mr. Basruru Rajiv shetty to produce a forged document and also making an attempt to illegally extort 15 lakhs rupees from me.
As per my complaint No 114/13 in town police station udupi police have summarized in FIR No :- 409/13 “accused have conspired to take over the blood bank by creating false and forged document so that the government suspends the complainant and also have gone to the media to defame the complainant.” The police have started the investigation. – Dr. Sharath Kumar Rao.J.

ದಿನಾಂಕ 27ನೇ ಸೆಪ್ಟೆಂಬರ್ 2013 ರಂದು ಡಾ.ಶರತ್ ಕುಮಾರ್ ರಾವ್ ಅದ ನಾನು ಶ್ರೀಮತಿ ವೀಣಾ ಶೆಟ್ಟಿ , ಸಾಮಾಜಿಕ ಕಾರ್ಯ ಕರ್ತೆ ಜೀವನ ಸಂಘರ್ಷ , ಶ್ರೀ ಬಸ್ರೂರು ರಾಜೀವ ಶೆಟ್ಟಿ, ಸಭಾಪತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ , ಉಡುಪಿ ಹಾಗು ಡಾ. ರಾಮಚಂದ್ರ ಬಾಯಿರಿ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ. ಇವರ ಮೇಲೆ ಜೆ.ಎಂ ಎಫ್ ಸಿ ನ್ಯಾಯಲಯದಲ್ಲಿ ಸುಲಿಗೆ ಹಾಗೂ ನಕಲಿ ದಾಖಲತಿ ಸೃಷ್ಟಿ ಪ್ರಕರಣವನ್ನು
ದಾಖಲಿಸಿದ್ದೇನೆ.
ದಿನಾಂಕ 03, ಸೆಪ್ಟೆಂಬರ್ 2013ರಂದು ಉಡುಪಿ ನಗರ ಪೋಲೀಸ್ ಠಾಣೆಯಲ್ಲಿ ಮೇಲ್ಕಂಡ ವ್ಯಕ್ತಿಗಳ ಮೇಲೆ ಐ.ಪಿ.ಸಿ. 1866 ( 120ಬಿ 327,330,486, 500, 501) ಕಾಯ್ದೆ ಕಾಲಂ ಅನ್ವಯ ಎಫೈಆರ್ ದಾಖಲಿಸಲಾಗಿದೆ.
ನನ್ನ ನಕಲಿ ಸಹಿಯನ್ನು ಹಾಕಿ ನಕಲಿ ದಾಖಲೆಯನ್ನು ಸೃಷ್ಟಿಸಿ 3 ವಿವಿಧ ಆವೃತ್ತಿಗಳ ದೂರನ್ನು ವಿವಿಧ ಕಡೆ ಶ್ರೀಮತಿ ವೀಣಾ ಶೆಟ್ಟಿ ಸಲ್ಲಿಸಿರುತ್ತಾರೆ. ಮೊದಲನೆಯ ದೂರನ್ನು ದಿನಾಂಕ 15.03.2013ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ಕರ್ನಾಟಕ ಹಾಗೂ ಇನ್ನೊಂದು ದೂರನ್ನು ದಿನಾಂಕ 22 ಮಾರ್ಚ್, 2013ರಂದು ಸಭಾಪತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿಯಲ್ಲೂ ದಾಖಲಿಸಿರುತ್ತಾರೆ. ಮೊದಲನೆಯ ದೂರಿನಲ್ಲಿ ಅಕ್ರಮ ಅನ್ಯೋನ್ಯತೆಯೊಂದಿಗೆ ರೂ 50 ಲಕ್ಷವನ್ನು ನಾನು ನನ್ನ ಮನೆ ಖರೀದಿಸಲೆಂದು ಸಾಲ ರೂಪದಲ್ಲಿ ಪಡೆದಿರುತ್ತೇನೆಂದು. ಎರಡನೇ ದೂರಿನಲ್ಲಿ ರೂ 15ಲಕ್ಷವನ್ನು ಲಂಚ ರೂಪದಲ್ಲಿ ಪಡೆದು ಸರಕಾರದಿಂದ ಜೀವನ ಸಂಘರ್ಷ ಸಂಸ್ಥೆಗೆ 50 ಲಕ್ಷ ಅನುದಾನ ರೂಪದಲ್ಲಿ ಕೊಡಿಸುವುದಾಗಿ ಅಶ್ವಾಸನೆ ನೀಡಿ ಲಂಚ ಪಡೆದಿರುತ್ತಾರೆ ಎಂದು ದೂರಿನಲ್ಲಿ ದಾಖಲಿಸಿರುತ್ತಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇತ್ತಿಚೇಗೆ ಮಾಧ್ಯಮವೊಂದರಲ್ಲಿ 15ಲಕ್ಷವನ್ನು ಶ್ರೀಮತಿ ವೀಣಾ ಶೆಟ್ಟಿಯವರಿಗೆ ಮನೆ ಕಟ್ಟಿಕೊಡಲು ನಾನು ಪಡೆದಿದ್ದೇನೆ ಎಂದು ಆರೋಪಿಸಿದ್ದಾರೆ.
ದಿನಾಂಕ 9 ಏಪ್ರಿಲ್, 2013ರಂದು ಯಾವುದೇ ಸರಿಯಾದ ವಿಚರಣೆಯನ್ನು ನಡೆಸದೆ ನನ್ನನ್ನು ವಿಚಾರಣೆಗೂ ಒಳಪಡಿಸದೆ ಕೇವಲ ಕಪೋಲಕಲ್ಪಿತ ದೂರಿನೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆಯ ಉಪಸಭಾಪತಿ ಸ್ಥಾನದಿಂದ ವಜಾಗೊಳಿಸಿರುತ್ತಾರೆ. ಆದರೆ ಈ ವಿದ್ಯಮಾನಗಳ ಮೂದಲು ನಾನು, ಬಸ್ರೂರು ರಾಜೀವ ಶೆಟ್ಟಿಯವರ ಪಾಲುದಾರಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಘಂಟಾಘೋಷವಾಗಿ ವಿರೋಧಿಸಿ ದೂರುಗಳ ಸರಣಿಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ 2011 ರಿಂದ
ದಾಖಲಿಸಿರುತ್ತೇನೆ.
