Posts Tagged ‘kundapur police’

ಉಡುಪಿ: ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿಬಲ್ಲೆ ನಿವಾಸಿ ಶಾಂತಿ ಖಾರ್ವಿ ಎಂಬವರ ಪುತ್ರ ಕಿರಣ (19) ಎಂಬಾತ ಅಕ್ಟೋಬರ್ 22ರಂದು ಬೆಳಗ್ಗೆ 9 ಗಂಟೆಯಿಂದ ನಿಗೂಢವಾಗಿ ಕಾಣೆಯಾಗಿದ್ದಾನೆ.

ಅ.21ರಂದು ರಾತ್ರಿ ಗಂಟೆ 8.45ಕ್ಕೆ ತಾಯಿಗೆ ಮೊಬೈಲ್ ಕರೆ ಮಾಡಿದ ಕಿರಣ್, ತಾನು ಬೆಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಹತ್ತಿರುವುದಾಗಿ ತಿಳಿಸಿದ್ದಾನೆ. ಮರುದಿನ ಬೆಳಗ್ಗೆ 9 ಗಂಟೆಗ, ಮತ್ತೆ ತಾಯಿಗೆ ಮೊಬೈಲ್ ಕರೆ ಮಾಡಿ, ತಾನೀಗ ಕುಂದಾಪುರ ಶಾಸ್ತ್ರಿ ಸರ್ಕಲ್ ನಲ್ಲಿ ಇರುವುದಾಗಿಯೂ, ಮೊಬೈಲ್ ಸ್ವಿಚ್ ಆಫ್ ಆಗುತ್ತಿರುವುದಾಗಿಯೂ ತಿಳಿಸಿದ್ದಾನೆ. ಬಳಿಕ ಮನೆಗೆ ಬಾರದೆ ಕಾಣೆಯಾಗಿದ್ದಾನೆ.

ಕಳೆದ ಎಂಟು ತಿಂಗಳಿಂದ ಬೆಂಗಳುರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್, ನಿಗೂಢವಾಗಿ ಕಾಣೆಯಾದ ಬಗ್ಗೆ ಆತನ ತಾಯಿ ಶಾಂತಿ ಖಾರ್ವಿಯವರ ತಮ್ಮ ರವಿ ಖಾವರ್ಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಡುಪಿ: ಕುಂದಾಪುರ ಡಿವೈಎಸ್ಪಿ ಇಂಗು ತಿಂದ ಮಂಗನಂತೆ ಮಾಡ್ತಾರೆ, ಡಿವೈಎಸ್ಪಿ ಏನೂ ಪ್ರಯೋಜನ ಇಲ್ಲ ಸಾರ್, ರಾಜಕಾರಣಿಗಳಿಗೆ ಬಹಳ ಹತ್ತಿರ ಇತರ್ಾರೆ, ಆರೋಪಿಗಳ ವಿರುದ್ಧ ಏನೂ ಮಾಡಲ್ಲ, ರಾಜಕೀಯ ಒತ್ತಡ ಬಂದ್ರೆ ಸುಮ್ನಗ್ತಾರೆ, ಯಾರನ್ನು ಬೇಕಾದ್ರು ಕೇಸಿಂದ ಕೈ ಬಿಡ್ತಾರೆ, ಯಾರನ್ನು ಬೇಕಾದ್ರು ಕೇಸಿನಲ್ಲಿ ಹಾಕ್ತಾರೆ..
ಹೀಗೆಂದು ಕುಂದಾಪುರ ಡಿವೈಎಸ್ಪಿ ಯಶೋದಾ ವಿರುದ್ಧ ಫೆ.17 ರಂದು ಉಡುಪಿ ಎಸ್ಪಿ ಕಚೇರಿ ಸಭಾಂಗಣದಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಮೇಲಿಂದ ಮೇಲೆ ದಲಿತ ಮುಖಂಡರು ಹರಿಹಾಯ್ದ ಪ್ರಸಂಗ ನಡೆಯಿತು.
