Posts Tagged ‘malpe police’

ಮಲ್ಪೆ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಆದಿ ಉಡುಪಿಯಲ್ಲಿ ಹತ್ತರ ಹರೆಯದ ಅಪ್ರಾಪ್ತ ಪ್ರಾಯದ ವಿದ್ಯಾಥರ್ಿನಿಯೋರ್ವಳ ಮೇಲೆ ವ್ಯಕ್ತಿಯೋರ್ವ ಬಲವಂತವಾಗಿ ಅತ್ಯಾಚಾರವೆಸಗಿದ ಕೃತ್ಯ ಕಳೆದ ಮೂರು ದಿನಗಳ ಹಿಂದೆ ನಡೆದಿದೆ ಎಂದು ತಿಳಿದುಬಂದಿದೆ.

ಬಲವಂತದ ಅತ್ಯಾಚಾರವೆಸಗಿದ ಆರೋಪಿ ವೃತ್ತಿಯಲ್ಲಿ ಚಾಲಕನಾಗಿದ್ದು, ಮೂಲತಹ ಉತ್ತರ ಕರ್ನಾಟಕದ ಮೂಲದವನಾಗಿದ್ದಾನೆ. ಈತನೆಸಗಿದ ಕೃತ್ಯದ ಬಗ್ಗೆ ವಿದ್ಯಾರ್ಥಿನಿ ತಡ ಮಡದೆ ಮನೆಯವರಲ್ಲಿ ಹೇಳಿದ ಕಾರಣ, ವಿಷಯ ಈತನ ಗಮನಕ್ಕೂ ಬಂದ ಕಾರಣ, ಅಪರಾಧ ಕೃತ್ಯವೆಸಗಿದ ಆರೋಪಿ ವ್ಯಕ್ತಿ ಬಳಿಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಅತ್ಯಾಚಾರ ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದಲ್ಲಿ ವಿಷಯ ಮಾಧ್ಯಮಗಳಲ್ಲಿ ಭಿತ್ತರಗೊಂಡು ವಿದ್ಯಾರ್ಥಿನಿ ಭಾವೀ ಭವಿಷ್ಯಕ್ಕೆ ಸಮಸ್ಯೆಯಾಗಬಹುದು ಎಂಬ ಏಕೈಕ ಉದ್ಧೇಶದಿಂದ ಸಂತ್ರಸ್ತೆ ವಿದ್ಯಾರ್ಥಿನಿಯ ಮನೆಯವರು ವಿಷಯವನ್ನು ಇದುವರೆಗೂ ಪೊಲೀಸರಿಗೆ ತಿಳಿಸಿಲ್ಲವೆನ್ನಲಾಗಿದೆ.
ಚಿತ್ರ : ಸಾಂದರ್ಭಿಕ.

ಉಡುಪಿ: ಕೊಡವೂರು ಗ್ರಾಮದ ಮೂಡಬೆಟ್ಟು ಸಮೀಪದ ಕಂಗಣಬೆಟ್ಟು ಶ್ರೀ ನಾಹಬ್ರಹ್ಮಸಿರಿ ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದಲ್ಲಿ ದೈವಸ್ಥಾನ ಸಮಿತಿಯ ಪ್ರಮುಖ ಮೂವರು ಭಾರೀ ಅವ್ಯವಹಾರ ನಡೆಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭಕ್ತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅಣ್ಣಪ್ಪ ಪಂಜುರ್ಲಿ ಭಕ್ತರ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಡಾ.ಎ.ಟಿ.ರೇಜು ಅವರನ್ನು ಭೇಟಿಯಾಗಿ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. 800 ವರ್ಷಗಳ ಇತಿಹಾಸ ಇರುವ ದೈವಸ್ಥಾನದಲ್ಲಿ 2011 ರ ವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. 2011 ರ ಫೆಬ್ರವರಿಯಲ್ಲಿ ನಡೆದ ಬ್ರಹ್ಮಕಲಶದ ಸಂದರ್ಭದಲ್ಲಿ ಹೊಸದಾಗಿ ಸಮಿತಿಯೊಂದನ್ನು ಅಸ್ತಿತ್ವಕ್ಕೆ ತರಲಾಯಿತು. ಈ ಸಮಿತಿಯಲ್ಲಿ ಅಧ್ಯಕ್ಷರಾಗಿ ಡಾ.ಹರಿಪ್ರಸಾದ್ ಐತಾಳ್, ಕಾರ್ಯದರ್ಶಿಯಾಗಿ ದಿವಾಕರ ಶೆಟ್ಟಿ ತೋಟದಮನೆ ಹಾಗೂ ಕೋಶಾಧಿಕಾರಿಯಾಗಿ ಶ್ರೀಶ ಕೊಡವೂರು ಇವರುಗಳಿದ್ದು, ಈ ಸಮಿತಿಯ ನೇತೃತ್ವದಲ್ಲಿ ನಡೆದ ಹಗರಣಗಳಿಂದಾಗಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಲಾರಂಭಿಸಿತು ಎಂದು ಮನವಿಯಲ್ಲಿ ದೂರಲಾಗಿದೆ.
ದೈವಕ್ಕೆ ಚಿನ್ನದ ಕವಚ ಹೊದಿಸುವುದಾಗಿ ಹೇಳಿ ಸಮಿತಿ ಭಕ್ತರಿಂದ 12 ಲಕ್ಷ ರು.ಗೂ ಮಿಕ್ಕಿ ಹಣ ಸಂಗ್ರಹಿಸಿದೆ. ಬಳಿಕ ಸ್ವರ್ಣ ಜ್ಯುವೆಲ್ಲರ್ಸ್ ನಿಂದ 2,27,361 ರು. ವೆಚ್ಚದಲ್ಲಿ ಚಿನ್ನದ ಕವಚವನ್ನು ಮಾಡಿಸಿ ಸಮರ್ಪಿಸುವ ಮೂಲಕ ವಂಚಿಸಲಾಗಿದೆ. ದೊಡ್ಡ ಮೊತ್ತದ ಹಣ ಧಾನ ಮಡಿದವರ ಹೆಸರುಗಳನ್ನು ಶಿಲೆಯಲ್ಲಿ ಬರೆಸಿ ದೈವಸ್ಥಾನದಲ್ಲಿ ತೂಗುಹಾಕಲಾಗಿದೆ. ಆದರೆ 500, 1000, 5000 ರು. ಇತ್ಯಾದಿಗಳನ್ನು ನೀಡಿದವರ ಲೆಕ್ಕ ಇಲ್ಲ, ಭಕ್ತರಿಗೆ ಕೊಟ್ಟಿಲ್ಲ. ಸಣ್ಣ ಮೊತ್ತದ ಹಣ ನೀಡಿದವರ ಸಂಖ್ಯೆಯೇ ಅಧಿಕ ಎಂದು ಒಕ್ಕೂಟ ಮನವಿಯಲ್ಲಿ ವಿವರಿಸಿದೆ.