ದೂರುಗಳ ವಿಚಾರಣೆಯನ್ನು ನಡೆಸದೆ ನನ್ನ ಬಾಯಿ ಮುಚ್ಚಿಸುವ ಉದ್ದೇಶದಿಂದ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯ ಕೆಲವೇ ದಿನಗಳ ಮೊದಲು ನನ್ನನ್ನು ಉಪಸಭಾಪತಿ ಸ್ಥಾನದಿಂದ ಈ ದೂರನ್ನಾದರಿಸಿ ತುರಾತುರಿಯಲ್ಲಿ ಶ್ರೀ. ಬಸ್ರೂರು ರಾಜೀವ ಶೆಟ್ಟಿ ತನ್ನ ಆಧಿಕಾರವನ್ನು ದೂರುಪಯೋಗ ಪಡಿಸಿಕೊಂಡು ನನ್ನನ್ನು ಉಪಸಭಾಪತಿ ಸ್ಥಾನದಿಂದ ವಜಾಗೊಳಿಸಿರುತ್ತಾರೆ. ಹಾಗೂ ವಾರ್ಷಿಕ ಮಹಾಸಭೆಯನ್ನು ನಡೆಸಿ ಬಸ್ರೂರು ರಾಜೀವ ಶೆಟ್ಟಿಯನ್ನು ರೆಡ್ ಕ್ರಾಸ್ ಸಂಸ್ಥೆ ಉಡುಪಿಗೆ ಸಭಾಪತಿಯನ್ನಾಗಿ ಪುನರಾಯ್ಕೆ ಮಾಡಿ, ಡಾ. ರಾಮ ಚಂದ್ರ ಬಾಯಿರಿಯವರನ್ನು ಮ್ಯಾನೇಜೀಂಗ ಕಮೀಟಿಯ ಸದಸ್ಯರನಾಗಿಯೂ ಆಯ್ಕೆ ಮಾಡಲಾಗುತ್ತದೆ. ಇದೆ ಡಾ. ರಾಮಚಂದ್ರ ಬಾಯಿರಿಯವರು ಮುಂದೆ
ತನಿಕಾಧಿಕಾರಿಗಳಾಗಿರುತ್ತಾರೆ. ಇವೆಲ್ಲವನ್ನು ನೋಡಿದಾಗ ಅವ್ಯವಹಾರಗಳನ್ನು ಮುಂದುವರಿಸಲು ಮತ್ತು ಮುಚ್ಚಿಹಾಕಲು ಮಾಡಿಕೊಂಡಿರುವ ವ್ಯವಸ್ಥೆಯಾಗಿದ್ದು , ಶ್ರೀಮತಿ ವೀಣಾ ಶೆಟ್ಟಿಯನ್ನು ಈ ವ್ಯವಸ್ಥೆಯಲ್ಲಿ ದಾಳವನ್ನಾಗಿ ಉಪಯೋಗಿಸಿರುತ್ತಾರೆ. ಶ್ರೀಮತಿ ವೀಣಾ ಶೆಟ್ಟಿಯವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ ಜಾಗೃತ ಕೋಶದಲ್ಲೂ ದೂರು ದಾಖಲಿಸಿದ್ದು, ಅದರ ವಿಚಾರಣೆಗೆ ಶ್ರೀಮತಿ ವೀಣಾ ಶೆಟ್ಟಿಯವರನ್ನು 4 ಬಾರಿ ಕರೆದಿದ್ದರೂ ವಿಚಾರಣೆಗೆ ಆಗಮಿಸಿರುವುದಿಲ್ಲ.
ಡಾ. ರಾಮಚಂದ್ರ ಬಾಯಿರಿಯವರ ತನಿಖಾ ವರದಿಯ ಆಧಾರದಲ್ಲಿ ನನ್ನನ್ನು ಅಮಾನತ್ತು ಮಾಡಿರುತ್ತಾರೆ. ಈ ತನಿಖೆಯಲ್ಲಿ ಕೇವಲ ನನ್ನ ಹಾಗು ಶ್ರೀಮತಿ ವೀಣಾ ಶೆಟ್ಟಿಯವರಿಂದ ಮಾಹಿತಿಯನ್ನು ಪಡೆಯಲಾಗಿದ್ದು. ಶ್ರೀಮತಿ ವೀಣಾ ಶೆಟ್ಟಿಯವರು ಒಪ್ಪಿಸಿದ್ದಾರೆ ಎನ್ನಲಾದ ಖೋಟ ದಾಖಲೆ ಪ್ರತಿಯನ್ನು ನನಗೆ ತೋರಿಸದೆ, ನನ್ನ ಅಭಿಪ್ರಾಯವನ್ನು ಪಡೆಯದೇ ವರದಿಯನ್ನು ಸಲ್ಲಿಸಿರುತ್ತಾರೆ.
ನನ್ನ ಅಮಾನತಿನ ನಂತರದ ಕೆಲವೇ ಘಂಟೆಗಳಲ್ಲಿ ತನಿಖಾ ಸಮಯದಲ್ಲಿ ಒಪ್ಪಿಸಿದ್ದಾರೆ ಎನ್ನಲಾದ ನಕಲಿ ದಾಖಲೆಯನ್ನು ಮತ್ತು ಅಮಾನತಿನ ಅದೇಶವನ್ನು ಶ್ರೀಮತಿ ವೀಣಾ ಶೆಟ್ಟಿಯವರು ನನ್ನ ತೇಜೋವದೆ ಮಾಡುವ ಉದ್ದೇಶದಿಂದ ಮಾಧ್ಯಮಕ್ಕೆ ಹಂಚಿರುತ್ತಾರೆ. ಮೇಲ್ಕಂಡ ವಿಷಯವನ್ನಾಧರಿಸಿ ನಾನು ಶ್ರೀಮತಿ ವೀಣಾ ಶೆಟ್ಟಿ ಶ್ರೀ. ಬಸ್ರೋರು ರಾಜೀವ ಶೆಟ್ಟಿ ಹಾಗು ಡಾ ರಾಮಚಂದ್ರ ಬಾಯಿರಿಯವರು ನಕಲಿ ದಾಖಲಾತಿ ಸೃಷ್ಟಿಸಿ ಹಾಗು 15 ಲಕ್ಷ ಸುಲಿಗೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಭಾವಿಸುತ್ತೇನೆ. ಹಾಗೂ ಪ್ರಕರಣವನ್ನು ದಾಖಲಿಸಿರುತ್ತೇನೆ.
ಮೇಲ್ಕಂಡ ವಿಷಯಗಳನ್ನು ಅಫಿದಾವಿತನಲ್ಲಿ ನಮೂದಿಸಲಾಗಿದೆ ಹಾಗೂ ಮಾನ್ಯ ನ್ಯಾಯಾಲದ ಖಾಸಗಿ ಪಿರ್ಯಾದಿ ನಂಬ್ರ 114/13ರ ಸಾರಾಂಶವೆಂದರೆ ಆಪಾದಿತರು, ಒಳಸಂಚು ರೂಪಿಸಿ ಪಿರ್ಯಾದಿದಾರರಿಗೆ ಸಂಬಂಧಿಸಿದ ರಕ್ತ ನಿಧಿಯ ಕೇಂದ್ರವನ್ನು ಕಸಿದುಕೊಳ್ಳೂವ ಉದ್ದೇಶದಿಂದ ಒತ್ತಾಯಪಡಿಸುವುದು ಅಲ್ಲದೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರಕ್ಕೆ ಹಾಜರು ಪಡಿಸಿ ಅಮಾನತ್ತುಗೊಳಿಸುವಂತೆ ಶಿಫಾರಸ್ಸು ಮಾಡಿದ್ದಲ್ಲದೆ. ದಿನ ಪತ್ರಿಕೆಗಳಲ್ಲಿ ಪ್ರಕಟಿಸಿ ಪಿರ್ಯಾದಿದಾರರ ಮಾನಹಾನಿ ಮಾಡಿರುತ್ತಾರೆ ಎಂದು ಪ್ರಥಮ ವರ್ತಮಾನ ವರದಿಯನ್ನು ಉಡುಪಿ ನಗರ ಪೋಲೀಸ ಠಾಣೆಯ ಪೋಲೀಸಿನವರು ದಾಖಲಿಸಿರುತ್ತಾರೆ. – ಡಾ. ಶರತ್ ಕುಮಾರ್ ರಾವ್ ಜೆ.

ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರ ಸಹಿಯನ್ನು ಪೋರ್ಜರಿ ಮಾಡಿದ ಆರೋಪದ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಾಮಂಚಂದ್ರ ಬಾಯಿರಿ (54), ರೆಡ್ಕ್ರಾಸ್ ಸೊಸೈಟಿಯ ರಾಜ್ಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ (66) ಹಾಗೂ ಎಚ್ಐವಿ ಸೋಂಕಿತ ಸಮುದಾಯದ ಜನರ ಸರಕಾರೇತರ ಸ್ವಯಂಸೇವಾ ಸಂಘಟನೆಯಾದ ಉಡುಪಿಯ ‘ಜೀವನ ಸಂಘರ್ಷ’ದ ಕಾರ್ಯದರ್ಶಿ ವೀಣಾ ಕೆ.ಶೆಟ್ಟಿ (44) ಇವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 3 ರಂದು ಅಪರಾಧ ಸಂಖ್ಯೆ 0409/2013ರಂತೆ ಸೆಕ್ಷನ್ 120 ಬಿ, 327, 330, 468, 500 ಮತ್ತು 501ರ ಪ್ರಕಾರ ಮೊಕದ್ದಮೆ ದಾಖಲಾಗಿದೆ.
ಡಾ.ಶರತ್ ಕುಮಾರ್ ಅವರು ಮುಖ್ಯ ವೈದ್ಯಾಧಿಕಾರಿ ಆಗಿರುವ ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ರಕ್ತನಿಧಿ ಕೇಂದ್ರವನ್ನು ಕಸಿದುಕೊಳ್ಳುವ ದುರುದ್ಧೇಶದಿಂದ ಆರೋಪಿಗಳು ಒಳಸಂಚು ರೂಪಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರಕ್ಕೆ ಹಾಜರುಪಡಿಸುವ ಮೂಲಕ ಡಾ. ಶರತ್ ಅವರು ಅಮಾನತು ಆಗುವಂತೆ ಶಿಫಾರಸು ಮಾಡಿದ್ದಾರೆ. ಮಾತ್ರವಲ್ಲ, ಈ ಮೂಲಕ ಮಾನಹಾನಿಯನ್ನೂ ಮಾಡಿದ್ದಾರೆ ಎಂಬುದು ಡಾ.ಶರತ್ ಆರೋಪವಾಗಿದೆ.
ಉಡುಪಿ ಜಲ್ಲಾಸ್ಪತ್ರೆಯಲ್ಲಿ ಈ ಅಪರಾಧ ಕೃತ್ಯ ನಡೆಸಲಾಗಿದೆ ಎಂದು ಆರೋಪಿಸಿ ಡಾ.ಶರತ್ ಅವರು ಸೆ. 30 ರಂದು ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು (ಜೂನಿಯರ್ ಡಿವಿಷನ್) ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಖಾಸಗಿ ಪಿರ್ಯಾದಿ ಸಲ್ಲಿಸಿದ್ದು, ನ್ಯಾಯಾಧೀಶರ ಆದೇಶದಂತೆ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಪ್ರಕರಣದ ವಿವರ: ಕುಂದಾಪುರ ತಾಲೂಕಿನ ಹಾಲಾಡಿ ನಿವಾಸಿ ವೀಣಾ ಶೆಟ್ಟಿ ಅವರು ‘ಜೀವನ ಸಂಘರ್ಷ’ ಎಂಬ ಎನ್ ಜಿ ಓದ ಮುಖ್ಯಸ್ಥೆ. ತನ್ನ ಸಂಸ್ಥೆಗೆ ಸರಕಾರದಿಂದ ದೊಡ್ಡ ಮೊತ್ತದ ಹಣ ಸಿಗುವಂತೆ ಮಾಡುವುದಾಗಿ ಡಾ.ಶರತ್ ಭರವಸೆ ನೀಡಿದ ಕಾರಣ ತಾನು ಅಲ್ಲಿ ಇಲ್ಲಿ ಕೈ ಸಾಲ ಮಾಡಿ, ಚಿನ್ನಾಭರಣ ಅಡವಿರಿಸಿ ಡಾ.ಶರತ್ ಅವರಿಗೆ 15 ಲಕ್ಷ ರು. ನೀಡಿದ್ದಾಗಿಯೂ, ಬಳಿಕ ಹಣ ಕೊಡದೆ ಮಾನಸಿಕ ಹಿಂಸೆ ನೀಡಿದರೆಂದು ಆರೋಪಿಸಿ ಡಾ. ಶರತ್ ವಿರುದ್ಧ ಮಾರ್ಚ್ 15 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ವೀಣಾ ಶೆಟ್ಟಿ ದೂರು ನೀಡಿದ್ದರು.
ಈ ದೂರನ್ನು ಇಲಾಖಾಧಿಕಾರಿಗಳು ಅಧಿಕೃತವಾಗಿ ಎಪ್ರಿಲ್ 12 ರಂದು ಸ್ವೀಕರಿಸಿ, ಉಡುಪಿ ಡಿಎಚ್ಓ ಡಾ.ರಾಮಚಂದ್ರ ಬಾಯಿರಿ ಹಾಗೂ ಮುಖ್ಯ ಜಾಗೃತ ದಳ (ಚೀಫ್ ವಿಜಿಲೆನ್ಸ್ ಸ್ಕ್ವಾಡ್)ದ ಅಧಿಕಾರಿ ನರಸಿಂಹಮೂರ್ತಿ ಮೂಲಕ ಪ್ರತ್ಯೇಕವಾಗಿ ಎರಡು ರೀತಿಯ ತನಿಖೆಗೆ ಆದೇಶಿಸಿದ್ದರು. ವಿಜಿಲೆನ್ಸ್ ಮುಂದೆ ಹಾಜರಾಗಿ ಹೇಳಿಕೆ ನೀಡಲು ವೀಣಾ ಶೆಟ್ಟಿಯವರಿಗೆ ನಾಲ್ಕು ಬಾರಿ ಅವಕಾಶ ನೀಡಲಾಗಿತ್ತಾದರೂ, ವೀಣಾ ಶೆಟ್ಟಿ ಹಾಜರಾಗದೆ
ನಿರ್ಲಕ್ಷಿಸಿದ್ದರು. ಆದರೆ ಡಾ.ಶರತ್ ಅವರು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದರು. ಈ ಸಂಬಂಧ ತನಿಖಾ ವರದಿ ನೀಡುವ ಮೊದಲೇ ಇಲಾಖೆ ನರಸಿಂಹಮೂರ್ತಿಯವರನ್ನು ಚಾಮರಾಜನಗರ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾಯಿಸಿತ್ತು. ಈ ನಡುವೆ ಉಡುಪಿ ಡಿಎಚ್ಓ ಬಾಯಿರಿ ತನ್ನ ವಿರುದ್ಧ ತನಿಖೆ ನಡೆಸಿದರೆ ಅದು ಏಕಪಕ್ಷೀಯ ತನಿಖೆಯಾಗುವ ಸಾಧ್ಯತೆ ಇದರುವುದರಿಂದ ಬೇರೊಬ್ಬರು ಅಧಿಕಾರಿಯಿಂದ ತನಿಖೆ
ಮಾಡಿಸಬೇಕೆಂದು ಕೋರಿ ಡಾ.ಶರತ್ ಉನ್ನತಾಧಿಕಾರಿಗಳಿಗೆ ಮನವಿ ಮಾಡಿದರಾದರೂ, ಡಾ.ಶರತ್ ಮನವಿಯನ್ನು ಉನ್ನತಾಧಿಕಾರಿಗಳು ಕಡೆಗಣಿಸಿದರು.