ಕುಂದಾಪುರ ತಾಲೂಕಿನ ದಲಿತ ಗ್ರಾಮ ಪಂಚಾಯತ್ ಸದಸ್ಯೆ ಕನಕ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸುಭಾಶ್ ಪಾಂಡ್ಯಾ ಎಂಬಾತ ಮುಖ್ಯ ಆರೋಪಿಯಾಗಿದ್ದಾನೆ. ಸ್ಥಳೀಯವಾಗಿ ಭಾರೀ ಪ್ರಭಾವಶಾಲಿಆಗಿರುವ ಈತನ ಹೆಸರನ್ನು ಡಿವೈಎಸ್ಪಿ ಯಶೋದಾರವರು ರಾಜಕೀಯ ಒತ್ತಡಕ್ಕೆ ಮಣಿದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ಸಮಯದಲ್ಲಿ ಕೈಬಿಟ್ಟಿದ್ದಾರೆ. ಈ ಬಗ್ಗೆ ಮರು ತನಿಖೆ ನಡೆಸಬೇಕೆಂದು ದಸಂಸ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ಉದಯ ಕುಮಾರ್ ತಲ್ಲೂರು ಎಸ್ಪಿಯವರನ್ನು ಒತ್ತಾಯಿಸಿದರು.
ತಲ್ಲೂರು ಆರೋಪವನ್ನು ನಿರಾಕರಿಸಿದ ಎಸ್ಪಿ ಬೋರಲಿಂಗಯ್ಯರವರು ಡಿವೈಎಸ್ಪಿಯವರನ್ನು ಸಮರ್ಥಿಸಿಕೊಂಡರು.
ಕೊಲ್ಲೂರಿನಲ್ಲಿ 2012 ರ ಅಕ್ಟೋಬರ್ 18 ರಂದು ಮಲ್ಲಿಕಾ ಎಂಬಾಕೆ ಮನೆಯೊಳಗೆ ಅಡುಗೆ ಮನೆಯಲ್ಲಿ ನಸುಕಿನ 4 ಗಂಟೆಗೆ ಚಾ ಮಾಡಲು ಒಲೆ ಉರಿಸುವಾಗ ಧರಿಸಿದ್ದ ನೈಟಿಗೆ ಬೆಂಕಿ ತಾಗಿ ಮೈಗೆ ಸುಟ್ಟ ಗಾಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾದವಳು ಬಳಿಕ ಅದೇ ತಿಂಗಳ 22 ರಂದು ಯುವತಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ. ಆದರೆ, ಆ ಮನೆಯಲ್ಲಿ ಘಟನೆ ನಡೆದ ದಿನದಂದು ಒಲೆಯಲ್ಲಿ ಬೆಂಕಿಯನ್ನೇ ಹಚ್ಚಲಾಗಿಲ್ಲ. ಪೊಲೀಸರು ತನಿಖೆ ನಡೆಸದೆ ಪ್ರಕರಣ ದಾಖಲಿಸಿ ಸತ್ಯಾಂಶವನ್ನು ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ ಎಂಬ ಗಂಭೀರ ಆರೋಪವೂ ದಲಿತರ ಕುಂದುಕೊರತೆ ಸಭೆಯಲ್ಲಿ ಕೇಳಿಬಂತು.
ಅಸೋಡು ಎಂಬಲ್ಲಿ ಕೆಲವು ಮಂದಿ ಶೆಟ್ಟರು ಮತ್ತು ಬಿಲ್ಲವರು ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಈ ದಂಧೆ ಅವರೊಳಗೆ ಜಾತಿ ಸಂಘರ್ಷಕ್ಕೆ ಕಾರಣವಾಗಿದೆ. ಇದೀಗ ಈ ದಂಧಯಲ್ಲಿ ನಿರತರಾಗಿರುವ ಜಾತಿ ಜನರು ದಲಿತರನ್ನು ತಮ್ಮೊಂದಿಗೆ ಸೇರಿಸಿಕೊಂಡು ಇನ್ನೊಂದು ಜಾತಿ ಜನರ ವಿರುದ್ಧ ಅಟ್ರಾಸಿಟಿ ಕೇಸು ದಾಖಲಿಸಲು ಸಂಚು ಹೂಡಿದ್ದಾರೆ ಎಂಬ ವಿಷಯವನ್ನು ದಲಿತ ನಾಯಕರು ಬಹಿರಂಗ ಪಡಿಸಿದರು.

