Posts Tagged ‘karkala police’

ಉಡುಪಿ: ಕೆಲವು ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಸೀತಾನದಿ ಪರಿಸರ ಪ್ರದೇಶದಲ್ಲಿ ನಡೆದ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಎಲ್ಲಾ ಶಂಕಿತ ನಕ್ಸಲ್ ಆರೋಪಿಗಳನ್ನೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಇಂದು ಆರೋಪಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ.

ಚಂದ್ರಶೇಖರ ಗೋರಬಾಳ್ ಯಾನೆ ತಿಪ್ಪೇಶ್, ನಂದ ಕುಮಾರ್, ದೇವೇಂದ್ರಪ್ಪ ಯಾನೆ ವಿಷ್ಣು ಯಾನೆ ದೇವಣ್ಣ ಹಾಗೂ ಆಶಾ ಯಾನೆ ಸುಧಾ ಯಾನೆ ಚಂದ್ರಾ ಯಾನೆ ಇಂದಿರಾ ಯಾನೆ ನಳಿನಿ ಯಾನೆ ಸಿಂಧು ಯಾನೆ ನಂದಿನಿ ಯಾನೆ ಪವಿತ್ರಾ ಆರೋಪಮುಕ್ತರಾದ ಶಂಕಿತ ನಕ್ಸಲರಾಗಿದ್ದಾರೆ.

2008 ರ ಮೇ 15 ರಂದು ಕಾರ್ಕಳ ತಾಲೂಕಿನ ಹೆಬ್ರಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೀತಾನದಿ ಬಳಿಯ ಬಾಳುಬ್ಬೆ ನಿವಾಸಿ, ಸ್ಥಳೀಯ ಶಾಲಾ ಶಿಕ್ಷಕ ಮತ್ತು ಬಡ್ಡಿ ವ್ಯಾಪಾರಿ ಭೋಜ ಶೆಟ್ಟಿ ಹಾಗೂ ಇನ್ನೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದ ಆರೋಪ ದೇವೇಂದ್ರಪ್ಪ, ನಂದ ಕುಮಾರ್, ಚಂದ್ರಶೇಖರ ಗೋರಬಾಳ್ ಹಾಗೂ ಆಶಾ ಇವರ ಮೇಲಿತ್ತು.

2003 ರ ನವೆಂಬರ್ ನಲ್ಲಿ ಈದು ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ನಡೆದ ಪೋಲೀಸ್ ಕಾರ್ಯಾಚರಣೆಯಲ್ಲಿ ಪೊಲೀಸರು ನಕ್ಷಲ್ ನಾಯಕಿಯರಾದ ಹಾಜಿಮಾ ಹಾಗೂ ಪಾರ್ವತಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಯಶೋದಾ ಅವರನ್ನು ಗುಂಡಿನ ಗಾಯಗಳೊಂದಿಗೆ ಸೆರೆ ಹಿಡಿದಿದ್ದರು. ಈ ಸಂದರ್ಭದಲ್ಲಿ ಓರ್ವ ಯುವಕ ಓದಿ ಪರಾರಿಯಾಗಿದ್ದನು. ಇವರಲ್ಲಿ ಯಶೋದಾ ನ್ಯಾಯಾಲಯ ವಿಚಾರಣೆ ಎದುರಿಸಿ ಇದೀಗ ದೋಷಮುಕ್ತಿಗೊಂದಿದ್ದಾಳೆ. ಅಂದು ಓಡಿ ಪರಾರಿಯಾದ ಯುವಕನನ್ನು ವಿಷ್ಣು ಎಂದು ಗುರುತಿಸಲಾಗಿತ್ತು. ಬಳಿಕ ಪೋಲೀಸ್ ಬಂಧನಕ್ಕೆ ಒಳಗಾದ ದೇವೇಂದ್ರಪ್ಪ ಅವರೇ ವಿಷ್ಣು ಎಂದು ಗುರುತಿಸಲಾಗಿತ್ತು.

