Posts Tagged ‘janapara vedike’

ಇವರಿಗೆ,
ಸನ್ಮಾನ್ಯ ಪ್ರಧಾನ ಕಾರ್ಯದರ್ಶಿಗಳು,
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

ವಿಷಯ : ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯ ಡಾ.ಭಸ್ಕರ ಪಾಲನ್ ಅವರು ಕರ್ತವ್ಯಲೋಪ ಎಸಗಿದ ಬಗ್ಗೆ, ಸೂಕ್ತ ಕ್ರಮ ಕೋರಿ.

ಉಲ್ಲೇಖ 1 : ದಿನಾಂಕ 14.01.2014ರಂದು ನೋಂದಣಿ ಅಂಚೆ ಮೂಲಕ ಕಳಿಸಿದ ದೂರು. ಉಲ್ಲೇಖ 2 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪರವಾಗಿ ಅಧೀನ ಕಾರ್ಯದರ್ಶಿ ಕೆ.ವಿ.ರಾಮಪ್ಪ ಅವರು ಇಲಾಖಾ ಆಯುಕ್ತರಿಗೆ ಬರೆದ ಪತ್ರ ಸಂಖ್ಯೆ : ಆಕುಕ 25 ಎಂಎಸ್ಎ 2014, ದಿನಾಂಕ 01.02.2014.

ಮಾನ್ಯರೇ,

ಉಲ್ಲೇಖ 1ರಂತೆ ನಾವು ಸಲ್ಲಿಸಿದ ದೂರಿಗೆ ಉಲ್ಲೇಖ 2ರಂತೆ ಪ್ರಧಾನ ಕಾರ್ಯದರ್ಶಿಗಳಾದ ತಾವು ಆಯುಕ್ತರಿಗೆ ಪತ್ರ ಬರೆದು ದೂರಿನ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿರುತ್ತೀರಿ.

ತಮ್ಮ ನಿರ್ದೇಶನದ ಸುದೀರ್ಘ ಏಳು ತಿಂಗಳುಗಳ ಬಳಿಕ ಇಂದು (12.09.2014) ಬೆಳಗ್ಗೆ ಆಯುಕ್ತರ ಕಚೇರಿ ಅಧಿಕೃತರು ಅಸಮರ್ಪಕ ರೀತಿಯಲ್ಲಿ ತನಿಖೆ ಆರಂಭಿಸಿದೆ ಎಂದು ತಿಳಿಸಲು ವಿಷಾಧಿಸುತ್ತೇನೆ.

ಇಂದು (12.09.2014) ಬೆಳಗ್ಗೆ ಗಂಟೆ 9.47ಕ್ಕೆ, ಉಡುಪಿ ನಗರದಿಂದ 11 ಕಿ.ಮೀ ದೂರದ ಮೂಡುಬೆಳ್ಳೆಯಲ್ಲಿರುವ ನನ್ನ ಮನೆಯಲ್ಲಿರುವ ಸಂದರ್ಭದಲ್ಲಿ 0820 2530333 ಸಂಖ್ಯೆಯ ದೂರವಾಣಿಯಿಂದ ಕರೆಯೊಂದು ಬಂತು. ಕರೆ ಮಾಡಿದವರು, ‘ಜಿಲ್ಲಾಸ್ಪತ್ರೆಯಿಂದ ಸರ್ಜನ್ ಮಾತಾಡ್ತಿರೋದು, ನೀವು ಡಾ.ಭಾಸ್ಕರ ಪಾಲನ್ ಮೇಲೆ ನೀಡಿದ ದೂರಿನ ತನಿಖೆಗೆಗಾಗಿ ಆಯುಕ್ತರ ಕಚೇರಿಯಿಂದ ಒಬ್ಬರು ಮಹಿಳಾ ಅಧಿಕಾರಿ ಬಂದಿದ್ದಾರೆ. ಹಾಗಾಗಿ ಸಂತ್ರಸ್ತೆಯನ್ನು ಗಂಟೆ 10.30ಕ್ಕೆ ಸರ್ಜನ್ ಕಚೇರಿಗೆ ಕರೆದುಕೊಂಡು ನೀವು ಬರಬೇಕು’ ಎಂದು ತಿಳಿಸಿದರು.

`ಈಗಲೇ ಬರಬೇಕು ಎಂದು ಹೇಳಿದರೆ ಬರಲು ಕಷ್ಟ, ನಾನೀಗ ಮನೆಯಲ್ಲಿದ್ದೇನೆ. ನನಗೆ ಉದ್ಯೋಗವೂ ಇದೆ. ಸಂತ್ರಸ್ತೆ ವಿದ್ಯಾರ್ಥಿನಿಯಾಗಿದ್ದು, ಆಕೆ ಈಗ
ಕಾಲೇಜಿನಲ್ಲಿರುತ್ತಾಳೆ. ಹಾಗಾಗಿ ಕೂಡಲೇ ಬರುವುದು ಸಾಧ್ಯವಿಲ್ಲ, ತನಿಖೆಗೆ ಬರುವ ವಿಷಯವನ್ನು ಮುಂಚಿತವಾಗಿಯೇ ಲಿಖಿತವಾಗಿ ತಿಳಿಸಿದಲ್ಲಿ ಮಾತ್ರ ತನಿಖೆಗೆ ಹಾಜರಾಗಲು ಸಾಧ್ಯ’ ಎಂದು ನಾನು ಜಿಲ್ಲಾಸ್ಪತ್ರೆಯ ಅಧಿಕೃತರಿಗೆ ಸ್ಪಷ್ಟಪಡಿಸಿದೆ.

ಹತ್ತು ನಿಮಿಷದ ತರುವಾಯ ಮತ್ತೆ ಜಿಲ್ಲಾಸ್ಪತ್ರೆಯ ಅದೇ ನಂಬರ್ ಗೆ ನಾನು ಕರೆ ಮಾಡಿದೆ. ಆಗ ಮಹಿಳಾ ಉದ್ಯೋಗಿಯೊಬ್ಬರು ಕರೆ ಸ್ವೀಕರಿಸಿದರು. ಹತ್ತು ನಿಮಿಷದ ಹಿಂದೆ ನನಗೆ ಸರ್ಜನ್ರವರು ಕರೆ ಮಾಡಿದ್ದು, ಅವರಲ್ಲಿ ಮಾತಾಡುವುದಕ್ಕೆ ಇದೆ, ದೂರವಾಣಿಯನ್ನು ಅವರಿಗೆ ಕೊಡುವಂತೆ ಕೇಳಿಕೊಂಡೆ. ಆಗ ಆ ಮಹಿಳಾ ಉದ್ಯೋಗಿ, ಸರ್ಜನ್ ಡಾ.ಆನಂದ ನಾಯಕ್ ಅವರು ಇಂದು ರಜೆಯಲ್ಲಿದ್ದಾರೆ. ಅಡಿಗರು ಚಾರ್ಜ್ ಲ್ಲಿದ್ದಾರೆ. ಆದರೆ ಅಡಿಗರು ಹಾಗೂ ಬೆಂಗಳೂರಿನ ಕಮಿಷನರ್ ಕಚೇರಿಯಿಂದ ಬಂದ ಮಹಿಳಾ ಅಧಿಕಾರಿಯವರು ಕೆಳಗಡೆ ಹೋಗಿದ್ದಾರೆ’ ಎಂದು ತಿಳಿಸಿದರು.

ಮೇಲಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ದೂರು ನೀಡಿದ್ದು, 2014ರ ಜನವರಿ 14ರಂದು (ಉಲ್ಲೇಖ 1). ಪ್ರಧಾನ ಕಾರ್ಯದರ್ಶಿಗಳ ಕಚೇರಿಯಿಂದ ಆಯುಕ್ತರಿಗೆ ಪತ್ರ ಬರೆದುದು 2014ರ ಫೆಬ್ರವರಿ ಒಂದರಂದು. ಬಳಿಕ ತನಿಖಾ ಪ್ರಕ್ರಿಯೆ ಆರಂಭಿಸಲು ಇಷ್ಟು ವಿಳಂಬ (ಏಳು ತಿಂಗಳು) ಯಾಕಾಗಿ ಆಯಿತು ? ಎಂಬ ಪ್ರಶ್ನೆಗೆ ನನಗೆ ಸಮಜಾಯಿಷಿಕೆ ನೀಡಬೇಕಾಗಿದೆ. ಮಾತ್ರವಲ್ಲ, ವಿಳಂಬ ಧೋರಣೆ ಪ್ರದರ್ಶಿಸಿದ ಸಂಬಂಧಿಸಿದ ಜವಾಬ್ದಾರಿಯುತ ಅಧಿಕಾರಿಯ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಮತ್ತು ತನಿಖೆಗೆ ಆದೇಶಿಸಬೇಕು ಎಂದು ನಾನು ಈ ಮೂಲಕ ಕೋರುತ್ತೇನೆ.

ತನಿಖೆ ಎಂದರೆ ಒಂದು ಸ್ಥಳಕ್ಕೆ ಪ್ರವಾಸ ಹೋಗಿ ಬರುವುದಾಗಲೀ, ತೀರ್ಥ ಕ್ಷೇತ್ರಕ್ಕೆ ಯಾತ್ರೆ ಹೋಗಿ ಬರುವುದಾಗಲೀ ಅಲ್ಲ ಮತ್ತು ಹಾಗೆ ಆಗಲೂಬಾರದು. ಪ್ರಕರಣದ ತನಿಖೆ ನಡೆಸುವ ದಿನಾಂಕವನ್ನು ಮೊದಲೇ ನಿಗದಿಪಡಿಸಿ, ಆ ದಿನಾಂಕವನ್ನು ದೂರುದಾರರಿಗೆ ಮುಂಚಿತವಾಗಿಯೇ ಲಿಖಿತವಾಗಿ ತಿಳಿಸುವುದು ಅತೀ ಅಗತ್ಯವಾಗಿದೆ. ಹೀಗೆ ಅಧಿಕೃತವಾಗಿ ದೂರುದಾರರಿಗೆ ತಿಳಿಸಿ, ಸಂಬಂಧಿಸಿದ ಸ್ಥಳಕ್ಕೆ ಬಂದು ತನಿಖಾಧಿಕಾರಿಗಳು ನಿಷ್ಪಕ್ಷಪಾತವಾಗಿ ದೂರುದಾರರಿಂದ ಮತ್ತು ಸಂತ್ರಸ್ತೆಯಿಂದ ಹೇಳಿಕೆಗಳನ್ನು ಪಡೆದುಕೊಂಡರೆ ಅದನ್ನು ಒಂದು ಸಮರ್ಪಕವಾದ ತನಿಖೆ ಎಂದು ಕರೆಯಬಹುದಾಗಿದೆ.

ತನಿಖಾ ಪ್ರಕ್ರಿಯೆಯ ಬಗ್ಗೆ, ಇಂಥ ಕನಿಷ್ಟ ಮಟ್ಟದ ಪ್ರಾಥಮಿಕ ತಿಳುವಳಿಕೆ ಸಹ ಇಲ್ಲದವರು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಅಧಿಕಾರಿಗಳಾಗಿದ್ದಾರೆ ಎಂದರೆ, ಇದು ಆಶ್ಚರ್ಯ, ಬೇಸರ ಮತ್ತು ಖೇದದ ವಿಷಯವಾಗಿದೆ. ಈ ಹಿಂದೆಯೂ ಇಲಾಖೆಯ ಕೆಲವು ಮಂದಿ ಹಿರಿಯ ಮತ್ತು ಜವಾಬ್ದಾರಿಯುತ ಅಧಿಕಾರಿಗಳು ಇತರ ಕೆಲವು ಗಂಭೀರ ಪ್ರಕರಣಗಳ ತನಿಖೆಯನ್ನು ಸಹ ಅತ್ಯಂತ ಬೇಜಾಬ್ದಾರಿಯುತವಾಗಿ, ಉಡಾಫೆಯಿಂದ ನಡೆಸಿದ್ದು ನನ್ನ ಗಮನದಲ್ಲಿದೆ.

ಆದುದರಿಂದ, ತಾವು ಈ ಕೂಡಲೇ ತನಿಖಾ ಪ್ರಕ್ರಿಯೆ ಬಗ್ಗೆ ಆಯುಕ್ತರ ಕಚೇರಿಯ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆ ನೀಡಬೇಕು ಮತ್ತು ಮೇಲಿನ ಉಲ್ಲೇಖದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾದ ನನಗೆ ಮುಂಚಿತವಾಗಿಯೇ ಲಿಖಿತವಾಗಿ ದಿನಾಂಕ ಮತ್ತು ಸಮಯವನ್ನು ತಿಳಿಸಿ ಹೇಳಿಕೆ ಪಡೆದುಕೊಳ್ಳಲು ಉಡುಪಿಗೆ ಆಗಮಿಸಬೇಕಾಗಿ ಈ ಮೂಲಕ ಕೋರುತ್ತಿದ್ದೇನೆ.

ಇತೀ ತಮ್ಮ ವಿಶ್ವಾಸಿ,

ಶ್ರೀರಾಮ ದಿವಾಣ,
ಮಾನವಹಕ್ಕು ಮತ್ತು ಮಾಹಿತಿಹಕ್ಕು ಕಾರ್ಯಕರ್ತ,
ಉಡುಪಿ.

ಸ್ಥಳ : ಉಡುಪಿ.
ದಿನಾಂಕ : 12.09.2014.

ಯಥಾ ಪ್ರತಿ : ಸನ್ಮಾನ್ಯ ಯು.ಟಿ.ಖಾದರ್, ಗೌರವಾನ್ವಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಘನ ಕರ್ನಾಟಕ ಸರಕಾರ.

Udupi: A protest will be held in front of the office of Udupi Deputy Commissioner on Saturday September 6, 2014 from 10 am to 5 pm urging a transfer of the investigation to CBI concerning a multi crore chemical scam that has occurred in 19 districts of the state, said Shreeam Diwana, president of Karnataka People forum.