ಉಡುಪಿ: ‘ವಿಜಯವಾಣಿ’ ದಿನ ಪತ್ರಿಕೆಯ ಉಡುಪಿಯ ಹಿರಿಯ ವರದಿಗಾರ, ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ಅವರಿಗೆ ಮೂವರ ತಂಡ ಒಂದು ಗಂಟೆ ಕಾಲ ದಿಗ್ಭಂಧನ ಹಾಕಿ ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಲೆ ಬೆದರಿಕೆಯೊಡ್ಡಿ ಹಲ್ಲೆಗೆ ಯತ್ನಿಸಿದ ಪ್ರಕರಣ ಫೆ.2 ರಂದು ರಾತ್ರಿ 9 ಗಂಟೆಗೆ ಕುಂದಾಪುರದಲ್ಲಿ ನಡೆದಿದೆ. ಈ ಬಗ್ಗೆ ಹಕ್ಲಾಡಿ ನೀಡಿದ ದೂರಿನಂತೆ ವಂಡ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಇನ್ನೋರ್ವ ವ್ಯಕ್ತಿ ವಿರುದ್ಧ ಕುಂದಾಪುರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಕೊಂಡಿದ್ದಾರೆ.
ಶನಿವಾರ ರಾತ್ರಿ ಪತ್ರಿಕೆಯ ಉಡುಪಿ ಕಚೇರಿಯಲ್ಲಿ ಕೆಲಸ ಮುಗಿಸಿ ಕುಂದಾಪುರಕ್ಕೆ ತೆರಳಿ, ಅಲ್ಲಿಂದ ಮನೆಗೆ ಹೊರಟ ಸಂದರ್ಭದಲ್ಲಿ ಕಾದು ಕುಳಿತಿದ್ದ ಆರೋಪಿಗಳು ಹಕ್ಲಾಡಿಯವರ ಮೇಲೆ ಹಲ್ಲೆಗೆ ಮುಂದಾದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರ ಮಧ್ಯ ಪ್ರವೇಶದಿಂದಾಗಿ ಗಂಭೀರವಾಗಿ ಹಲ್ಲೆಯಾಗುವುದು
ತಪ್ಪಿತೆನ್ನಲಾಗಿದೆ.
ವಂಡ್ಸೆ ಗ್ರಾ.ಪಂ. ಉಪಾಧ್ಯಕ್ಷ ಮೀಸಲಾತಿಯನ್ನು ಉಲ್ಲಂಘಿಸಿದ ವಿಷಯಕ್ಕೆ
ಸಂಬಂಧಿಸಿದಂತೆ ಹಕ್ಲಾಡಿಯವರು ವಿಜಯವಾಣಿಯ ಿತ್ತೀಚೆಗಿನ ಸಂಚಿಕೆಯಲ್ಲಿ ವಿಶೇಷ ವರದಿ ಬರೆದುದೇ ಹಲ್ಲೆ ಯತ್ನಕ್ಕೆ ಕಾರಣವೆನ್ನಲಾಗಿದೆ.
ಕುಂದಾಪುರ ಪೊಲೀಸರು ಆರೋಪಿಗಳ ಶೋಧದಲ್ಲಿದ್ದು, ಆರೋಪಿಗಳು
ತಲೆಮರೆಸಿಕೊಂಡಿದ್ದಾರೆನ್ನಲಾಗಿದೆ. ಘಟನೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ, ಪತ್ರಕರ್ತ ಶ್ರೀರಾಮ ದಿವಾಣ ಮೊದಲಾದವರು ತೀವ್ರವಾಗಿ ಖಂಡಿಸಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಮತ್ತು ಪತ್ರಕರ್ತ ಶ್ರೀಪತಿ ಹೆಗಡೆಯವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪೊಲೀಸ್
ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಉಡುಪಿ: ಕುಂದಾಪುರ ತಾಲೂಕಿನ ನಾಡಾ ಗುಡ್ಡೆಯಂಗಡಿ ನಿವಾಸಿ ಯೋಗೀಶ್ ಗಾಣಿಗ (28) ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮನೆಯವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಟೆಂಪೊ ಚಾಲಕರೂ, ಮಾಲಕರೂ ಆಗಿರುವ ಯೋಗೀಶ್, ಟೆಂಪೊ ಬಾಡಿಗೆ ಮಾಡುತ್ತಿದ್ದವರು ಸೆ.25 ರಂದು ರಾತ್ರಿ ಮನೆಗೆ ಬಾರದೆ ನಿಗೂಢವಾಗಿ ಕಾಣೆಯಾಗಿದ್ದರು. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಮನೆಯವರು ತಿಳಿಸಿದ್ದಾರೆ.