ಭೋಜ ಶೆಟ್ಟಿ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರವಾಗಿ ಉಡುಪಿಯ ಹಿರಿಯ ಮತ್ತು ಪ್ರಸಿದ್ಧ ವಕೀಲರಾದ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

ಇಂದು ಖುಲಾಸೆಗೊಂಡವರಲ್ಲಿ ಆಶಾ ಅವರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಮುಖ್ಯ ವಾಹಿನಿಯಲ್ಲಿ ಸಹಜ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಮೈಸೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಶೇಖರ ಗೋರಬಾಳ್ ಅವರ ಮೇಲೆ ಬೇರೆ ಯಾವುದೇ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇಲ್ಲದೇ ಇರುವುದರಿಂದ ಇನ್ನೋಂದೆರಡು ದಿನಗೋಳಗೆ ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳ್ಳಲಿದ್ದಾರೆ. ನಂದ ಕುಮಾರ್ ಹಾಗೂ ದೇವೇಂದ್ರಪ್ಪ ಇವರ ವಿರುದ್ಧ ಇನ್ನೂ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ಇವರ ನ್ಯಾಯಾಂಗ ಬಂಧನ ಮುಂದುವರಿಯಲಿದೆ.

http://www.udupibits.in news
ಉಡುಪಿ: ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರುಗಳಿಸಿರುವ ಕಾರ್ಕಳ ಉಪ ವಿಭಾಗದ ಎ.ಎಸ್.ಪಿ. ಅಣ್ಣಾಮಲೈ ಅವರು ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ಕಚೇರಿ ಕಟ್ಟಡ ಕಟ್ಟುವ ಹೊಣೆಯನ್ನು ತಾಲೂಕಿನ ಕಲ್ಲು ಗಣಿ ಮಾಲೀಕರಿಗೆ ನೀಡಿದ್ದಾರಂತೆ !

ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ದಾರಿ ತಪ್ಪಿದ್ದಾರೆ ಎನ್ನಲು ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ. ಪೊಲೀಸ್ ಅಧಿಕಾರ ಕಚೇರಿ ಕಟ್ಟಡವನ್ನು ಕಟ್ಟುವ ಜವಾಬ್ದಾರಿಯನ್ನು ಕಲ್ಲು ಗಣಿ ಮಾಲೀಕರ ಹೆಗಲಿಗೆ ಹಾಕುವ ಮೂಲಕ ಎಎಸ್ಪಿ ಅಣ್ಣಾಮಲೈ ಅವರು ತಮ್ಮ ಶುಭ್ರ ಬಿಳಿ ಬಟ್ಟೆಗೆ ತಮಗೆ ತಾವೇ ಮಸಿ ಬಳಿದುಕೊಂಡಿದ್ದಾರೆ.

ಸರಕಾರಿ ಕಟ್ಟಡವನ್ನು ಸರಕಾರವೇ ನಿರ್ಮಿಸಬೇಕು. ಇದು ಸರಕಾರದ ಜವಾಬ್ದಾರಿಯೂ ಹೌದು, ಕರ್ತವ್ಯವೂ ಆಗಿದೆ. ಸರಕರ ಮಾಡಬೇಕಾದ ಕೆಲಸವನ್ನು ಖಾಸಗಿಯವರಿಂದ, ಅದರಲ್ಲೂ ಕಲ್ಲು ಗಣಿ ಮಾಲೀಕರಿಂದ ಮಾಡಿಸುವುದು ಎಂದರೆ ಪೊಲೀಸರ ಕೈಯ್ಯಲ್ಲಿ ಇರಬೇಕಾದ ದಂಡವನ್ನು ಖಾಸಗಿ ಉದ್ಯಮಿಗಳ ಕೈಗೆ ಕೊಟ್ಟಂತೆಯೇ ಸರಿ.