Shreeram Diwana further said that it was necessary to investigate the matter by the CBI for the part played by U T Khader, Minister of health, Aravinda Limbavali who was the then health minister in last BJP government, MLA Pramodh Madhwaraj of Udupi assembly constituency, Madan Gopal, chief secretary of Karnataka state health and family welfare department, commissioner V B Patil, director Dr Dhanya Kumar, Dr K B Ishwarappa, additional director of the department of medicine, other higher officials in the state, deputy commissioners of 19 districts, district health and family welfare department officers and district surgeons.

Udupi district blood bank department medical official Dr Sharath Kumar Rao J who brought the scam to the notice of officials has been suspended on trivial issue without proper investigation. He has not been reinstated even after nearly one year. He and some women witnesses of multi crore scandal are being harassed, he added.

“The affected people are not given justice. Instead of punishing the guilty, they are being protected. The protest on September 6 will be a first stage and it will be spread in different stages in the state and the capital of the country”, he said.
Shreeram Diwana has asked anti corruption activists and those who struggle for justice to join hands in the protests and cooperate.

Udupi: A protest will be held in front of the office of Udupi Deputy Commissioner on Saturday September 6, 2014 from 10 am to 5 pm urging a transfer of the investigation to CBI concerning a multi crore chemical scam that has occurred in 19 districts of the state, said Shreeam Diwana, president of Karnataka People forum.

Shreeram Diwana further said that it was necessary to investigate the matter by the CBI for the part played by U T Khader, Minister of health, Aravinda Limbavali who was the then health minister in last BJP government, MLA Pramodh Madhwaraj of Udupi assembly constituency, Madan Gopal, chief secretary of Karnataka state health and family welfare department, commissioner V B Patil, director Dr Dhanya Kumar, Dr K B Ishwarappa, additional director of the department of medicine, other higher officials in the state, deputy commissioners of 19 districts, district health and family welfare department officers and district surgeons.

Udupi district blood bank department medical official Dr Sharath Kumar Rao J who brought the scam to the notice of officials has been suspended on trivial issue without proper investigation. He has not been reinstated even after nearly one year. He and some women witnesses of multi crore scandal are being harassed, he added.

“The affected people are not given justice. Instead of punishing the guilty, they are being protected. The protest on September 6 will be a first stage and it will be spread in different stages in the state and the capital of the country”, he said.
Shreeram Diwana has asked anti corruption activists and those who struggle for justice to join hands in the protests and cooperate.

ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಇತರ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು 06.09.2014 ಶನಿವಾರದಂದು ಬೆಳಗ್ಗೆ ಗಂಟೆ 10ರಿಂದ ಸಂಜೆ 5 ಗಂಟೆ ವರೆಗೆ ಮಣಿಪಾಲ ಎಂಡ್ ಪಾಯಿಂಟ್ ರಸ್ತೆಯಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಒಂದು ದಿನದ ಸತ್ಯಾಗ್ರಹವನ್ನು ನಡೆಸಲಿರುವುದಾಗಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ಹಾಲಿ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿರುವ ಯು.ಟಿ.ಖಾದರ್, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಮೋದ್ ಮಧ್ವರಾಜ್, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್, ಆಯುಕ್ತರಾಗಿದ್ದ ವಿ.ಬಿ.ಪಾಟೀಲ್, ನಿರ್ದೇಶಕರಾದ ಡಾ.ಧನ್ಯ ಕುಮಾರ್, ವೈದ್ಯಕೀಯ ಸಹ ನಿರ್ದೇಶಕರಾದ ಡಾ.ಕೆ.ಬಿ.ಈಶ್ವರಪ್ಪ ಸಹಿತ ರಾಜ್ಯ ಮಟ್ಟದ ಇತರ ಉನ್ನತ ಅಧಿಕಾರಿಗಳು, 19 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳು, ಜಿಲ್ಲಾ ಸರ್ಜನ್ ಗಳ ಸಹಿತ ಅನೇಕ ಮಂದಿ ಅಧಿಕಾರಿಗಳ ಪಾತ್ರವನ್ನು ಈ ಬಹುಕೋಟಿ ಹಗರಣದಲ್ಲಿ ತನಿಖೆಗೆ ಒಳಪಡಿಸುವ ಅಗತ್ಯ ಇರುವುದರಿಂದ ಸಿಬಿಐ ತನಿಖೆ ಅನಿವಾರ್ಯವಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೂ ಆದ ಶ್ರೀರಾಮ ದಿವಾಣ ತಿಳಿಸಿದ್ದಾರೆ.

ರಾಜ್ಯ ಮಟ್ಟದ ಬಹುಕೋಟಿ ಹಗರಣದ ಬಗ್ಗೆ ಮೊತ್ತ ಮೊದಲು ಅಧಿಕಾರಿಗಳ (ಸರಕಾರದ) ಗಮನಕ್ಕೆ ತಂದ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾದ ಡಾ.ಶರತ್ ಕುಮಾರ್ ರಾವ್ ಅವರನ್ನು ಸುಳ್ಳು ದೂರಿನ ಆಧಾರದಲ್ಲಿ ಸರಿಯಾಗಿ ತನಿಖೆ ನಡೆಸದೆಯೇ ಅಮಾನತು ಮಾಡಿದ್ದು, ಅಮಾನತುಗೊಳಿಸಿ ವರ್ಷವಾಗುತ್ತಾ ಬಂದರೂ ಮತ್ತೆ ನೇಮಕ ಮಾಡದಿರುವುದು, ಕೆಲವೊಂದು ನಿರ್ಧಿಷ್ಟ ಸರಕಾರಿ ಅಧಿಕಾರಿಗಳು ಹಾಗೂ ನಿರ್ಧಿಷ್ಟ ಖಾಸಗಿ ವ್ಯಕ್ತಿಗಳು ನಿರಂತರವಾಗಿ ಅವರಿಗೆ ಮತ್ತು ಬಹುಕೋಟಿ ಹಗರಣದ ಬಗ್ಗೆ ಸಾಕ್ಷ್ಯ ನುಡಿದವರಿಗೆ ಕಿರುಕುಳ ನೀಡುತ್ತಿರುವುದು ಇತ್ಯಾದಿ ನಡೆಯುತ್ತಿದೆ ಎಂದು ಮಾನ ವಹಕ್ಕು ಕಾರ್ಯಕರ್ತರೂ ಆಗಿರುವ ಶ್ರೀರಾಮ ದಿವಾಣ ಆರೋಪಿಸಿದ್ದಾರೆ.

ಈ ಎಲ್ಲಾ ವಿಷಯಗಳಲ್ಲಿ ನೊಂದವರಿಗೆ ಸಲ್ಲಬೇಕಾದ ಸಹಜ ನ್ಯಾಯವನ್ನು ಅತ್ಯಂತ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ. ತಪ್ಪೆಸಗಿದವರಿಗೆ ಶಿಕ್ಷೆ ನೀಡುವುದು ಬಿಟ್ಟು ರಕ್ಷಣೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಸೆ.6ರಂದು ಸತ್ಯಾಗ್ರಹ ನಡೆಸುತ್ತಿದ್ದು, ನ್ಯಾಯ ಲಭಿಸದಿದ್ದಲ್ಲಿ ಹೋರಾಟವನ್ನು ಹಂತ ಹಂತವಾಗಿ ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುವುದು. ನ್ಯಾಯಪರರು, ಭ್ರಷ್ಟಚಾರ ವಿರೋಧಿಗಳು ಸತ್ಯಾಗ್ರಹದಲ್ಲಿ ಭಾಗಿಯಾಗುವ ಮೂಲಕ ಸಹಕರಿಸಬೇಕು ಎಂದು ಶ್ರೀರಾಮ ದಿವಾಣ
ವಿನಂತಿಸಿಕೊಂಡಿದ್ದಾರೆ.