2013 ರ ಫೆಬ್ರವರಿ 23 ರಂದು ದೈವಸ್ಥಾನದಲ್ಲಿ ವರ್ಷಾವಧಿ ಕೋಲ ನಡೆಯಿತು. ಈ ಸಮಯದಲ್ಲಿ ಶಿರೂರು ಮಠಾಧೀಶರಾದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಹರಕೆ ರೂಪದಲ್ಲಿ ವಿಜೃಂಭಣೆಯ ಮೆರವಣಿಗೆಯೊಂದಿಗೆ ಪಂಜುರ್ಲಿ ದೈವಕ್ಕೆ ಚಿನ್ನದ ಖಡ್ಗವನ್ನು ಸಮರ್ಪಿಸಿದರು. ಇದಾದ ಕೇವಲ ನಾಲ್ಕೇ ದಿನಗಳಲ್ಲಿ ಈ ಖಡ್ಗ ಚಿನ್ನದ್ದಲ್ಲವೆಂದು ಬಹಿರಂಗವಾಯಿತು. ಸತ್ಯ ಬಹಿರಂಗಕ್ಕೆ ಬಂದ ಬೆನ್ನಿಗೆ ಖಡ್ಗ ಕಾಣೆಯಾಯಿತು. ಸ್ವಾಮೀಜಿಗಳೇ ಇದನ್ನು
ದೈವಸ್ಥಾನದಿಂದ ಖಡ್ಗವನ್ನು ವಾಪಾಸು ಕೊಂಡೊಯ್ದರು. ಈ ಬಗ್ಗೆ ಜುಲೈ 4 ರಂದು ಮಲ್ಪೆ ಪೊಲೀಸ್ ಠಾಣೆಗೆ ಒಕ್ಕೂಟದ ವತಿಯಿಂದ ಮೂಡಬೆಟ್ಟು ಸಮೀಪದ ಕಂಬಳಕಟ್ಟ ನಿವಾಸಿ ಕೆ.ಜಗದೀಶ್ ಶೆಟ್ಟಿ ಎಂಬವರು ದೂರು ನೀಡಿದ್ದು, ಪೊಲೀಸರು ಮೊಕದ್ದಮೆ ದಾಖಲಿಸದೆ, ಕೇವಲ ರಶೀದಿ ನೀಡಿದ್ದಾರೆ ಎಂದು ಒಕ್ಕೂಟ ಮನವಿಯಲ್ಲಿ ಆರೋಪಿಸಿದೆ.
ಸಮಿತಿ ಕಾರ್ಯದರ್ಶಿ ದಿವಾಕರ ಶೆಟ್ಟಿ ಒಬ್ಬರು ಲ್ಯಾಂಡ್ ಮಾಫೀಯಾ ಆಗಿದ್ದು, ಇವರ ವಯುಕ್ತಿಕ ವ್ಯವಹಾರಗಳಿಗಾಗಿ ದೈವಸ್ಥಾನದ ಭಕ್ತರ ಹಣದಲ್ಲಿ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ಕಚೇರಿಗಾಗಿ ದುಬಾರಿ ಬೆಲೆಯ ಆಸನಗಳನ್ನು ಖರೀದಿಸಲಾಗಿದೆ. ಸಮಿತಿಯ ತಾಳಕ್ಕೆ ತಕ್ಕಂತೆ ಕುಣಿದ ಮತ್ತು ಕುಣಿಯುವ ಮೂಲಕ ಭಕ್ತರ ನಂಬಿಕೆಗೆ ಹಾಗೂ ದೈವಸ್ಥಾನಕ್ಕೆ ಕಳಂಕ ತಂದ ದೈವ ನರ್ತಕನಿಗೆ ಸಮಿತಿಯು ಭಕ್ತರ ಹಣದಲ್ಲಿ ಚಿನ್ನದ ಕಡಗ ನೀಡಿದೆ ಎಂದೂ ಒಕ್ಕೂಟ ಅಪಾದಿಸಿದೆ.
ದೈವಸ್ಥಾನದ ಚಿನ್ನಾಭರಣಗಳನ್ನು ಪರಿಶೀಲನೆ ಮಾಡಿಸಬೇಕು ಮತ್ತು ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿರುವ ಅಣ್ಣಪ್ಪ ಪಂಜುರ್ಲಿ ಭಕ್ತರ ಒಕ್ಕೂಟ, ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯ ಯಥಾ ಪ್ರತಿಗಳನ್ನು ರಾಜ್ಯದ ಗೃಹ ಸಚಿವರು, ಉಡುಪಿಯ ಶಾಸಕರು, ತಹಶಿಲ್ದಾರರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದೆ.

ಉಡುಪಿ: ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ವ್ಯಕ್ತಿಯೊಬ್ಬ ಮೇ 17 ರ ಮಧ್ಯರಾತ್ರಿ ಕಪಾಳಮೋಕ್ಷ ಮಾಡಿದ ಪ್ರಸಂಗ ನಡೆದಿದೆ. ಶುಕ್ರವಾರ ಸಂಜೆ ಆದಿ ಉಡುಪಿ ಸಮೀಪದ ಮೂಡುಬೆಟ್ಟುವಿನಲ್ಲಿ ಮಲ್ಪೆಯಲ್ಲಿ ಕೆಲಸ ಮಾಡುವ ಉತ್ತರ ಕರ್ನಾಟಕ ಮೂಲದ ಕಾರ್ಮಿಕನೊಬ್ಬನಿಗೆ ಸ್ಥಳಿಯ ಯುವಕರ ಗೊಂಪೊಂದು ಹಲ್ಲೆ ನಡೆಸಿತು. ಹಲ್ಲೆಗೊಳಗಾದ ಯುವಕ ಕೂಡಲೇ ಜಿಲ್ಲಾಸ್ಪತ್ರೆಗೆ ಬಂದು ಒಳರೋಗಿಯಾಗಿ ದಾಖಲಾಗಿದ್ದಾನೆ.
ಕಾರ್ಮಿಕ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದುಕೊಂಡ ಹಲ್ಲೆಕೋರರ ಗುಂಪು ಮತ್ತೆ ಹಲ್ಲೆ ನಡೆಸುವ ಉದ್ಧೇಶದಿಂದ ರಾತ್ರಿ ಸಮಯದಲ್ಲಿ ಜಿಲ್ಲಾಸ್ಪತ್ರೆಗೆ ಆಗಮಿಸಿತು ಎನ್ನಲಾಗಿದೆ. ಇದನ್ನರಿತ ಗಾಯಾಳು ತಕ್ಷಣವೇ ವಿಷಯವನ್ನು ಮಲ್ಪೆಯಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿರುವ ಯುವಕರಿಗೆ ತಿಳಿಸಿ ಸಹಾಯ ಯಾಚಿಸಿದನು ಎನ್ನಲಾಗಿದೆ.
ಸಹೋದ್ಯೋಗಿಯ ರಕ್ಷಣೆಗೆಂದು ಮಲ್ಪೆಯ ಯುವಕರ ತಂಡವೊಂದು ಮಧ್ಯರಾತ್ರಿ ಹೊತ್ತು ಜಿಲ್ಲಾಸ್ಪತ್ರೆಗೆ ಆಗಮಿಸಿತೆಂದೂ, ಆಗ ಆಸ್ಪತ್ರೆ ಸಿಬ್ಬಂದಿಗಳು ಅವರನ್ನು ಒಳಗೆ ಬರಲು ತಡೆ ಒಡ್ಡಿತೆಂದೂ ಹೇಳಲಾಗುತ್ತಿದೆ. ಸಿಬ್ಬಂದಿಗಳಿಗೂ, ಮಲ್ಪೆಯ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಕರ್ತವ್ಯದಲ್ಲಿದ್ದ ವೈದ್ಯರು ಮಧ್ಯಪ್ರವೇಶಿಸಿ ಹೊತ್ತಲ್ಲದ ಹೊತ್ತಿನಲ್ಲಿ ಆಸ್ಪತ್ರೆಯೊಳಗೆ ಬಡಲು ಸಾಧ್ಯವೇ ಇಲ್ಲ. ಬಂದ ದಾರಿಗೆ ಮರಳುವಂತೆ ತಂಡಕ್ಕೆ ಖರವಾಗಿಯೇ ಸೂಚನೆ ನೀಡಿದರು ಎನ್ನಲಾಗಿದೆ.