ಕಲ್ಲು ಗಣಿ ಮಾಲೀಕರ ಮೇಲೆ ಸಾರ್ವಜನಿಕ ವಲಯದಲ್ಲಿ ಅಷ್ಟೇನೂ ಒಳ್ಳೆಯ ಹೆಸರಿಲ್ಲ. ಇವರ ಮೇಲೆ ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಮೊಕದ್ದಮೆಗಳೂ ದಾಖಲಾಗಿವೆ. ಅಕ್ರಮ ಸ್ಪೋಟಕ ದಾಸ್ತಾನು, ಅನಧಿಕೃತ ಸ್ಪೋಟಕ ಬಳಕೆ, ಪರವಾನಿಗೆ ರಹಿತ ಕಲ್ಲು ಗಣಿ, ಕಾರ್ಮಿಕರಿಂದ ಕಾನೂನು ಬಾಹಿರವಾಗಿ ಜೀತ ಮಾಡಿಸುವಿಕೆಯೇ ಮೊದಲಾದ ಆರೋಪಗಳೂ ಹೆಚ್ಚಾಗಿ ಕೇಳಿ ಬರುತ್ತಿವಾಗ, ಅಂಥವರಿಂದ ಪೊಲೀಸ್ ಅಧಿಕಾರಿಗಳ ಕಚೇರಿ ಕಟ್ಟಡವನ್ನು ನಿಮರ್ಿಸಲು ಮುಂದಾಗುವುದು ಎಂದರೆ, ಅದು ನಕಾರಾತ್ಮಕ ಬೆಳವಣಿಗೆಯೇ ಆಗುತ್ತದೆ.

ವಾರದ ಹಿಂದೆ ಕಾರ್ಕಳ ತಾಲೂಕಿನ ಕಲ್ಲು ಗಣಿ ಮಾಲೀಕರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಎಎಸ್ಪಿ ಅಣ್ಣಾಮಲೈ ಅವರು, ಸಭೆಯಲ್ಲಿ ಚಾ ಮತ್ತು ಬಿಸ್ಕೇಟು ನೀಡಿದ ಬಳಿಕ, ತಮಗೊಂದು ಹೊಸದಾದ ಸುಸಜ್ಜಿತವಾದ ಕಚೇರಿ ಕಟ್ಟಡ ಕಟ್ಟಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಕಲ್ಲು ಗಣಿ ಕಾರ್ಯಾಯುತ್ತಿರಬೇಕಾದರೆ, ಸಮಸ್ಯೆ ಬಂದಾಗಲೆಲ್ಲ ಪೊಲೀಸ್ ಅಧಿಕಾರಿಗಳು ಸ್ವಲ್ಪ ಮಟ್ಟಗಾದರೂ ತಮಗೆ ರಿಯಾಯಿತಿ ತೋರಿಸಬೇಕಾದರೆ, ತಮ್ಮ ಪರವಾಗಿ ನಿಲ್ಲಬೇಕಾದರೆ, ಕೇಸು ಮುಚ್ಚಿ ಹಾಕಬೇಕಾದರೆ, ಪೊಲೀಸ್ ಅಧಿಕಾರಿಗಳ ಎಲ್ಲಾ ರೀತಿಯ ಬೇಕು ಬೇಡಗಳಿಗೂ ತಾವು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರಬೇಕು ಎನ್ನುವುದನ್ನು ಸರಿಯಾಗಿಯೇ ತಿಳಿದುಕೊಂಡಿರುವ ಕಲ್ಲು ಗಣಿ ಮಾಲೀಕರು, ಎಎಸ್ಪಿ ಅಣ್ಣಾಮಲೈ ಅವರ ಆದೇಶವನ್ನು ಶಿರಸಾವಹಿಸಿ ಸ್ವೀಕರಿಸಿಕೊಂಡರು ಎನ್ನಲಾಗಿದೆ.