ಉಡುಪಿ: ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ರಾಜ್ಯ ಸಮಿತಿಯು ಪ್ರಕಟಿಸಿದ ಮೂರು ವಿಧದ ಪ್ರತ್ಯೇಕ ಚುನಾವಣಾ ಪ್ರಚಾರ ಕರಪತ್ರಗಳ ವಿರುದ್ಧ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ನೀಡಿದ ದೂರಿನ ಆಧಾರದಲ್ಲಿ ಜಿಲ್ಲಾ ಮಟ್ಟದ ಮಾಧ್ಯಮ ದೃಢಪತ್ರ ಹಾಗೂ ಪರಿಶೀಲನಾ ಸಮಿತಿ (ಎಂಸಿಎಂಸಿ)ಯು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರಿಗೆ ವಿವರಣೆ ನೀಡುವಂತೆ ಕೋರಿ ನೋಟೀಸ್
ಜಾರಿಗೊಳಿಸಿದೆ.

ಯಾವುದೇ ಮಾಹಿತಿ ಇಲ್ಲದ ಮತ್ತು ಅಪೂರ್ಣ ಮಾಹಿತಿಗಳಿರುವ ಮೂರು ವಿಧದ ಚುನಾವಣಾ ಪ್ರಚಾರ ಕರಪತ್ರಗಳನ್ನು ಬಿಜೆಪಿ ಮತದಾರರಿಗೆ ವಿತರಿಸುತ್ತಿದ್ದು, ಇವುಗಳ ವಿರುದ್ಧ ಶ್ರೀರಾಮ ದಿವಾಣ ಅವರು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು, ಉಡುಪಿ ಜಿಲ್ಲಾ
ಚುನಾವಣಾಧಿಕಾರಿಗಳು, ಸಾಮಾನ್ಯ ಚುನಾವಣಾ ವೀಕ್ಷಕರು ಹಾಗೂ ಚುನಾವಣಾ ವೆಚ್ಚ ವೀಕ್ಷಕರಿಗೆ ಎ.2ರಂದು ದೂರು ನೀಡಿದ್ದರು.

‘ಭಾರತೀಯ ಜನತಾ ಪಾರ್ಟಿ – ಕರ್ನಾಟಕ, ಸಂಪದ್ಭರಿತ-ಸುರಕ್ಷಿತ-ಸಧೃಢ ಭಾರತಕ್ಕಾಗಿ, ನರೇಂದ್ರ ಮೋದಿ, ಭಾರತ ಗೆಲ್ಲಿಸಿ’ ಎಂಬ ಶಿರ್ಷಿಕೆ ಮತ್ತು ನರೇಂದ್ರ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಇವರುಗಳ ಭಾವಚಿತ್ರ ಇರುವ ಆರು ಪುಟಗಳ ಪ್ರಚಾರ ಕರಪತ್ರದಲ್ಲಿ ಮುದ್ರಿಸಿದವರ, ಮುದ್ರಣ ಸಂಸ್ಥೆಯ ಮತ್ತು ಮುದ್ರಿತ ಪ್ರತಿಗಳ ಸಹಿತ ಯಾವುದೇ ಮಾಹಿತಿಗಳನ್ನೂ ಮುದ್ರಿಸಲಾಗಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

‘ಜನಜಾಗರಣ ಅಭಿಯಾನ, ಕಾಂಗ್ರೆಸ್ ತೊಲಗಿಸಿ ದೇಶ ಉಳಿಸಿ’ ಎಂಬ ಶಿರ್ಷಿಕೆ ಇರುವ ನಾಲ್ಕು ಪುಟಗಳ ಪ್ರಚಾರ ಕರಪತ್ರವನ್ನು ಭಾರತೀಯ ಜನತಾ ಪಾರ್ಟಿ ಕರ್ನಾಟಕ ಮುದ್ರಿಸಿದೆ ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ. ‘ಮುದ್ರಣ: ರಾಷ್ಟ್ರೋತ್ಥಾನ ಮುದ್ರಣಾಲಯ’ ಎಂದು ಮುದ್ರಿಸಲಾಗಿದೆ. ಆದರೆ ಮುದ್ರಿತ ಪ್ರತಿಗಳ ವಿವರ ಇಲ್ಲ. ಆದುದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.

‘ಈ ಬಾರಿ ಮೋದಿ ಸರ್ಕಾರ’ ಎಂಬ ಶಿರ್ಷಿಕೆ ಇರುವ ಮತ್ತು ನರೇಂದ್ರ ಮೋದಿ ಭಾವಚಿತ್ರ ಇರುವ ಎರಡು ಪುಟಗಳ ಕರಪತ್ರವನ್ನು ಬಿಜೆಪಿ ಕರ್ನಾಟಕ ಮುದ್ರಿಸಿದೆ. ಮುದ್ರಿತ ಪ್ರತಿಗಳು ಒಂದು ಲಕ್ಷ ಎಂದು ಮುದ್ರಿಸಲಾಗಿದೆ. ಮುದ್ರಣಗೊಂಡಿರುವುದು ‘ಸ್ಪ್ಯಾನ್ ಪ್ರಿಂಟ್’ ಎಂದು ಇದೆ. ಆದರೆ, ಯಾವ ಊರಿನ ಉಲ್ಲೇಖವಿಲ್ಲ. ಈ ಕರಪತ್ರವನ್ನು ರಾಜ್ಯ ಮಟ್ಟದಲ್ಲಿ ವಿತರಿಸಲು ಮುದ್ರಿಸಿದಂತೆ ಇದ್ದು, ಮುದ್ರಿತ ಪ್ರತಿಗಳು ಒಂದು ಲಕ್ಷ ಎಂದು ಹೇಳಲಾಗಿದೆಯಾದರೂ, ಮುದ್ರಿತ ಪ್ರತಿಗಳ ಸಂಖ್ಯೆ ಹಲವು ಲಕ್ಷಗಳು ಇರುವ ಸಾಧ್ಯತೆ ಇದೆ. ಆದುದರಿಂದ ಈ ಬಗ್ಗೆ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಬಿಜೆಪಿ ಪ್ರಕಟಿಸಿದ ಪ್ರಚಾರ ಕರಪತ್ರಗಳು ಚುನಾವಣಾ ನೀತಿ ಸಂಹಿತೆಯ
ಉಲ್ಲಂಘನೆಯಾಗಿರುವುದರಿಂದ, ಇವುಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಶ್ರೀರಾಮ ದಿವಾಣ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

# ಈ ದೇಶದಲ್ಲಿ ಮಂತ್ರಿಗಳು, ಜನಪ್ರತಿನಿಧಿಗಳು, ರಾಜಕಾರಣಿಗಳು, ಸರಕಾರಿ
ಅಧಿಕಾರಿಗಳು, ಶ್ರೀಮಂತರು, ದೊಡ್ಡ ದೊಡ್ಡ ಸ್ಥಾನ ಮಾನ ಹೊಂದಿರುವ ಉದ್ಯಮಿಗಳು ಏನು ಬೇಕಾದರೂ ಮಾಡಬಹುದು. ಅಕ್ಷಮ್ಯ ಅಪರಾಧವೆಸಗಿಯೂ ದಕ್ಕಿಸಿಕೊಳ್ಳಬಹುದು. ಇದು ನಮ್ಮ ದೇಶದ ದುರಂತ.

