Posts Tagged ‘samruddha jeevan orchard hotel & resort’

ಉಡುಪಿ: ಸಮೃದ್ಧ ಜೀವನ್ ಫೌಂಡೇಶನ್ ವತಿಯಿಂದ ಇಂದು ಬೆಳಗ್ಗೆ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ಮದರ್ ಆಫ್ ಸಾರೋಸ್ ಚರ್ಚ್ ನ ಧರ್ಮಗುರುಗಳಾದ ಫಾ.ಫೆಡ್ರಿಕ್ ಮಸ್ಕರೇನಸ್ ಶಿಬಿರವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಡಾ.ಶರತ್ ರಾವ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ.ಸುಧಾ ಎಸ್.ಭಟ್, ಸಮೃದ್ಧ ಜೀವನ್ ಫೌಂಡೇಶನಿನ ಶ್ರವಣ್ ಕುಮಾರ್, ಜಯಪ್ರಕಾಶ್, ಕೃಷ್ಣಮೂರ್ತಿ, ರಾಘವೇಂದ್ರ, ಭಾಗ್ಯರಾಜ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಸಹಿತ ದೇಶದ 2000 ಕೇಂದ್ರಗಳಲ್ಲಿ ಸಮೃದ್ಧ ಜೀವನ್ ಫೌಂಡೇಶನ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು. 2010 ರ ಸೆ.26 ರಂದು ದೇಶದ 18 ರಾಜ್ಯಗಳಲ್ಲಿ 27,730 ಯೂನಿಟ್ ರಕ್ತದಾನ ಮಾಡಿಸಿದ ಸಮೃದ್ಧ ಸಂಸ್ಥೆಯ ಸಾಧನೆ ”ದಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲಾಗಿದೆ.