Posts Tagged ‘police officers’

http://www.udupibits.in news
ಉಡುಪಿ: ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರುಗಳಿಸಿರುವ ಕಾರ್ಕಳ ಉಪ ವಿಭಾಗದ ಎ.ಎಸ್.ಪಿ. ಅಣ್ಣಾಮಲೈ ಅವರು ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ಕಚೇರಿ ಕಟ್ಟಡ ಕಟ್ಟುವ ಹೊಣೆಯನ್ನು ತಾಲೂಕಿನ ಕಲ್ಲು ಗಣಿ ಮಾಲೀಕರಿಗೆ ನೀಡಿದ್ದಾರಂತೆ !

ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ದಾರಿ ತಪ್ಪಿದ್ದಾರೆ ಎನ್ನಲು ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ. ಪೊಲೀಸ್ ಅಧಿಕಾರ ಕಚೇರಿ ಕಟ್ಟಡವನ್ನು ಕಟ್ಟುವ ಜವಾಬ್ದಾರಿಯನ್ನು ಕಲ್ಲು ಗಣಿ ಮಾಲೀಕರ ಹೆಗಲಿಗೆ ಹಾಕುವ ಮೂಲಕ ಎಎಸ್ಪಿ ಅಣ್ಣಾಮಲೈ ಅವರು ತಮ್ಮ ಶುಭ್ರ ಬಿಳಿ ಬಟ್ಟೆಗೆ ತಮಗೆ ತಾವೇ ಮಸಿ ಬಳಿದುಕೊಂಡಿದ್ದಾರೆ.

ಸರಕಾರಿ ಕಟ್ಟಡವನ್ನು ಸರಕಾರವೇ ನಿರ್ಮಿಸಬೇಕು. ಇದು ಸರಕಾರದ ಜವಾಬ್ದಾರಿಯೂ ಹೌದು, ಕರ್ತವ್ಯವೂ ಆಗಿದೆ. ಸರಕರ ಮಾಡಬೇಕಾದ ಕೆಲಸವನ್ನು ಖಾಸಗಿಯವರಿಂದ, ಅದರಲ್ಲೂ ಕಲ್ಲು ಗಣಿ ಮಾಲೀಕರಿಂದ ಮಾಡಿಸುವುದು ಎಂದರೆ ಪೊಲೀಸರ ಕೈಯ್ಯಲ್ಲಿ ಇರಬೇಕಾದ ದಂಡವನ್ನು ಖಾಸಗಿ ಉದ್ಯಮಿಗಳ ಕೈಗೆ ಕೊಟ್ಟಂತೆಯೇ ಸರಿ.

ಕಲ್ಲು ಗಣಿ ಮಾಲೀಕರ ಮೇಲೆ ಸಾರ್ವಜನಿಕ ವಲಯದಲ್ಲಿ ಅಷ್ಟೇನೂ ಒಳ್ಳೆಯ ಹೆಸರಿಲ್ಲ. ಇವರ ಮೇಲೆ ಜಿಲ್ಲೆಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಮೊಕದ್ದಮೆಗಳೂ ದಾಖಲಾಗಿವೆ. ಅಕ್ರಮ ಸ್ಪೋಟಕ ದಾಸ್ತಾನು, ಅನಧಿಕೃತ ಸ್ಪೋಟಕ ಬಳಕೆ, ಪರವಾನಿಗೆ ರಹಿತ ಕಲ್ಲು ಗಣಿ, ಕಾರ್ಮಿಕರಿಂದ ಕಾನೂನು ಬಾಹಿರವಾಗಿ ಜೀತ ಮಾಡಿಸುವಿಕೆಯೇ ಮೊದಲಾದ ಆರೋಪಗಳೂ ಹೆಚ್ಚಾಗಿ ಕೇಳಿ ಬರುತ್ತಿವಾಗ, ಅಂಥವರಿಂದ ಪೊಲೀಸ್ ಅಧಿಕಾರಿಗಳ ಕಚೇರಿ ಕಟ್ಟಡವನ್ನು ನಿಮರ್ಿಸಲು ಮುಂದಾಗುವುದು ಎಂದರೆ, ಅದು ನಕಾರಾತ್ಮಕ ಬೆಳವಣಿಗೆಯೇ ಆಗುತ್ತದೆ.