ಉಡುಪಿ: ತನ್ನ ಎರಡು ವರ್ಷ ಪ್ರಾಯದ ಮಗನೊಂದಿಗೆ ಸೊಸೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಣೆ ನೀಡಿದ ಪ್ರಕರಣದ ಆರೋಪಿ ಮಾವನಿಗೆ ಏಳು ವರ್ಷಗಳ ಸಜೆ ಮತ್ತು ಹತ್ತು ಸಾವಿರ ರು. ದಂಡ ವಿಧಿಸಿ ಉಡುಪಿ ತ್ವರಿತ ವಿಲೆವಾರಿ ನ್ಯಾಯಾಲಯದ
ನ್ಯಾಯಾಧೀಶರಾದ ಜಿ.ಎಸ್.ರೇವಣಕರ ಇಂದು ತೀರ್ಪು ನೀಡಿದ್ದಾರೆ.
ಕಾರ್ಕಳ ತಾಲೂಕು ಮುಲ್ಲಡ್ಕ ಗ್ರಾಮದ ಪಣ್ಕೆದಡಿ ನಿವಾಸಿ ಪದ್ಮನಾಭ ಕೋಟ್ಯಾನ್ (79) ಎಂಬವರೇ ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದಾರೆ.
ಪದ್ಮನಾಭ ಕೋಟ್ಯಾನ್ರವರು ತನ್ನ ಮಗ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಂದರ್ಭದಲ್ಲಿ ಮನೆಯಲ್ಲಿದ್ದ ಸೊಸೆ ಮಂಜುಳಾಳಿಗೆ ಮನೆ ಕೆಲಸದ ವಿಷಯದಲ್ಲಿ ವಿನಾ ಕಾರಣ
ಬೈಯ್ಯುತ್ತಿದ್ದ. ತವರು ಮನೆಗಾಗಲೀ, ಸಂಬಂಧಿಕರ ಮನೆಗಾಗಲೀ ಹೋಗಲು ಬಿಡುತ್ತಿರಲಿಲ್ಲ. ಹಣಕ್ಕಾಗಿ ಪೀಡಿಸುತ್ತಾ, ಮಾನಸಿಕ ಹಿಂಸೆ ನೀಡುತ್ತಾ ಮಂಜುಳಾಳ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿದ್ದ ಎಂದು ಆರೋಪಿಸಲಾಗಿತ್ತು.
ಮಾವನ ನಿರಂತರ ಕಿರುಕುಳದಿಂದ ಬೇಸತ್ತ ಮಂಜುಳಾ, ಮಗ ರಕ್ಷಿತ್ ಸಹಿತ 2011 ರ ಜನವರಿ 16 ರಂದು ಬೆಳಗ್ಗೆ 5 ಗಂಟೆಗೆ ಮನೆ ಪಕ್ಕದ ತೋಟದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಪ್ರಕರಣದ ಬಗ್ಗೆ ಮೃತಳ ಸಹೋದರ ಸುಕುಮಾರ, ತಂದೆ ಶೇಖರ ಕೋಟ್ಯಾನ್ ಹಾಗೂ ಇತರ ಸಾಂದರ್ಭಿಕ ಸಾಕ್ಷ್ಯಾಧರಗಳ ಆಧಾರದಲ್ಲಿ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಭಿಯೋಜನೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಅಂದಿನ ಸಬ್ ಇನ್ ಸ್ಪೆಕ್ಟರ್ ಗಳಾದ ರವಿ ಹಾಗೂ ಅಝ್ಮತ್ ಅಲಿ ಜಿ. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿ ಸಲ್ಲಿಸಿದ್ದರು.