ಡಾ.ರಾಮಚಂದ್ರ ಬಾಯಿರಿಯವರು ವೀಣಾ ಶೆಟ್ಟಿಯವರು ನೀಡಿದ ದಾಖಲಾತಿಗಳನ್ನು ಪರಿಶೀಲಿಸಿ ದೃಢೀಕರಿಸಿ ಆರೋಪಗಳನ್ನು ಪುಷ್ಟೀಕರಿಸಿ ಡಾ.ಶರತ್ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿ ಉನ್ನತ ಅಧಿಕಾರಿಗಳಿಗೆ ತನಿಖಾ ವರದಿ ಸಲ್ಲಿಸಿದ್ದರು. ಈ ತನಿಖಾ ವರದಿಯ ಆಧಾರದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು ಡಾ.ಶರತ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿತ್ತು. ತನ್ನ ವಿರುದ್ಧದ ಆರೋಪಕ್ಕೆ ಪೂರಕವಾಗಿ ವೀಣಾ ಶೆಟ್ಟಿ ಇಲಾಖೆಗೆ ಸಲ್ಲಿಸಿದ ಅಗ್ರಿಮೆಂಟ್ನಲ್ಲಿ ತನ್ನ ಸಹಿಯನ್ನು ನಕಲಿ ಮಾಡಲಾಗಿದೆ, ಜಿಲ್ಲಾಸ್ಪತ್ರೆಯಲ್ಲಿರುವ ಸರಕಾರಿ ರಕ್ತನಿಧಿ ಕೇಂದ್ರವನ್ನು ಕಸಿದುಕೊಳ್ಳುವ ದುರುದ್ಧೇಶದಿಂದ ನಕಲಿ
ದಾಖಲಾತಿಗಳನ್ನು ಸೃಷ್ಟಿಸಿ ಮೂವರೂ ಆರೋಪಿಗಳು ಒಳಸಂಚು ರೂಪಿಸಿ ಈ ಅಪರಾಧ ಕೃತ್ಯ ನಡೆಸಿದ್ದಾರೆ. ಜೊತೆಗೆ ತನ್ನ ಮಾನಹಾನಿಯನ್ನೂ ಮಾಡಲಾಗಿದೆ ಎಂದು ಡಾ.ಶರತ್ ಕುಮಾರ್ ರಾವ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಉಡುಪಿ: ‘ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ-2013’ ರ ಅಂಗವಾಗಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯು ವಿಶಿಷ್ಟ ಸಾಧನೆಗೈದ ರಕ್ತನಿಧಿಗಳಿಗೆ ಕೊಡಮಾಡುವ ‘ಶ್ರೇಷ್ಠ ರಕ್ತನಿಧಿ’ ಪ್ರಶಸ್ತಿಗೆ ಈ ಬಾರಿ ಮೈಸೂರು ವಿಭಾಗೀಯ ಮಟ್ಟದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತಬ್ಯಾಂಕ್ ಪಾತ್ರವಾಗಿದೆ.
ರಾಜ್ಯದಲ್ಲಿ ಒಟ್ಟು ನಾಲ್ಕು ವಿಭಾಗಗಳಿದೆ. ಪ್ರತಿಯೊಂದು ವಿಭಾಗಗಳಲ್ಲಿಯೂ ಒಂದು ಸರಕಾರಿ ರಕ್ತನಿಧಿ ಮತ್ತು ಒಂದು ಖಾಸಗಿ ರಕ್ತನಿಧಿ ಕೇಂದ್ರವನ್ನು ಹಾಗೂ ಈ ರಕ್ತನಿಧಿಗಳಿಗೆ ಉತ್ತಮ ಮಟ್ಟದಲ್ಲಿ ಸಹಕರಿಸಿದ ತಲಾ ಒಂದೊಂದು ಸಂಸ್ಥೆಯನ್ನು ಪ್ರಶಸ್ತಿಗೆ ನೀಡಲಾಗುತ್ತದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ರಕ್ತನಿಧಿ ಕೇಂದ್ರ ಮತ್ತು ಇದಕ್ಕೆ ಸಹಕರಿಸಿದ ಉಡುಪಿ ಜಿಲ್ಲಾ ಅರಣ್ಯ ಇಲಾಖಾ ನೌಕರರ ಸಂಘ ಹಾಗೂ ಕಸ್ತೂರ್ಬಾ ಆಸ್ಪತ್ರೆಯ
ರಕ್ತಬ್ಯಾಂಕ್ ಮತ್ತು ಇದಕ್ಕೆ ಸಹಕರಿಸಿದ ಮೊಗವೀರ ಯುವ ಸಂಘಟನೆಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಗಳನ್ನು ಸಂಬಂಧಿಸಿದ ಸಂಸ್ಥೆಗಳ ಅಧಿಕೃತರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಅಕ್ಟೋಬರ್ ಒಂದರಂದು ಪಡೆದುಕೊಂಡಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಅವರು ವಿವಿಧೆಡೆಗಳಲ್ಲಿ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ಶಿಬಿರಗಳನ್ನು ಹಮ್ಮಿಕೊಂಡು ಅನೇಕ ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಸರಕಾರಿ ರಕ್ತನಿಧಿಯನ್ನು ಅಭಿವೃದ್ಧಿಪಡಿಸಲು ಹಗಲಿರುಳು ಶ್ರಮಿಸಿದ್ದರು. ಸರಕಾರಿ ರಕ್ತನಿಧಿ ಕೇಂದ್ರವನ್ನು ಈ ಎತ್ತರಕ್ಕೆ ಬೆಳೆಸುವ ಪ್ರಕ್ರಿಯೆಯಲ್ಲಿ ಡಾ.ಶರತ್ ಅವರು ಖಾಸಗಿ ಸಂಸ್ಥೆಯೊಂದರ ಮುಖ್ಯಸ್ಥರೊಬ್ಬರು ಉಂಟುಮಾಡುತ್ತಿದ್ದ ಅಡ್ಡಿ ಆತಂಕಗಳನ್ನೂ ಎದುರಿಸಬೇಕಾಗಿ ಬಂದಿತ್ತು. ಆದರೂ ಎದೆಗುಂದದೆ ಶರತ್ ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ದಕ್ಷತೆಯಿಂದ ನಿರ್ವಹಿಸುವಲ್ಲಿ
ಯಶಸ್ವಿಯಾಗಿದ್ದರು.