ತಂಡದಲ್ಲಿದ್ದವರಲ್ಲಿ ಕೆಲವರು ಕಂಠಪೂರ್ತಿ ಮದ್ಯಪಾನ ಮಾಡಿದ್ದರೆಂದು ಹೇಳಲಾಗಿದೆ. ವ್ಯದ್ಯರ ಸೂಚನೆಯಿಂದ ಸಿಟ್ಟಿಗೆದ್ದ ತಂಡದಲ್ಲಿದ್ದ ವ್ಯಕ್ತಿಯೊಬ್ಬ ವ್ಯದ್ಯರೆಂದೂ ನೋಡದೆ ಎಲ್ಲರೆದುರೇ ಕಪಾಳಮೋಕ್ಷ ಮಾಡಿ, ಅವಾಚ್ಯ ಶಬ್ದಗಳಿಮದ ಬೈಯ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ, ಇದುವರೆಗೂ ಕಪಾಳಮೋಕ್ಷ ಅನುಭವಿಸಿದ ವೈದ್ಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ. ಮಧ್ಯ ರಾತ್ರಿ ಸಮಯ ಆಸ್ಪತ್ರೆಯೊಳಗೆ ಪ್ರವೇಶಿಸಿ ದಾಂಧಲೆ ನಡೆಸಿದ್ದು ಅಲ್ಲದೆ ಕಪಾಳಮೋಕ್ಷ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದರೂ ಈ ದುಷ್ಕರ್ಮಿಗಳ ವಿರುದ್ಧ ಕರ್ತವ್ಯದಲ್ಲಿದ್ದ ವ್ಯದ್ಯರು ದೂರು ದಾಖಲಿಸದಿರುವುದು ಇಂಥವರಿಗೆ ತಾವೇನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಬೆಳೆಯಲು ಮತ್ತು ಮುಂದಿನ ದಿನಗಳಲ್ಲೂ ಇಂಥದ್ದೇ ಕೃತ್ಯಗಳನ್ನು ನಡೆಸಲು ಪ್ರೇರಣೆಯಾಗುತ್ತದೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಸ್ಪತ್ರೆಗಾಗಲೀ, ಸಿಬ್ಬಂದಿಗಳಿಗಾಗಲೀ, ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗಾಗಲೀ ಸೂಕ್ತ ರಕ್ಷಣಾ ವ್ಯವಸ್ಥೆ ಇಲ್ಲದಿರುವುದೇ ಇಂಥ ಎಲ್ಲಾ ಅನಾಹುತಗಳಿಗೂ ಮೂಲ ಕಾರಣವೆಂದು ಆರೋಪಿಸಲಾಗಿದೆ. ಪ್ರಸ್ತುತ ಇಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಕರ್ತವ್ಯದ ವೇಳೆ ನಿಗದಿತ ಸ್ಥಳದಲ್ಲಿ ಇರದೆ ಎಲ್ಲೆಲ್ಲೋ ಹೋಗಿರುವುದು, ಮಲಗಿರುವುದು, ಯೂನಿಫಾರಂ ಧರಿಸದೇ ಇರುವುದು, ಸೆಕ್ಯೂರಿಟಿ ಗಾರ್ಡ್ ನಲ್ಲಿ ಆಸ್ಪತ್ರೆ ಅಧಿಕೃತರು ಬೇರೆ ಯಾವುದಾದರೂ ಕೆಲಸ ಮಾಡಿಸುವುದು ಇತ್ಯಾದಿಗಳಿಂದಾಗಿ ಇಲ್ಲಿಗೆ ಕಾವಲುಗಾರ ಇದ್ದೂ ಇಲ್ಲದಂತೆಯೇ ಆಗಿದೆ ಎಂದು ದೂರಲಾಗಿದೆ.