ವಾರದ ಹಿಂದೆ ಕಾರ್ಕಳ ತಾಲೂಕಿನ ಕಲ್ಲು ಗಣಿ ಮಾಲೀಕರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಎಎಸ್ಪಿ ಅಣ್ಣಾಮಲೈ ಅವರು, ಸಭೆಯಲ್ಲಿ ಚಾ ಮತ್ತು ಬಿಸ್ಕೇಟು ನೀಡಿದ ಬಳಿಕ, ತಮಗೊಂದು ಹೊಸದಾದ ಸುಸಜ್ಜಿತವಾದ ಕಚೇರಿ ಕಟ್ಟಡ ಕಟ್ಟಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಕಲ್ಲು ಗಣಿ ಕಾರ್ಯಾಯುತ್ತಿರಬೇಕಾದರೆ, ಸಮಸ್ಯೆ ಬಂದಾಗಲೆಲ್ಲ ಪೊಲೀಸ್ ಅಧಿಕಾರಿಗಳು ಸ್ವಲ್ಪ ಮಟ್ಟಗಾದರೂ ತಮಗೆ ರಿಯಾಯಿತಿ ತೋರಿಸಬೇಕಾದರೆ, ತಮ್ಮ ಪರವಾಗಿ ನಿಲ್ಲಬೇಕಾದರೆ, ಕೇಸು ಮುಚ್ಚಿ ಹಾಕಬೇಕಾದರೆ, ಪೊಲೀಸ್ ಅಧಿಕಾರಿಗಳ ಎಲ್ಲಾ ರೀತಿಯ ಬೇಕು ಬೇಡಗಳಿಗೂ ತಾವು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರಬೇಕು ಎನ್ನುವುದನ್ನು ಸರಿಯಾಗಿಯೇ ತಿಳಿದುಕೊಂಡಿರುವ ಕಲ್ಲು ಗಣಿ ಮಾಲೀಕರು, ಎಎಸ್ಪಿ ಅಣ್ಣಾಮಲೈ ಅವರ ಆದೇಶವನ್ನು ಶಿರಸಾವಹಿಸಿ ಸ್ವೀಕರಿಸಿಕೊಂಡರು ಎನ್ನಲಾಗಿದೆ.

ಉಡುಪಿ: ರಾಜ್ಯದ 41 ಮಂದಿ ಇನ್ಸ್ ಪೆಕ್ಟರ್ (ಸಿಪಿಐ)ಗಳಿಗೆ ಡಿವೈಎಸ್ಪಿ ಹುದ್ದೆಗೆ ಭಡ್ತಿ ನೀಡುವುದರೊಂದಿಗೆ ವರ್ಗಾವಣೆಗೊಳಿಸಿ ಗೃಹ ಇಲಾಖಾ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಭಡ್ತಿಯೊಂದಿಗೆ ವರ್ಗಾವಣೆಗೊಂಡವರಲ್ಲಿ ಮೂವರು ಉಡುಪಿ ಜಿಲ್ಲೆಯವಲ್ಲಿ ಕರ್ತವ್ಯ ಸಲ್ಲಿಸುತ್ತಿರುವವರಾಗಿದ್ದಾರೆ. ಉಡುಪಿ ಜಿಲ್ಲಾ ಗುಪ್ತವಾರ್ತಾ ದಳ (ಡಿಸಿಐಬಿ)ದ ಇನ್ಸ್ ಪೆಕ್ಟರ್ ಪ್ರವೀಣ್ ಎಚ್.ನಾಯಕ್, ಮಣಿಪಾಲ ಠಾಣೆಯ ಇನ್ಸ್ ಪೆಕ್ಟರ್ ಬಿ.ಪಿ.ದಿನೇಶ್ ಕುಮಾರ್ ಹಾಗೂ ಕರಾವಳಿ ಕಾವಲು ಪಡೆಯ ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ ಡಿವೈಎಸ್ಪಿಯಾಗಿ ಭಡ್ತಿ ಪಡೆದವರು.