ಮಣಿಪಾಲದ ಕೆಎಂಸಿ ರಕ್ತಬ್ಯಾಂಕ್ ಗೆ ಪ್ರಶಸ್ತಿ ಬಂದ ಬಗ್ಗೆ ಯಾವುದೇ
ಚರ್ಚೆಯಿಲ್ಲವಾದರೂ, ಇದಕ್ಕೆ ಸಹಕರಿಸಿದ ಮೊಗವೀರ ಯುವ ಸಂಘಟನೆಗೆ ಪ್ರಶಸ್ತಿ ನೀಡಿದ ಬಗ್ಗೆ ಒಂದೆರಡು ಅನುಮಾನಗಳು ವ್ಯಕ್ತಗೊಂಡಿವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂಪ್ರೇರಿತ ರಕ್ತದಾನ ಮಾಡಿ ಸಹಕರಿಸಿದ ಸಂಸ್ಥೆಗಳಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮೊಗವೀರ ಯುವ ಸಂಘಟನೆಯ ಮೂಲಕ ರಕ್ತದಾನ ಮಾಡಿದವರಿಗೆ ಕೆಎಂಸಿ 30 ಸಾವಿರ ರು. ಮೊತ್ತದ ವಿಮೆ ಇರುವ ಆರೋಗ್ಯ ಕಾರ್ಡನ್ನು ನೀಡಿದೆ. ಇದರಿಂದಾಗಿ ಇದನ್ನು ಸ್ವಯಂಪ್ರೇರಿತ ರಕ್ತದಾನ ಎಂದು ಹೇಳಲು ಆಗುವುದಿಲ್ಲ. ಇದು ಪ್ರತಿಫಲಾಪೇಕ್ಷೆ ಪಡೆದುಕೊಂಡು ಮಾಡಿದ ರಕ್ತದಾನ ಎನಿಸುತ್ತದೆ. ಹಾಗಾಗಿ ಮೊಗವೀರ ಯುವ ಸಂಘಟನೆಗೆ ಈ ಪ್ರಶಸ್ತಿ ನೀಡಿರುವುದು ಪ್ರಶ್ನಾರ್ಹವಾಗಿದೆ.

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ರಾವ್ ಇವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಇದೇ ಸೆಪ್ಟೆಂಬರ್ 7 ರಂದು ಕರ್ತವ್ಯದಿಂದ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ. ಉಡುಪಿಯ ‘ಜೀವನ ಸಂಘರ್ಷ’ ಎಂಬ ಎಚ್ಐವಿ ಸೋಂಕಿತರ ಸರಕಾರೇತರ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥೆ ವೀಣಾ ಶೆಟ್ಟಿ ಎಂಬವರು ನೀಡಿದ ದೂರಿನ ಮೇಲೆ ಇಲಾಖಾಧಿಕಾರಿಗಳು ಶರತ್ ವಿರುದ್ಧ ಅಮಾನತಿನಂಥ ಕಠಿಣ ಕ್ರಮ ಕೈಗೊಂಡಿದ್ದಾರೆ. ತಾನು ‘ಅಲ್ಲಿ ಇಲ್ಲಿ ಕೈ ಸಾಲ ಮಾಡಿ, ಚಿನ್ನಾಭರಣಗಳನ್ನು ಅಡವಿರಿಸಿ 15 ಲಕ್ಷಕ್ಕೂ ಅಧಿಕ ಹಣವನ್ನು ಡಾ.ಶರತ್ ಅವರಿಗೆ ನೀಡಿರುತ್ತೇನೆ, ಶರತ್ ಅವರು ಸರಕಾರ ಮತ್ತು ಇತರ ಮೂಲಗಳಿಂದ ಜೀವನ ಸಂಘರ್ಷ ಸಂಸ್ಥೆಗೆ ಧನ ಸಹಾಯ ತೆಗೆಸಿಕೊಡುವುದಾಗಿ ನಂಬಿಸಿರುತ್ತಾರೆ, ಬಳಿಕ ಧನ ಸಹಾಯವನ್ನೂ ತೆಗೆಸಿಕೊಡದೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಮಾತ್ರವಲ್ಲ, ತಾನು ಎಚ್ಐವಿ ಸೋಂಕಿತೆ ಎಂದು ಸಾರ್ವಜನಿಕರಿಗೆ ತಿಳಿಸುತ್ತಿದ್ದಾರೆ’ ಎಂಬಿತ್ಯಾದಿ ವೀಣಾ ಶೆಟ್ಟಿಯವರ ದೂರು.
ಈ ದೂರಿನ ಮೇಲೆ ಸಮರ್ಪಕವಾಗಿ ತನಿಖೆ ನಡೆಸದೆಯೇ ಇಲಾಖಾಧಿಕಾರಿಗಳು ಶರತ್ ಅವರನ್ನು ಅಮಾನತುಪಡಿಸಿದ್ದಾರೆ. ದೂರಿನ ಮೇಲೆ ತನಿಖೆ ನಡೆಸಿದ ಇಲಾಖೆಯ ಜಾಗೃತ ಕೋಶದ ಮುಖ್ಯ ಜಾಗೃತಾಧಿಕಾರಿಗಳ ಮುಂದೆ ಶರತ್ ಹಾಜರಾಗಿ ತನ್ನ ಮೇಲಿನ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಆದರೆ ದೂರುದಾರೆಯಾದ ವೀಣಾ ಶೆಟ್ಟಿಯವರಿಗೆ ನಾಲ್ಕು ಬಾರಿ ನೋಟೀಸ್ ನೀಡಿದರೂ, ನಾಲ್ಕೂ ಬಾರಿಯೂ ವೀಣಾ ಶೆಟ್ಟಿ ಮುಖ್ಯ ಜಾಗೃತಾಧಿಕಾರಿಗಳ ಮುಂದೆ ಹಾಜರಾಗದೆ ನಿರ್ಲಕ್ಷಿಸಿದ್ದಾರೆ. ಆದರೂ ವೀಣಾ ಶೆಟ್ಟಿ ಸಲ್ಲಿಸಿದ ದೂರಿನ ಮೇಲೆ ಡಾ.ಶರತ್ ಅವರನ್ನು ಅಮಾನತು ಮಾಡಲಾಗಿದೆ.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ (ಡಿಎಚ್ಓ)
ಡಾ.ರಾಮಚಂದ್ರ ಬಾಯಿರಿಯವರು ಅಮಾನತು ಪ್ರಕರಣದ ಬಗ್ಗೆ ‘ದಿ. ಹಿಂದೂ’ ಪತ್ರಿಕೆಯ ಸೆ. 13ರ ಸಂಚಿಕೆಗೆ ನೀಡಿದ ಪ್ರತಿಕ್ರಿಯೆಯಲ್ಲಿ, ವೀಣಾ ಶೆಟ್ಟಿ ನೀಡಿದ ದೂರು ಮತ್ತು ಡಾ.ಶರತ್ ನೀಡಿದ ಉತ್ತರ, ಎರಡನ್ನೂ ತಾನು ಇಲಾಖೆಯ ಉನ್ನತ ಅಧಿಕಾರಿಗಳಿಗೆ
ಕಳುಹಿಸಿಕೊಟ್ಟಿದ್ದೇನೆ, ಅಷ್ಟೆ. ಇದರಲ್ಲಿ ತನ್ನ ಹೆಚ್ಚಿನ ಪಾತ್ರವೇನೂ ಇಲ್ಲ’ ಎಂದು ಹೇಳಿಕೊಂಡಿದ್ದಾರೆ. ಡಾ.ಬಾಯಿರಿಯವರು ದಿ.ಹಿಂದೂಗೆ ನೀಡಿದ ಪ್ರತಿಕ್ರಿಯೆಯೇ ಸತ್ಯ ಎನ್ನುವುದಾದರೆ, ಈ ಪ್ರಕರಣದಲ್ಲಿ ತನಿಖೆ ನಿಷ್ಪಕ್ಷಪಾತವಾಗಿ ನಡೆದಿಲ್ಲ ಹಾಗೂ ಏಕಪಕ್ಷೀಯವಾಗಿ ಡಾ.ಶರತ್ ಅವರನ್ನು ಅಮಾನತುಪಡಿಸಲಾಗಿದೆ ಎನ್ನುವುದು
ಸ್ಪಷ್ಟವಾಗುತ್ತದೆ.