ಉಡುಪಿ: ತಂಪು ಪಾನೀಯಕ್ಕೆ ಅಮಲು ಪದಾರ್ಥ ಬೆರೆಸಿ ಕುಡಿಸಿ, ಪ್ರಜ್ಞಾಹೀನಳಾದಾಗ ಅತ್ಯಾಚಾರವೆಸಗಿ, ಬಳಿಕ ಮದುವೆಯಾಗುವುದಾಗಿ ಮಾತುಕೊಟ್ಟು ಕೊನೆಗೆ ವಂಚಿಸಿದ ಶಂಕರಪುರ ಸಮೀಪದ ಮೂಡಬೆಟ್ಟು ಗ್ರಾಮದ ಶಿವಾನಂದ ನಗರ ನಿವಾಸಿ ಪೈಂಟರ್ ರಘುರಾಮ (41) ಎಂಬಾತನಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರೇಂದ್ರ ಕುಮಾರ ಗುಣಕಿ ಅವರು ಮೂರು ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಎರಡನೇ ಆರೋಪಿ ಐತಪ್ಪ ಎಂಬವರನ್ನು ದೋಷಮುಕ್ತಿಗೊಳಿಸಿದ್ದಾರೆ.
2007 ರಲ್ಲಿ ಶಂಕರಪುರದಲ್ಲಿರುವ ಮಾವನ ಮನೆಗೆ ಹೋಗಲೆಂದು ಉಡುಪಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದು ನಿಂತಿದ್ದ ಯುವತಿಯನ್ನು ಆರೋಪಿ ತಾನೂ ಸಹ ಶಂಕರಪುರಕ್ಕೆ ಹೋಗುವುದಾಗಿ ಹೇಳಿ ತನ್ನ ಕಾರಿಗೆ ಹತ್ತಿಸಿದ್ದ. ಬಳಿಕ ಕಾರ್ಕಳದಲ್ಲಿ ತಾನು ಪೈಂಟಿಂಗ್ ಮಡುತ್ತಿದ್ದ ಹೊಸ ಕಟ್ಟಡಕ್ಕೆ ಕರೆದೊಯ್ದು, ಅಲ್ಲಿ ತಂಪು ಪಾನೀಯಕ್ಕೆ ಅಮಲು ಪದಾರ್ಥ ಬೆರೆಸಿ ಕುಡಿಸಿ, ಪ್ರಜ್ಙಾಹೀನಳಾದಾಗ ಅತ್ಯಾಚಾರವೆಸಗಿದ್ದ. ಯುವತಿಗೆ ಎಚ್ಚರವಾದಾಗ, ನಡೆದ ವಿಷಯವನ್ನು ಮನೆಯವರಲ್ಲಿ ಹೇಳಬಾರದೆಂದೂ, ಹೇಳಿದರೆ ಕೊಲೆ ಮಾಡುವುದಾಗಿಯೂ ಬೆದರಿಸಿ, ಮುಂದಕ್ಕೆ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದ ಎಂದು ರಘುರಾಮ್ ವಿರುದ್ಧ ಯುವತಿ ಆರೋಪಿಸಿದ್ದಳು.
ಈ ಘಟನೆಯ ಬಳಿಕ ರಘುರಾಮ ಹಲವಾರು ಬಾರಿ ತಾನು ಪೈಂಟಿಂಗ್ ಮಾಡುತ್ತಿದ್ದ ಕಟ್ಟಡಕ್ಕೆ ಕರೆದೊಯ್ದು ಸಂಭೋಗ ನಡೆಸಿದ್ದಾನೆ. ಗರ್ಭಪಾತವನ್ನೂ ನಡೆಸಿದ್ದಾನೆ. ಕೊನೆಗೆ ತಂಗಿಯ ನೆಪ ಮುಂದಿಟ್ಟು ಮದುವೆಯಾಗಲು ನಿರಾಕರಿಸಿದ. ಇದನ್ನು ಪ್ರಶ್ನಿಸಿ, ನ್ಯಾಯ ಕೇಳಲು, ತಾನು 2009 ರ ಮಾರ್ಚ್ 9 ರಂದು ಆರೋಪಿಯ ಮನೆಗೆ ಹೋದಾಗ, ಆರೋಪಿ ರಘುರಾಮ, ಐತಪ್ಪ ಹಾಗೂ ಇತರರು ತನ್ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಕೊಲೆ ಬೆದರಿಕೆ ಹಾಕಿದರೆಂದು ದೂರಲಾಗಿತ್ತು.