ಇವರಲ್ಲಿ ಒಬ್ಬರು ಮತ್ತೊಬ್ಬರನ್ನು ರಕ್ಷಿಸುತ್ತಾರೆ. ಕಾರಣ ಇವರೆಲ್ಲರೊಂದೇ. ಇವರ ನಡುವೆ ಒಂದಲ್ಲ ಒಂದು ಕೊಡುಕೊಳ್ಳುವಿಕೆ ಇದ್ದೇ ಇರುತ್ತದೆ. ಭ್ರಷ್ಟಾಚಾರದಲ್ಲಿ ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಾಲುದಾರರೇ. ಹಾಗಾಗಿಯೇ ಇಲ್ಲಿ ಎಲ್ಲರೂ ಸಮಾನರಲ್ಲ. ಕೆಲವರು ಅಸಾಮಾನ್ಯರು. ಹಲವರು ಅತೀ ಸಾಮಾನ್ಯರು. ಈ ಕಾರಣಕ್ಕಾಗಿಯೇ ಈ ವ್ಯವಸ್ಥೆ ಎಂಬ ಅವ್ಯವಸ್ಥೆಯ ದೇಶದಲ್ಲಿ ಕಾನೂನುಗಳು ಸಮಾನ ರೀತಿಯಲ್ಲಿ ಜಾರಿಯಾಗುವುದೇ ಇಲ್ಲ.

ಕಾನೂನಿಗೆ ಜಾತಿ, ಮತ, ಶ್ರೀಮಂತ, ಬಡವ, ಗಂಡು, ಹೆಣ್ಣು ಇತ್ಯಾದಿ ಯಾವ ತಾರತಮ್ಯವೂ ಇಲ್ಲ. ಇದೇ ಕಾರಣಕ್ಕೆ ಕಾನೂನು ಸರ್ವರಿಗೂ ಸಮಾನ ಎಂದು ಹೇಳುವುದು. ಇದು ಕಡತಗಳಲ್ಲಿ ಮಾತ್ರ. ಭಾಷನ, ಲೇಖನಗಳಿಗೆ ಮಾತ್ರ ಸೀಮಿತ. ವಾಸ್ತವವಾಗಿ ಹೀಗೆ ಇಲ್ಲವೇ ಇಲ್ಲ. ಇದಕ್ಕೆ ಕಾರಣ, ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರಿಗಳು ಹಾಗೂ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿರುವ ಜನಪ್ರತಿನಿಧಿಗಳು ಮತ್ತು ಮಂತ್ರಿಗಳು. ಕೆಲವೇ ಕೆಲವು ಸಂದರ್ಭಗಳಲ್ಲಿ, ಅನಿವಾರ್ಯತೆಯ ಪರಿಸ್ಥಿತಿ ಸೃಷ್ಟಿಯಾದಾಗ ಮಾತ್ರ ಕಾನೂನು ದೊಡ್ಡವರ ಮೇಲೆಯೂ ಜಾರಿಯಾಗುತ್ತದೆಯೇ ಹೊರತು, ಬೇರೆ ಯಾವುದೇ ಸಂದರ್ಭಗಳಲ್ಲೂ ಕಾನೂನು ಸಮಾನ ರೀತಿಯಲ್ಲಿ ಜಾರಿಯಾಗುವುದೇ ಇಲ್ಲ.

ಬಹುತೇಕ ಸಂದರ್ಭಗಳಲ್ಲೂ ಕಾನೂನು ಜಾರಿಯಾಗುವುದು ಬಡವರ ಮೇಲೆಯೇ. ಅವಿದ್ಯಾವಂತರು, ಅಕ್ಷರ ವಂಚಿತರು, ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಹಿಂದುಳಿಸಲ್ಪಟ್ಟ ಜನರ ಮೇಲೆ ಮಾತ್ರ ಅಧಿಕಾರಿಗಳು ಕಾನೂನು ಕಾಯಿದೆಗಳನ್ನು ಕಠೋರವಾಗಿ ಜಾರಿಗೊಳಿಸುತ್ತಾರೆ. ಅಪರಾಧಿ ಸ್ಥಾನದಲ್ಲಿ ಶ್ರೀಮಂತರಿದ್ದಾಗ, ಪ್ರಭಾವೀ ವ್ಯಕ್ತಿಗಳಿದ್ದಾಗ ಕಾನೂನುಗಳು ಮೃದುವಾಗುತ್ತವೆ. ಇಂಥ ಸಮಯದಲ್ಲಿ ಜನಪ್ರತಿನಿಧಿಗಳು, ಮಂತ್ರಿಗಳು ಜಾಣ ಮೌನ ವಹಿಸಿರುತ್ತಾರೆ.

ಇತ್ತೀಚೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ವ್ಯಕ್ತಿಯೋರ್ವನ ಮನೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಆತ ಪ್ರೀತಿಯಿಂದ ಸಾಕುತ್ತಿದ್ದ ಕಾಡುಬೆಕ್ಕು ಸಹಿತ ಮೂನರ್ಾಲ್ಕು ಪ್ರಾಣಿಗಳನ್ನು ಸ್ವಾಧಿನಪಡಿಸಿಕೊಂಡು ಆತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಂತೆ ಕಠಿಣ ಕಲಂಗಳಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡರು. ಈ ಪ್ರಕರಣದ ಆರೋಪಿಗೆ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಬಗ್ಗೆ ನಿಜಕ್ಕೂ ಅರಿವಿರಲಿಲ್ಲ. ಈ ಬಗ್ಗೆ ತಿಳುವಳಿಕೆ ಕೊಟ್ಟು ಬಿಟ್ಟು ಬಿಡುತ್ತಿದ್ದರೆ, ಈತ ಮುಂದಿನ ದಿನಗಳಲ್ಲಿ ಮತ್ತೆ ವನ್ಯ ಜೀವಿಗಳನ್ನು ಸಾಕುವ ಕೆಲಸ ಮಾಡುತ್ತಿರಲಿಲ್ಲ.