ಡಾ.ಶರತ್ ಕಳೆದ 12 ವರ್ಷಗಳಿಂದ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಇಲ್ಲಿಗೆ ಸೇರುವ ಸಂದರ್ಭದಲ್ಲಿ ವಾರ್ಷಿಕವಾಗಿ ಕೇವಲ 750 ಯೂನಿಟ್ ರಕ್ತವಷ್ಟೇ ಸಾರ್ವಜನಿಕರಿಗೆ ವಿತರಣೆಯಾಗುತ್ತಿತ್ತು. ಇದೀಗ ಇದರ ಪ್ರಮಾಣ 9,990 ಯೂನಿಟ್ಗೆ ಹೆಚ್ಚಳಗೊಂಡಿದೆ. ಇದು ಶರತ್ ಅವರ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಸಾಕ್ಷಿ. ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದಿಂದ ತಿಂಗಳಿಗೆ 10-12 ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದ ಡಾ.ಶರತ್, ಇದುವರೆಗೆ 500 ಕ್ಕೂ ಅಧಿಕ ಮಾಹಿತಿ ಶಿಬಿರಗಳನ್ನು ನಡೆಸಿದವರು. ಶರತ್ ಅವರಲ್ಲಿ ಇಂಥ ಅನೇಕ ಸಾಧನೆಯ ಪಟ್ಟಿ ಇದೆಯೇ ಹೊರತು ಇದುತನಕ ಒಂದೇ ಒಂದು ಕಪ್ಪುಚುಕ್ಕಿ ಇಲ್ಲ.
ಕೆಎಂಸಿಯಂಥ ಖಾಸಗಿ ಆಸ್ಪತ್ರೆಗಳು ರಕ್ತದಾನ ಶಿಬಿರಗಳನ್ನು ನಡೆಸಿ, ಯೂನಿಟ್ ಗಟ್ಟಲೆ ರಕ್ತ ಸಂಗ್ರಹಿಸಿಕೊಂಡು ಬರುತ್ತಿದ್ದರು. ವಿದ್ಯಾರ್ಥಿ-ಯುವಜನರು ಕ್ಯಾಂಪ್ ಗಳಲ್ಲಿ ಉಚಿತವಾಗಿ ನೀಡುತ್ತಿದ್ದ ರಕ್ತವನ್ನು ಖಾಸಗಿ ಆಸ್ಪತ್ರೆಗಳು ತಮಗೆ ಬೇಕಾದಂತೆ ಉಪಯೋಗಿಸಿ ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದರು, ಈಗಲೂ ಅದನ್ನೇ ಮಾಡುತ್ತಿದ್ದಾರೆ. ಅನೇಕರಿಗೆ ಇದು ತಿಳಿದಿಲ್ಲ. ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಮುಖ್ಯಸ್ಥರಾದ ಕಾರಣಕ್ಕೆ ಈ ವಿಷಯ ಡಾ.ಶರತ್ ಹಾಗೂ ಆಗ ಜಿಲ್ಲಾ ಸರ್ಜನ್ ಆಗಿದ್ದ ಡಾ.ಯು.ಎಂ.ವೈದ್ಯ ಅವರ ಗಮನ ಸೆಳೆಯಿತು.
ಸಾರ್ವಜನಿಕರು ಉಚಿತವಾಗಿ ನೀಡಿದ ರಕ್ತ ಖಾಸಗಿ ಆಸ್ಪತ್ರೆಗಳ ಪಾಲಾಗುತ್ತಿದೆ. ಈ ಆಸ್ಪತ್ರೆಗಳು ತಾವೇ ನಿಗದಿಪಡಿಸಿದ ಮೊತ್ತಕ್ಕೆ ಇದೇ ರಕ್ತವನ್ನು ಶ್ರೀಮಂತ ರೋಗಿಗಳಿಗೂ, ಬಡ ರೋಗಿಗಳಿಗೂ ವಿತರಿಸಿ ಹಣ ಮಾಡುತ್ತಿದೆ. ಇದರಿಂದಾಗಿ ಬಡವರಿಗೆ ಯಾವುದೇ ರೀತಿಯ ಚಿಕ್ಕಾಸಿನ ಪ್ರಯೋಜನವೂ ಆಗುತ್ತಿಲ್ಲ ಎಂಬುದನ್ನು ಕಂಡುಕೊಂಡು ಸರಕಾರಕ್ಕೊಂದು ವರದಿ ಸಲ್ಲಿಸುತ್ತಾರೆ. ಆ ವರದಿಯನ್ನು ಸರಕಾರ ಅಂಗೀಕರಿಸುತ್ತದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದ ವೈದ್ಯರು ಶರತ್ ಅವರ ಸಲಹೆಯಂತೆ ಸಲ್ಲಿಸಿದ ವರದಿಯಿಂದಾಗಿ, ಸರಕಾರ ಆದೇಶವೊಂದನ್ನು ಹೊರಡಿಸಿತು. ಈ ಆದೇಶದ ಪ್ರಕಾರ, ಖಾಸಗಿ ಆಸ್ಪತ್ರೆಗಳು ಶಿಬಿರ ನಡೆಸಿ ಸಾರ್ವಜನಿಕರಿಂದ ಉಚಿತವಾಗಿ ಸಂಗ್ರಹಿಸುವ ರಕ್ತದಲ್ಲಿ 40 ಶೇಕಡಾ ರಕ್ತವನ್ನು ಸರಕಾರಿ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರಿಸಬೇಕಾಗಿ ಬಂತು. ಮಾತ್ರವಲ್ಲ, ಈ ಪ್ರಕ್ರಿಯೆಲ್ಲಿ ಸಾಂಕೇತಿಕವಾಗಿ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಅಧೀನದ ಕೆಎಂಸಿಗೆ ನೀಡಿದ ಪರವಾನಿಗೆಯನ್ನು ಒಂದು ದಿನದ ಮಟ್ಟಿಗೆ ರದ್ದುಪಡಿಸಿ ಶಿಕ್ಷೆ ವಿಧಿಸಿದ ವಿದ್ಯಾಮಾನವೂ ನಡೆಯಿತು.
ಖಾಸಗಿ ಆಸ್ಪತ್ರೆಗಳು, ಕೆಲವು ನಿರ್ಧಿಷ್ಟ ಖಾಸಗಿ ವ್ಯಕ್ತಿಗಳ ಸಂಸ್ಥೆಗಳೊಂದಿಗೆ ಸೇರಿಕೊಂಡು ಇಂಥ ರಕ್ತದಂಧೆಯನ್ನು ನಡೆಸುತ್ತಿವೆ. ಸಾರ್ವಜನಿಕರಿಂದ ಉಚಿತವಾಗಿ ಸಂಗ್ರಹಿಸುವ ರಕ್ತದಲ್ಲಿ 40 ಶೇ. ರಕ್ತವನ್ನು ಸರಕಾರಿ ರಕ್ತನಿಧಿಗೆ
ಹಸ್ತಾಂತರಿಸಬೇಕೆಂಬ ಆದೇಶ ಇವರಿಗೆ ಬರಸಿಡಿಲಿನಂತೆ ಬಂದೆರಗಿತು. ರಕ್ತ ದಂಧೆಕೋರರು ಈ ಆದೇಶವನ್ನು ಸಹಿಸಲಿಲ್ಲ. ಇವರು ಸರಕಾರದ ಮಟ್ಟದಲ್ಲಿ ಪ್ರಭಾವ ಬೀರಿ, ಒತ್ತಡ ಹಾಕಿ 40 ಶೇಕಡಾವನ್ನು 25 ಶೇಕಡಾಕ್ಕೆ ಕಡಿತ ಮಾಡಿಸಿಕೊಂಡು ಬಂದರು. ಹೀಗಿದೆ ಇವರ ಲಾಬಿ. ಹೀಗೆ ರಕ್ತದಂಧೆಕೋರರಿಗೂ ಡಾ.ಶರತ್ ಶತ್ರುವಾಗಿಹೋದರು. ಡಾ.ಶರತ್ ಹಾಗೂ ಡಾ.ಯು.ಎಂ.ವೈದ್ಯರು ಸರಕಾರ ಮತ್ತು ಬಡವರ ಪರವಾಗಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ಸಲ್ಲಿಸಿದ್ದನ್ನು ನಿರಾಕರಿಸಲು ಸಾಧ್ಯವೇ ? ಸರಕಾರ ಮರೆಯಬಹುದು ! ಸತ್ಯ ತಿಳಿದಿರುವವರು ಮರೆತುಬಿಡಲು ಸಾಧ್ಯವೇ ?
ಡಾ.ಶರತ್ ಆರ್ಥಿಕವಾಗಿ ಬಡವರೇನೂ ಅಲ್ಲ. ವೀಣಾರಿಂದ ಹಣ ಪಡೆದುಕೊಳ್ಳುವಂಥ ಯಾವ ಶೋಚನೀಯ ಪರಿಸ್ಥಿತಿಯೂ ಶರತ್ ಅವರಿಗೆ ಇದುವರೆಗೆ ಬಂದಿಲ್ಲ. ಶರತ್ ಅವರನ್ನು ಹತ್ತಿರದಿಂದ ಬಲ್ಲ ನನಗಿದು ಚೆನ್ನಾಗಿಯೇ ಗೊತ್ತು. ಶರತ್ ಅವರಿಗೆ ಹಣ ನೀಡಿರುವ ಬಗ್ಗೆ ತಾನು ಅಗ್ರಿಮೆಂಟ್ ಮಾಡಿಕೊಂಡಿದ್ದೇನೆಂದು ವೀಣಾ ಹೇಳಿಕೊಂಡು ದಾಖಲಾತಿಯೊಂದನ್ನು ಬಿಡುಗಡೆಗೊಳಿಸಿದ್ದಾರೆ. ಈ ಅಗ್ರಿಮೆಂಟ್ನ್ನು ನೋಡಿದರೆ, ಅಗ್ರಿಮೆಂಟ್ ಬರೆಯಲು ಗೊತ್ತಿಲ್ಲದವರೇ ಇದನ್ನು ಸಿದ್ದಪಡಿಸಿದ್ದಾರೆ ಎನ್ನುವುದು ಖಚಿತವಾಗುತ್ತದೆ. ಇದರಲ್ಲಿ ಶರತ್ ಅವರ ಸಹಿಯನ್ನು ಪೋರ್ಜರಿ ಮಾಡಲಾಗಿದೆ. ಪೋರ್ಜರಿ ಸಹಿ ಮಾಡಿದ ಬಳಿಕವಾದರೂ ವೀಣಾ ಅವರು ಇದಕ್ಕೊಂದು ನೋಟರಿ ಮಾಡಿಸಬೇಕಾಗಿತ್ತು. ಆದರೆ ನೋಟರಿ ಮಾಡಿಸಿಲ್ಲ. ನೋಟರಿ ಮಾಡದ, ಪೋರ್ಜರಿ ಸಹಿ ಇರುವ ಅಗ್ರಿಮೆಂಟ್ ಆಧಾರದಲ್ಲಿ ಆರೋಗ್ಯ ಇಲಾಖಾಧಿಕಾರಿಗಳು ಡಾ.ಶರತ್ ಅವರನ್ನು ಅಮಾನತು ಮಾಡಿದೆ ಎಂದರೆ ಆಶ್ಚರ್ಯವಾಗುತ್ತದೆ. ಹೀಗೂ ಉಂಟೆ ?
ವೀಣಾ ಶೆಟ್ಟಿ 2003-04 ರಲ್ಲಿ ಜೀವನ ಸಂಘರ್ಷವನ್ನು ನೋಂದಾಯಿಸುವ ಸಂದರ್ಭದಲ್ಲಿಯೇ ತಾನು ಎಚ್ಐವಿ ಸೋಂಕಿತೆ ಎಂಬುದನ್ನು ಘೋಷಿಸಿಕೊಂಡಿದ್ದಾರೆ. ಸ್ವತಹಾ ವೀಣಾ ಶೆಟ್ಟಿಯವರೇ ವೆಬ್ ಸೈಟ್ ಗಳಲ್ಲೂ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಇಂಟರ್ ನೆಟ್ ಮೂಲಕ ಈ ವಿಷಯವನ್ನು ವೀಣಾ ಶೆಟ್ಟಿಯೇ ಬಹಿರಂಗಪಡಿಸಿದ ಮೇಲೆ, ಶರತ್ ಹೇಳುತ್ತಿದ್ದಾರೆ ಎನ್ನುವ ದೂರಿಗೆ ಏನಾದರೂ ಹುರುಳಿರಲು ಸಾಧ್ಯವೇ ?
ಎಚ್ಐವಿ ಸೋಂಕಿತರದೇ ಸಂಸ್ಥೆಯಾದ ‘ಜೀವನ ಸಂಘರ್ಷ’ ಕಳೆದ 2004 ರಿಂದಲೂ ವೀಣಾ ಶೆಟ್ಟಿಯವರ ವಶದಲ್ಲಿದೆ. ಮೊದಲು ಅಧ್ಯಕ್ಷೆ, ಈಗ ಕಾರ್ಯದರ್ಶಿ. ಈ ಸಂಸ್ಥೆಯ ಇನ್ನೊಬ್ಬ ಪ್ರಮುಖ ಪದಾಧಿಕಾರಿ ಈಕೆಯ ಸಹೋದರ. ಸ್ಥಾಪನೆಯಾದ ಲಾಗಾಯ್ತಿನಿಂದಲೂ ಸಂಸ್ಥೆಗೆ ಬಂದ ಹಣವನ್ನು ಸಹಿ ಹಾಕಿ ಪಡೆದುಕೊಂಡವರು ವೀಣಾ ಹೊರತು ಬೇರೆ ಯಾರೂ ಅಲ್ಲ. ಹೀಗೆ ಪಡೆದುಕೊಂಡ ಲಕ್ಷಾಂತರ ರು. ಎಲ್ಲಿಗೆ ಹೋಯಿತು ಎನ್ನುವುದಕ್ಕೆ ಲೆಕ್ಕವೇ ಇಲ್ಲ. ಇದನ್ನು ಪ್ರಶ್ನಿಸಬೇಕಾದ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಡಿಎಚ್ಓ ಡಾ.ರಾಮಚಂದ್ರ ಬಾಯಿರಿ ಹಾಗೂ ಡಾ.ಅಶೋಕ್ ಜಾಣ ಮೌನ ವಹಿಸಿದ್ದಾರೆ.