ಉಡುಪಿ: ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ವಿಠೋಬ ನಗರ ನಿವಾಸಿ ವೆಂಕಪ್ಪ ಶೆಟ್ಟಿ (60) ಎಂಬವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈಗೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ಬಹಿರಂಗಕ್ಕೆ ಬಂದಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ವೆಂಕಪ್ಪ, ಕಳೆದ 6 ತಿಂಗಳಿಂದ ಎದೆ ನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಗುರುವಾರ ಸಂಜೆ ಗಂಟೆ 6.45 ರಿಂದ ಶುಕ್ರವಾರ ಬೆಳಗ್ಗೆ 7 ಗಂಟೆ ನಡುವೆ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಈ ಬಗ್ಗೆ ಮೃತರ ಪತ್ನಿ ಜಯಂತಿ ಶೆಟ್ಟಿ ನೀಡಿದ ದೂರಿನ ಪ್ರಕಾರ ಕಾರ್ಕಳ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಕಾರ್ಕಳ ತಾಲೂಕಿನ ಸೂಡಾ ಎಂಬಲ್ಲಿ ಗೌರೀಶ್ ಕ್ರಶರ್ ಸಂಸ್ಥೆಯಲ್ಲಿ ಕೂಲಿ ಕಾರ್ಮೀಕರಾಗಿ ಕೆಲಸ ಮಾಡುತ್ತಿದ್ದ ಮೂವರು ಯುವತಿಯರು ನೀರು ತುಂಬಿದ್ದ ಕಲ್ಲುಕೋರೆ ಹೊಂಡಕ್ಕೆ ಬಿದ್ದು ಮೃತಪಟ್ಟ ದುರ್ಘಟನೆ ಇಂದು ಸಂಭವಿಸಿದೆ.
ಮೂವರೂ ಗದಗ ಜಿಲ್ಲೆಯ ನಿವಾಸಿಗಳಾಗಿದ್ದು, ಎಲ್ಲರೂ 18 ರಿಂದ 20 ವರ್ಷ
ಪ್ರಾಯದವರಾಗಿದ್ದಾರೆ. ಮೃತರನ್ನು ಹುಲಿಯಮ್ಮ, ಲಲಿತಮ್ಮ ಹಾಗೂ ಭಾರತಿ ಎಂದು ಗುರುತಿಸಲಾಗಿದೆ.
ಘಟನೆಯ ಬಗ್ಗೆ ಕೆಲವೊಂದು ಸಂಶಯಗಳು ವ್ಯಕ್ತವಾಗಿವೆ. ಕಾರ್ಕಳ ಗ್ರಾಮಾಂತರ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿನ ವಿವಾಹಿತ ಯುವತಿಯೋರ್ವಳನ್ನು ಇಬ್ಬರು ಹಿರಿಯಡ್ಕ ಬಳಿಯ ವಸತಿಗೃಹದಲ್ಲಿ ಬಲಾತ್ಕಾರಕ್ಕೆ ಯತ್ನಿಸಿದ ಪ್ರಕರಣ ನಡೆದಿದೆ.
ಸಂಬಂಧಿ ಭಾಸ್ಕರ್ ಯಾನೆ ಬಾಬು ಹಾಗೂ ಪ್ರೇಮದಾಸ ಕಿಣಿ ಎಂಬವರೇ ಮಾನಭಂಗಕ್ಕೆ ಯತ್ನಿಸಿದವರಾಗಿದ್ದಾರೆ. ಸಂಬಂಧಿ ಭಾಸ್ಕರ ಕೆಲಸಕ್ಕೆ ಸಂದರ್ಶನಕ್ಕೆ
ಕರೆದೊಯ್ಯುವುದಾಗಿ ಹೇಳಿ ವಿವಾಹಿತ ಯುವತಿಯನ್ನು ಮನೆಯಿಂದ ಕರೆದೊಯ್ದಿದ್ದ. ಬಳಿಕ ಪ್ರೇಮದಸ ಕಿಣಿಯ ಕಾರಿನಲ್ಲಿ ಹಿರಿಯಡ್ಕ ಬಳಿಯ ವಸತಿಗೃಹಕ್ಕೆ ಕರೆದೊಯ್ದು, ಅಲ್ಲಿ ಮದ್ಯಪಾನ ಮಾಡಲು ಒತ್ತಾಯಿಸಿ, ಕೈ ಹಿಡಿದು ಎಳೆದು ಬಲಾತ್ಕಾರಕ್ಕೆ ಯತ್ನಿಸಿದರು ಮತ್ತು ಬಳಿಕ ಕೊಲೆ ಬೆದರಿಕೆ ಹಾಕಿದರೆನ್ನಲಾಗಿದೆ.
ಈ ಬಗ್ಗೆ ಯುವತಿ ನೀಡಿದ ದೂರಿನ ಪ್ರಕಾರ ಕಾರ್ಕಳ ಠಾಣೆಯ ಪೋಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ನಿವಾಸಿ ಮುಕ್ತಾನಂದ ಶೆಟ್ಟಿ (48) ಎಂಬವರು ಹುಲ್ಲು ಕಠಾವು ಮಾಡುತ್ತಿದ್ದಾಗ ಅಕಸ್ಮಾತ್ ಬಾವಿಗೆ ಬಿದ್ದು
ಮೃತಪಟ್ಟಿದ್ದಾರೆ.
ಈ ಬಗ್ಗೆ ಮೃತರ ಸಹೋದರ ಚಂದ್ರಹಾಸ ಶೆಟ್ಟಿ ನೀಡಿದ ದೂರಿನ ಪ್ರಕಾರ ಕಾರ್ಕಳ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.