ಸೆ.26 ರಂದು ಬೆಳಗ್ಗೆ ಆಲೂರು ರಸ್ತೆಯ ಕಾಸ್ ಬೆಟ್ಟು ಕ್ರಾಸ್ ಬಳಿ ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ನಿಂತಿದ್ದು, ಪರಿಸರದಲ್ಲಿ ಹುಡುಕಾಡಿದಾಗ ಅಲ್ಲೇ ಸಮೀಪ ಹೆಮ್ಮುಂಜೆ ಕಲ್ಲುಡಿ ಸುಬ್ಬಣ್ಣ ಶೆಟ್ಟಿಯವರ ಮನೆಗೆ ಹಾದುಹೋಗುವ ಮಣ್ಣಿನ ರಸ್ತೆಯ ಬದಿಯಲ್ಲಿ ಕಾಚಿನ ಮರದ ಕೊಂಬೆಗೆ ತನ್ನದೇ ಪ್ಯಾಂಟಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಯೋಗೀಶ್ ಮೃತದೇಹ ಕಂಡುಬಂದಿದೆ.
ಕೃಷ್ಣ ಗಾಣಿಗ ಎಂಬವರ ಮಗನಾದ ಯೋಗೀಶ್ ಅವರು ಯಾವುದೇ ರೀತಿಯಲ್ಲೂ ಆತ್ಮಹತ್ಯೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಯಾರೋ, ಯಾವುದೋ ಉದ್ಧೇಶಕ್ಕೆ ಕೊಲೆ ಮಾಡಿದ್ದಾರೆ ಎಂದು ಯೋಗೀಶನ ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಗಂಗೊಳ್ಳಿ ಠಾಣೆಯ ಪೋಲೀಸರು ಪ್ರಕರಣ ದಾಕಲಿಸಿಕೊಂಡಿದ್ದಾರೆ.

ಉಡುಪಿ: ಕುಂದಾಪುರ ತಾಲೂಕಿನ ಗೋಪಾಡಿಯಲ್ಲಿ ಇಂದು ಬೆಳಗ್ಗೆ ಗೂಡ್ಸ್ ಟ್ರ್ಯಾಕ್ಸ್ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ನಲ್ಲಿ ಸಂಚರಿಸುತ್ತಿದ್ದ ಸುಕೇಶ್ ಭಂಡಾರಿ ಎಂಬವರು ಮರತಪಟ್ಟಿದ್ದಾರೆ. ಬೈಕ್ ನ ಹಿಂಬದಿ ಕುಳಿತಿದ್ದ ಸುನೀತಾ ಹಾಗೂ ಇವರ ಮಗು ಸನ್ನಿಧಿ ಎಂಬವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಕುಂಭಾಶಿಯ ಪ್ರಭಾಕರ ಎಂಬವರು ನೀಡಿದ ದೂರಿನ ಪ್ರಕಾರ ಗೂಡ್ಸ್ ಚಾಲಕ ರಘುರಾಮ ಶೆಟ್ಟಿಗಾರ್ ವಿರುದ್ದ ಕುಂದಾಪುರ ಪೋಲೀಸ್ ಠಾಣೆಯಲ್ಲಿ ಮೊಕದ್ದೆಮ ದಾಖಲಾಗಿದೆ.