14 ಲಕ್ಷದ ನಕಲಿ ಆರೋಪಕ್ಕೆ ಕ್ಲಾಸ್ ಒನ್ ಗಜೆಟೆಡ್ ಅಧಿಕಾರಿಯಾಗಿರುವ ಡಾ.ಶರತ್ರನ್ನು ಅಮಾನತು ಮಾಡಿದ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಚಿವ ಯು.ಟಿ.ಖಾದರ್ ಅವರು, 14 ಕೋಟಿಗೂ ಮಿಕ್ಕಿದ ಡ್ರಗ್ ಖರೀದಿ ಹಗರಣದ ಆರೋಪಿಗಳನ್ನು ಅಮಾನತುಪಡಿಸಿ ಕ್ರಿಮಿನಲ್ ಕೇಸು ದಾಖಲಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ ಈ ಬೃಹತ್ ಹಗರಣದ ತನಿಖಾಧಿಕಾರಿ ಇಲಾಖೆಯಿಂದಲೇ ವರ್ಗಾಯಿಸಿದೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹತ್ತು ಹಲವು ಬಹುಕೋಟಿ ಹಗರಣ ನಡೆದಿದೆ. ನಡೆಯುತ್ತಲೇ ಇದೆ. ಈ ಸಂಬಂಧದ ಕೆಲವು ದೂರುಗಳ ಮೇಲೆ ಇಲಾಖೆ ತನಿಖೆಯನ್ನೇ ನಡೆಸುತ್ತಿಲ್ಲ. ಆರಂಭಗೊಂಡ ತನಿಖೆಯನ್ನು ಮುಂದುವರಿಸುತ್ತಿಲ್ಲ. ಪ್ರಾಮಾಣಿಕ ಅಧಿಕಾರಿಗಳ ಬಾಯಿ ಮುಚ್ಚಿಸುವ ಕೆಲಸವನ್ನು ಇಲಾಖೆ ವ್ಯವಸ್ಥಿತವಾಗಿ ನಡೆಸುತ್ತಿದೆ. ಇಲಾಖೆಗೆ ಇಲಾಖೆಯೇ ಈ ಸರಣಿ ಹಗರಣಗಳಲ್ಲಿ ಹೊರಗಿನ ದುಷ್ಟ ಮತ್ತು ಭ್ರಷ್ಟ
ಶಕ್ತಿಗಳೊಂದಿಗೆ ಶಾಮೀಲಾಗಿದೆಯೇ ಎಂಬ ಸಹಜವಾದ ಸಂಶಯ ಇದೀಗ ಉದ್ಭವಿಸಿದೆ. ಸಚಿವ ಖಾದರ್ ಏನು ಮಾಡುತ್ತಿದ್ದಾರೆ ? – ಶ್ರೀರಾಮ ದಿವಾಣ.

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸುಮಾರು 18 ಮಂದಿ ವೈದ್ಯರಿದ್ದಾರೆ. ಇವರ ಸೇವಾಕಾರ್ಯಕ್ಕೆ ಸರಕಾರ ಇವರಿಗೆ ಉತ್ತಮ ವೇತನವನ್ನೇ ನೀಡುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.
ಆಶ್ಚರ್ಯವೆಂದರೆ, ಇವರಿಗೆ ಸರಕಾರಿ ವೇತನದ ಜೊತೆಗೆ ಮಣಿಪಾಲ ವಿಶ್ವವಿದ್ಯಾಲಯ ಸಹ ತಿಂಗಳ ವೇತನ ನೀಡುತ್ತಿರುವುದು. ಸರಕಾರಿ ವೈದ್ಯರಿಗೆ ಮಣಿಪಾಲ ವಿವಿ ಯಾಕಾಗಿ ವೇತನ ನೀಡಬೇಕು ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಲಭಿಸಬೇಕಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಕೆಎಂಸಿ ಬಾಬ್ತು ಮಣಿಪಾಲ ವಿವಿ ಜಿಲ್ಲಾಸ್ಪತ್ರೆಯ ವೈದ್ಯರಿಗೆ ತಲಾ 5 ಸಾವಿರ ರು. ಗಳಂತೆ ವೇತನ ನೀಡುತ್ತಾ ಬಂದಿದೆ. ಸ್ವಾಭಿಮಾನ ಕಳೆದುಕೊಂಡ ವೈದ್ಯರು ಈ ಹಣವನ್ನು ಸ್ವೀಕರಿಸುತ್ತಿದ್ದಾರೆ. ಮಣಿಪಾಲ ವಿವಿಯಿಂದ ಹಣ ಪಡೆದ ಮೇಲೆ ಇಲ್ಲಿನ ಸರಕಾರಿ ವೈದ್ಯರು ಮಣಿಪಾಲ ವಿವಿ ಮತ್ತು ಕೆಎಂಸಿ ಪರವಾಗಿಯೂ ಕೆಲಸ ಮಾಡಲೇ
ಬೇಕಾಗುತ್ತದೆ. ಮಾಡದೇ ಇರಲು ಸಾಧ್ಯವಿಲ್ಲ.
ಇವರಿಗೆಲ್ಲರಿಗೂ ಅಪವಾದ ಎಂಬಂತೆ ಮಣಿಪಾಲ ವಿವಿ ನೀಡುವ ಹಣ ಪಡೆದುಕೊಳ್ಳದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಒಬ್ಬರೇ ಒಬ್ಬರು ಸರಕಾರಿ ವೈದ್ಯರೆಂದರೆ, ಡಾ.ಶರತ್ ಕುಮಾರ್ ರಾವ್. ತನಗೆ ಸರಕಾರ ವೇತನ ನೀಡುತ್ತಿದೆ. ನಿಮ್ಮ ವೇತನ ಬೇಡ ಎಂದು ಹೆಚ್ಚುವರಿ ಹಣವನ್ನು ನಯವಾಗಿಯೇ ನಿರಾಕರಿಸಿದ ಡಾ.ಶರತ್ ವಿರುದ್ಧ ಸುಳ್ಳು ದೂರು ನೀಡಿದ ತಕ್ಷಣ ನಂಬುವಷ್ಟು ಮೂರ್ಖರು ಇಲ್ಲಿಲ್ಲ. ಭ್ರಷ್ಟ ಸರಕಾರಿ ಅಧಿಕಾರಿಗಳು ಮಾತ್ರ ಇಂಥದ್ದನ್ನೆಲ್ಲಾ ನಂಬಲು ಸಾಧ್ಯ. ಕೃಪೆ: ‘ಜನಪರ ರಾಜಕೀಯ’ ಪಾಕ್ಷಿಕ (ಸೆ.16-30, 2013)