ಆದರೆ, ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ನಿರಂತರವಾಗಿ, ಪದೇ ಪದೇ ಉಡುಪಿ ಅಷ್ಠ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿ ಕಡಲಾಮೆ, ನವಿಲು, ಜಿಂಕೆಯೇ ಮೊದಲಾದ ಅನೇಕ ವನ್ಯಜೀವಿಗಳನ್ನು ಮಠದೊಳಗಡೆ ಗೂಡುಗಳಲ್ಲಿ ಕೂಡಿಟ್ಟು, ಹಗ್ಗ ಕಟ್ಟಿ ಸಾಕುತ್ತಿದ್ದುದು ಇದೆ. ಒಂದೆರಡು ಸಂದರ್ಭಗಳಲ್ಲಿ ಕೆಲವು ವನ್ಯಜೀವಿಗಳು ಇಲ್ಲಿ ಸತ್ತು ಹೋದುದೂ ಇದೆ. ಇದರ ವಿರುದ್ಧ ದೂರು ಕೊಟ್ಟರೂ ಒಂದೇ ಒಂದು ಪ್ರಕರಣದಲ್ಲೂ ಅರಣ್ಯ ಇಲಾಖಾಧಿಕಾರಿಗಳು ಸ್ವಾಮೀಜಿ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ
ಕೈಗೊಂಡದ್ದಿಲ್ಲ.

ಪ್ರತಿ ದಿನ ಒಂದಲ್ಲ ಒಂದು ಹಲ್ಲೆ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ
ದಾಖಲಾಗುತ್ತಿರುತ್ತವೆ. ಕೌಂಟರ್ ಕೇಸ್ ಗಳೂ ದಾಖಲಾಗುತ್ತವೆ. ಇಲ್ಲಿ ಆರೋಪಿಗಳು ಪ್ರಭಾವಿಗಳಾದ ಪಕ್ಷದಲ್ಲಿ ಪೆಟ್ಟು ತಿಂದವರ ವಿರುದ್ಧವೇ ಕೌಂಟರ್ ಕೇಸ್ ಗಳು ದಾಖಲಾಗುತ್ತವೆ. ಹೀಗೆ ಕೌಂಟರ್ ಕೇಸ್ಗಳನ್ನು ದಾಖಲಿಸುವಂತೆ ಪ್ರಭಾವಿ ವ್ಯಕ್ತಿಗಳಿಗೆ ಸೂಚಿಸುವುದು ಮತ್ತು ಮಾರ್ಗದರ್ಶನ ಮಾಡುವವರೂ ಇದೇ ಪೊಲೀಸರೇ ಹೊರತು ಬೇರೆ ಯಾರೂ ಅಲ್ಲ. ಅದೇ ಪೊಲೀಸರು ಅಮಾಯಕರ ವಿರುದ್ಧ ಹಲ್ಲೆ, ದೌರ್ಜನ್ಯ ನಡೆಸುವ ಅದೆಷ್ಟೋ ಪ್ರಕರಣಗಳು ನಡೆಯುತ್ತಲಿರುತ್ತವೆ. ಆದರೆ, ಇಲ್ಲಿ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳು ಪೊಲೀಸರ ವಿರುದ್ಧ ದೂರು ನೀಡಿದರೂ ಇಂಥ ದೂರುಗಳನ್ನು ಪೊಲೀಸರು ದಾಖಲಿಸಿಕೊಳ್ಳುವುದೇ ಇಲ್ಲ.

ನಕ್ಸಲರನ್ನು ಪೊಲೀಸರು ಎನ್ ಕೌಂಟರ್ ಹೆಸರಲ್ಲಿ ಕೊಲೆ ಮಾಡಿಬಿಡುತ್ತಾರೆ. ಬಳಿಕ ಪೊಲೀಸರೇ ಒಂದು ದೂರು ಬರೆದುಕೊಂಡು ಕೊಲೆಯಾದ ನಕ್ಸಲರ ವಿರುದ್ಧವೇ ಪೊಲೀಸರ ಕೊಲೆ ಯತ್ನ ಎಂಬ ಕೇಸು ದಾಖಲಿಸಿಬಿಡುತ್ತಾರೆ. ಆದರೆ, ಅಪ್ಪಿ ತಪ್ಪಿಯೂ ಕೊಲೆ ಮಾಡಿದ ಪೊಲೀಸರ ವಿರುದ್ಧ ಒಂದೇ ಒಂದು ಕೇಸೂ ದಾಖಲಾಗುವುದಿಲ್ಲ. ಈದು, ದೇವರಬಾಳು ಇತ್ಯಾದಿ ಅನೇಕ ಎನ್ ಕೌಂಟರ್ ಪ್ರಕರಣಗಳು ಇದಕ್ಕೆ ಉದಾಹರಣೆಗಳು.

ಉಡುಪಿ ತಾಲೂಕಿನ ಕೋಟೆ ಗ್ರಾಮ ಪಂಚಾಯಿತಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜ ಕೆಳಗಿಳಿಸಿಲ್ಲ ಎಂಬ ಕಾರಣಕ್ಕೆ ಮಧ್ಯರಾತ್ರಿ ಗ್ರಾ.ಪಂ.ಕಚೇರಿಗೆ ಬಂದ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಗ್ರಾ.ಪಂ.ಅಧ್ಯಕ್ಷ ಜತ್ತನ್ನ ಎಂಬವರನ್ನು ಸ್ಥಳಕ್ಕೆ ಕರೆಸಿಕೊಂಡು ನಿಂದಿಸಿ, ಹೊಡೆದ ಘಟನೆ ನಡೆದಿತ್ತು. ಬಳಿಕ ಇದೊಂದು ದೊಡ್ಡ ಸುದ್ದಿಯೂ ಆಗಿಬಿಟ್ಟಿತು. ಗ್ರಾ.ಪಂ.ಕಾರ್ಯದರ್ಶಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರು, ಯಾಕೆ ನಿಮ್ಮ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಕೇಳಿ ನೋಟೀಸ್ ನೀಡಿದ್ದೂ ನಡೆಯಿತು. ಈ ನೋಟೀಸ್ ಗೆ ತಿಂಗಳುಗಳೇ ಕಳೆಯಿತು. ನಂತರ ಯಾವ ಕ್ರಮವನ್ನೂ ಕೈಗೊಳ್ಳದೆ ಹಾಗೆಯೇ ಮರೆತು ಬಿಡಲಾಯಿತು. ಕಾರಣ, ಇಲ್ಲಿ ಇಬ್ಬರೂ ಅಧಿಕಾರಿಗಳೇ. ಒಬ್ಬರು ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿ, ಇನ್ನೊಬ್ಬರು ತಾಲೂಕು ಮಟ್ಟದ ಅಧಿಕಾರಿ. ಅಂತಿಮವಾಗಿ ಒಬ್ಬರನ್ನು ಮತ್ತೊಬ್ಬರು ರಕ್ಷಿಸಲೇ ಬೇಕಲ್ಲ ? ಇದು ಸರಕಾರಿ ಅಧಿಕರಿಗಳ ನಡುವಿನ ಅಲಿಖಿತ ನಿಯಮ.

ಕೋಟೆ ಗ್ರಾ.ಪಂ.ನಲ್ಲಿ ರಾಷ್ಟ್ರಧ್ವಜ ರಾತ್ರಿ ಸಹ ಹಾರಾಡುತ್ತಲೇ ಇರಲು ಅಧ್ಯಕ್ಷರು ಕಾರಣರಾಗಿರಲಿಲ್ಲ. ಗ್ರಾ.ಪಂ.ಅಧಿಕಾರಿಗಳೇ ಇದಕ್ಕೆ ಜವಾಬ್ದಾರರಾಗಿದ್ದರು. ಆದರೂ ಸರ್ಕಲ್ ಇನ್ಸ್ ಪೆಕ್ಟರ್ ನೋಡಲು ಸಾಮಾನ್ಯರಂತಿದ್ದ ಕಾರಣಕ್ಕೋ ಏನೋ,
ಗ್ರಾ.ಪಂ.ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿ ದರ್ಪ ಪ್ರದರ್ಶಿಸಿದರು.