ಪ್ರವೀಣ್ ನಾಯಕ್ ಹಾಗೂ ಕೃಷ್ಣಮೂರ್ತಿ ಅವರನ್ನು ಗುಪ್ತಚರ ವಿಭಾಗದ ಬೆಂಗಳೂರು ಕೇಂದ್ರ ಕಚೇರಿಗೆ ಮತ್ತು ದಿನೇಶ್ ಕುಮಾರ್ ಅವರನ್ನು ನಕ್ಸಲ್ ನಿಗ್ರಹ ದಳ (ಎಎನ್ಎಫ್)ದ ಕಾರ್ಕಳ ಕೇಂದ್ರ ಕಚೇರಿಗೆ ಡಿವೈಎಸ್ಪಿ ಆಗಿ ವರ್ಗಾಯಿಸಲಾಗಿದೆ.

ಉಡುಪಿ: ಉಡುಪಿ ನಗರ ಸಿಟಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ ಮಟ್ಕಾ ಜುಗಾರಿ ಆಡುತ್ತಿದ್ದ ಕಲ್ಸಂಕ ಮಠದಬೆಟ್ಟು ನಿವಾಸಿ ರಮೇಶ್ (35) ಎಂಬಾತನನ್ನು ನಗರ ಠಾಣೆಯ ಪೊಲೀಸರು ಜ.18 ರಂದು ಸಂಜೆ ಗಂಟೆ 6.50 ಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ರಮೇಶನ ಜೊತೆಗಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ಲಿಂಗರಾಜು ತಿಳಿಸಿದ್ದಾರೆ. ಸಾರ್ವಜನಿಕರಿಂದ ಸಂಗ್ರಹಿಸಿದ್ದ 1,440 ರು. ಗಳನ್ನು ಆರೋಪಿಯ ಕೈನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ತಾನು ದಯಾನಂದ ಅಂಬಾಗಿಲು ಎಂಬವರಿಗೆ ನೀಡುತ್ತೇನೆ. ಅವರು ವಿಜಯಿಯಾದವರಿಗೆ ಪ್ರತಿಯಾಗಿ 1 ರು. ಗೆ 70 ರು. ನಂತೆ ನೀಡುತ್ತಾರೆ. ಮಟ್ಕಾ ಜುಗಾರಿಯ ಮೇಲ್ವೀಚಾರಣೆಯನ್ನು ದಯಾನಂದ ಅಂಬಾಗಿಲು ಅವರೇ ನೋಡಿಕೊಳ್ಳುತ್ತಾರೆ ಎಂದು ರಮೇಶ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಮೇಶ್ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಉಡುಪಿ ನಗರ ವ್ಯಾಪ್ತಿಯಲ್ಲಿ ಎಲ್ಲಿಲ್ಲಿ ಮಟ್ಕಾ ಚೀಟಿ ಬರೆಯಲಾಗುತ್ತಿದೆ. ಇದರ ಮೇಲ್ವೀಚಾರಕರು ಯಾರ್ಯಾರು ಎಂಬೆಲ್ಲಾ ಸಮಗ್ರ ಮಾಹಿತಿ ಉಡುಪಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ತಿಳಿದೇ ಇದೆ. ಮಟ್ಕಾ ದೊರೆಗಳು ಪೊಲೀಸ್ ಅಧಿಕಾರಿಗಳಿಗೆ ತಿಂಗಳ ಮಾಮೂಲಿ ಸಲ್ಲಿಸುತ್ತಿರುವುದರಿಂದ ಪೊಲೀಸ್ ಅಧಿಕಾರಿಗಳು ಮಟ್ಕಾ ದಂಧೆಯನ್ನು ಮಟ್ಟ ಹಾಕುವ ಕೆಲಸ ಮಾಡುತ್ತಿಲ್ಲ. ಯಾವುದಾದರೂ ಮಾಧ್ಯಮದಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾದರೆ, ಹಾಗೆ ಸುದ್ದಿ ಪ್ರಕಟವಾದ ಬಳಿಕ ಒಂದೆರಡು ದಿನ ಒಂದೆರಡು ದಾಳಿಗಳನ್ನು ನಡೆಸಿ, ಪ್ರಕರಣ ದಾಖಲಿಸುತ್ತಾರೆ. ಬಳಿಕ ಜಾಣ ಮೌನ ವಹಿಸುತ್ತಾರೆ. ಈ ದಾಳಿ, ಇತ್ಯಾದಿಗಳೆಲ್ಲವೂ ಒಂದು ನಾಟಕ ಎಂದು ಸಾರ್ವಜನಿಕರು ದೂರಿದ್ದಾರೆ.