ಈ ಬಗ್ಗೆ ನೊಂದ ಯುವತಿ ದಸಂಸ ನಾಯಕ ಜಯನ್ ಮಲ್ಪೆಯವರ ಮೂಲಕ ಮಲ್ಪೆ ಪೋಲಿಸ್ ಠಾಣೆಗೆ ದುರು ನೀಡಿದ್ದು, ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಅಂದಿನ ಉಡುಪಿ ವೃತ್ತ ನಿರೀಕ್ಷಕ ಎಸ್.ವಿ.ಗಿರೀಶ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ವಾದಿಸಿದ್ದರು.

ಉಡುಪಿ: ಕಲ್ಯಾಣಪುರ ಸಮೀಪದ ನೇಜಾರು ಬಳಿ ಇಕ್ಬಾಲ್ ಎಂಬಾತನಿಗೆ 20 ಕ್ಕೂ ಅಧಿಕ ಮಂದಿ ಇದ್ದ ಸಂಘ ಪರಿವಾರದ ಕಾರ್ಯಕರ್ತರ ತಂಡವೊಂದು ಎ.2 ರಂದು ರಾತ್ರಿ ಗಂಟೆ 11.30 ರ ಸುಮಾರಿಗೆ ಹಲ್ಲೆ ನಡೆಸಿದ್ದು, ಪೊಲೀಸರು ಲಘು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಇದೇ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಕೆಲವರು ನೇಜಾರು ಪರಿಸರದಲ್ಲಿನ ಜಾಮೀಯ ಮಸೀದಿಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಮಕಿತರನ್ನು ಮಲ್ಪೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಿರ್ಧಿಷ್ಟ ಕಾರಣವೊಂದಕ್ಕೆ ಸಂಬಂಧಪಟ್ಟಂತೆ ಪ್ರತಿಕರವಾಗಿ ಸಂಘ ಪರಿವಾರದ 20 ರಿಂದ 25 ಮಂದಿಯಷ್ಟಿದ್ದ ಕಾರ್ಯಕರ್ತರು ಸಮಾನ ಉದ್ಧೇಶದಿಂದ ಅಕ್ರಮ ಕೂಟ ಸೇರಿಕೊಂಡು ಮೊದಲಿಗೆ ಇಕ್ಬಾಲ್ ಎಂಬಾತನ ಮೇಲೆ ದಾಳಿ ನಡೆಸಿದರು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸುವಲ್ಲಿ
ಯಶಸ್ವಿಯಾದರೆನ್ನಲಾಗಿದೆ.
ಇಲ್ಲಿಂದ ಚದುರಿ ಹೋದ ಕಾರ್ಯಕರ್ತರಲ್ಲಿ ಕೆಲವರು ಬೈಕ್ನಲ್ಲಿ ಮಸೀದಿ ಬಳಿ ಬಂದು ಕಲ್ಲೆಸೆದು ಕಿಟಿಕಿ ಗಾಜುಗಳನ್ನು ಹಾನಿ ಮಾಡಿದರೆನ್ನಲಾಗಿದೆ. ಈ ಸಂದರ್ಭದಲ್ಲಿ ಮಸೀದಿಯೊಳಗೆ ಮೂವರು ಧರ್ಮಗುರುಗಳು ಇದ್ದರೆನ್ನಲಾಗಿದೆ. ಒಳಗಿದ್ದ ಧರ್ಮಗುರುಗಳು ಮಸೀದಿಗೆ ಕಲ್ಲು ಬೀಳುತ್ತಿರುವ ಶಬ್ದ ಕೇಳಿ ಹೊರಗಡ ಬಂದಾಗ ದುಷ್ಕರ್ಮಿಗಳು ಸ್ಥಳದಿಂದ ಬೈಕ್ನಲ್ಲಿ ಪರಾರಿಯಾದರು ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಠಾಣೆಯ ಪೊಲೀಸರು ಸ್ಥಳೀಯ ಜನಪ್ರತಿನಿಧಿಯೋರ್ವನ ಸಹಿತ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಉಡುಪಿ: ಮಲ್ಪೆ ಬೀಚ್ನಲ್ಲಿರುವ ಪಾರಿಜಾತ ಬಾರ್ಗೆ ಮದ್ಯ ಸೇವಿಸಲು ಬಂದವರಿಬ್ಬರು ಬಾರ್ ಮಾಲೀಕರು ಹಾಗೂ ಕೆಲಸದವರನ್ನು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದೂ ಅಲ್ಲದೆ, ಟೇಬಲ್, ನೀರಿನ ಮಗ್ ಮತ್ತು ಗ್ಲಾಸ್ಗಳನ್ನು ಒಡೆದು ಹಾಕಿ 10 ಸಾವಿರ ರು. ನಷ್ಟವನ್ನುಂಟು ಮಾಡಿದ ಪ್ರಕರಣ ಜ.19 ರ ಮದ್ಯರಾತ್ರಿ ನಡೆದಿದೆ. ಈ ಬಗ್ಗೆ ಬಾರ್ ಮಾಲೀಕ ಮಟ್ಟು ನಿವಾಸಿ ದಯಾನಂದ ವಿ.ಬಂಗೇರ ನೀಡಿದ ದೂರಿನಂತೆ ಮಲ್ಪೆಯ ಉದಯ ಯಾನೆ ಮಚ್ಚೆ ಉದಯ ಹಾಗೂ ಗುಜ್ಜರಬೆಟ್ಟು ಮಾಧವ ಎಂಬವರ ವಿರುದ್ಧ ಮಲ್ಪೆ ಠಾನೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ರಾತ್ರಿ ಗಂಟೆ 8.30 ಕ್ಕೆ ಬಾರ್ ಗೆ ಬಂದು ಮದ್ಯ ಸೇವಿಸಲು ಕುಳಿತವರು ಗಂಟೆ 12 ಆದರೂ ಏಳಲಿಲ್ಲ. ಎದ್ದು ಹೋಗಿ ಎಂದು ಹೇಳಿದರೂ ಹೋಗದ ಕಾರಣ, ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಗ ಗಲಾಟೆ ನಡೆಸಿದರು ಎಂದು ದಯಾನಂದ ಬಂಗೇರ ದೂರಿದ್ದಾರೆ.

ಉಡುಪಿ: ನೇಜಾರು ನಿವಾಸಿ ಅವಿವಾಹಿತ ಯುವತಿ ದಿವ್ಯಾ (21) ಎಂಬಾಕೆ ಅ.3 ರ ಬೆಳಗ್ಗೆ ಗಂಟೆ 7.30 ಕ್ಕೆ ನ್ಯೂ ಸಿಟಿ ಆಸ್ಪತ್ರೆಗೆ ನರ್ಸ್ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟವಳು ಮನೆಗೆ ಮರಳದೆ ಕಾಣೆಯಾಗಿದ್ದಾಳೆ.
ಐದಡಿ ಎತ್ತರದ ದಿವ್ಯಾ, ಎಣ್ಣೆ ಕಪ್ಪು ಮೈ ಬಣ್ಣದವಳಾಗಿದ್ದಾಳೆ. ಸಾಧಾರಣ ಮೈ ಕಟ್ಟಿನ, ಮೆಳ್ಳೆಗಣ್ಣಿನ ಈಕೆ ಕಾಣೆಯಾದ ದಿನದಂದು ಬಿಳಿ ಮತ್ತು ಕೇಸರಿ ಬಣ್ಣದ ಚೂಡಿದಾರ್ ಧರಿಸಿದ್ದಾಳೆ ಎಂದು ಹೇಳಲಾಗಿದೆ.
ಈ ಬಗ್ಗೆ ದಿವ್ಯಾಳ ಸಹೋದರಿ ನಿಡಿದ ದೂರಿನ ಆಧಾರದಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.