ಅದೇ ಪೊಲೀಸರು, ಮೂಡುಬೆಳ್ಳೆ-ಪಡುಬೆಳ್ಳೆ ರಸ್ತೆಯಲ್ಲಿ ನೌಕಾದಳದ ನಿವೃತ್ತ ಕೊಮೊಡೋರ್ ಜೆರೋಮ್ ಕಸ್ತಲಿನೋ ಎಂಬವರು ಕಳೆದ ಹಲವಾರು ತಿಂಗಳುಗಳಿಂದ ಹಗಲು-ರಾತ್ರಿ ರಾಷ್ಟ್ರಧ್ವಜ ಹಾರಾಡಿಸುತ್ತಾ, ರಾಷ್ಟ್ರಧ್ವಜಕ್ಕೆ ನಿರಂತರವಾಗಿ ಅಪಮಾನವೆಗುತ್ತಿದ್ದರೂ, ಇದರ ವಿರುದ್ಧ ದೂರು ನೀಡಿದರೂ, ವಾರ ಕಳೆದರೂ ರಾಷ್ಟ್ರಧ್ವಜ ಇಳಿಸುವ ಕೆಲಸವನ್ನಾಗಲೀ, ತಪ್ಪಿತಸ್ಥ ನಿವೃತ್ತ ಅಧಿಕಾರಿಯ ಮೇಲೆ ಕನಿಷ್ಟ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳುವ ಕರ್ತವ್ಯವನ್ನಾಗಲೀ ಮಾಡಲೇ ಇಲ್ಲ.

ದೇಶದ ಗೌರವ, ಘನತೆ, ಸ್ವಾಭಿಮಾನ, ಹೆಮ್ಮೆಯ ದ್ಯೋತಕವಾದ ರಾಷ್ಟ್ರಧ್ವಜವನ್ನು ಬೆಳಗ್ಗೆ ಸೂರ್ಯೋದಯವಾಗುವಾಗ ಏರಿಸಿದರೆ, ಸಂಜೆ ಸೂರ್ಯಾಸ್ಥಮಾನವಾಗುವ ಸಮಯದಲ್ಲಿ ಕೆಳಗಿಳಿಸಲೇ ಬೇಕು. ಇದು ಲಾಂಛನ ಮತ್ತು ಅಭಿದಾನ (ಅಸಮರ್ಪಕ ಬಳಕೆಯ ತಡೆ) ಕಾಯಿದೆ-1950 ಮತ್ತು ರಾಷ್ಟ್ರ ಘನತೆಯೆಡೆಗಿನ ಅಪಮಾನ ತಡೆ ಕಾಯಿದೆ-1971 ಇವುಗಳಿಗೆ ಅನುಗುಣವಾಗಿ ಜಾರಿಗೊಳಿಸಲಾದ ಭಾರತದ ಧ್ವಜ ಸಂಹಿತೆ-2002ರಲ್ಲಿ ಸ್ಪಷ್ಟ ಇದೆ.

ಇಷ್ಟಿದ್ದರೂ, ಮೂಡುಬೆಳ್ಳೆ ರಾಷ್ಟ್ರಧ್ವಜ ಅಪಮಾನ ಪ್ರಕರಣದ ವಿರುದ್ಧ ಶಿರ್ವ ಪಿಎಸ್ಐ, ಕಾಪು ಸರ್ಕಲ್ ಇನ್ಸ್ ಪೆಕ್ಟರ್, ಕಾರ್ಕಳ ಎಎಸ್ಪಿ, ಉಡುಪಿ ಹೆಚ್ಚುವರಿ ಎಸ್ಪಿ, ಎಸ್ಪಿ, ಐಜಿಪಿ, ತಹಶಿಲ್ದಾರ್, ಅಪರ ಡಿಸಿ, ಡಿಸಿ, ರಾಜ್ಯ ಮುಖ್ಯ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರೂ, ವಾರ ಕಳೆದರೂ ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ ತಪ್ಪಿತಸ್ಥರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲು ನಮ್ಮ ಸರಕಾರಿ ಅಧಿಕಾರಿಗಳು ಮನಸ್ಸು ಮಾಡಿಲ್ಲವೆಂದರೆ…

ತಪ್ಪು ಕಾನೂನಿನದ್ದಲ್ಲ. ತಪ್ಪು ಕಾನೂನನ್ನು ಜಾರಿಗೊಳಿಸುವ ಮಹಾಭ್ರಷ್ಟ, ಮಹಾದುಷ್ಟ, ರಣಹೇಡಿ ಸರಕಾರಿ ಅಧಿಕಾರಿಗಳದ್ದು. ಎಲ್ಲವನ್ನೂ ನೋಡಿಕೊಂಡು ಸುಮ್ಮನಿರುವ
ಜನಪ್ರತಿನಿಧಿಗಳದ್ದು. ಶಿಕ್ಷಿಸಬೇಕಾದ್ದು, ಕರ್ತವ್ಯ ಮರೆತ ಅಧಿಕಾರಿಗಳನ್ನು. ಕಾನೂನಿಗೆ ಅಗೌರವ ತೋರಿಸುವ, ಕಾನೂನನ್ನು ನಿರ್ಜೀವಗೊಳಿಸುವ ಸರಕಾರಿ ಅಧಿಕಾರಿಗಳನ್ನು. – ಶ್ರೀರಾಮ ದಿವಾಣ.

ಉಡುಪಿ: ಭಾರತದ ಧ್ವಜ ಸಂಹಿತೆಯನ್ನು ಉಲ್ಲಂಘಿಸಿ ಮೂಡುಬೆಳ್ಳೆ-ಪಡುಬೆಳ್ಳೆ ರಸ್ತೆಯ ‘ವನಸೌರಭ’ ಮನೆ ಮುಂಭಾಗದ ರಸ್ತೆ ಬದಿಯಲ್ಲಿ ಹಗಲು-ರಾತ್ರಿ ಹಾರಾಡುತ್ತಿದ್ದ ರಾಷ್ಟ್ರಧ್ವಜವನ್ನು ಜಿಲ್ಲಾಡಳಿತದ ಅಧಿಕಾರಿಗಳು ಹಲವು ತಿಂಗಳುಗಳ ಬಳಿಕ, ದೂರು ನೀಡಿ ಒಂದು ವಾರದ ನಂತರ ಕೊನೆಗೂ ಅವರೋಹಣ ಮಾಡಿಸುವ ಮೂಲಕ ರಾಷ್ಟ್ರಧ್ವಜಕ್ಕೆ
ಎಸಗಲಾಗುತ್ತಿದ್ದ ನಿರಂತರ ಅಪಮಾನವನ್ನು ತಪ್ಪಿಸಿದ್ದಾರೆ.

ಉಡುಪಿ ತಾಲೂಕಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ-ಪಡುಬೆಳ್ಳೆ ರಸ್ತೆ ಬದಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜ ಅವರೋಹಣ ಮಾಡದೆ ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ಖಾಸಗಿ ವ್ಯಕ್ತಿಯೊಬ್ಬರು ರಾಷ್ಟ್ರಧ್ವಜಕ್ಕೆ ಅಪಮಾನವೆಸಗುತ್ತಿರುವ ಪ್ರಕರಣ ನಡೆಯುತ್ತಿತ್ತು.

ನೌಕದಳದ ನಿವೃತ್ತ ಕೊಮೊಡೋರ್ ಜೆರೋಮ್ ಕಸ್ತಲಿನೊ ಎಂಬವರ ‘ವನಸೌರಭ’ ಎಂಬ ಹೆಸರಿನ ಮನೆ ಮೂಡುಬೆಳ್ಳೆ- ಪಡುಬೆಳ್ಳೆ ರಸ್ತೆಯಲ್ಲಿದ್ದು, ಕಸ್ತಲಿನೊ ಅವರು ತಮ್ಮ ಮನೆ ಮುಂಭಾಗದ ರಸ್ತೆ ಬದಿಯಲ್ಲಿ ಕಳೆದ ಹಲವು ತಿಂಗಳುಗಳ ಹಿಂದೆ ರಾಷ್ಟ್ರಧ್ವಜವೊಂದನ್ನು ಆರೋಹಣ ಮಾಡಿದ್ದರು. ಬಳಿಕ ರಾಷ್ಟ್ರಧ್ವಜ ಅವರೋಹಣ ಮಾಡದೆ ಹಾಗೆಯೇ ಬಿಟ್ಟುಬಿಟ್ಟಿದ್ದರು. ರಾಷ್ಟ್ರಧ್ವಜವನ್ನು ಸೂರ್ಯಾಸ್ಥವಾದರೂ ಅವರೋಹಣ ಮಾಡದೇ ತಿಂಗಳಿಂದ ಹಾಗೆಯೇ ಬಿಟ್ಟುಬಿಟ್ಟಿರುವುದು ಭಾರತದ ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ರಾಷ್ಟ್ರಧ್ವಜಕ್ಕೆ ನಿರಂತರವಾಗಿ ಅಪಮಾನವಾಗುತ್ತಿರುವ ಬಗ್ಗೆ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ಶ್ರೀರಾಮ ದಿವಾಣ ಅವರು ಮಾರ್ಚ್ 18ರಂದು ರಾತ್ರಿ ಶಿರ್ವ ಸಬ್ ಇನ್ಸ್ ಪೆಕ್ಟರ್ ಅಶೋಕ್, ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ಹಾಗೂ ಉಡುಪಿ ಜಿಲ್ಲಾ ನಿಯಂತ್ರಣ ಕಚೇರಿಗೆ ಮೌಕಖಿಕ ದೂರು ನೀಡಿದ್ದರು.

ಸ್ಥಳೀಯ ಪೊಲೀಸ್ ಅಧಿಕಾರಿಗಳು ರಾಷ್ಟ್ರಧ್ವಜ ಅಪಮಾನ ಪ್ರಕರಣದ ವಿರುದ್ಧ ಯಾವುದೇ ಕನಿಷ್ಟ ಕ್ರಮಗಳನ್ನೂ ಕೈಗೊಳ್ಳದ ಕಾರಣ ಮಾ.19ರಂದು ಮಧ್ಯಾಹ್ನ ಎಸ್ಪಿ ಡಾ.ಬೋರಲಿಂಗಯ್ಯ ಹಾಗೂ ಅಪರ ಜಿಲ್ಲಾಧಿಕಾರಿ ಕುಮಾರ್ ಅವರಿಗೆ ಮೌಖಿಕ ದೂರು ನೀಡಿದ್ದರು. ವಿಷಯ ಮಾ.19 ಮತ್ತು ಮಾ.24ರ ಜಯಕಿರಣ ದಿನಪತ್ರಿಕೆ, http://www.udupibits.in (ಅಂತಾರ್ಜಾಲದ ಸುದ್ಧಿವಾಹಿನಿ) ಮತ್ತು ಫೇಸ್ ಬುಕ್ ಖಾತೆಗಳಲ್ಲೂ ನಿರಂತರವಾಗಿ ಪ್ರಕಟವಾಗಿತ್ತು.

ದೂರು ನೀಡಿದ ಬಳಿಕವೂ ಸಂಬಂಧಿಸಿದ ಅಧಿಕಾರಿಗಳು ರಾಷ್ಟ್ರಧ್ವಜ ಅವರೋಹಣ ಮಾಡದೆ ಧ್ವಜಸಂಹಿತೆಯನ್ನು ನಿರ್ಲಕ್ಷಿಸಿದ ಕಾರಣ, ಮಾ.22ರಂದು ಜಿಲ್ಲಾಧಿಕಾರಿ
ಡಾ.ಮುದ್ದುಮೋಹನ್ ಅವರಿಗೆ ದೂರು ನೀಡಲಾಗಿತ್ತು. ಕೆಲವರು ಜಿಲ್ಲಾಧಿಕಾರಿ
ಮುದ್ದುಮೋಹನ್ ಹಾಗೂ ಎಸ್ಪಿ ಬೋರಲಿಂಗಯ್ಯ ಅವರಿಗೆ ಮೊಬೈಲ್ ಸಂದೇಶ ಕಳುಹಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು. ಇದರ ಪರಿಣಾಮವಾಗಿ ಜಿಲ್ಲಾಧಿಕಾರಿಗಳು ರಾಷ್ಟ್ರಧ್ವಜ ಅಪಮಾನ ಪ್ರಕರಣದ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದರು.

ಆದರೂ ಮಾ 24ರವರೆಗೂ ಜಿಲ್ಲಾಡಳಿತಕ್ಕೆ ಸೆರಿದ ಯಾವೊಬ್ಬ ಅಧಿಕಾರಿಯೂ ರಾಷ್ಟ್ರಧ್ವಜ ಅಪಮಾನ ಪ್ರಕರಣದ ವಿರುದ್ಧ ಕ್ರಮಕೈಗೊಳ್ಳುವ ಕನಿಷ್ಟ ಕರ್ತವ್ಯವನ್ನೂ
ನಿರ್ವಹಿಸದಿರುವುದು ರಾಷ್ಟ್ರೀಯ ದುರಂತ ಎಂದು ಭಾವಿಸಿದ ಕರ್ನಾಟಕ ಜನಪರ ವೇದಿಕೆಯು ಬಳಿಕ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೂ ವಿಷಯವನ್ನು ತಲುಪಿಸಿತ್ತು. ಅಂತಿಮವಾಗಿ ಮಾ.25ರಂದು ಸಂಜೆ ಜಿಲ್ಲಾಡಳಿತದ ಅಧಿಕಾರಿಗಳು ರಾಷ್ಟ್ರಧ್ವಜವನ್ನು ಅವರೋಹಣ ಮಾಡಿಸಿ ಅಪಮಾನ ಪ್ರಕರಣ ಮುಂದುವರಿಯುವುದನ್ನು ತಪ್ಪಿಸಿದರು.